Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇವಲ 19 ವರ್ಷದಲ್ಲೇ ವಿಶ್ವ ಕಿರೀಟ! ಯಾರು ಈ ದಿವ್ಯಾ ದೇಶಮುಖ್? ಪ್ರೈಸ್ ಮನಿ ಇಷ್ಟೊಂದಾ?
ಭಾರತಕ್ಕೆ ಹೊಸ ಹೆಮ್ಮೆ! ಕೇವಲ 19ರ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿ. ಹೌದು, ಫಿಡೆ ಮಹಿಳಾ ಚೆಸ್ ವಿಶ್ವಕಪ್ 2025ರ ಫೈನಲ್ (FIDE Women's World Cup 2025) ಪಂದ್ಯದಲ್ಲಿ 19 ವರ್ಷದ ದಿವ್ಯಾ ದೇಶಮುಖ್ (Divya Deshmukh) ಇತಿಹಾಸ ಸೃಷ್ಟಿಸಿದ್ದಾರೆ. ತಮ್ಮ ಸಹ ಆಟಗಾರ್ತಿ ಮತ್ತು ಅನುಭವಿ ಗ್ರ್ಯಾಂಡ್‌ಮಾಸ್ಟರ್ ಕೋನೆರು ಹಂಪಿಯನ್ನು (Koneru Humpy) ಸೋಲಿಸಿ ವಿಶ್ವ ಚೆಸ್ ಚಾಂಪಿಯನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಹಿಳಾ ಚೆಸ್ ವಿಶ್ವಕಪ್ ಗೆದ್ದ ದಿವ್ಯಾ ದೇಶಮುಖ್ ಯಾರು? ಬಹುಮಾನವಾಗಿ ಸಿಕ್ಕಿದೆ ಇಷ್ಟು ಲಕ್ಷ? ಇಲ್ಲಿದೆ ಮಾಹಿತಿ.
ದಿವ್ಯಾ ದೇಶ್‌ಮುಖ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮತ್ತೊಬ್ಬ ಭಾರತೀಯ ಆಟಗಾರ್ತಿ ಕೊನೆರು ಹಂಪಿಯೊಂದಿಗೆ ನಡೆದ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಈ ಪಂದ್ಯವು ಅತ್ಯಂತ ರೋಮಾಂಚಕಾರಿಯಾಗಿತ್ತು. ಮೊದಲ ಎರಡು ಕ್ಲಾಸಿಕಲ್ ಗೇಮ್‌ಗಳು ಡ್ರಾ ಆಗಿದ್ದವು. ಟೈಬ್ರೇಕರ್ ಪಂದ್ಯದಲ್ಲಿ ಅದ್ಭುತ ಗೆಲುವು ಸಾಧಿಸಿದರು. ಈ ಮೂಲಕ ಈ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ದಿವ್ಯಾ ಭಾವುಕರಾದರು.

ಯಾರು ಈ ದಿವ್ಯಾ ದೇಶಮುಖ್?
ದಿವ್ಯಾ ದೇಶಮುಖ್ ಅವರು 2005ರ ಡಿಸೆಂಬರ್ 9ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಅವರ ತಂದೆ ಡಾ. ಜಿತೇಂದ್ರ ಮತ್ತು ತಾಯಿ ಡಾ. ನಮ್ರತಾ. ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ದಿವ್ಯಾ ಕೇವಲ ಐದು ವರ್ಷದವರಿದ್ದಾಗಲೇ ಚೆಸ್ ಆಡಲು ಪ್ರಾರಂಭಿಸಿದರು. ಅವರ ಪೋಷಕರು ದಿವ್ಯಾ ಬ್ಯಾಡ್ಮಿಂಟನ್ ಆಡಬೇಕೆಂದು ಬಯಸಿದ್ದರು. ಆದರೆ, ದಿವ್ಯಾ ಅವರ ಆಸಕ್ತಿ ಚೆಸ್ ಕಡೆಗೆ ಇತ್ತು. ತಂದೆ ಚಾಕೊಲೇಟ್ ಕೊಡಿಸುವುದಾಗಿ ಹೇಳಿದ್ದರಿಂದ ಖುಷಿಯಿಂದ ತರಗತಿಗಳಿಗೆ ಹೋಗುತ್ತಿದ್ದರು.
ಬಾಲ್ಯದಿಂದಲೇ ಶುರು, ದೊಡ್ಡ ಸಾಧನೆಗಳು
ದಿವ್ಯಾ 2012ರಲ್ಲಿ ಕೇವಲ ಏಳು ವರ್ಷದವರಿದ್ದಾಗ ಅಂಡರ್-7 ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನಕ್ಕೆ ಭರ್ಜರಿ ಆರಂಭ ನೀಡಿದರು. ಇದರ ಬಳಿಕ, ಅವರು ಅಂಡರ್-10 (ಡರ್ಬನ್, 2014) ಮತ್ತು ಅಂಡರ್-12 (ಬ್ರೆಜಿಲ್, 2017) ವಿಭಾಗಗಳಲ್ಲಿ ವಿಶ್ವ ಯುವ ಪ್ರಶಸ್ತಿಗಳನ್ನು ಸಹ ಗೆದ್ದರು. ನಂತರ, ದಿವ್ಯಾ ಎಂದಿಗೂ ಹಿಂದಿರುಗಿ ನೋಡಲಿಲ್ಲ. ಸತತವಾಗಿ ಸಾಧನೆಯ ಶಿಖರ ಏರಿದರು.
ಮಾಸ್ಟರ್ ಪ್ರಶಸ್ತಿ ಮತ್ತು ವಿಶ್ವ ಚಾಂಪಿಯನ್
2023ರಲ್ಲಿ ದಿವ್ಯಾ ದೇಶಮುಖ್ ಅವರು ಅಂತರಾಷ್ಟ್ರೀಯ ಮಾಸ್ಟರ್ (IM) ಪ್ರಶಸ್ತಿಯನ್ನು ಪಡೆದರು. ನಂತರ 2024ರಲ್ಲಿ ವಿಶ್ವ ಜೂನಿಯರ್ ಗರ್ಲ್ಸ್ ಅಂಡರ್-20 ಚಾಂಪಿಯನ್‌ಶಿಪ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ 11ರಲ್ಲಿ 10 ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದರು. ಇದರ ಜೊತೆಗೆ, 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ತಂಡಕ್ಕೆ ಚಿನ್ನದ ಪದಕ ಗೆಲ್ಲಲು ದಿವ್ಯಾ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಏಷ್ಯನ್ ಜೂನಿಯರ್ ಚಾಂಪಿಯನ್ ಕೂಡ ಆಗಿದ್ದು, ಇಂದು ಭಾರತದ ಅತ್ಯಂತ ಪ್ರತಿಭಾವಂತ ಯುವ ಮಹಿಳಾ ಚೆಸ್ ಆಟಗಾರ್ತಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ವಿಶ್ವದ ನಂಬರ್-1 ಆಟಗಾರ್ತಿಗೆ ಸೋಲು
ಫಿಡೆ ವರ್ಲ್ಡ್ ಬ್ಲಿಟ್ಜ್ ಟೀಮ್ ಚಾಂಪಿಯನ್‌ಶಿಪ್ 2024ರಲ್ಲಿ ದಿವ್ಯಾ ಫಿಡೆ ಚೀನಾದ ತಾರೆ ಮತ್ತು ವಿಶ್ವದ ನಂಬರ್ ಒನ್ ಮಹಿಳಾ ಚೆಸ್ ಆಟಗಾರ್ತಿ ಹೌ ಯಿಫಾನ್ ಅವರನ್ನು ಸೋಲಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಈ ಪಂದ್ಯವು ಲಂಡನ್‌ನಲ್ಲಿ ನಡೆದಿತ್ತು. ದಿವ್ಯಾ ಅವರ ಈ ಗೆಲುವು ಅವರ ವೃತ್ತಿಜೀವನದ ಅತಿದೊಡ್ಡ ಗೆಲುವುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ದಿವ್ಯಾ ಅವರ ಈ ಸಾಧನೆಯನ್ನು ಶ್ಲಾಘಿಸಿದ್ದರು.
ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ಅರ್ಹತೆ
ಮಹಿಳಾ ಚೆಸ್ ವಿಶ್ವಕಪ್‌ನಲ್ಲಿ ಅಗ್ರ ಮೂರು ಸ್ಥಾನಗಳನ್ನು ಗಳಿಸಿದ ಆಟಗಾರ್ತಿಯರಿಗೆ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ಅರ್ಹತೆ ಪಡೆಯುವ ಅವಕಾಶ ಸಿಗುತ್ತದೆ. ದಿವ್ಯಾ ಈ ಸಾಧನೆಯನ್ನೂ ಮಾಡಿದ್ದಾರೆ. ಅವರು ಈಗ ವಿಶ್ವ ಚೆಸ್ ಚಾಂಪಿಯನ್ ಆಗುವತ್ತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ದಿವ್ಯಾಗೆ ಸಿಕ್ಕ ಬಹುಮಾನ ಎಷ್ಟು?
ಫಿಡೆ ಮಹಿಳಾ ವಿಶ್ವಕಪ್ 2025ರ ಒಟ್ಟು ಬಹುಮಾನದ ಮೊತ್ತ ಸುಮಾರು 5.99 ಕೋಟಿ (691,250 ಅಮೇರಿಕನ್ ಡಾಲರ್) ಆಗಿತ್ತು. ಈ ಮೊತ್ತವನ್ನು ವಿವಿಧ ಸುತ್ತುಗಳನ್ನು ತಲುಪಿದ ಆಟಗಾರ್ತಿಯರ ನಡುವೆ ವಿಂಗಡಿಸಲಾಗಿದೆ. ದಿವ್ಯಾ ದೇಶ್‌ಮುಖ್ ಅವರು ಪಂದ್ಯಾವಳಿಯನ್ನು ಗೆದ್ದಿದ್ದಕ್ಕಾಗಿ 41 ಲಕ್ಷ ರೂ. ($50,000 ಅಮೆರಿಕನ್ ಡಾಲರ್) ಬಹುಮಾನದ ಹಣವನ್ನು ಪಡೆದರು. ರನ್ನರ್ ಅಪ್ ಕೊನೇರು ಹಂಪಿ 30 ಲಕ್ಷ ರೂಪಾಯಿ ($35,000) ಪಡೆದರು.



Click it and Unblock the Notifications

