Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
ನೀವು ಮನೆಯಲ್ಲಿ ಮಲಗಿದ್ದಾಗ ಹಿರಿಯರು ಬಂದು ಆ ದಿಕ್ಕಿ ತಲೆ ಹಾಕಿ ಮಲಗಬಾರದು ಎಂದು ಎಬ್ಬಿಸಿರುವ ಉದಾಹರಣೆ ಇದ್ದರೆ ನೀವು ಈ ಬಗ್ಗೆ ತಿಳಿದುಕೊಳ್ಳಲೇಬೇಕು. ಹಿಂದೂ ಧರ್ಮದ ಪ್ರಕಾರ ಕೆಲವು ಸಂಪ್ರದಾಯಗಳು, ರೂಢಿ ಕಟ್ಟಳೆಗಳಿದ್ದು, ಅದರಲ್ಲಿ ಮಲಗುವ ದಿಕ್ಕಿಗೂ ಸಹ ನಿಯಮವಿದೆ. ನೀವೇನಾದರು ಮನೆಯಲ್ಲಿ ಒಂದು ದಿಕ್ಕಿನತ್ತ ಮಲಗಿದ್ದಾಗ ಹಿರಿಯರು ಆ ಕಡೆ ತಲೆ ಇಟ್ಟು ಮಲಗಬಾರದು ಎಂದರೆ ಆ ಮಾತು ಪಾಲಿಸುವುದು ಉತ್ತಮ.
ವಾಸ್ತು ಶಾಸ್ತ್ರದ ಪ್ರಕಾರ ನಾವು ನೋಡುವುದಾದರೆ ನಮ್ಮ ನಿತ್ಯ ಜೀವನದ ಪ್ರತಿಯೊಂದು ಕಾರ್ಯವು ವಾಸ್ತು ಶಾಸ್ತ್ರದ ನಿಯಮದಡಿ ಬರಲಿವೆ. ಪ್ರತಿಯೊಂದು ದಿಕ್ಕು ನಮ್ಮ ಜೀವನದ ಒಂದಲ್ಲ ಒಂದು ಅಂಶಗಳಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಪ್ರತಿಯೊಂದು ಕೆಲಸವನ್ನು ಮಾಡುವಾಗಲೂ ದಿಕ್ಕಿನತ್ತ ಗಮನ ಹರಿಸುವುದು ಬಹಳ ಮುಖ್ಯ.

ಇದು ಕೇವಲ ವಾಸ್ತುಶಾಸ್ತ್ರಕ್ಕೆ ಸೀಮಿತವಲ್ಲ. ವೈಜ್ಞಾನಿಕ ದೃಷ್ಟಿಕೋನದಲ್ಲಿಯೂ ಸಹ ತನ್ನದೇ ಆದ ಮಹತ್ವವನ್ನು ಹೊಂದಿರುತ್ತವೆ. ಅದೇ ರೀತಿ ಮಲಗುವಾಗಿ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಅನ್ನೋದು ಬಹಳ ಹಿಂದಿನಿಂದಲೂ ಗೊಂದಲವಿರುವ ಪ್ರಶ್ನೆ. ಹಾಗಾದ್ರೆ ವಾಸ್ತು ಹಾಗೂ ವೈಜ್ಞಾನಿಕವಾಗಿ ನಾವು ಯಾವ ದಿಕ್ಕಿನ ಕಡೆ ತಲೆ ಇಟ್ಟು ಮಲಗಬೇಕು? ಯಾವ ದಿಕ್ಕಿನತ್ತ ತಲೆ ಇಟ್ಟು ಮಲಗಬಾರದು ಎಂಬುದನ್ನು ನೋಡಿ.
ವಾಸ್ತು ಶಾಸ್ತ್ರ ಹೇಳೋದೇನು?
ವಾಸ್ತು ಶಾಸ್ತ್ರದ ಪ್ರಕಾರ ಮಲಗುವಾಗ ಪೂರ್ವ ಮತ್ತು ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದು ಉತ್ತಮ. ಬದಲಾಗಿ ಪೂರ್ವ ಅಥವಾ ದಕ್ಷಿಣಕ್ಕೆ ಪಾದಗಳನ್ನು ಇಟ್ಟು ಮಲಗುವುದು ಅಥವಾ ಪಶ್ಚಿಮ ಮತ್ತು ಉತ್ತರಕ್ಕೆ ತಲೆಯಿಟ್ಟು ಮಲಗುವುದರಿಂದ ಬಹಳಷ್ಟು ಹಾನಿ ಉಂಟು ಮಾಡಬಹುದು. ಇದರ ಹಿಂದಿನ ಕಾರಣವನ್ನು ವಾಸ್ತು ಶಾಸ್ತ್ರ ಹೇಳಲಾಗಿದೆ. ಆ ಪ್ರಕಾರ, ದಕ್ಷಿಣ ದಿಕ್ಕನ್ನು ಯಮ ಮತ್ತು ನಕಾರಾತ್ಮಕ ಶಕ್ತಿಗಳ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಬದಿಗೆ ಪಾದಗಳನ್ನು ಇಟ್ಟು ಮಲಗುವುದು ಅನೇಕ ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆಯಂತೆ. ಹಾಗೆಯೇ ಪೂರ್ವದಲ್ಲಿ ಅಂದರೆ ಸೂರ್ಯ ಉದಯಿಸುವ ದಿಕ್ಕಿನಲ್ಲಿ ಪಾದಗಳನ್ನು ಇಟ್ಟು ಮಲಗುವುದು ಕೂಡಾ ತುಂಬಾ ಅಶುಭ. ಇದು ಜೀವನದಲ್ಲಿ ಅನೇಕ ಅಡೆತಡೆಗಳನ್ನು ತರುವುದಲ್ಲದೇ, ಯಾವುದೇ ರೀತಿಯ ಏಳಿಗೆ ಕಾಣದೇ ಇರುವಂತೆ ಮಾಡುತ್ತದೆ.
ಇನ್ನು ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಬುದ್ದಿ ಚುರುಕಾಗಿತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ, ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಸಂಪತ್ತು, ಆಯುಷ್ಯ ಹೆಚ್ಚಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಪೂರ್ವ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ದೇವರ ಆರ್ಶೀವಾದ ಪಡೆಯುತ್ತೀರಿ. ಇದರಿಂದ ಉತ್ತಮ ನಿದ್ರೆ ಬರಲಿದೆ ಎಂದು ಹೇಳಲಾಗಿದೆ. ಜೊತೆಗೆ ಕೆಟ್ಟ ಕನಸುಗಳು ಬೀಳುವುದಿಲ್ಲ, ಏಕಾಗ್ರತೆ ಹೆಚ್ಚಾಗುತ್ತದೆ ಅಂತಲೂ ಹೇಳಲಾಗಿದೆ. ಆದರೆ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು ಎಂದು ಸಹ ಹೇಳಲಾಗಿದೆ.
ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು ಏಕೆ?
ವಾಸ್ತು ಮತ್ತು ವೈಜ್ಞಾನಿಕ ಕಾರಣಗಳಿಂದಾಗಿಯೂ ನೋಡುವುದಾದರೆ ಉತ್ತರ ಮತ್ತು ಪಶ್ಚಿಮ ದಿಕ್ಕಿನತ್ತ ತಲೆ ಇಟ್ಟು ಮಲಗಬಾರದಂತೆ. ಈ ರೀತಿ ಉತ್ತರಕ್ಕೆ ತಲೆ ಇಟ್ಟು ಮಲಗಿದರೆ ನಮ್ಮ ಆಯಸ್ಸು ಕಡಿಮೆಯಾಗುತ್ತದೆ ಎಂದು ನಂಬಲಾಗುತ್ತದೆ. ಇದರ ಜೊತೆ ಸತ್ತವರನ್ನು ಸಹ ಉತ್ತರ ದಿಕ್ಕಿಗೆ ಮುಖಮಾಡಿಯೇ ಮಣ್ಣು ಮಾಡುತ್ತಾರೆ ಇಲ್ಲವೆ ಚಿತೆ ಮೇಲೆ ಮಲಗಿಸುತ್ತಾರೆ. ಹೀಗಾಗಿ ಉತ್ತರ ದಿಕ್ಕಿನತ್ತ ತಲೆ ಇಟ್ಟುಕೊಂಡು ಮಲಗಬಾರದು ಎಂದು ಹಿರಿಯರು ಹೇಳಿಕೊಂಡು ಬಂದಿದ್ದಾರೆ.



Click it and Unblock the Notifications


