Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ನಿಮ್ಮ ರಾಶಿಗೆ ಯಾವ ಲೋಹದ ಆಭರಣ ಧರಿಸಿದರೆ ಅದೃಷ್ಟಕರ?
ಜ್ಯೋತಿಷ್ಯ ಪ್ರಕಾರ ನಾವು ಧರಿಸುವ ಆಭರಣಗಳೂ ನಮ್ಮ ಮೇಲೆ ಪ್ರಭಾವ ಬೀರುವುದೆಂದು ಹೇಳಲಾಗುವುದು. ನಮ್ಮ ರಾಶಿಗೆ ಸರಿ ಹೊಂದದ ಆಭರಣ ಧರಿಸಿದರೆ ಅಷ್ಟು ಅನುಕೂಲಕರವಲ್ಲ, ಅದೇ ನಮ್ಮ ರಾಶಿಗೆ ಹೊಂದುವ ಆಭರಣ ಧರಿಸುವುದರಿಂದ ಅನುಕೂಲಕರ ಪ್ರಯೋಜನ ಪಡೆಯಬಹುದೆಂದು ಹೇಳಲಾಗುವುದು.
ಕೆಲವರಿಗೆ ಚಿನ್ನ ಅದೃಷ್ಟದ ಲೋಹವಾದರೆ ಇನ್ನು ಕೆಲವರಿಗೆ ಹಿತ್ತಾಳೆ ಅದೃಷ್ಟದ ಲೋಹವಾಗಿರುತ್ತದೆ. ನಿಮ್ಮ ರಾಶಿಗೆ ಹೊಂದುವ ಲೋಹದ ಉಂಗುರ ಅಥವಾ ಬಳೆ ಧರಿಸುವುದರಿಂದ ಹೆಚ್ಚಿನ ಶುಭ ಫಲ ಪಡೆಯಬಹುದು ನೋಡಿ:

ಮೇಷ ರಾಶಿ
ಮೇಷ ರಾಶಿಯವರಿಗೆ ತಾಮ್ರದ ಲೋಹ ಮಂಗಳಕರ ಎಂದು ಪರಿಗಣಿಸಲಾಗುವುದು. ತಾಮ್ರದ ಉಂಗುರ ಅಥವಾ ಬಳೆ ಧರಿಸುವುದು ಒಳ್ಳೆಯದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಬೆಳ್ಳಿ ಲೋಹ ತುಂಬಾನೇ ಶುಭವಾಗಿದೆ. ವೃಷಭ ರಾಶಿಯವರ ಅಧಿಪತಿ ಚಂದ್ರ ಆದ್ದರಿಂದ ಬೆಳ್ಳಿಯ ಆಭರಣಗಳನ್ನು ಧರಿಸುವುದು ಒಳ್ಳೆಯದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಕಂಚಿನ ಲೋಹವು ಮಂಗಳಕರವಾಗಿದೆ. ಕಂಚು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತದೆ. ಈ ಲೋಹ ಧರಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಚಿನ್ನ ಮತ್ತು ಹಿತ್ತಾಳೆಯ ಲೋಹ ಒಳ್ಳೆಯದು. ನೀವು ಸೋಮವಾರ ಈ ಲೋಹಗಳನ್ನು ಧರಿಸುವುದರಿಮದ ಇನ್ನೂ ಹೆಚ್ಚಿನ ಪ್ರಯೋಜ ಪಡೆಯಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ಚಿನ್ನ ಮತ್ತು ಹಿತ್ತಾಳೆಯಿಂದ ಮಾಡಿದ ಲೋಹಗಳನ್ನು ಧರಿಸಿದರೆ ಅದೃಷ್ಟ. ಸಿಂಹ ರಾಶಿಯವರ ಅಧಿಪತಿ ಸೂರ್ಯ, ಆದ್ದರಿಂದ ಚಿನ್ನದ ಆಭರಣ ನಿಮ್ಮ ಮೈಯಲ್ಲಿದ್ದರೆ ಅದೃಷ್ಟ.
ಕನ್ಯಾರಾಶಿ
ಕನ್ಯಾ ರಾಶಿಯವರಿಗೆ ಬೆಳ್ಳಿ ಮತ್ತು ಚಿನ್ನದ ಲೋಹದಿಂದ ಮಾಡಿದ ಲೋಹಗಳು ಅದೃಷ್ಟವನ್ನು ತರುತ್ತದೆ.
ತುಲಾ ರಾಶಿ
ಬೆಳ್ಳಿಯ ಲೋಹದಿಂದ ಮಾಡಿದ ಆಭರಣಗಳು, ರತ್ನದ ಹರಳುಗಳು ತುಂಬಾನೇ ಶುಭವಾಗಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಬೆಳ್ಳಿ ಅಥವಾ ತಾಮ್ರದ ಲೋಹವನ್ನು ಧರಿಸಿದರೆ ನಿಮಗೆ ಅದೃಷ್ಟವನ್ನು ತರುತ್ತದೆ.
ಧನು ರಾಶಿ
ಧನು ರಾಶಿಯವರಿಗೆ ಹಿತ್ತಾಳೆಯ ಲೋಹ ಅದೃಷ್ಟಕರವಾಗಿದೆ. ಈ ಲೋಹವನ್ನು ಧರಿಸುವುದರಿಂದ ಶುಭ ಫಲ ದೊರೆಯುವುದು.
ಮಕರ ರಾಶಿ
ಮಕರ ರಾಶಿಯವರಿಗೆ ಕಬ್ಬಿಣ ಲೋಹ ಶುಭವಾಗಿದೆ. ಕಬ್ಬಿಣ ಬಳೆ ಅಥವಾ ಉಂಗುರ ಧರಿಸಿ, ಕಬ್ಬಿಣದ ಲೋಹ ಧರಿಸುವುದರಿಂದ ಅದೃಷ್ಟ ಲಭಿಸುವುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಅಷ್ಟಧಾತುಗಳಿಂದ ಮಾಡಿದ ಲೋಹಗಳು ಅತ್ಯಂತ ಸೂಕ್ತ. ಇದರಲ್ಲಿ ಕಬ್ಬಿಣ, ಬೆಳ್ಳಿ, ಚಿನ್ನ, ಹಿತ್ತಾಳೆ ಮುಂತಾದ ಲೋಹಗಳ ಮಿಶ್ರಣದಿಂದ ಮಾಡಿದ ಆಭರಣ ಧರಿಸುವುದು ಸೂಕ್ತ.
ಮೀನ ರಾಶಿ
ಮೀನ ರಾಶಿಯವರಿಗೆ ಚಿನ್ನದಿಂದ ಮಾಡಿದ ಉಂಗುರವನ್ನು ಧರಿಸುವುದರಿಂದ ತುಂಬಾ ಶುಭ ಫಲಗಳು ದೊರೆಯುತ್ತವೆ. ಇದು ಅವರ ಜೀವನದಲ್ಲಿ ನಿಮಗೆ ಅದೃಷ್ಟದ ಬೆಂಬಲ ನೀಡಲಿದೆ.
ತಾಮ್ರ ಬಳಸುವುದರಿಂದ ದೊರೆಯುವ ಪ್ರಯೋಜನಗಳು
* ತಾಮ್ರ ಬಳಸುವುದರಿಂದ ರಕ್ತ ಶುದ್ಧೀಕರಣಕ್ಕೆ ಸಹಕಾರಿಯಾಗಿದೆ. ಇದು ರಕ್ತನಾಳಗಳಲ್ಲಿರುವ ಕಶ್ಮಲವನ್ನು ಹೀರಿಕೊಳ್ಳಯತ್ತದೆ.
* ದೇಹ ಹೀಮೋಗ್ಲೋಬಿನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ.
* ತಾಮ್ರ ತ್ವಚೆಯ ಹೊಳಪು ಹೆಚ್ಚಿಸುತ್ತದೆ ಅಲ್ಲದೆ ತ್ವಚೆಯಲ್ಲಿ ಯೌವನ ಕಳೆ ಕಾಪಾಡುತ್ತದೆ.
* ಮೆನೋಪಾಸ್ ಸಂಬಂಧಿಸಿದ ಸಮಸ್ಯೆ ತಡೆಗಟ್ಟುತ್ತದೆ.
ಹಿತ್ತಾಳೆ ಧರಿಸುವುದರಿಂದ ದೊರೆಯುವ ಪ್ರಯೋಜನಗಳು
* ಇದಕ್ಕೆ ಆಂಟಿಬ್ಯಾಕ್ಟಿರಿಯಾ ಗುಣವಿದೆ
* ಚಯಪಚಯ ಕ್ರಿಯೆಗೆ ಪ್ರಯೋಜನಕಾರಿ
* ರಕ್ತಚಂಚಾರಕ್ಕೆ ಸಹಕಾರಿ.
ಕಬ್ಬಿಣದ ಆಭರಣ ಧರಿಸುವುದರಿಂದ ದೊರೆಯುವ ಪ್ರಯೋಜನಗಳು
* ದೇಹವನ್ನು ಬಲಪಡಿಸುತ್ತದೆ
* ಇಚ್ಛಾಶಕ್ತಿ ಬಲಪಡಿಸುತ್ತದೆ
* ನೆಗೆಟಿವಿಟಿಯಿಂದ ರಕ್ಷಣೆ ನಿಡುತ್ತದೆ.
ಬೆಳ್ಳಿ ಧರಿಸುವುದರಿಂದ ದೊರೆಯುವ ಪ್ರಯೋಜನಗಳು
* ಬೆಳ್ಳಿ ದೇಹವನ್ನು ತಂಪಾಗಿಸುತ್ತದೆ
* ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ
* ದೇಹದಲ್ಲಿನ ಕಶ್ಮಲ ಹೀರಿ ಹೊರಹಾಕುತ್ತದೆ
ಚಿನ್ನ ಧರಿಸುವುದರಿಂದ ದೊರೆಯುವ ಪ್ರಯೋಜನಗಳು
* ದೇಹದಲ್ಲಿ ಉಷ್ಣಾಂಶ ಸಮತೋಲನದಲ್ಲಿಡಲು ಸಹಕಾರಿ
* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
* ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
* ಸಂಧಿವಾತದ ನೋವು ಕಡಿಮೆ ಮಾಡುತ್ತದೆ.
ಹೀಗೆ ಯಾವುದೇ ಲೋಹವಾಗಲಿ ಅದನ್ನು ಧರಿಸುವುದರಿಂದ ದೇಹಕ್ಕೆ ಅದರದ್ದೇ ಆದ ಗುಣಗಳಿವೆ. ಜ್ಯೋತಿಷ್ಯ ಶಾಸ್ತ್ರವು ನಮ್ಮ ರಾಶಿಗೆ ತಕ್ಕಂತೆ ಧರಿಸಿದರೆ ಇನ್ನೂ ಒಳ್ಳೆಯದು ಎಂದು ಹೇಳಿದೆ.



Click it and Unblock the Notifications
