Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಒರ್ರಿಗೆ 30 ಲಕ್ಷ ಕೊಟ್ಟು ಫೋಟೋ ತೆಗಿಸಿಕೊಳ್ಳುತ್ತಾರೆ ಸೆಲೆಬ್ರಿಟಿಗಳು: ಈ ಓರ್ರಿ ಯಾರು? ಇವರ ಜೊತೆ ಫೋಟೋ ತೆಗೆದುಕೊಳ್ಳುವುದೇಕೆ
ನೀವು ದೊಡ್ಡ-ದೊಡ್ಡ ಬಾಲಿವುಡ್ ಸಮಾರಂಭಗಳಲ್ಲಿ ಒರ್ರಿ ಎಂಬ ಹುಡುಗನ ಗಮನಿಸಿರುತ್ತೀರಿ, ಇತ್ತೀಚೆಗೆ ನಡೆದ ಅನಂತ್ ಅಂಬಾನಿ ಪ್ರೀವೆಡ್ಡಿಂಗ್ ಮದುವೆಯಲ್ಲೂ ಓರ್ರಿ ರೆಹನಾ ಜೊತೆ ಫೋಟೋ ತೆಗೆದ ಅಲ್ಲಲ್ಲ, ರೆಹನಾ ಓರ್ರಿ ಜೊತೆ ತೆಗೆದ ಫೋಟೋಗಳು ವೈರಲ್ ಆಗಿದ್ದೆವು.
ಎಲ್ಲರೂ ಸ್ಟಾರ್ ನಟಿಯರ ಜೊತೆ ಫೋಟೋ ತೆಗೆಯಲು ಮುಗಿ ಬೀಳುವಾಗ, ಸ್ಟಾರ್ ನಟಿಯರು ಒರ್ರಿ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ, ಅದೂ ಸುಮ್ಮನ್ನಲ್ಲ ಫೋಟೋಗೆ ಪೋಸ್ ನೋಡಲು ಒರ್ರಿ ಹೇಳುವಂತೆ ತೆಗೆದುಕೊಳ್ಳುವ ಹಣ 25-30ಲಕ್ಷ!

ಒರ್ರಿ ವಿಭಿನ್ನ ಡ್ರೆಸ್ಸಿಂಗ್, ವಾಕಿಂಗ್, ಮ್ಯಾನರಿಸಂ ಮೂಲಕ ಗಮನ ಸೆಳೆಯುವ ಯುವಕ. ಒರ್ರಿಯದು ಒಂದು ಸಿಗ್ನೇಚರ್ ಪೋಸ್ ಇದೆ, ಎಲ್ಲಾ ನಟಿಯರ ಜೊತೆ ಆ ಪೋಸ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ತನ್ನ ಜೊತೆ ಫೋಟೋ ತೆಗಿಸಿಕೊಳ್ಳುವವರ ಎದೆಯ ಮೇಲೆ ಕೈಯಿಟ್ಟು ತೆಗೆಯುವ ಪೋಸ್, ಈ ಪೋಸ್ ಫೋಟೋಗೆ ಒರ್ರಿಗೆ ಸಿಗುವ ಹಣ 30 ಲಕ್ಷ!
ಯಾರಿದು ಒರ್ರಿ, ಏಕಿಷ್ಟು ಫೇಮಸ್ ಎಂದು ನೋಡೋಣ ಬನ್ನಿ:
ಒರ್ರಿ ತನ್ನನ್ನೇ ತಾನೇ ಮಾರ್ಕೆಟಿಂಗ್ ಮಾಡಿ ಇಂದು ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಯುವಕ. ಸಲ್ಮಾನ್‌ಖಾನ್‌ನ ಕಾರ್ಯಕ್ರಮದಲ್ಲಿ ನನಗೆ 5 ಜನ ಮ್ಯಾನೇಜರ್ ಇದ್ದಾರೆ ಎಂದು ಓರ್ರಿ ಹೇಳಿದಾಗ ಸಲ್ಮಾನ್ ಖಾನ್ ಶಾಕ್ ಆಗಿದ್ದರು, ಏಕೆಂದರೆ ಅಷ್ಟು ದೊಡ್ಡ ಸ್ಟಾರ್ ನಟನಿಗೂ ಇಷ್ಟೊಂದು ಮ್ಯಾನೇಜರ್ ಇಲ್ಲ. ತನ್ನದೇ ಕಂಪನಿ ಕಟ್ಟಿಕೊಂಡಿರುವ ಒರ್ರಿಗೆ ತನ್ನನ್ನು ತಾನು ಹೇಗೆ ಬ್ರ್ಯಾಂಡ್ ಮಾಡಿಕೊಳ್ಳುವುದು ಎಂಬುವುದು ಚೆನ್ನಾಗಿ ಗೊತ್ತಿದೆ, ಹಾಗಾಗಿ ಇಷ್ಟರಮಟ್ಟಿಗೆ ಬೆಳೆದಿದ್ದಾರೆ.
ಬಾಲಿವುಡ್‌ನ ಸ್ಟಾರ್ ಮಕ್ಕಳ ಬೆಸ್ಟ್ ಫ್ರೆಂಡ್ ಒರ್ರಿ
ಒರ್ರಿ ಬಾಲಿವುಡ್ ಸಲೆಬ್ರಿಟಿಗಳನ್ನು ಸ್ಟಾರ್‌ಗಳಂತೆ ನೋಡದೆ ತನ್ನ ಫ್ರೆಂಡ್ಸ್ ಆಗಿ ಕಾಣುತ್ತಾರೆ, ಪ್ರತಿಯೊಬ್ಬ ಸ್ಟಾರ್ ಮಕ್ಕಳಿಗೂ ತಮ್ಮ ಕಾರ್ಯಕ್ರಮದಲ್ಲಿ ಒರ್ರಿ ಇರಬೇಕು, ಒರ್ರಿ ಇದ್ದರೆ ಮಾತ್ರ ಆ ಕಾರ್ಯಕ್ರಮಕ್ಕೆ ಒಂದು ಬೆಲೆ ಎಂಬಂತಾಗಿದೆ. ಪ್ರತಿಯೊಬ್ಬ ಬಾಲಿವುಡ್ ಸೆಲೆಬ್ರಿಟಿಗಳು ತಾವೇ ದುಡ್ಡುಕೊಟ್ಟು ಒರ್ರಿ ಜೊತೆ ಫೋಟೋ ತೆಗಿಸಿಕೊಳ್ಳುತ್ತಾರೆ.
ಒರ್ರಿ ವೈಯಕ್ತಿಕ ಬದುಕು'
Orhan Awatramani ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ರಿಲೆಯನ್ಸ್ ಇಂಡೆಸ್ಟ್ರಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುವುದು. ಒರ್ರಿ ನ್ಯೂಯಾರ್ಕ್‌ನ ಪರ್ಸನ್ಸ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಡಿಗ್ರಿ ಪಡೆದಿದ್ದಾರೆ.
ಸಲ್ಮಾನ್ ಖಾನ್ ನೀವು ದಿನದಲ್ಲಿ ಎಷ್ಟು ಬಾರಿ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದು ಕೇಳಿದಾಗ ನಾನು ಹಗಲಿನಲ್ಲಿ ಹಾಗೂ ರಾತ್ರಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಸಲ್ಲ, ಏಕೆಂದರೆ ಸ್ಟಾರ್‌ಗಳಿಗೆ ಯಾರೂ ಬಿಲ್ ಹಾಕಲ್ಲ ಅದರ ಬದಲಿಗೆ ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ.
ಒರ್ರಿ ಜೊತೆ ಫೋಟೋ ಕ್ಲಿಕ್ಕಿಸಿದರೆ ಅದೃಷ್ಟವಂತೆ
ಎಷ್ಟೋ ಜನ ನನ್ನ ಮಕ್ಕಳ ಜೊತೆ, ಪತ್ನಿ ಫೋಟೋಗೆ ಪೋಸ್ ಕೊಡಿ ಎಂದು ಕೇಳುತ್ತಾರಂತೆ, ಇವರ ಜೊತೆ ಫೋಟೋ ತೆಗಿಸಿಕೊಂಡರೆ ಅವರಿಗೆ ಲಕ್ ಎಂಬ ನಂಬಿಕೆ ಹೀಗಾಗಿ ಸ್ಟಾರ್‌ಗಳೇ ಇವರ ಜೊತೆ ಫೋಟೋ ತೆಗಿಸಿಕೊಳ್ಳುತ್ತಾರೆ.
ಮೊಬೈಲ್ ಕವರ್‌ನಿಂದಲೂ ಒರ್ರಿ ಗಮನ ಸೆಳೆಯುತ್ತಾರೆ
ಒರ್ರಿ ಡ್ರೆಸ್ಸಿಂಗ್ ಹಾಗೂ ವಿಭಿನ್ನ ಕವರ್‌ನ ಮೊಬೈಲ್ ಬಳಸಿ ಗಮನ ಸೆಳೆಯುತ್ತಾರೆ, ಪಾಪರಾಜಿಗಳು ಪ್ರತಿಬಾರಿ ಅವರ ಮೊಬೈಲ್ ಕವರ್ ತೋರಿಸಲು ಹೇಳುತ್ತಾರೆ, ಒಟ್ಟಿನಲ್ಲಿ ಓರ್ರಿ ತನ್ನ ಸ್ಟಾರ್ ಪಟ್ಟವನ್ನು ತಾನೇ ಸೃಷ್ಟಿಸಿಕೊಂಡಿರುವುದು, ಯಾವುದೇ ಸೆಲೆಬ್ರಿಟಿಗಳಿಗೆ ಕಮ್ಮಿಯಿಲ್ಲದ ಜೀವನ ನಡೆಸುತ್ತಿದ್ದಾರೆ ಒರ್ರಿ.



Click it and Unblock the Notifications
