Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ನಿಮ್ಮ ಫೋಟೋಗಳು ಯಾವೆಲ್ಲಾ ವೆಬ್‌ಸೈಟ್‌ನಲ್ಲಿವೆ..? ಒಂದೇ ಕ್ಲಿಕ್‌ನಲ್ಲಿ ಪತ್ತೆ ಮಾಡಿ..!
ತಂತ್ರಜ್ಞಾನದ ಯುಗದಲ್ಲಿ ನಾವು ನಮ್ಮ ಫೋಟೋಗಳನ್ನು ಹತ್ತಾರು ಕಡೆಗಳಲ್ಲಿ ಪೋಸ್ಟ್ ಮಾಡುತ್ತೇವೆ. ಫೇಸ್‌ಬುಕ್, ವಾಟ್ಸಪಾಪ್, ಇನ್ಸ್‌ಸ್ಟಾಗ್ರಾಮ್, ಎಕ್ಸ್, ಟಿಂಡರ್ ಹೀಗೆ ಹತ್ತಾರು ಸಾಮಾಜಿಕ ಜಾಲತಾಣಗಳ ಸೈಟ್‌ಗಳಲ್ಲೂ ಅಪ್‌ಲೋಡ್ ಮಾಡಿರುತ್ತೇವೆ. ಬರೀ ಅಪ್‌ಲೋಡ್ ಮಾಡುವುದಷ್ಟೇ ಅಲ್ಲ, ಅದರಿಂದ ಎಷ್ಟು ಲೈಕ್ಸ್ ಬಂದಿದೆ. ಎಷ್ಟು ವೀಕ್ಷಣೆಯಾಗಿದೆ ಎಂಬೆಲ್ಲಾ ವಿಚಾರವನ್ನು ನಾವೇ ಖುದ್ದು ಚೆಕ್ ಮಾಡ್ತೇವೆ.
ಆದ್ರೆ ಇತ್ತೀಚಿಗೆ ನೀವು ಅಪ್‌ಲೋಡ್ ಮಾಡುತ್ತಿರುವ ಫೋಟೋಗಳ ದುರ್ಬಳಕೆಯಾಗುತ್ತಿರುವ ಪ್ರಕರಣಗಳ ಸಂಖ್ಯೆಯು ಏರಿಕೆಯಾಗುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಹಲವು ಸೆಲೆಬ್ರಿಟಿಗಳ ಫೋಟೋಗಳು ದುರ್ಬಳಕೆಯಾಗುತ್ತಿರುವುದು ವರದಿಯಾಗುತ್ತಲೇ ಇದೆ.

ಈ ಪೋಟೋಗಳ ಬಳಸಿ ಇಂದು ಯಾವ ರೀತಿಯ ಅಪರಾಧ ಕೃತ್ಯಗಳನ್ನು ಸಹ ಮಾಡಬಹುದು ಎಂಬುದು ಸಾಬೀತಾಗಿದೆ. ಅದರಲ್ಲೂ ನಿಮ್ಮ ಫೋಟೋಗಳ ಬಳಸಿ ನಿಮಗೇ ಬ್ಲಾಕ್‌ಮೇಲ್ ಮಾಡುವ ಜಾಲವೂ ಇದೆ. ಹಾಗಾದರೆ ನಿಮ್ಮ ಫೋಟೋ ಯಾವೆಲ್ಲಾ ವೆಬ್‌ಸೈಟ್‌ನಲ್ಲಿದೆ.? ನಿಮ್ಮ ಅರಿವಿಲ್ಲದೆ ನಿಮ್ಮ ಫೋಟೋ ಯಾವುದಾದರೂ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆಯೇ..? ಈ ರೀತಿ ನಿಮಗೂ ಅನುಮಾನವಿದ್ದರೆ ಅದನ್ನು ಬಗೆಹರಿಸಿಕೊಳ್ಳಲು ಇಲ್ಲಿದೆ ನೋಡಿ ಪರಿಹಾರ.
ಪತ್ತೆ ಮಾಡುವುದು ಹೇಗೆ?
ಹೌದು ನಿಮ್ಮ ಫೋಟೋಗಳು ಯಾವುದಾದರು ವೆಬ್‌ಸೈಟ್‌ನಲ್ಲಿ ಬಳಸಲಾಗುತ್ತಿದ್ಯಾ ಎಂಬುದನ್ನು ಈ ವೆಬ್‌ಸೈಟ್ ಪರಿಶೀಲಿಸಿ ನಿಮಗೆ ಮಾಹಿತಿ ನೀಡಲಿದೆ. ನಿಮಗೆ Googleನ ರಿವರ್ಸ್ ಇಮೇಜ್ ಸರ್ಚ್ ಮಾಡುವುದು ತಿಳಿದಿರಬಹುದು. ಇದು ಸಹ ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಂತೆಯೇ ಕೆಲಸ ನಿರ್ವಹಿಸಲಿದೆ.
PimEyes ಎಂಬ ವೆಬ್‌ಸೈಟ್‌ನಲ್ಲಿ ನಿಮ್ಮ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಫೋಟೋಗಳು ಯಾವೆಲ್ಲಾ ಸೈಟ್‌ನಲ್ಲಿವೆ ಎಂಬುದನ್ನು ಪತ್ತೆ ಮಾಡಬಹುದು. ಸ್ಪಷ್ಟವಾದ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕ, ಬಳಕೆದಾರರು ಅಂತರ್ಜಾಲದಾದ್ಯಂತ ಚಿತ್ರಗಳನ್ನು ಗುರುತಿಸಲು AI ಅನ್ನು ಬಳಸಿಕೊಂಡು ವೆಬ್‌ಸೈಟ್‌ನೊಂದಿಗೆ ಆನ್‌ಲೈನ್‌ನಲ್ಲಿ ತಮ್ಮ ವಿವಿಧ ಆವೃತ್ತಿಗಳನ್ನು ಅನ್ವೇಷಿಸಬಹುದು. ಇದು ಇತ್ತೀಚಿನ ಚಿತ್ರಗಳು ಮಾತ್ರವಲ್ಲದೆ ಹಳೆಯ ಫೋಟೋಗಳು ಮತ್ತು ಕ್ರೌಡ್ ಶಾಟ್‌ಗಳಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡ ಫೋಟೋಗಳನ್ನು ಸಹ ಒಳಗೊಂಡಿರುತ್ತದೆ.
ಆದರೆ ಇದರಲ್ಲಿ ಕೇವಲ ನಿಮ್ಮ ಫೋಟೋವನ್ನು ಮಾತ್ರ ಇದು ತೋರಿಸುವುದಿಲ್ಲ ಬದಲಿಗೆ ನಿಮ್ಮ ರೀತಿ ಇರುವ ಎಐ ಆಧಾರಿತ ಫೊಟೋಗಳು ಸಹ ಇದರಲ್ಲಿ ಫಲಿತಾಂಶವಾಗಿ ನೀಡಲಿದೆ. ಹೀಗಾಗಿ ಇದು ನಿಮ್ಮ ಮುಖವನ್ನು ಹೋಲುವ ಇತರ ವ್ಯಕ್ತಿಗಳ ಫೋಟೋ ಹಾಗೂ ಎಐನಿಂದ ಮಾಡಲ್ಪಟ್ಟ ಫೋಟೋಗಳನ್ನೂ ಸಹ ತೋರಿಲಸಿದೆ.
ಹೀಗಾಗಿ ಈ ವೆಬ್‌ಸೈಟ್ ಕುರಿತಂತೆಯೂ ಚರ್ಚೆ ಆರಂಭವಾಗಿದೆ. ಎಐ ಕುರಿತ ವಿಶ್ಲೇಷಕ ರೋವನ್ ಚೆಯುಂಗ್ ಹೇಳುವಂತೆ, PimEyes ವೆಬ್‌ಸೈಟ್‌ನ ಆತಂಕಕಾರಿ ಸಾಮರ್ಥ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದಿದ್ದಾರೆ. ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ವಿವರವಾದ ವೀಡಿಯೊದಲ್ಲಿ, ವೆಬ್‌ಸೈಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಚೆಯುಂಗ್ ತೋರಿಸಿದರು ಮತ್ತು ಅಂತರ್ಜಾಲದ ವಿವಿಧ ಮೂಲೆಗಳಿಂದ ವೆಬ್‌ಸೈಟ್ ವ್ಯಕ್ತಿಯ ಚಿತ್ರಗಳನ್ನು ತ್ವರಿತವಾಗಿ ಸಂಗ್ರಹಿಸುವ ಗೊಂದಲದ ನಿಖರತೆಯನ್ನು ಎತ್ತಿ ತೋರಿಸಿದರು.
ವೀಡಿಯೊವನ್ನು ಹಂಚಿಕೊಂಡ ಅವರು, "ಅಂತರ್ಜಾಲದಲ್ಲಿ ಅತ್ಯಂತ ಗೊಂದಲದ AI ವೆಬ್‌ಸೈಟ್. ವ್ಯಕ್ತಿಯ ಫೋಟೋವನ್ನು ಅಪ್‌ಲೋಡ್ ಮಾಡಿ ಮತ್ತು AI ಆ ವ್ಯಕ್ತಿಯ ಎಲ್ಲಾ ಚಿತ್ರಗಳನ್ನು ಇಂಟರ್ನೆಟ್‌ನಾದ್ಯಂತ ಹುಡುಕುತ್ತದೆ. ಇದರ ಭಯಾನಕ ವಿಷಯವೆಂದರೆ ಅಪರಿಚಿತರು ನಿಮ್ಮ ಚಿತ್ರವನ್ನು ತೆಗೆದುಕೊಳ್ಳಬಹುದು ಮತ್ತು ನಿಮ್ಮ ಬಗೆಗಿನ ಎಲ್ಲಾ ವಿಚಾರಗಳನ್ನು ಕುಳಿತಲ್ಲೇ ಅವರುಕಂಡುಹಿಡಿಯಬಹುದು. ಎಂದು ಬಳಕೆದಾರರು ಬರೆದಿದ್ದಾರೆ.
ಆದರೆ ಕೆಲವರು ಈ ವೆಬ್‌ಸೈಟ್ ಉಪಕಾರಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವೆಬ್‌ಸೈಟ್ ಮೂಲಕ ನಮ್ಮ ಫೋಟೋಗಳು ಬೇರೆ ಎಲ್ಲಾದರು ಬಳಸುತ್ತಿದ್ದಾರಾ ಎಂಬುದನ್ನು ನಿಖರವಾಗಿ ತೋರಿಸುತ್ತದೆ. ಒಂದು ವೇಳೆ ನಮ್ಮ ಅರಿವಿಗೆ ಬಾರದೆ ಯಾರಾದರು ಬಳಸುತ್ತಿದ್ದರೆ ಅದನ್ನು ನಾವು ಸುಲಭವಾಗಿ ಪತ್ತೆ ಮಾಡಬಹುದು ಎಂದಿದ್ದಾರೆ.



Click it and Unblock the Notifications