Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಭಾರತದ ಅತೀ ದೊಡ್ಡ ಜಿಲ್ಲೆ ಯಾವುದು..? ನಿಮಗೆ ಈ ಉತ್ತರ ಗೊತ್ತಾ?
ಆನ್‌ಲೈನ್‌ನಲ್ಲಿ ಹತ್ತಾರು ಇನ್‌ಫ್ಲುಯೆನ್ಸರ್‌ಗಳು ಹತ್ತಾರು ಬಗೆಯ ವಿಡಿಯೋ ಹಂಚಿಕೊಳ್ಳುತ್ತಾರೆ. ಅದರಲ್ಲೀ ಕೆಲವೊಬ್ಬರು ಜನರನ್ನೇ ಮಾತನಾಡಸುವ ಮೂಲಕ ತಮ್ಮ ಚಾನಲ್‌ಗೆ ಕಂಟೆಂಟ್ ಪಡೆಯುವ ಕೆಲಸ ಮಾಡುತ್ತಾರೆ. ಜನರ ಬಳಿಕ ತೆರಳಿ ಸರಳ ಪ್ರಶ್ನೆಗಳ ಕೇಳುವ ಮೂಲಕ ಅದಕ್ಕೆ ಉತ್ತರ ಪಡೆಯುವುದು ಈ ವಿಡಿಯೋದ ಉದ್ದೇಶವಾಗಿರುತ್ತೆ.
ಹೀಗೆ ಹಲವು ಬಾರಿ ಜನರ ಬಳಿ ಸಾಮಾನ್ಯ ಜ್ಞಾನದ ಪ್ರಶ್ನೆ ಮುಂದಿಟ್ಟಾಗ ಅವರು ಸರಿ ಉತ್ತರ ನೀಡುವುದಕ್ಕಿಂತಲೂ ಚಿತ್ರ ವಿಚಿತ್ರ ಉತ್ತರ ನೀಡುವವರೇ ಹೆಚ್ಚಾಗಿ ಕಾಣಿಸುತ್ತಾರೆ. ಏಕೆಂದರೆ ಕೆಲವೊಮ್ಮೆ ಪ್ರಶ್ನೆಗಳೇ ಕಷ್ಟವಾಗಿರುತ್ತವೆ. ಇಲವೇ ಬುದ್ಧಿಶಕ್ತಿಗೆ ಸವಾಲು ಎಸೆಯುವಂತಹ ಪ್ರಶ್ನೆ ಇದಾಗಿರುತ್ತದೆ.

ಇಂತಹ ಹಲವು ವಿಡಿಯೋ ನಾವು ಸಹ ಈಗ ನೋಡಬಹುದಾಗಿದೆ. ಇಲ್ಲಿಯೂ ಸಹ ಒಬ್ಬಾಕೆ ಜನರ ಬಳಿ ತೆರಳಿ ಭಾರತದ ಅತೀ ದೊಡ್ಡ ಜಿಲ್ಲೆ ಯಾವುದು ಎಂಬ ಪ್ರಶ್ನೆ ಮುಂದಿಟ್ಟಿದ್ದಾಳೆ. ಈ ಪ್ರಶ್ನೆಯೇ ಕೆಲವರಿಗೆ ವಿಚಿತ್ರವಾಗಿ ಕೇಳಿಸಿದೆ. ಏಕೆಂದರೆ ಭಾರತದ ಅತೀ ದೊಡ್ಡ ರಾಜ್ಯ ಯಾವುದು ಎಂದು ಪ್ರಶ್ನೆ ಮಾಡಿದರೆ ಹಲವರು ಸುಲಭವಾಗಿ ಉತ್ತರ ನೀಡಬಹುದು.
ರಾಜಸ್ಥಾನ್ ವಿಸ್ತೀರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿದೆ. ಈ ಕುರಿತು ಒಂದಿಷ್ಟು ಜನರಿಗೆ ತಿಳಿದಿದೆ. ಆದ್ರೆ ಭಾರತದ ಅತ್ಯಂತ ದೊಡ್ಡ ಜಿಲ್ಲೆ ಯಾವುದು ಎಂದು ಕೇಳಿದರೆ ಹಲವರು ತಡಬಡಾಯಿಸುವುದು ಸಾಮಾನ್ಯ. ಏಕೆಂದರೆ ನಮಗೆ ನಮ್ಮ ರಾಜ್ಯದ ದೊಡ್ಡ ಜಿಲ್ಲೆ ಯಾವುದು ಎಂದು ತಿಳಿದಿರುವುದೇ ಕಷ್ಟ ಇನ್ನು ಭಾರತದಲ್ಲೇ ದೊಡ್ಡ ಜಿಲ್ಲೆ ಹೇಗೆ ಪತ್ತೆ ಮಾಡುವುದು?
ಈ ವಿಡಿಯೋದಲ್ಲೂ ಸಹ ನಾವು ಜನರು ಈ ಪ್ರಶ್ನೆಗೆ ಪರದಾಡುವುದು ನೋಡಬಹುದು. ಬಹುತೇಕ ಮಂದಿ ಇದಕ್ಕೆ ಉತ್ತರ ಗೊತ್ತಿಲ್ಲ ಎಂದು ತಲೆಯಾಡಿಸಿದ್ದಾರೆ. ಕೆಲವರು ಈ ಪ್ರಶ್ನೆಯೇ ತಪ್ಪು ಎನ್ನುವಂತೆ ಪುನಃ ಕೇಳುತ್ತಿದ್ದಾರೆ. ಆದ್ರೆ ಈ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿದ್ಯಾ?
ಭಾರತದ ಅತೀ ದೊಡ್ಡ ಜಿಲ್ಲೆ ಗುಜರಾತ್ ರಾಜ್ಯದಲ್ಲಿದೆ. ಗುಜರಾತ್‌ನ ಕಚ್ ಎಂಬ ಜಿಲ್ಲೆ ಭಾರತದಲ್ಲೇ ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. ಈ ಉತ್ತರವನ್ನು ಒಂದಿಬ್ಬರು ನೀಡಿದ್ದಾರೆ ಕೂಡ. ಕಚ್ ಒಂದು ದೊಡ್ಡ ಜಿಲ್ಲೆ ಮಾತ್ರವಲ್ಲ ಹಲವು ಸಂಸ್ಕೃತಿಯ ಬೀಡಾಗಿದೆ. ಕಚ್‌ನಲ್ಲಿ ಕಚ್ಚಿ ಹಾಗೂ ಗುಜರಾತಿ ಮಾತನಾಡುವ ಜನರು ಸಿಗುತ್ತಾರೆ.
ಕಚ್‌ನಲ್ಲಿರುವ ಕಚ್ ಮ್ಯೂಸಿಯಂ ಒಂದು ಐಕಾನಿಕ್ ಹೆರಿಟೇಜ್ ಸೈಟ್ ಆಗಿದೆ, ದಿನವು ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಾಗೆ ವಿಜಯ ವಿಲಾಸ ಅರಮನೆ, ಐನಾ ಮಹಲ್, ಭದ್ರೇಶ್ವರ ಜೈನ ದೇವಾಲಯ, ಕಲೋ ಡುಂಗರ್, ರೇಟ್ ರಾನ್ ಆಫ್ ಕಚ್ (ಭಾರತದ ಅತಿ ದೊಡ್ಡ ಉಪ್ಪು ಮರುಭೂಮಿ) ಸೇರಿ ವನ್ಯಜೀವಿ ಸಂಗ್ರಹಾಲಯವೂ ಇಲ್ಲಿವೆ. ಹೀಗಾಗಿ ಕಚ್ ಅತ್ಯಂತ ಪ್ರಸಿದ್ಧ ನಗರಗಳಲ್ಲಿ ಒಂದು.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬರೋಬ್ಬರಿ 1 ಲಕ್ಷ ವೀಕ್ಷಣೆ ಪಡೆದಿದೆ. ಹಾಗೆ ವಿಡಿಯೋ ನೋಡಿದವರು ಕೂಡ ಕಚ್ ಎಂಬ ಉತ್ತರ ನೀಡಿದ್ದಾರೆ. ಆದ್ರೆ ನಿಮಗೆ ಅಚ್ಚರಿ ಹುಟ್ಟಿಸುವ ವಿಚಾರವೆಂದರೆ ಭಾರತದ 2ನೆ ಅತೀ ದೊಡ್ಡ ಜಿಲ್ಲೆ ಯಾವುದು ಅಂದರೆ ಕಾಶ್ಮೀರದ ಲೇಹ್ ಆಗಿದೆ. ಇದು 45,110 ಚದರ ಕಿ.ಮೀಟರ್ ವ್ಯಾಪ್ತಿಯಲ್ಲಿ ಹರಡಿದೆ. ಆದರೆ ಕೆಲವರು ಲೇಹ್ ಅನ್ನೇ ಅತೀ ದೊಡ್ಡ ಜಿಲ್ಲೆ ಎಂದುಕೊಂಡಿರುತ್ತಾರೆ. ಆದ್ರೆ ಕಚ್ ಭಾರತದ ದೊಡ್ಡ ಜಿಲ್ಲೆಯಾಗಿದೆ. ಇನ್ನು ಕರ್ನಾಟಕದ ವಿಚಾರಕ್ಕೆ ಬಂದರೆ ಬೆಳಗಾವಿ ಅತ್ಯಂತ ದೊಡ್ಡ ಜಿಲ್ಲೆ ಎಂಬ ಖ್ಯಾತಿ ಪಡೆದಿದೆ.



Click it and Unblock the Notifications