Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಟೆಲಿಗ್ರಾಮ್ ಸಿಇಒ ಬಂಧನಕ್ಕೆ 24ರ ಯುವತಿ ಕಾರಣ..? ಯಾರು ಈ ಜೂಲಿ ಗೊತ್ತಾ?
ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಪ್ಯಾರಿಸ್‌ನಲ್ಲಿ ಅರೆಸ್ಟ್ ಆಗಿರುವ ಸುದ್ದಿ ಹರಿದಾಡಿದ ಬಳಿಕ ಭಾರೀ ಚರ್ಚೆ ಆರಂಭಗೊಂಡಿದೆ. ಅವರ ಬಂಧನ ಕಾನೂನು ಬಾಹಿರ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಗುಗಳು ಕೇಳಿಬಂದಿದೆ. ಜೊತೆಗೆ ಎಲಾನ್ ಮಸ್ಕ್ ಟೆಲಿಗ್ರಾಮ್ ಸಂಸ್ಥಾಪಕನ ಪರವಾಗಿ ನಿಂತಿದ್ದಾರೆ. ಅವರ ಬಂಧನ ವಾಕ್ ಸ್ವಾತಂತ್ರ್ಯದ ಕೊಲೆ ಎಂದು ಟೀಕಿಸಿದ್ದಾರೆ.
ಮಕ್ಕಳ ಅಶ್ಲೀಲ ವಿಷಯ, ಅಕ್ರಮ ಮಾದಕವಸ್ತುಗಳ ಕಳ್ಳಸಾಗಣೆ, ಜೂಜು ಪ್ರಚಾರ ಸೇರಿ, ಮಾಡರೇಟರ್‌ಗಳ ಮೇಲೆ ನಿಯಂತ್ರಣ ಮಾಡದಿರುವ ಕಾರಣ ನೀಡಿ ಅವರನ್ನು ಬಂಧಿಸಲಾಗಿದೆ ಎಂದು ವರರಿಯಾಗಿದೆ. ಆದ್ರೆ ಅವರ ಬಂಧನದ ಹಿಂದೆ ಓರ್ವ 24 ವರ್ಷದ ಯುವತಿ ಇರುವುದು ಈಗ ಬಹಿರಂಗಗೊಂಡಿದೆ.

ಹಾಗಾದ್ರೆ ಶ್ರೀಮಂತ ಉದ್ಯಮಿ, ಟೆಲಿಗ್ರಾಮ್ ಅಪ್ಲಿಕೇಶನ್ ಸಂಸ್ಥಾಪಕನ ಬಂಧನಕ್ಕೆ ಕಾರಣವಾದ 24 ವರ್ಷದ ಯುವತಿ ಯಾರು? ಆಕೆಗೂ ಟೆಲಿಗ್ರಾಮ್ ಸಿಇಒಗೂ ಇರುವ ಸಂಬಂಧವೇನು? ಆಕೆ ಮಾಡಿದ ತಪ್ಪಾದರು ಏನು? ಈ ಬಂಧನದ ಹಿಂದೆ ಆಕೆ ಕಾರಣವಾಗಿದ್ದು ಹೇಗೆ ಎಂಬೆಲ್ಲಾ ಮಾಹಿತಿ ನಾವಿಂದು ತಿಳಿದುಕೊಳ್ಳೋಣ.
ಟೆಲಿಗ್ರಾಮ್ ಸಂಸ್ಥಾಪಕನನ್ನೇ ಜೈಲಿಗಟ್ಟಿದ ಆಕೆಯ ಹೆಸರು ಜೂಲಿ ವಾವಿಲೋವಾ, 24 ವರ್ಷದ ಈಕೆ ಪಾವೆಲ್ ಡುರೊವ್ ಜೊತೆಗೆ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇದೊಂದು ಕುತಂತ್ರದಿಂದ ಅವರನ್ನು ಬಂಧಿಸಲಾಗಿದೆ ಎಂಬ ಚರ್ಚೆ ಹುಟ್ಟುಕೊಂಡಿದೆ. ಯಾಕಂದ್ರೆ ಟೆಲಿಗ್ರಾಮ್ ಸಿಇಓ ಬಂಧನಕ್ಕೂ ಈ ಯುವತಿ ಜೊತೆ ಪ್ರವಾಸದಲ್ಲಿದ್ದರು.
ಜೂಲಿ ವಾವಿಲೋವಾ ಅವರು ಪಾವೆಲ್ ಡುರೊವ್ ಅವರೊಂದಿಗೆ ಹಲವಾರು ಬಾರಿ ಕಾಣಿಸಿಕೊಂಡರು. ಇಬ್ಬರೂ ಫ್ರಾನ್ಸ್‌ಗೆ ಬರುವ ಮೊದಲು ಕಝಾಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಅಜೆರ್ಬೈಜಾನ್‌ಗೆ ಪ್ರಯಾಣಿಸಿದ್ದಾರೆ, ಈ ಪ್ರಯಾಣ ಮುಗಿಸಿ ಫ್ರಾನ್ಸ್‌ಗೆ ಬಂದಾಗ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಈ ಬಂಧನದ ಹಿಂದೆ ಇದೇ ಜೂಲಿ ವಾವಿಲೋವಾ ಇದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ವವಿಲೋವಾ ಅವರ ಬಂಧನಕ್ಕೆ ಮುಂಚಿನ ದಿನಗಳಲ್ಲಿ ಪಾವೆಲ್ ಅವರೊಂದಿಗೆ ಹಲವಾರು ಬಾರಿ ಕಾಣಿಸಿಕೊಂಡರು. ಇಬ್ಬರೂ ಫ್ರಾನ್ಸ್‌ಗೆ ಆಗಮಿಸುವ ಮೊದಲು ಕಝಾಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಅಜೆರ್ಬೈಜಾನ್‌ಗೆ ಪ್ರಯಾಣಿಸಿದರು ಮತ್ತು ಪ್ಯಾರಿಸ್ ಬಳಿಯ ಲೆ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕಾನೂನು ಅಧಿಕಾರಿಗಳಿಂದ ಬಂಧಿಸಲ್ಪಟ್ಟರು.
ಒಂದು ಫೋಟೋ ಸುಳೀವು ನೀಡಿತಾ?
ಜೂಲಿ ವಾವಿಲೋವಾ ಫ್ರಾನ್ಸ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಆಕೆ ಒಂದು ಫೋಟೊವನ್ನ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಪಾವೆಲ್ ಡುರೊವ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಇದು ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೋ ಆಗಿತ್ತು. ಇದಾದ ಕೆಲವೇ ನಿಮಿಷದಲ್ಲಿ ಸಿಇಒ ಬಂಧನವಾಗಿದೆ. ಮೂಲಗಳ ಪ್ರಕಾರ ಈ ಫೋಟೊದ ಆಧಾರವಾಗಿಸಿಕೊಂಡು ಕಾನೂನು ಅಧಿಕಾರಿಗಲು ಅವರನ್ನು ಬಂಧಿಸಲು ಮುಂದಾದರು ಎಂದು ಅಂದಾಜಿಸಲಾಗಿದೆ.
ಯಾರು ಈ ವಾವಿಲೋವಾ?
ಆಕೆಯ ಇನ್ಸ್‌ಸ್ಟಾಗ್ರಾಮ್ ಖಾತೆಯ ಪ್ರಕಾರ ಆಕೆ 24 ವರ್ಷದ ಕ್ರಿಪ್ಟೋ ಇಂಟ್ರಕ್ಟರ್, ಇನ್‌ಫ್ಲೂಯೆನ್ಸರ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಆಕೆಯ ಖಾತೆಯಲ್ಲಿ ಪ್ರವಾಸ, ಗೇಮಿಂಗ್, ಯೋಗ ಹೀಗೆ ಹತ್ತು ಹಲವು ರೀತಿಯ ಕಂಟೆಂಟ್ ನೋಡಬಹುದು. ಅವಳು ಇಂಗ್ಲಿಷ್, ರಷ್ಯನ್, ಸ್ಪ್ಯಾನಿಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಮಾತನಾಡಬಲ್ಲಳು.
ಆದ್ರೆ ಆಕೆಯನ್ನು ಗೂಢಾಚಾರಿಕೆಯ ಏಜೆಂಟ್ ಎಂದು ಕರೆಯಲಾಗುತ್ತಿದೆ. ಆದ್ರೆ ಈ ಕುರಿತು ಯಾವುದೇ ಮೂಲಗಳಿಂದ ಮಾಹಿತಿ ಲಭ್ಯವಾಗಿಲ್ಲ. ಇನ್ನು ಟೆಲಿಗ್ರಾಮ್ ಸಿಇಓ ಬಂಧನವಾಗುತ್ತಿದ್ದಂತೆ ಆಕೆಯ ಸದ್ಯದ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಆದ್ರೆ ಟೆಲಿಗ್ರಾಮ್ ಸಿಇಒ ಬಂಧನದ ಹಿಂದೆ ಈಕೆಯ ಕೈವಾಡವಿದೆಯೇ ಎಂಬ ಅನುಮಾನವೂ ಸಹ ಕಾಡುತ್ತಿದೆ.



Click it and Unblock the Notifications
