ಗುಪ್ತಚರ ವಲಯದ 'ಸೂಪರ್ ಸ್ಪೈ' ರಾ ಮುಖ್ಯಸ್ಥರಾಗಿ ನೇಮಕ: ಯಾರು ಈ ಪರಾಗ್ ಜೈನ್ ಗೊತ್ತಾ?

ದೇಶ ಸುರಕ್ಷಿತವಾಗಿರಬೇಕಾದರೆ ದೇಶದ ಸೇನಾಬಲ ಉತ್ತಮವಾಗಿರಬೇಕಾಗುತ್ತದೆ. ಹಾಗೆ ದಾಳಿಗಳ ಎದುರಿಸಲು ಸೈನ್ಯ ಬಲವಿದ್ದರೆ ದಾಳಿಗೂ ಮುನ್ನ ತಯಾರಿ ಮಾಡುವಾಗಲೇ ಅದನ್ನು ಕಂಡು ಹಿಡಿಯಲು ಹಾಗೆ ದಾಳಿಗಳನ್ನು ತಯಾರಿಯ ಹಂತದಲ್ಲೇ ತಡೆಯುವುದು ಕೂಡ ಮುಖ್ಯ. ಇದಕ್ಕಾಗಿ ಎಲ್ಲಾ ದೇಶಗಳಲ್ಲು ಗುಪ್ತಚರ ಇಲಾಖೆ ಸೇರಿ ಹಲವು ರೀತಿಯ ಇಲಾಖೆಗಳು ಕೆಲಸ ಮಾಡುತ್ತವೆ. ಇದು ಮುಖ್ಯವಾಗಿ ವಿದೇಶಿ ಗುಪ್ತಚರ ಸಂಗ್ರಹಣೆ ಮತ್ತು ವಿಶ್ಲೇಷಣೆಯಲ್ಲಿ ತೊಡಗುವುದಾಗಿದೆ.

ಇಂತಹ ಇಲಾಖೆಗಳಡಿ ಭಾರತದಲ್ಲಿ ರಾ RAW ಕೂಡ ಒಂದಾಗಿದೆ. Research And Analysis Wing ಭಾರತದ ದಳವಾಗಿದೆ. ಸದ್ಯ ಈ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ ಮುಖ್ಯಸ್ಥರಾಗಿ ಈಗ ಪರಾಗ್ ಜೈನ್ ಅವರನ್ನು ನೇಮಿಸಲಾಗಿದೆ. ಈ ಹುದ್ದೆ ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ದೊಡ್ಡ ಹುದ್ದೆ ಎನ್ನಬಹುದು.

Who is Parag Jain the Newly Appointed RAW Intelligence Chief

ಯಾರು ಈ ಪರಾಗ್ ಜೈನ್ ಗೊತ್ತಾ?

ಪರಾಗ್ ಜೈನ್ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಐಪಿಎಸ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ನೆರೆಹೊರೆಯ ಸಂಬಂಧಿತ ವ್ಯವಹಾರದಲ್ಲಿ ಪರಿಣಿತಿ ಹೊಂದಿದವರು, ಹೀಗಾಗಿ ಅವರನ್ನು ಈ ಹುದ್ದಗೆ ನೇಮಿಸಲಾಗಿದೆ.

ಪಂಜಾಬ್ ಕೇಡರ್‌ನ 1989 ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವೆ ಅಧಿಕಾರಿಯಾಗಿದ್ದರು ರಾ ದಲ್ಲಿ ಎರಡು ದಶಕಗಳ ಅನುಭವವ ಹೊಂದಿದ್ದಾರೆ. ಬಹಳಷ್ಟು ಆಂತರಿಕ ಹಾಗೂ ಬಾಹ್ಯ ಕಾರ್ಯಚರಣೆಗಳ ಕುರಿತು ಅವರು ಅರಿವು ಹೊಂದಿದ್ದಾರೆ. ಹೀಗಾಗಿ ಅವರನ್ನು ಗುಪ್ತಚರದ ಮುಖ್ಯಸ್ಥರಾಗಿ ನೇಮಿಸಲಾಗಿದೆ.

ಜೈನ್ ಪ್ರಸ್ತುತ RAWದ ವಾಯುಯಾನ ಸಂಶೋಧನಾ ಕೇಂದ್ರ (ARC)ದ ಮುಖ್ಯಸ್ಥರಾಗಿದ್ದಾರೆ, ಇದು ವೈಮಾನಿಕ ಕಣ್ಗಾವಲು, SIGINT ಕಾರ್ಯಾಚರಣೆಗಳು, intelligence derived from the analysis of photographic images(PHOTINT), ಗಡಿಗಳ ಮೇಲ್ವಿಚಾರಣೆ ಮತ್ತು ಗುಪ್ತಚರ (IMINT) ವಿಭಾಗವನ್ನು ನಿರ್ವಹಿಸುವ ಸಂಸ್ಥೆಯಾಗಿದೆ. ಇನ್ನು ಜೈನ್ ಅವರು ಆರ್ಟಿಕಲ್ 370ನೇ ವಿಧಿ ರದ್ದು ಬಳಿಕ ಅಲ್ಲಿನ ಪರಿಸ್ಥಿತಿಗಳ ಮೇಲೆ ನಿಗಾ ಇರಿಸಿದ್ದರು, ಹಾಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪರಿಸ್ಥಿತಿ ನಿಭಾಯಿಸಲು ಅವರ ಕೊಡುಗೆ ಅಪಾರವಾಗಿದೆ. ಹಾಗೆ ಆಪರೇಷನ್ ಸಿಂಧೂರ್ ಕಾರ್ಯಚರಣೆ ವೇಳೆಯಲ್ಲೂ ಅವರು ಭಾಗಿಯಾಗಿದ್ದರು.

ರಾ ದ ಹಾಲಿ ಮುಖ್ಯಸ್ಥರಾಗಿದ್ದ ರವಿ ಸಿನ್ಹಾ ಅವರ ಅಧಿಕಾರವಧಿ ಇದೇ ಜೂನ್ 30ರಂದು ಮುಗಿಯುತ್ತಿದೆ. ಅವರ ಅಧಿಕಾರವಧಿ ಅಂತ್ಯವಾಗುತ್ತಿದ್ದು ಅವರ ಜಾಗಕ್ಕೆ ಪರಾಗ್ ಜೈನ್ ನೇಮಕವಾಗುತ್ತಿದ್ದಾರೆ. ಈ ಪರಾಗ್ ಜೈನ್ ಗುಪ್ತಚರ ವಲಯಗಳಲ್ಲಿ ಸೂಪರ್ ಸ್ಪೈ ಎಂದು ಖ್ಯಾತರಾಗಿದ್ದಾರೆ. ಹಾಗೆ ಪರಾಗ್ ಅವರು ಶ್ರೀಲಂಕಾ ಮತ್ತು ಕೆನಡಾದಲ್ಲಿ ಭಾರತೀಯ ದೂತಾವಾಸಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಕೆನಡಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಖಲಿಸ್ತಾನಿ ಹೋರಾಟಗಾರರ ಮೇಲೆ ತೀವ್ರ ನಿಗಾ ವಹಿಸಿದ್ದರು. ಹಾಗೆ ಅವರ ಓಡಾಟಗಳು, ಭಾರತದ ಕುರಿತಾದ ಅವರ ಮುಂದಿನ ನಡೆಗಳ ಕುರಿತು ಬಹಳಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದರು.

ಏನಿದು ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ?

1968ರಲ್ಲಿ ರಾ (R&AW) ಸಂಸ್ಥೆಯನ್ನು ಹುಟ್ಟುಹಾಕಲಾಗಿತ್ತು. ಭಾರತದ ಪ್ರಧಾನ ವಿದೇಶಿ ಗುಪ್ತಚರ ಸಂಸ್ಥೆಯಾಗಿದೆ. ಚೀನಾ ಮತ್ತು ಪಾಕಿಸ್ತಾನದ ಚಟುವಟಿಕೆ ಮೇಲೆ ಕಣ್ಣಿಡಲು ರಾ ಅನ್ನು ಪ್ರಾರಂಭಿಸಲಾಯಿತು. ಆದ್ರೆ ಈಗ ಬಹುತೇಕ ರಾಷ್ಟ್ರಗಳಿಗೆ ಇದನ್ನು ವಿಸ್ತರಿಸಲಾಗಿದೆ. ಈ ಸಂಸ್ಥೆಯು ರಕ್ಷಣಾ ಸಚಿವಾಲಯದ ಕೆಳಗೆ ಕೆಲಸ ಮಾಡುವುದಿಲ್ಲ, ಈ ಸಂಸ್ಥೆಯ ನಿಯಂತ್ರಣವು ಸಚಿವಾಲಯದ ಹಿಡಿತಕ್ಕೆ ಬರುವುದಿಲ್ಲ. ಆದರೆ ಇದನ್ನು ನೇರವಾಗಿ ಪ್ರಧಾನ ಮಂತ್ರಿಗಳು ನಿಯಂತ್ರಿಸಲಿದ್ದಾರೆ.

English summary

Who is Parag Jain the Newly Appointed RAW Intelligence Chief?

Parag Jain played a key role in Operation Sindhur. He has also served as an IPS officer. He is an expert in intelligence gathering and neighborhood related business.
Story first published: Saturday, June 28, 2025, 19:42 [IST]
X
Desktop Bottom Promotion