Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀರಜ್ ಚೋಪ್ರಾ ವಿರುದ್ಧ ಗೆದ್ದ ಈ ಅರ್ಷದ್ ನದೀಮ್ ಯಾರು.? ಭಾರತದಲ್ಲೇ ಮೊದಲ ಪದಕ ಗೆದ್ದಿದ್ದ ಕ್ರೀಡಾಪಟು.!
ಪ್ಯಾರಿಸ್ ಒಲಿಂಪಿಕ್‌ನಲ್ಲಿ ಚಿನ್ನದ ಹುಡುಗ ನೀರಜ್ ಚೋಪ್ರಾ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ. ಜಾವಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಈ ಮೂಲಕ ಭಾರತಕ್ಕೆ 1 ಬೆಳ್ಳಿ ಹಾಗೂ 4 ಕಂಚಿನ ಪದಕ ಬಂದಿದ್ದು, ಒಟ್ಟು 5 ಪದಕ ತನ್ನದಾಗಿಸಿಕೊಂಡಿದೆ. ಜಾವಲಿನ್ ಥ್ರೋನಲ್ಲಿ ಚಿನ್ನದ ಮೇಲೆ ಕಣ್ಣೀಟ್ಟಿದ್ದ ಭಾರತ ಮೊದಲ ಚಿನ್ನ ಬರಲಿದೆ ಎಂದು ಭಾವಿಸಿತ್ತು.
ಆದರೆ ಪಾಕಿಸ್ಥಾನದ ಅರ್ಷದ್ ನದೀಮ್ ಐತಿಹಾಸಿಕ ಸಾಧನೆ ಮಾಡಿದ್ದಾರೆ, ಒಲಿಂಪಿಕ್‌ನಲ್ಲಿ ಈವರೆಗೆ ಯಾರು ಮಾಡಿರದ ಸಾಧನೆ ಮಾಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದು ಪಾಕಿಸ್ತಾನದ ಮೊದಲ ಪದಕ ಇದಾಗಿದೆ. ನೀರಜ್ ಚೋಪ್ರಾಗಿಂತಲೂ ಅತ್ಯಂತ ದೂರಕ್ಕೆ ಜಾವಲಿನ್ ಎಸೆಯುವ ಮೂಲಕ ಚಿನ್ನ ಗೆದ್ದ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಒಲಿಂಪಿಕ್‌ನಲ್ಲೇ ಯಾರು ಮಾಡಿರದ ಇತಿಹಾಸ ಬರೆದಿದ್ದಾರೆ.

ಪಾಕಿಸ್ತಾನದ ಅರ್ಷದ್ ನದೀಮ್ ಬರೋಬ್ಬರಿ 92.97 ಮೀಟರ್ ದೂರ ಜಾವಲಿನ್ ಎಸೆದು ಎಲ್ಲರ ಕಣ್ಣರಳಿಸುವಂತೆ ಮಾಡಿದ್ದಾರೆ. ಇನ್ನು ಬೆಳ್ಳಿ ಗೆದ್ದ ನೀರಜ್ ಚೋಪ್ರಾ 89.45 ಮೀಟರ್ ದೂರ ಎಸೆದಿದ್ದರು. ಹೀಗಾಗಿ ಅರ್ಷದ್ ಹೊಸ ವಿಶ್ವದಾಖಲೆ ಬರೆದಿದ್ದಾರೆ. 27 ವರ್ಷದ ಅರ್ಷದ್ ನದೀಮ್ ಈಗ ಪಾಕಿಸ್ತಾನ ಹೊಸ ಹೀರೋ ಆಗಿ ಹೊರಹೊಮ್ಮಿದ್ದು, ಅವರ ಸಾಧನೆಗೆ ಎಲ್ಲರು ಮೆಚ್ಚುಗೆ ಹೊರಹಾಕಿದ್ದಾರೆ.
ಯಾರು ಈ ಅರ್ಷದ್.?
ಅರ್ಷದ್ ನದೀಮ್ ಸಣ್ಣ ವಯಸ್ಸಿನಲ್ಲೇ ಕ್ರೀಡೆ ಬಗ್ಗೆ ಕುರಿತು ಆಸಕ್ತಿ ಹೊಂದಿದವರು, ಆದರೆ ಮನೆಯ ಬಡತನ ಅವರನ್ನ ಕ್ರೀಡೆಯಿಂದ ಹೊರಹಗುಳಿಯುವಂತೆ ಮಾಡಿತ್ತು. ಆದರೆ ಆರಂಭಿಕ ಹಂತದಲ್ಲಿ ಇಡೀ ಗ್ರಾಮ ಅವರ ಬೆನ್ನಿಗೆ ನಿಂತು ಹಣ ಸಂಗ್ರಹಿಸಿ ಅವರ ತರಬೇತಿಗಾಗಿ ನೀಡುತ್ತಿದ್ದರಂತೆ. ಇದನ್ನು ಸ್ವತಃ ತಂದೆ ಮುಹಮ್ಮದ್ ಅಶ್ರಫ್ ನೆನೆದು ಭಾವುಕರಾಗಿದ್ದಾರೆ.
ಭಾರತದ ನೆಲದಲ್ಲೂ ಪದಕ ಗೆದ್ದಿದ್ದ ಅರ್ಷದ್
2015 ರಲ್ಲಿ, ನದೀಮ್ ಜಾವೆಲಿನ್ ಥ್ರೋ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಆರಂಭಿಕ ಹಂತದಲ್ಲೇ ಅವರು ಖ್ಯಾತಿ ಪಡೆದಿದ್ದರು. 2016ರಲ್ಲಿ ಭಾರತದ ಗುವಾಹಟಿಯಲ್ಲಿ ನಡೆದಿದ್ದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಅವರು ಭಾಗಿಯಾಗಿದ್ದರು. ಇದು ಅವರ ವೃತ್ತಿ ಜೀವನದ ಮೊದಲ ಪದಕಕ್ಕೆ ಕಾರಣವಾಗಿತ್ತು. ಅಂದು ಅವರು 78.33 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಕಂಚಿನ ಪದಕ ಗೆದ್ದು ಎಲ್ಲರ ಗಮನ ಸೆಳೆದಿದ್ದರು. ಕತಾರ್‌ನ ದೋಹಾದಲ್ಲಿ ನಡೆದ 2019 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನದೀಮ್ ಅವರು ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಏಕೈಕ ಅಥ್ಲೀಟ್ ಆದರು.
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಏಳು ಅಥ್ಲೀಟ್‌ಗಳಲ್ಲಿ ಜಾವೆಲಿನ್ ಥ್ರೋ ಈವೆಂಟ್ ಫೈನಲ್‌ಗೆ ಅರ್ಹತೆ ಪಡೆದ ಪಾಕಿಸ್ತಾನದ ಮೊದಲ ಅಥ್ಲೀಟ್ ಆಗಿದ್ದಾರೆ. ಅರ್ಷದ್ ಇಂದು ಈ ಸ್ಥಳಕ್ಕೆ ಹೇಗೆ ಬಂದನೆಂದು ಜನರಿಗೆ ತಿಳಿದಿಲ್ಲ. ಗ್ರಾಮಸ್ಥರು, ಸ್ನೇಹಿತರು ಮತ್ತು ಸಂಬಂಧಿಕರು ಹೇಗೆ ಹಣವನ್ನು ದೇಣಿಗೆ ನೀಡುತ್ತಿದ್ದರು, ಇದರಿಂದ ಅವನು ತನ್ನ ಆರಂಭಿಕ ದಿನಗಳಲ್ಲಿ ತರಬೇತಿ ಮತ್ತು ಕಾರ್ಯಕ್ರಮಗಳಿಗಾಗಿ ಇತರ ನಗರಗಳಿಗೆ ಹೋಗುತ್ತಿದ್ದ ಎಂದು ಅವನ ತಂದೆ ಮುಹಮ್ಮದ್ ಅಶ್ರಫ್ ತಿಳಿಸಿದ್ದಾರೆ.
ಇನ್ನು ನದೀಮ್ ಟೋಕಿಯೊ 2020 ರ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋನಲ್ಲಿ 86.62 ಮೀ ಎಸೆಯುವ ಮೂಲಕ ಐದನೇ ಸ್ಥಾನ ಪಡೆದ ಸಾಧನೆ ಮಾಡಿದ್ದರು. ಆದರೆ ಈ ಒಲಿಂಪಿಕ್‌ನಲ್ಲಿ ನೀರಜ್ ಚೋಪ್ರಾ ಹೊಸ ಇತಿಹಾಸ ಬರೆದು ಚಿನ್ನದ ಪದಕ ಪಡೆದು ಮಿಂಚಿದ್ದರು. ಪ್ಯಾರಿಸ್‌ನಲ್ಲಿ ನಡೆದ ಈ ಒಲಿಂಪಿಕ್ಸ್‌ಗೆ ಮೊದಲು ನದೀಮ್ 90.18 ಮೀಟರ್ ಎಸೆತವೇ ಅತ್ಯಧಿಕ ದೂರದ ಎಸೆತವಾಗಿತ್ತು, ಆದರೆ ಅವರು 92 ಮೀಟರ್‌ಗೂ ಅಧಿಕ ದೂರ ಎಸೆದು ಇತಿಹಾಸ ನಿರ್ಮಿಸಿದ್ದಾರೆ.



Click it and Unblock the Notifications
