Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Rachita Ram: ಕಲ್ಯಾಣಿ ಇನ್ ಫೈಯರ್! ಪ್ರೇಕ್ಷಕರ ದಿಲ್ ಕದ್ದ ರಚ್ಚು.. ಈ ರೋಲ್ ಸಿಕ್ಕಿದ್ದು ಹೇಗೆ?
ಕಾಲಿವುಡ್ನಲ್ಲಿ ಬುಲ್ ಬುಲ್ ಕಮಾಲ್! ಕಲ್ಯಾಣಿ ಪಾತ್ರದಲ್ಲಿಡಿಂಪಲ್ ಕ್ವೀನ್ ಮಸ್ತ್ ಪರ್ಫಾಮೆನ್ಸ್. ರಚಿತಾ ರಾಮ್‌ಗೆ ಹೇಗೆ ಸಿಕ್ಕಿತು ಅವಕಾಶ? ಹೌದು, ಖ್ಯಾತ ಕನ್ನಡ ನಟಿ ರಚಿತಾ ರಾಮ್ (Rachita Ram) 'ಕೂಲಿ' ಚಿತ್ರದ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಆಗಸ್ಟ್ 14ರಂದು ತೆರೆಕಂಡ ರಜನಿಕಾಂತ್ (Rajinikanth) ಅಭಿನಯದ ಈ ಚಿತ್ರದಲ್ಲಿ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಮೊದಲ ಪರಭಾಷಾ ಸಿನಿಮಾ ಆಗಿದ್ದು, ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
'ಡಿಂಪಲ್ ಕ್ವೀನ್' ಎಂದೇ ಖ್ಯಾತಿ ಪಡೆದಿರುವ ರಚಿತಾ ರಾಮ್, ಕೂಲಿ (Coolie) ಚಿತ್ರದಲ್ಲಿ ಕಲ್ಯಾಣಿ ಎಂಬ ಪ್ರಬಲ ಖಳನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರದ ಮೂಲಕ ತಮಿಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ರಚಿತಾ, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.

ರಚಿತಾ ರಾಮ್ ಯಾರು?
ರಚಿತಾ ರಾಮ್ ಅವರ ನಿಜವಾದ ಹೆಸರು ಬಿಂಧ್ಯಾ ರಾಮ್. ಇವರು 1992ರ ಅಕ್ಟೋಬರ್ 3ರಂದು ಬೆಂಗಳೂರಿನಲ್ಲಿ ಜನಿಸಿದರು. ರಚಿತಾ ರಾಮ್ ಅವರ ತಂದೆ ಕೆ.ಎಸ್. ರಾಮ್. ಅವರು ಪ್ರಸಿದ್ಧ ಭರತನಾಟ್ಯ ನೃತ್ಯಗಾರರಾಗಿದ್ದಾರೆ. ರಚಿತಾ ರಾಮ್ ಸಹ ತರಬೇತಿ ಪಡೆದ ಶಾಸ್ತ್ರೀಯ ನೃತ್ಯ ಕಲಾವಿದೆ. ಇವರ ಸಹೋದರಿ ನಿತ್ಯಾ ರಾಮ್. ಇವರು ಸಹ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
'ಬುಲ್ ಬುಲ್' ಮೂಲಕ ಚಿತ್ರರಂಗಕ್ಕೆ ಪ್ರವೇಶ
ರಚಿತಾ ರಾಮ್ ಅವರು 2012ರಲ್ಲಿ 'ಅರಸಿ' ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ 2013ರಲ್ಲಿ ನಟ ದರ್ಶನ್ ಅಭಿನಯದ 'ಬುಲ್ ಬುಲ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ದರ್ಶನ್, ಗಣೇಶ್, ಸುದೀಪ್, ದುನಿಯಾ ವಿಜಯ್, ಧ್ರುವ ಸರ್ಜಾ, ಉಪೇಂದ್ರ ಮತ್ತು ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ಅವರು 'ರನ್ನ, ಚಕ್ರವ್ಯೂಹ, ದಿಲ್ ರಂಗೀಲಾ, ಭರ್ಜರಿ ಮತ್ತು ಸೀತಾರಾಮ ಕಲ್ಯಾಣ' ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಕೂಲಿ ಚಿತ್ರದ ಬಗ್ಗೆ ಚಿತಾ ರಾಮ್ ಹೇಳಿದ್ದೇನು?
'ಕೂಲಿ' ಚಿತ್ರದಲ್ಲಿನ ನಟನೆಯ ಕುರಿತು ರಚಿತಾ ರಾಮ್, ತಮ್ಮ ವೃತ್ತಿಜೀವನದ ಮೊದಲ ಹತ್ತು ವರ್ಷಗಳು ಕನ್ನಡ ಸಿನಿಮಾಗಳಿಗೆ ಮಾತ್ರ ಮೀಸಲಿಡಲು ಬಯಸಿದ್ದರು ಎಂದು ತಿಳಿಸಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ವದಂತಿಗಳು ಹರಡಿದ್ದವು. ಆದರೆ, ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡುವವರೆಗೂ ತಾವು ಮೌನವಾಗಿರುವುದಾಗಿ ಅವರು ಹೇಳಿದ್ದರು. ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದ ರಚಿತಾ, ಈಗ ಬೇರೆ ಭಾಷೆಗಳಿಗೂ ವಿಸ್ತರಿಸಿದ್ದು ಅವರ ವೃತ್ತಿಜೀವನದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ನಿರೀಕ್ಷೆ ಹುಸಿಯಾಗಿಲ್ಲ
ರಚಿತಾ ರಾಮ್ ಕೂಲಿ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಾರೆಯೇ ಎಂಬ ಅನುಮಾನ ಕಾಡುತ್ತಿತ್ತು. ಈಗಿನ ವಿಡಿಯೋವೊಂದು ಈ ಕುರಿತು ಸ್ಪಷ್ಟತೆ ನೀಡಿದೆ. ಈ ವಿಡಿಯೋದಲ್ಲಿ ರಚಿತಾ ಅವರ ಪಾತ್ರದಲ್ಲಿ ವಿಲನ್ ಛಾಯೆ ಗೋಚರಿಸಿದೆ. ಅವರ ಅಭಿನಯದಲ್ಲಿ ಕೋಪದ ತೀವ್ರತೆ ಎದ್ದು ಕಾಣುತ್ತದೆ. ಇದು ಒಂದು ರೀತಿಯ ಸೈಕೋ ಪಾತ್ರವೇ ಎಂಬ ಭಾವನೆ ಮೂಡಲಾರಂಭಿಸಿತ್ತು. ರಚಿತಾ ರಾಮ್ ಅವರು ಈ ಚಿತ್ರದಲ್ಲಿ ಅಂತಹದ್ದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಜನಿಕಾಂತ್ ಜೊತೆಗಿನ ಫೋಟೋ ವೈರಲ್
ನಟಿ ರಚಿತಾ ರಾಮ್ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಒಟ್ಟಿಗೆ ಇರುವ ಚಿತ್ರವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಚಿತಾ ತಮ್ಮ ಮೊಬೈಲ್ ಗ್ಯಾಲರಿಯಲ್ಲಿ ಈ ಫೋಟೋವನ್ನು ಬಹಳ ಸಮಯದಿಂದ ಉಳಿಸಿಕೊಂಡಿದ್ದರಂತೆ. ಇದನ್ನು ಸರಿಯಾದ ಸಮಯದಲ್ಲಿ ಹಂಚಿಕೊಳ್ಳಬೇಕೆಂದು ಕಾಯುತ್ತಿದ್ದರು. ಕಾಯುತ್ತಿದ್ದ ಆ ಸಮಯ ಇದೀಗ ಒದಗಿ ಬಂದಿದೆ. ಪ್ರಸ್ತುತ ಈ ಫೋಟೋ ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅಭಿಮಾನಿಗಳು ಈ ಫೋಟೋ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಕುತೂಹಲದಿಂದ ಚರ್ಚಿಸುತ್ತಿದ್ದಾರೆ.
'ಕೂಲಿ' ಚಿತ್ರದಲ್ಲಿ ನಟ ರಜನಿಕಾಂತ್, ನಾಗಾರ್ಜುನ, ಸೌಬಿನ್ ಶಾಹಿರ್, ಉಪೇಂದ್ರ, ಶ್ರುತಿ ಹಾಸನ್, ಸತ್ಯರಾಜ್ ಮತ್ತು ಆಮಿರ್ ಖಾನ್ ಅವರಂತಹ ತಾರಾಗಣವಿದೆ. ಈ ಚಿತ್ರವು ಆಗಸ್ಟ್ 14ರಂದು ಬಿಡುಗಡೆಯಾದ 'ವಾರ್ 2' ಚಿತ್ರದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ನಡೆಸುತ್ತಿದೆ. ಎಲ್ಲೆಡೆ 'ಕೂಲಿ' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.



Click it and Unblock the Notifications
