Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದೆಹಲಿ ನೂತನ ಸಿಎಂ ಅತಿಶಿ ಯಾರು..? ಆಕೆಯ ಆಸ್ತಿ ಎಷ್ಟು? ಓದಿದ್ದು ಎಲ್ಲಿ ಗೊತ್ತಾ?
ದೆಹಲಿ ಲಿಕ್ಕರ್ ಪ್ರಕರಣದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲು ಸೇರಿ ಬಳಿಕ ಈಗ ಜೈಲಿನಿಂದ ಹೊರಬಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ರಾಜಧಾನಿಯ ಮುಂದಿನ ಸಿಎಂ ಆಗಿ ಈಗ ಅತಿಶಿ ಮರ್ಲೆನಾ ಆಯ್ಕೆಯಾಗಿದ್ದಾರೆ. ಖುದ್ದು ಕೇಜ್ರಿವಾಲ್ ಅವರೇ ಅತಿಶಿ ಅವರ ಹೆಸರು ಸೂಚಿಸಿದ್ದರು ಎಂದು ತಿಳಿದುಬಂದಿದೆ. ಸಿಎಂ ರೇಸ್‌ನಲ್ಲಿ ಹತ್ತಾರು ಮಂದಿ ಇದ್ದರೂ ಅತಿಶಿ ಕೊನೆಯದಾಗಿ ಆಯ್ಕೆಯಾಗಿದ್ದಾರೆ.
ಹಿಂದೊಮ್ಮೆ ಕೇಜ್ರಿವಾಲ್ ಸರ್ಕಾರದಲ್ಲಿ ಶಿಕ್ಷಣ ಸಚಿವೆಯಾಗಿದ್ದ ಆಕೆ ಕ್ರಾಂತಿ ಸೃಷ್ಟಿಸಿದ್ದರು. ದೆಹಲಿ ಕ್ಯಾಬಿನೆಟ್‌ನಲ್ಲಿ ಏಕೈಕ ಮಹಿಳಾ ಸಚಿವರಾಗಿರುವ ಆಕೆ ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅತಿಶಿ ಮರ್ಲೆನಾ ತಮ್ಮ ರಾಜಕೀಯ ಪಾತ್ರಕ್ಕಾಗಿ ಮಾತ್ರವಲ್ಲದೆ ತಮ್ಮ ಆರ್ಥಿಕ ಸ್ಥಿತಿಯಿಂದಲೂ ಗಮನ ಸೆಳೆಯುತ್ತಿದ್ದಾರೆ.

ಅವರ ಚುನಾವಣಾ ಅಫಿಡವಿಟ್‌ನ ಪ್ರಕಾರ ಅತಿಶಿ ಮರ್ಲೆನಾ ಒಟ್ಟು ಆಸ್ತಿ 1.41 ಕೋಟಿ ರೂ. ಆಕೆಯ ಹಣಕಾಸು ಬಂಡವಾಳವು ಸರಿಸುಮಾರು
30,000 ರೂ. ನಗದು 1.22 ಕೋಟಿ ಎಂದು ಉಲ್ಲೇಖಿಸಿದ್ದಾರೆ. ಇದು ಬ್ಯಾಂಕ್ ಠೇವಣಿಯನ್ನೂ ಒಳಗೊಂಡಿದೆ.
ಅತಿಶಿ ಮರ್ಲೆನಾ ಅವರು ಮಿಲಿಯನೇರ್ ಮತ್ತು ಪ್ರಮುಖ ಮಂತ್ರಿಯಾಗಿದ್ದರೂ, ಅವರು ಹೂಡಿಕೆಯ ಕಡೆಗೆ ಸಂಪ್ರದಾಯವಾದಿ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಅತಿಶಿ ಮಾರ್ಕೆಟ್‌ಗಳಲ್ಲಿ ಯಾವುದೇ ರೀತಿ ಹಣ ಹೂಡಿಕೆ ಮಾಡದೆ ಸಾಂಪ್ರದಾಯಿಕವಾಗಿ ಬ್ಯಾಂಕ್ ಸ್ಥಿರ ಠೇವಣಿಯಂತಹ ಕಡೆ ಹಣ ಹೂಡಿಕೆ ಮಾಡಿದ್ದಾರೆ. ಅತಿಶಿ ಅವರು 5 ಲಕ್ಷ ರೂಪಾಯಿ ಮೌಲ್ಯದ ಎಲ್‌ಐಸಿ ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದಿದ್ದಾರೆ.
ಅತಿಶಿ ಮರ್ಲೆನಾ ಸ್ವಂತ ಮನೆ ಅಥವಾ ಭೂಮಿ ಸೇರಿದಂತೆ ಯಾವುದೇ ಆಸ್ತಿಯನ್ನು ಹೊಂದಿಲ್ಲ. ರಿಯಲ್ ಎಸ್ಟೇಟ್ ಹೂಡಿಕೆಯ ಕೊರತೆಯು ಭೌತಿಕ ಸ್ವತ್ತುಗಳಿಗಿಂತ ಹೆಚ್ಚಾಗಿ ದ್ರವ್ಯತೆ ಮತ್ತು ಸುರಕ್ಷಿತ ಉಳಿತಾಯದ ಮೇಲೆ ಅವಳ ಗಮನವನ್ನು ಪ್ರತಿಬಿಂಬಿಸುತ್ತದೆ.
ಅತಿಶಿ ಶಿಕ್ಷಣವೇನು?
ಜೂನ್ 8, 1981 ರಂದು ದೆಹಲಿಯಲ್ಲಿ ಜನಿಸಿದ ಅತಿಶಿ ಮರ್ಲೆನಾ ಪ್ರಭಾವಶಾಲಿ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ಸ್ಪ್ರಿಂಗ್‌ಡೇಲ್ಸ್ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಆಕೆ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹೀಗಾಗಿಯೇ ಅವರನ್ನು ದೆಹಲಿ ಶಿಕ್ಷಣ ಸಚಿವೆಯಾಗಿ ಆಯ್ಕೆ ಮಾಡಲಾಗಿತ್ತು.
ಅತಿಶಿ ಮರ್ಲೆನಾ ಅವರ ರಾಜಕೀಯ ಜೀವನವು 2012 ರಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಮಯದಲ್ಲಿ ಪ್ರಾರಂಭವಾಯಿತು. 2012ರಲ್ಲಿ ಯುಪಿಎ ಸರ್ಕಾರದ ವಿರುದ್ಧ ಎದ್ದಿದ್ದ ಆಡಳಿತ ವಿರೋಧಿ ಅಲೆಯಲ್ಲಿ ಆಪ್ ಪ್ರತಿಭಟನೆಗೆ ಇಳಿದಿತ್ತು. ಇಲ್ಲಿಯೇ ಅತಿಶಿ ಸಹ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದರು.
ಬಳಿಕ 2019 ರ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಬಿಜೆಪಿ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ ಸೋಲು ಅನುಭವಿಸಿದ್ದರೂ ಕೂಡ ಆಪ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಒಂದು ವರ್ಷದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಮತ್ತೆ ಕಲ್ಕಾಜಿ ಕ್ಷೇತ್ರದಿಂದ ಜಯ ಗಳಿಸಿದರು. 2023 ರಲ್ಲಿ ಮೊದಲ ಬಾರಿಗೆ ಅವರು ದೆಹಲಿಯ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಈಗ ಅವರು 2024 ರಲ್ಲಿ ದೆಹಲಿಯ ಮುಖ್ಯಮಂತ್ರಿ ಹುದ್ದೆಗೇರಿದ್ದು, ಆಪ್‌ನಿಂದ ಸಿಎಂ ಆದ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಸದ್ಯ ದೆಹಲಿಯಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಫೆಬ್ರವರಿಯಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.



Click it and Unblock the Notifications

