Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರತನ್ ಟಾಟಾ ಆಸ್ತಿಗೆ ಉತ್ತರಾಧಿಕಾರಿ ಯಾರು..? ಟಾಟಾದ ಭವಿಷ್ಯದ ನಾಯಕ ಯಾರು?
ಉದ್ಯಮ ಲೋಕದ ಮಾಣಿಕ್ಯ ರತನ್ ಟಾಟಾ ಮರೆಯಾಗಿದ್ದಾರೆ. ಇದು ಭಾರತದ ಉದ್ಯಮ ವಲಯಕ್ಕೆ ಅರಗಿಸಿಕೊಳ್ಳಲಾಗದ ಸುದ್ದಿ ಎಂದರು ತಪ್ಪಾಗಲಾರದು. ಹಾಗೆ ಶತ್ರುಗಳೇ ಇಲ್ಲದ ಏಕೈಕ ಉದ್ಯಮಿ ಎಂದರೆ ರತನ್ ಟಾಟಾ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಭಾರತದಲ್ಲಿ ಅಂಬಾನಿ, ಅದಾನಿ ಅವರನ್ನು ಹೊರತುಪಡಿಸಿ ಅತ್ಯಂತ ಶ್ರೀಮಂತ ಉದ್ಯಮಿ ಕೂಡ ಇವರೇ ಆಗಿದ್ದಾರೆ. 2024ರ ವರದಿಯಂತೆ ಅವರು ಬರೋಬ್ಬರಿ 3,800 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.
ಆದ್ರೆ ಅವರು ಮದುವೆಯಾಗದೆ ಕೊನೆಯವರೆಗೂ ಬಹ್ಮಚಾರಿಯಾಗಿಯೇ ಉಳಿದಿದ್ದರು. ಹೀಗಿದ್ದಾಗ ಅವರ ಈ ಕೋಟಿ ಕೋಟಿ ಆಸ್ತಿ ಯಾರಿಗೆ ಸೇರುತ್ತದೆ. ಟಾಟಾ ಸಂಸ್ಥೆಯನ್ನು ಭವಿಷ್ಯದಲ್ಲಿ ಮುನ್ನಡೆಸುವುದು ಯಾರು? ಇಷ್ಟೊಂದು ಆಸ್ತಿ ವಾರಸುದಾರರು ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.

ರತನ್ ಟಾಟಾ ಮದುವೆಯಾಗದಿದ್ದರೂ ಅವರ ಕುಟುಂಬವಿದೆ. ಅಂದರೆ ಅವರ ತಂದೆಯ ಕುಟುಂಬ ಬಹುದೊಡ್ಡದಾಗಿದೆ. ಆ ಕುಟುಂಬ ಕೂಡ ಟಾಟಾ ಸಂಸ್ಥೆಗಾಗಿಯೇ ದುಡಿಯುತ್ತಿದೆ. ರತನ್ ಟಾಟಾ 'ಟಾಟಾ ಸನ್ಸ್‌ನ' ಗೌರವಾನ್ವಿತ ಅಧ್ಯಕ್ಷರಾಗಿದ್ದವರು ಆದ್ರೆ ಅವರ ವಂಶಸ್ಥರು ಕೂಡ ಟಾಟಾ ಸಂಸ್ಥೆಯ ಉನ್ನತ ಹುದ್ದೆ ಅಲಂಕರಿಸಿದ್ದರೆ.
ಆರಂಭದಲ್ಲಿ ರತನ್ ಟಾಟಾ ಅವರ ತಂದೆಯ ಸಹೋದರ ಜೆಆರ್‌ಡಿ ಟಾಟಾ ಇದರ ಅಧ್ಯಕ್ಷರಾಗಿದ್ದರು ಆದರೆ 1991ರಲ್ಲಿ ರತನ್ ಟಾಟಾ ಈ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಇದಾದ ಬಳಿಕ ಟಾಟಾ ಇಂಡಸ್ಟ್ರೀಸ್‌ನ ಮುಖ್ಯಸ್ಥರಾಗಿಯೂ ಅವರು ಹುದ್ದೆಗೆ ಏರಿದರು.
2017ರಲ್ಲಿ ರತನ್ ಟಾಟಾ ಎನ್. ಚಂದ್ರಶೇಖರ್ ಅವರಿಗೆ ಜವಾಬ್ದಾರಿಯನ್ನು ವಹಿಸಿ ಎಲ್ಲಾ ಜವಾಬ್ದಾರಿಗಳಿಂದ ನಿವೃತ್ತರಾದರು. ಅಂದಿನಿಂದ ಎನ್ ಚಂದ್ರಶೇಖರ್ ಈ ಸಂಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ ರತನ್ ಟಾಟಾ ಅವರ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ರತನ್ ಟಾಟಾ ಮದುವೆಯಾಗದ ಕಾರಣ ಅವರ ಹೆಸರಿನ ಆಸ್ತಿ ಈಗ ಏನಾಗಲಿದೆ ಎಂಬುದು ದೊಡ್ಡ ಪ್ರಶ್ನೆ.
ರತನ್ ಟಾಟಾ ಬಳಿಕ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ?
ರತನ್ ಟಾಟಾ ತಂದೆ ಎರಡನೇ ಪತ್ನಿ ಸಿಯೋನ್ ಟಾಟಾ ಅವರ ಪುತ್ರ ನೋಯೆಲ್ ಟಾಟಾ ಮುಂದಿನ ಉತ್ತರಾಧಿಕಾರಿಯಾಗಲಿದ್ದಾರೆ ಎನ್ನಲಾಗಿದೆ. ಈ ನೋಯೆಲ್ ಟಾಟಾ ಅವರಿಗೂ ಮೂವರು ಮಕ್ಕಳಿದ್ದಾರೆ. ಮಾಯಾ ಟಾಟಾ, ನೆವಿಲ್ಲೆ ಟಾಟಾ ಮತ್ತು ಲಿಯಾ ಟಾಟಾ. ಈ ಮೂವರು ಕೂಡ ಟಾಟಾ ಸಂಸ್ಥೆಯಲ್ಲಿಯೇ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಮಾಯಾ ಟಾಟಾ ಈಗಾಗಲೇ ಟಾಟಾ ಗ್ರೂಪ್‌ನಲ್ಲಿ ಹೆಸರು ಮಾಡಿದ್ದಾರೆ.
ಬೇಯೆಸ್ ಬ್ಯುಸಿನೆಸ್ ಸ್ಕೂಲ್ ಮತ್ತು ವಾರ್ವಿಕ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅವರು ಟಾಟಾ ಆಪರ್ಚುನಿಟೀಸ್ ಫಂಡ್ ಮತ್ತು ಟಾಟಾ ಡಿಜಿಟಲ್‌ನಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಲ್ಲದೆ ಟಾಟಾ ನ್ಯೂ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
ಹಾಗೆ ಇನ್ನೊಬ್ಬರಾದ ನೆವಿಲ್ಲೆ ಟಾಟಾ ಈಗ ಟ್ರೆಂಡ್ ಹಾಗೂ ಸ್ಟಾರ್ ಬಜಾರ್ ಫ್ಯಾಷನ್ ಸರಪಳಿಯ ಆಡಳಿತಾತ್ಮಕ ಕಾರ್ಯಗಳ ನೋಡಿಕೊಳ್ಳುತ್ತಾರೆ. ಹೈಪರ್ ಮಾರ್ಕೆಟ್ ಆಡಳಿತಗಳನ್ನು ನೆವಿಲ್ಲೆ ಟಾಟಾ ಅವರ ಉಸ್ತುವಾರಿಯಲ್ಲಿ ನಡೆಯುತ್ತದೆ. ಇವರ ಜೊತೆ ಲಿಯಾ ಟಾಟಾ ದೆಹಲಿಯ ತಾಜ್ ಹೋಟೆಲ್‌ನ ಉಸ್ತುವಾರಿಯಾಗಿದ್ದಾರೆ. ಹಾಗೆ ಭಾರತದಾದ್ಯಂತ ಹಾಗೂ ವಿದೇಶಿ ಹೋಟೆಲ್ ವ್ಯವಹಾರಗಳ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ.
ಸದ್ಯ ರನ್ ಟಾಟಾ ಅವರು ತಮ್ಮ ಗಳಿಕೆಗಿಂತಲೂ ಹೆಚ್ಚನ್ನು ದಾನಾ ಮಾಡಿದ್ದಾರೆ. ಸಮಾಜಮುಖಿ ಕಾರ್ಯದಿಂದ ಅವರು ಹೆಸರಾಗಿದ್ದಾರೆ. ಈಗ ಅವರ ಈ ಸಾಧನೆಗಳನ್ನು, ಹೆಸರನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಈಗ ಅವರ ಕುಟುಂಬದ ಸದಸ್ಯರ ಮೇಲಿದೆ.



Click it and Unblock the Notifications

