Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಗ್ರಹಣ ಸಮಯದಲ್ಲಿ ಯಾವ ಮಂತ್ರ ಪಠಿಸಬೇಕು? ಗ್ರಹಣ ದೋಷ ನಿವಾರಣೆಯ 7 ಮಂತ್ರಗಳಿವು!
ಸೂರ್ಯ ಗ್ರಹಣವನ್ನು ಖಗೋಳಶಾಸ್ತ್ರದಲ್ಲಿ ಎಷ್ಟು ಪ್ರಾಮುಖ್ಯತೆ ನೀಡಲಾಗಿದ್ಯೋ ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಈ ಕುರಿತಾಗಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸೂರ್ಯನು ಗ್ರಹಗಳ ಕೇಂದ್ರಬಿಂದುವಾಗಿ ಎಲ್ಲರ ಜೀವನದ ಮೇಲೆಯೂ ಪರಿಣಾಮ ಉಂಟು ಮಾಡುವುದರಿಂದ ಸೂರ್ಯನ ಚಲನೆಯು ಬಹುಮುಖ್ಯ ವಿದ್ಯಮಾನವಾಗಿ ನೋಡಲಾಗುತ್ತದೆ.
ಈಗ ಫೆಬ್ರವರಿ 17ರಂದು ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ಬಾರಿಯ ಗ್ರಹಣ 'ರಿಂಗ್ ಆಫ್ ಫೈರ್' ಎಂದು ಕರೆಯಲ್ಪಡುತ್ತಿದೆ. ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಬಂದಾಗ ಈ ಗ್ರಹಣ ಸಂಭವಿಸುತ್ತದೆ. ಇದು ಸೂರ್ಯನಿಗೆ ಅಡ್ಡಲಾಗಿ ಕಾಣಿಸುವುದರಿಂದ ಉಂಗುರದಂತಹ ರಚನೆಯನ್ನು ನೋಡಬಹುದು. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಆದ್ರೆ ಗ್ರಹಗತಿಗಳಲ್ಲಿನ ಬದಲಾವಣೆಯು ಹಲವರ ಮೇಲೆ ತನ್ನ ಪ್ರಭಾವ ಉಂಟು ಮಾಡುವುದು ನೋಡಬಹುದು.

ಫೆಬ್ರವರಿ 17, 2026 ರಂದು ಸಂಭವಿಸಲಿರುವ ಈ ಸೂರ್ಯಗ್ರಹಣವು ಹಿಂದೂ ಪಂಚಾಂಗದ ಫಾಲ್ಗುಣ ಅಮಾವಾಸ್ಯೆಯಂದು ಬರುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಗ್ರಹಣವು ಸಂಜೆ 5:26ಕ್ಕೆ ಆರಂಭವಾಗಿ ರಾತ್ರಿ 7:57ಕ್ಕೆ ಕೊನೆಗೊಳ್ಳಲಿದೆ. ಭಾರತದಲ್ಲಿ ಈ ವಿದ್ಯಮಾನ ಕಾಣಿಸದಿದ್ದರೂ ವಿಶ್ವದ ಹಲವು ದೇಶಗಳಲ್ಲಿ ಇದನ್ನು ವೀಕ್ಷಿಸಬಹುದು. ಅಂಟಾರ್ಟಿಕಾ, ಅರ್ಜೆಂಟೀನಾ, ಚಿಲಿ, ದಕ್ಷಿಣ ಆಫ್ರಿಕಾ, ಮಡಗಾಸ್ಕರ್, ಮಾರಿಷಸ್, ಮೊಜಾಂಬಿಕ್, ತಾಂಜಾನಿಯಾ, ಜಾಂಬಿಯಾ, ಜಿಂಬಾಬ್ವೆ ಸೇರಿ ಹಲವು ದಕ್ಷಿಣಾರ್ಧ ಗೋಳದ ದೇಶಗಳಲ್ಲಿ ಸೂರ್ಯಗ್ರಹಣ ಗೋಚರವಾಗಲಿದೆ.
ವೈದಿಕ ಶಾಸ್ತ್ರದಲ್ಲಿ ಈ ಗ್ರಹಣವನ್ನು ಪ್ರಮುಖ ವಿದ್ಯಮಾನವಾಗಿ ಪರಿಗಣಿಸಲಾಗಿದೆ. ಅದ್ರಲ್ಲೂ ಈ ಗ್ರಹಣವು ಕುಂಭ ರಾಶಿಯಲ್ಲಿ ಸಂಭವಿಸುತ್ತಿದೆ. ಕುಂಭ ರಾಶಿಯಲ್ಲಿ ಸೂರ್ಯನೊಂದಿಗೆ ಹಲವು ಗ್ರಹಗಳ ಸಂಯೋಗದಿಂದ ಇದರ ಪರಿಣಾಮ ಮತ್ತಷ್ಟು ಪ್ರಬಲವಾಗುತ್ತಿದೆ. ರಾಹು ಕುಂಭ ರಾಶಿಯಲ್ಲಿ ಚಲಿಸುವುದು ಸಹ ಗ್ರಹಣದ ಪ್ರಭಾವ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತಿದೆ.
ಸೂರ್ಯಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿದರೆ ಗ್ರಹಣದ ಪ್ರಭಾವವು ಕಡಿಮೆಯಾಗಲಿದೆ. ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಸೂರ್ಯ ದೇವರ ಆಶೀರ್ವಾದ ಯಾವಾಗಲೂ ಉಳಿಯುತ್ತದೆ ಎಂದು ನಂಬಲಾಗಿದೆ.
ಸೂರ್ಯ ಗ್ರಹಣದ ಸಮಯದಲ್ಲಿ ಯಾವ ಮಂತ್ರವನ್ನು ಜಪಿಸಬೇಕು?
- ಓಂ ಅಸಹ್ಯಕರ ಸೂರ್ಯ ಆದಿತ್ಯ
- ಓಂ ಹ್ರೀಮ್ ಘೃಣಿಮ್ ಸೂರ್ಯ ಆದಿತ್ಯ: ಶುದ್ಧ ಓಂ.
- ಓಂ ಹ್ರೀಮ್ ಹ್ರೀಮ್ ಸೂರ್ಯ ನಮಃ
- ಓಂ ಸೂರ್ಯ ನಮಃ
- ಓಂ ಘೃಣಿ ಸೂರ್ಯ ನಮಃ
- ಓಂ ಹ್ರೀಮ್ ಹ್ರೀಮ್ ಸೂರ್ಯ ಸಹಸ್ತ್ರಕೀರ್ಣಯ, ದೇಹದ ಅಪೇಕ್ಷಿತ ಫಲ, ಸ್ವಾಹಾ.
- ಓಂ ಏಹಿ ಸೂರ್ಯ ಸಹಸ್ತ್ರಾಂಶೋನ್ ತೇಜೋ ರಶೇ ಜಗತ್ಪತೇ ಅನುಕಂಪಯೇಮ ಭಕ್ತ್ಯಾ, ಗೃಹನರ್ಘಾಯ ದಿವಾಕರ್
ಈ 7 ಮಂತ್ರಗಳು ನಿಮ್ಮ ಮೇಲೆ ಗ್ರಹಣದ ಪ್ರಭಾವವನ್ನು ಕಡಿಮೆ ಮಾಡಲಿದೆ. ಹಾಗೆ ನಿಮ್ಮ ರಾಶಿಯಲ್ಲಿನ ಅಡ್ಡಿಗಳು ಆತಂಕಗಳು, ಗ್ರಹಣ ಪ್ರಭಾವದಿಂದ ಉಂಟಾಗುವ ದೋಷವನ್ನು ಸಹ ನಿವಾರಿಸುವ ಪ್ರಭಾವಕಾರಿ ಮಂತ್ರವಾಗಿರಲಿದೆ. ಗ್ರಹಣ ಸಮಯದಲ್ಲಿ ಅಥವಾ ದೇವರ ಗುಡಿಯಲ್ಲಿ ಈ ಮಂತ್ರಗಳನ್ನು ಪಠಿಸುವುದರಿಂದ ಇದರ ಸಂಪೂರ್ಣ ಲಾಭ ಪಡೆಯಬಹುದು ಎಂದು ಹೇಳಲಾಗಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. )



Click it and Unblock the Notifications
