Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಅದಾನಿ ಸಾಮಾಜ್ಯ ಮುಳುಗಿಸಿದ್ದ ಹಿಂಡನ್‌ಬರ್ಗ್, ಇದಕ್ಕೆ ಮತ್ತೊಂದು ವರದಿ ಬಾಂಬ್ ಹಾಕಲು ಸಿದ್ಧತೆ ಮಾಡಿದೆ?
ಕಳೆದ ವರ್ಷ ಅದಾನಿ ಸಾಮ್ರಾಜ್ಯದ ಮೇಲೆ ಬಾಂಬ್‌ನಂತೆ ಎರಗಿದ ಹಿಂಡನ್‌ಬರ್ಗ್ ವರದಿ, ಈಗ ಭಾರತದ ಮೇಲೆ ಮತ್ತೊಂದು ವರದಿ ಬಾಂಬ್ ಹಾಕಲು ಸಿದ್ಧವಾಗಿದೆ, ಇದೀಗ ಹಿಂಡನ್‌ಬರ್ಗ್ ಮಾಡಿದ ಟ್ವೀಟ್ ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ, ಅದಾನಿ ಸಾಮ್ರಾಜ್ಯ ಉರುಳಿಸಿದ ಹಿಂಡನ್‌ಬರ್ಗ್ ವರದಿ ಈ ಬಾರಿ ಭಾರತದ ಷೇರುಮಾರುಕಟ್ಟೆ ಮೇಲೆ ಕೆಟ್ಟ ಪರಿಣಾಮ ಬೀರಬಹುದೇ ಎಂಬ ಆತಂಕ ಎದುರಾಗಿದೆ.

Something big soon India
ಈ ರೀತಿ ಹಿಂಡನ್‌ಬರ್ಗ್ ತನ್ನ ಅಫೀಶಿಯಲ್ ಟ್ವೀಟ್ ಖಾತೆಯಿಂದ ಆಗಸ್ಟ್ 10 ಬೆಳಗ್ಗೆ 05:34ಕ್ಕೆ ಟ್ವೀಟ್ ಮಾಡಿದೆ. ಈ ಬಾರಿ ಈ ಹಿಂಡನ್‌ಬರ್ಗ್ ಯಾರ ಬಗ್ಗೆ ತನಿಖೆ ಮಾಡಿದೆ, ಯಾವ ದೊಡ್ಡ ಉದ್ಯಮಿಗೆ ಕಂಟಕ ಎದುರಾಗಲಿದೆ ಎಂದೆಲ್ಲಾ ಪ್ರಶ್ನೆಗಳು ಎದ್ದಿವೆ.
ಕಳೆದ ಜನವರಿಯಲ್ಲಿ ಸುನಾಮಿ ಎಬ್ಬಿಸಿದ ಹಿಂಡನ್‌ಬರ್ಗ್ ವರದಿ
ಕಳೆದ ಜನವರಿಯಲ್ಲಿ ಅದಾನಿ ಗ್ರೂಪ್ ಊಹಿಸಿರದ ಆತಂಕ ಎದುರಾಗಿತ್ತು. ಅದಾನಿ ಗ್ರೂಪ್ ಬಗ್ಗೆ ಅದರ ಷೇರುಗಳ ಬಗ್ಗೆ ಕೆಲವೊಂದು ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿತು, ನೋಡು-ನೋಡುತ್ತಿದ್ದಂತೆ ಅದಾನಿ ಷೇರು ಪಾತಾಳಕ್ಕೆ ಕುಸಿಯಲಾರಂಭಿಸಿತು. ಏಷ್ಯಾದ ಟಾಪ್ 10 ಶ್ರೀಮಂತರಲ್ಲಿ ಒಬ್ಬರಾಗಿದ್ದ ಅದಾನಿ ಟಾಪ್ 100ರೊಳಗಿಯೂ ಇರಲಿಲ್ಲ, ಅಷ್ಟರ ಮಟ್ಟಿಗೆ ಆರ್ಥಿಕ ಹೊಡೆತ ಕೊಟ್ಟಿತ್ತು ಈ ವರದಿ, ಆದರೆ ಅದಾನಿ ಅದೆಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಈಗ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅದಾನಿ ಗ್ರೂಪ್ ಬಗ್ಗೆ ಹಿಂಡನ್‌ಬರ್ಗ್ ಎನು ಹೇಳಿತ್ತು?
ಅದಾನಿ ಗ್ರೂಪ್ ತನ್ನ ಕಂಪನಿಯ ಷೇರು ಮೌಲ್ಯದ ಮೇಲೆ ಅಕ್ರಮವಾಗಿ ಮೌಲ್ಉವನ್ನು ಬೀರುತ್ತಿದೆ ಎಂದು ವಿಶ್ವದ ಪ್ರಸಿದ್ಧ ತನಿಖಾ ಏಜೆನ್ಸಿ ಎಂದು ಗುರುತಿಸಿಕೊಂಡಿರುವ ಅಮೆರಿಕದ ಹಿಂಡನ್‌ಬರ್ಗ್ 2023 ಜನವರಿ 24ಕ್ಕೆ ವರದಿಯನ್ನು ಬಿಡುಗಡೆ ಮಾಡಿತು, ಈ ವರದಿ ಬಿಡುಗಡೆಯಾಗುತ್ತಿದ್ದಂತೆ ಅದಾನಿ ಗ್ರೂಪ್ ಷೇರು $150 ಬಿಲಿಯನ್ ಕುಸಿತ ಕಾಣುವಂತಾಯ್ತು.
ಹಿಂಡನ್‌ಬರ್ಗ್ ವರದಿ ತನ್ನ ಲಾಭಕ್ಕಾಗಿ ವರದಿ ಪ್ರಕಟಿಸಿತು ಎಂದು ಸೆಬಿ ಆರೋಪಿಸಿತು
ಸೆಬಿಯು ಹಿಂಡನ್‌ಬರ್ಗ್ ವರದಿ ಪ್ರಕಟಿಸುವ 2 ತಿಂಗಳ ಮುನ್ನವೇ ತನ್ನ ಗ್ರಾಹಕ ಸಂಸ್ಥೆಯಾದ ನ್ಯೂಯಾರ್ಕ್‌ನ ಹೆಡ್ಜ್ ಫಂಡ್ ನ್ಯಾನೇಜರ್ ಮಾರ್ಕ್ ಕಿಂಗ್‌ಡನ್‌ಗೆ ನೀಡಿ ಲಾಭ ಗಳಿಸಲು ಪ್ರಯತ್ನಿಸಿತು ಎಂದು ಹೇಳಿತು, ಅಲ್ಲದೆ ಈ ಸಮಯದಲ್ಲಿ ಕೋಟಾಕ್ ಸಂಸ್ಥೆ ಹೆಸರು ಕೂಡ ತಳುಕು ಹಾಕಿಕೊಂಡಿತು.
ಹಿಂಡನ್‌ಬರ್ಗ್ ವರದಿ ಅದಾನಿ ಗ್ರೂಪ್‌ಗೆ ತುಂಬಾ ಹೊಡೆತ ನೀಡಿತು. ಆದರೆ ಅದಾನಿ ಮತ್ತೆ ತನ್ನ ಭವ್ಯ ಸಾಮಾಜ್ಯಕ್ಕೆ ಮರಳಿದೆ.
ಈ ಬಾರಿ ಹಿಂಡನ್‌ಬರ್ಗ್ ವರದಿ ಪರಿಣಾಮ ಬೀರುವುದೇ?
ಅದಾನಿ ಗ್ರೂಪ್‌ನ ಮೇಲೆ ಮಾಡಿದ ಅರೋಪಗಳು ಹಿಂಡನ್‌ಬರ್ಗ್ ತನ್ನ ಲಾಭಕ್ಕಾಗಿ ಮಾಡಿತು ಎಂದು ಅದಾನಿ ಸಂಸ್ಥೆ ಪ್ರತ್ಯಾರೋಪ ಮಾಡಿತು, ಇದರ ಬಗ್ಗೆ ಸೆಬಿಯೂ ಹೇಳಿಕೆ ನ ನೀಡಿತು. ಅದಾನಿ ಸಂಸ್ಥೆ ಮೇಲೆ ಹಿಂಡನ್‌ಬರ್ಗ್ 24 ಆರೋಪಗಳಕಲ್ಲಿ 22 ಪ್ರಕರಣಗಳು ಪೂರ್ಣಗೊಂಡಿದ್ದು ಅದರಲ್ಲಿ ಹಿಂಡನ್‌ಬರ್ಗ್ ಮಾಡಿದ ಆರೋಪಗಳು ಸಾಬೀತಾಗಿಲ್ಲ, ಹೀಗಾಗಿ ಇ ಬಾರಿ ಹಿಂಡನ್‌ಬರ್ಗ್ ವರದಿ ಜನ ನಂಬುತ್ತಾರೆಯೇ?
ಈಗಾಗಲೇ ಅದರ ಟ್ವೀಟ್ ಕೆಳಗಡೆ Who cares, ಇದು ಭಾರತದ ಆರ್ಥಿಕ ಮೇಲೆ ಕೆಟ್ಟ ಪರಿಣಾಮ ಬೀರುವ ಹುನ್ನಾರ, ವಿದೇಶದವರಿಗೆ ಭಾರತದ ಪ್ರಗತಿ ನೋಡಿ ಮಾಡುತ್ತಿರುವ ಹೊಟ್ಟೆಕಿಚ್ಚಿನ ಕಿತಾಪತಿ ಎಂದೆಲ್ಲಾ ಹೇಳುತ್ತಿದೆ, ಅದಾನಿ ಗ್ರೂಪ್ ವಿರುದ್ಧ ಇದರ ಆರೋಪ ಬಿದ್ದು ಹೋಗಿರುವ ಕಾರಣ ಈಗ ಎಂಥ ಬಾಂಬ್ ಸಿಡಿಸಿದರು ಅದು ಟುಸ್ ಪಟಾಕಿಯಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ನೆಟ್ಟಿಗರು.



Click it and Unblock the Notifications