Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಹಸಿರು ಬಣ್ಣದ ಮುದ್ದಾದ ಮರಿಗೆ ಜನ್ಮ ನೀಡಿದ ನಾಯಿ..!
ನಾಯಿಗಳು ಮಾನವರ ಬೆಸ್ಟ್ ಫ್ರೆಂಡ್ ಅಂತೆ. ತನ್ನ ಮಾಲೀಕನಿಗೆ ನಾಯಿಗಿಂತ ಹೆಚ್ಚು ಯಾರು ಸಹ ನೀಯತ್ತು ಮತ್ತು ಪ್ರಮಾಣಿಕತೆ ತೋರಿಸಲು ಸಾಧ್ಯವಿಲ್ಲ ಹೀಗಾಗಿ ನಾಯಿಗಳು ಮಾನವರ ಜೊತೆ ಒಳ್ಳೆಯ ಭಾಂದವ್ಯ ಹೊಂದಿರುವ ಜೀವಿಗಳು. ಇನ್ನು ನಾಯಿಗಳು ಒಮ್ಮೆ 10ಕ್ಕೂ ಅಧಿಕ ಮರಿಗಳಿಗೆ ಜನ್ಮ ನೀಡುವುದನ್ನು ನಾವು ನೋಡಿದ್ದೇವೆ.
ಸಾಮಾನ್ಯವಾಗಿ ನಾಯಿಗಳು, ಕಪ್ಪು, ಬಿಳಿ, ಕೇಸರಿ, ಕೆಂಪು, ಕಂದು ಬಣ್ಣದಲ್ಲಿರುವುದನ್ನು ನಾವು ನೋಡಿದ್ದೇವೆ. ಕೆಲವು ಬಾರಿ ಅವುಗಳ ಬಣ್ಣ ಮಿಶ್ರಣವಾಗಿರುವುದನ್ನೂ ಸಹ ನೋಡಬಹುದು. ಆದರೆ ನೀವು ಎಂದಾದರೂ ಹಸಿರು ಬಣ್ಣದ ನಾಯಿಯನ್ನು ನೋಡಿದ್ದೀರಾ? ಹಸಿರು ಬಣ್ಣದ ನಾಯಿ ನೋಡಿದರೆ ನಿಮಗೂ ಅಚ್ಚರಿಯಾಗಬಹುದು.

ಹೌದು ಇಲ್ಲೊಂದು ನಾಯಿ ಹಾಕಿದ್ದ ಮರಿಗಳಲ್ಲಿ ಒಂದು ಮರಿ ಮಾತ್ರ ಹಸಿರು ಬಣ್ಣದಲ್ಲಿದೆ. ಅದಕ್ಕೆ ಯಾರು ಸಹ ಹಸಿರು ಬಣ್ಣವನ್ನು ಬಳಿದಿರುವುದಲ್ಲ ಅದು ಜನಿಸುತ್ತಲೇ ಹಸಿರು ಬಣ್ಣದಲ್ಲಿ ಜನಿಸಿದೆ. ಈ ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರಿಗೂ ಅಚ್ಚರಿಯಾಗಿದೆ.
8 ವಾರಗಳ ಈ ಗೋಲ್ಡನ್ ರಿಟ್ರೈವರ್ ನಾಯಿಮರಿ, ಶ್ಯಾಮ್ರಾಕ್ ವೈರಲ್ ಆಗಿದೆ. ಇದು ಪೆನ್ಸಕೋಲಾ, ಫ್ಲೋರಿಡಾ ಮೂಲದ ವ್ಯಕ್ತಿಗಳು ಈ ನಾಯಿಯನ್ನು ಸಾಕಿದ್ದರು. ಆದರೆ ಇಲ್ಲಿ ತಾಯಿಯ ಬಣ್ಣ ಬಿಳಿಯಾಗಿದ್ದರೆ ಒಂದು ಮರಿಯ ಬಣ್ಣ ಹಸಿರಾಗಿದೆ. ಇದನ್ನು ಕಂಡ ನಾಯಿ ಮಾಲೀಕರು ಮೊದಲು ಇದು ಕಾಯಿಲೆಯಿಂದ ಜನಿಸಿರಬಹುದು ಎಂದುಕೊಂಡಿದ್ದರು, ಆದರೆ ಬರು ಬರುತ್ತ ಆ ನಾಯಿ ಮರಿ ಸಹ ಉಳಿದ ಮರಿಗಳಂತೆ ಆರೋಗ್ಯವಾಗಿತ್ತು.
ಈ ರೀತಿ ಹಸಿರು ಬಣ್ಣದಲ್ಲಿ ಜನಿಸಲು ಪಿತ್ತರಸದ ಬೈಲಿವರ್ಡಿನ್ ಎಂಬ ಅಂಶ ಕಾರಣವಾಗಿರಬಹುದು ಎಂದು ನಂಬಲಾಗಿದೆ. ಈ ಅಂಶ ನಾಯಿಗಳ ಮೇಲಿನ ರೋಮದ ಬಣ್ಣಕ್ಕೆ ಕಾರಣವಾಗುತ್ತದೆ. ಈ ಹಸಿರು ಬಣ್ಣದ ನಾಯಿಮರಿ ಉಳಿದ ಮರಿಗಳಿಗಿಂತ ಸ್ವಲ್ಪ ಚಿಕ್ಕದು ಹಾಗೂ ತೂಕದಲ್ಲೂ ಸ್ವಲ್ಪ ಕಡಿಮೆ ಇದೆಯಂತೆ. ಆದರೆ ಉಳಿದ ಮರಿಗಳಂತೆ ಆರೋಗ್ಯವಾಗಿದೆಯಂತೆ.
ಮೊದಲು ಈ ಜನಿಸಿದಾಗ ಅಚ್ಚರಿಗೊಂಡ ಮಾಲೀಕರು ಆ ಮರಿಯನ್ನು ನೀರಿನಲ್ಲಿ ತೊಳೆದಿದ್ದರಂತೆ. ಆದರೂ ಅದರ ಬಣ್ಣ ಮಾತ್ರ ಹಸಿರಾಗಿಯೇ ಉಳಿದಿತ್ತು ಎಂದಿದ್ದಾರೆ. ಮುಂದೆ ಈ ನಾಯಿಮರಿ ಬೆಳೆದು ದೊಡ್ಡದಾದ ಬಳಿಕ ಈ ಹಸಿರು ಬಣ್ಣ ನಿಧಾನವಾಗಿ ಮಾಯವಾಗಿ ಕಂದು ಇಲ್ಲವೆ ಬಿಳಿಯ ಬಣ್ಣಕ್ಕೆ ತಿರುಗಬಹುದು ಎಂದು ಅಂದಾಜಿಸಲಾಗಿದೆ. ಇಲ್ಲವೆ ಅದೇ ಬಣ್ಣದಲ್ಲಿ ದೊಡ್ಡದಾಗಿ ಹೊಸ ಪ್ರಬೇದದ ನಾಯಿಗೆ ಕಾರಣವಾಗಲೂಬಹುದು ಎಂದು ಅಭಿಪ್ರಾಯಪಡಲಾಗಿದೆ.
ಆದರೆ ಈ ನಾಯಿಮರಿಯ ವಿಡಿಯೋ ಹಾಗೂ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈಗಾಗಲೇ ಇದ್ದಕ್ಕೆ ಬೇಡಿಕೆ ಬಂದಿದೆಯಂತೆ. ಹಲವರು ಈ ಮರಿಯನ್ನು ಸಾಕುವುದಾಗಿ ಮುಂದೆ ಬಂದಿದ್ದಾರಂತೆ. ಆದರೆ ಮಾಲೀಕರು ಈ ಮರಿಗಳನ್ನು ದತ್ತು ನೀಡಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.
ಜನೆಟಿಕ್ ಕಾರಣಗಳಿಂದಾಗಿ ಈ ನಾಯಿ ಮರಿ ಜನಿಸಿರುವ ಕಾರಣದಿಂದಾಗಿ ಈ ತಳಿ ಮುಂದೆಯೂ ಹುಟ್ಟಬಹುದಾದ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ನಾಯಿ ಮರಿ ದತ್ತು ಪಡೆಯಲು ಬೇಡಿಕೆ ಬರುತ್ತಿವೆ. ಆದರೆ ಇವು ಆರೋಗ್ಯವಾಗಿ ಬೆಳೆದು ಸಂತಾನೋತ್ಪತ್ತಿ ಕಾರ್ಯ ಮಾಡಲಿವೆ ಎಂಬುದಕ್ಕೆ ಪುರಾವೆಗಳಿಲ್ಲ.



Click it and Unblock the Notifications
