Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕಾಲುಗಳಿಲ್ಲದೇ ಒಲಿಂಪಿಕ್ಸ್ ಓಡಿದ..ಚಿನ್ನ ಗೆದ್ದು ಹೀರೋ ಆದ..! ಈಗ ಆತ ಕೊಲೆಗಾರ..!
ಅವನಿಗೆ 11 ವರ್ಷದ ಬಾಲಕನಾಗಿದ್ದಾಗಿನಿಂದ ಎರಡೂ ಕಾಲುಗಳಿಲ್ಲ, ಹಾಗಂತ ಆತ ಮನೆಯಲ್ಲೇ ಕುಳಿತು ಧೃತಿಗೆಡಲಿಲ್ಲ. ಬದಲಿಗೆ ಅಂಗವೈಕಲ್ಯವನ್ನೇ ಮೆಟ್ಟಿನಿಂತು ದೇಶಕ್ಕಾಗಿ ಏನಾದರೂ ಮಾಡಬೇಕು ಎಂದುಕೊಂಡಿದ್ದ. ಬಳಿಕ ಪ್ಯಾರಾಲಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆದ್ದು ಯುವ ಸಮೂಹಕ್ಕೆ ಮಾದರಿಯಾದ. ಆತ ಸೌತ್ ಆಫ್ರಿಕಾದ ಆಸ್ಕರ್ ಲಿಯನಾರ್ಡೊ ಕಾರ್ಲ್ ಪಿಸ್ಟೋರಿಸ್.
ಆಸ್ಕರ್ ತಾನು ಕಾಲಿಲಲ್ಲದವನೆಂದು ಭಾವಿಸದೆ 2000ರಲ್ಲಿ ಅಥೆನ್ಸ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ 200 ಮೀಟರ್ ಓಡಿ ಚಿನ್ನ ಗೆದ್ದು ಎಲ್ಲರು ಹುಬ್ಬೇರುವಂತೆ ಮಾಡಿದ್ದ. ಬ್ಲೇಡ್ ರನ್ನರ್ ಅಂತಲೇ ಆತ ಫೇಮಸ್ ಆಗಿದ್ದ. ಆದ್ರೆ ನೀವುಂದುಕೊಂಡಂತೆ ಆತ ಬರಿ ಕ್ರೀಡಾಪಟು ಆಗಿ ಉಳಿಯಲಿಲ್ಲ. ಆತ ಒಬ್ಬ ಕೊಲೆಗಾರನಾಗಿ ಜೈಲು ಪಾಲಾಗಿ ಈಗ ಪೆರೋಲ್ ಮೇಲೆ ಹೊರಬರುತ್ತಿದ್ದಾನೆ.

ಹಾಗಾದ್ರೆ ಇಂತಹ ಒಲಿಂಪಿಕ್ ಹೀರೋ, ಕೋಟ್ಯಂತರ ಯುವಕರಿಗೆ ಮಾದರಿಯಾಗಿದ್ದವನು ಕೊಲೆಗಾರನಾಗಿದ್ಯಾಕೆ? ಆತ ಕೊಲೆ ಮಾಡಿದ್ದು ಯಾರನ್ನು? ಕಾಲಿಲ್ಲದಿದ್ದರೂ ಒಬ್ಬ ಕೊಲೆಗಾರನಾಗಿ ಬದಲಾಗಿದ್ದು ಹೇಗೆ? ಈ ಎಲ್ಲಾ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ ನೊಡಿ.
2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಅಂದು 400 ಮೀಟರ್ ಓಟದಲ್ಲಿ ಈತ ಹೊಸ ಇತಿಹಾಸ ಬರೆದಿದ್ದ. 45.44 ಸೆಕೆಂಡುಗಳಲ್ಲೇ ಓಟ ಮುಗಿಸಿ ದಕ್ಷಿಣ ಆಫ್ರಿಕಾಗೆ ಹೊಸ ಹೀರೋ ಉದಯಿಸಿದ್ದ. ಆತ ಎಲ್ಲಿ ಹೋದರು ಆತನ ಭಾಷಣ ಕೇಳಲು ಜನ ಮುಗಿಬೀಳುತ್ತಿದ್ದರು. ಫೋಟೋ, ಆಟೋಗ್ರಾಫ್ಗಾಗಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದರು. ಆತ ಸೌತ್ಆಫ್ರಿಕಾದ ಐಕಾನ್ ಆಗಿ ಬೆಳೆದುಬಿಟ್ಟಿದ್ದ.
ಮನೆಯೊಳಗೆ ಗೆಳತಿಗೆ ಗುಂಡು ಹಾರಿಸಿದ
ಆತ ಇಷ್ಟೆಲ್ಲಾ ಸಾಧಿಸಿದರು, ಆಸ್ತಿ ಮಾಡಿದ್ದರೂ, 2013ರಲ್ಲಿ ಅವನ ಅಂತ್ಯ ಆರಂಭವಾಗಿತ್ತು. ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇ ದಿನವೇ ತನ್ನ ಮನೆಯಲ್ಲಿ ಆತನ ಗೆಳತಿಗೆ ಗುಂಡು ಹಾರಿಸಿ ಬರ್ಬರವಾಗಿ ಕೊಲೆ ಮಾಡಿದ್ದ. ಆತ ಮೈದಾನದ ಮೆಟ್ಟಿಲು ಬಿಟ್ಟು ಕೋರ್ಟ್ ಮೆಟ್ಟಿಲೇರಿದ. ಆಕೆಯನ್ನು ಯಾರೋ ಹೊರಗಿನಿಂದ ಕಳ್ಳತನಕ್ಕೆ ಮನೆಗೆ ನುಗ್ಗಿದ್ದರು ಎಂದು ಭಾವಿಸಿ ಗುಂಡು ಹಾರಿಸಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದ.
ಆತನ ಕೃತ್ಯ ಎಲ್ಲೆಡೆ ಸುದ್ದಿಯಾಗಿತ್ತು, ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿತ್ತು. ಕೊನೆಗೂ ಆತ ತಪ್ಪಿತಸ್ಥ ಎಂದು ಸಾಬೀತಾಯಿತು. ದಂಡದ ಮೊತ್ತ ಪಾವತಿಸಲು ತನ್ನ ಮನೆ, ಕಾರು ಎಲ್ಲವನ್ನೂ ಮಾರಾಟ ಮಾಡಬೇಕಾಯಿತು. ಆತನಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಬಳಿಕ ಈ ಶಿಕ್ಷಯ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಆತನಿಗೆ ನೀಡಿದ ಶಿಕ್ಷೆಯ ಪ್ರಮಾಣ ಏರಿಸುವಂತೆ ಕೇಳಲಾಗಿತ್ತು. ಹೀಗಾಗಿ 2017ರಲ್ಲಿ ಆತನಿಗೆ ಒಟ್ಟು 13 ವರ್ಷ ಶಿಕ್ಷೆ ನೀಡಿ ಆದೇಶಿಸಲಾಯಿತು.
ಕೈಯಲ್ಲಿ ಗನ್, ಐಷಾರಾಮಿ ಕಾರುಗಳ ವ್ಯಾಮೋಹ
ಆತ ಇಡೀ ಜಗತ್ತಿನಲ್ಲಿ ಹೆಸರು ಮಾಡಿದ್ದರೂ ಆತ ಗನ್ ಹಾಗೂ ಕಾರುಗಳ ಮೇಲೆ ವ್ಯಾಮೋಹ ಹೊಂದಿದ್ದ, ಹುಡುಗಿಯರನ್ನು ಕ್ಯಾಲೆಂಡರ್ ಬದಲಾಯಿಸಿದಂತೆ ಬದಲಾಯಿಸುತ್ತಲೇ ಇದ್ದ. 2009ರಲ್ಲಿ ಆತನ ಮೇಲೆ ಒಂದು ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣ ಕೋರ್ಟ್ನಲ್ಲಿ ಇತ್ಯರ್ಥವಾಗಿ ಆತ ನಿರಪರಾಧಿ ಎಂದು ತೀರ್ಪು ಬಂತು. ಆದ್ರೆ ಕೋರ್ಟ್ ಆವರಣದಲ್ಲೇ ಆತ ಪಾರ್ಟಿ ಮಾಡಿದ್ದ, ಜೊತೆಗೆ ದೂರು ನೀಡಿದ ಯುವತಿ ಮೇಲೆ ಹಲ್ಲೆ ಮಾಡಿ ಮತ್ತೆ ಒಂದು ದಿನ ಜೈಲು ವಾಸ ಅನುಭವಿಸಿದ್ದ. ಮಾಜಿ ಗೆಳತಿ ಚಲಾಯಿಸುತ್ತಿದ್ದ ಕಾರಿನ ಸನ್ರೂಫ್ ಮೂಲಕ ಬಂದೂಕಿನಿಂದ ಗುಂಡು ಹಾರಿಸಿದ ಆರೋಪ ಆತನ ಮೇಲಿತ್ತು.
ಆತ ಹೋದಲ್ಲಿ ಬಂದಲ್ಲಿ ಗಲಾಟೆ ಮಾಡುಕೊಳ್ಳುತ್ತಿದ್ದ, ಮಲಗುವಾಗ ಯಾವಾಗಲೂ ಗನ್ ಹಿಡಿದುಕೊಂಡು ಮಲಗುತ್ತಿದ್ದ ಎಂದು ಆತನ ತಾಯಿ ತಿಳಿಸಿದ್ದರು.
ಹುಟ್ಟುತ್ತಲೇ ಅಂಗವೈಕಲ್ಯಕ್ಕೆ ಒಳಗಾಗಿದ್ದ ಆಸ್ಕರ್
ಆತ ಹುಟ್ಟುವಾಗಲೇ 2 ಕಾಲುಗಳ ಪಾದದ ಭಾಗ ಕಳೆದುಕೊಂಡಿದ್ದ. ಹೀಗಾಗಿ ಆತನಿಗೆ ನಡೆದಾಡುವುದು ಸಹ ಕಷ್ಟವಾಗುತ್ತಿತ್ತು. ಆದರೆ ಆತ ಛಲ ಬಿಡದೆ ಒಲಿಂಪಿಕ್ಸ್ಗಾಗಿ ತಯಾರಿ ನಡೆಸಿದ ಮೊದಲ ಬಾರಿಗೆ 2004ರಲ್ಲಿ ಅಥೆನ್ಸ್ ಪ್ಯಾರಾಲಿಂಪಿಕ್ಸ್ನಲ್ಲಿ 200 ಮೀಟರ್ ಓಟದ ವಿಶ್ವ ದಾಖಲೆಯನ್ನು ಮುರಿದು ಭಾರೀ ಅಚ್ಚರಿ ಮೂಡಿಸಿದ್ದ.
2008ರ ಬೀಜಿಂಗ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಅವರು 100m, 200m ಮತ್ತು 400m ಸ್ಪ್ರಿಂಟ್ ಪ್ರಶಸ್ತಿಗಳನ್ನು ಪಡೆದಿದ್ದ. ಆದರೆ 2013ರ ವೇಳೆಗೆ ಆತ ಗನ್ಮ್ಯಾನ್, ಸೂಪರ್ಮ್ಯಾನ್, ಕಿಲ್ಲರ್ಮ್ಯಾನ್ ಎಂಬ ಬಿರುದು ಪಡೆದುಕೊಂಡಿದ್ದ.



Click it and Unblock the Notifications

