Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಹೊಸ ವರ್ಷವನ್ನು ಮೊದಲು & ಕೊನೆಯದಾಗಿ ಸ್ವಾಗತಿಸುವ ದೇಶ ಯಾವುದು ಗೊತ್ತಾ?
ಹೊಸ ವರ್ಷಕ್ಕೆ ಇನ್ನೇನು ಬೆರಳೆಣಿಕೆ ದಿನ ಬಾಕಿ ಉಳಿದಿದೆ. 2023ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷ ಸ್ವಾಗತಿಸಲು ವಿಶ್ವದಾದ್ಯಂತ ಕಾತರದಿಂದ ಕಾಯುತ್ತಿದ್ದಾರೆ. ನಾವು ಹಿಂದಿನ ವರ್ಷದ ಒಳ್ಳೆಯ ನೆನಪುಗಳು ಮತ್ತು ಕಲಿತ ಪಾಠವನ್ನು ನೆನಪಿಸಿಕೊಳ್ಳುವ ಕಾಲವಿದು. ಹೊಸ ವರ್ಷಕ್ಕೆ ಕಾಲಿಡುತ್ತಿರುವಾಗ ಕಳೆದ ವರ್ಷದಿಂದ ನಕಾರಾತ್ಮಕ ಭಾವನೆಗಳನ್ನು ತೆಗೆದುಕೊಂಡು ಅವುಗಳನ್ನು ಭರವಸೆ, ಸಂತೋಷ ಮತ್ತು ಉತ್ತಮ ನಾಳೆಯ ಭರವಸೆಗಳೊಂದಿಗೆ ಬದಲಾಯಿಸುವ ಸಮಯವಿದು.
ಈ ಹೊಸ ವರ್ಷದಲ್ಲಿ ಹೊಸ ಗುರಿಗಳ ಸಾಧಿಸಲು ಇಂದೇ ಸಂಕಲ್ಪ ಮಾಡಬೇಕಿದೆ. ಬಹಳಷ್ಟು ನಿರೀಕ್ಷೆಗಳೊಂದಿಗೆ ಈ ಹೊಸ ವರ್ಷ ಆಗಮಿಸಲು ತಯಾರಿಯೂ ನಡೆದಿದೆ. ಹಾಗೆ ವಿಶ್ವದ ಹಲವು ಭಾಗದಲ್ಲಿ ಹೊಸ ವರ್ಷ ಆಗಮನಕ್ಕೆ ವಿದ್ಯುಕ್ತವಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾದರೆ ಮೊಟ್ಟ ಮೊದಲಿಗೆ ಯಾವ ದೇಶ ಹೊಸ ವರ್ಷವನ್ನು ಸ್ವಾಗತಿಸಲಿದೆ.? ಯಾವ ರಾಷ್ಟ್ರ ಕೊನೆಯದಾಗಿ ಹೊಸ ವರ್ಷಕ್ಕೆ ಕಾಲಿಡಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಹೊಸ ವರ್ಷವನ್ನು ಪ್ರಪಂಚದಾದ್ಯಂತ ವೈಭವದಿಂದ ಆಚರಿಸಲಾಗುತ್ತದೆ. ನ್ಯೂಯಾರ್ಕ್ ನಗರದಲ್ಲಿ ಬಾಲ್ ಡ್ರಾಪ್‌ನಿಂದ ಹಿಡಿದು ಭಾರತದಲ್ಲಿ ವಯಸ್ಸಾದ ವ್ಯಕ್ತಿಯ ಪ್ರತಿಕೃತಿ ದಹಿಸುವ ಮೂಲಕ ಸ್ಪೇನ್‌ನಲ್ಲಿ 12 ದ್ರಾಕ್ಷಿಗಳನ್ನು ಸೇವಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಲಂಡನ್‌ನಲ್ಲಿ ಗಡಿಯಾರ 12 ಗಂಟೆಗೆ 12 ಬಾರಿ ಬಾರಿಸುವ ಶಬ್ದದೊಂದಿಗೆ ಹೊಸ ವರ್ಷ ಆರಂಭ ಎಂದು ಪರಿಗಣಿಸಲಾಗಿದೆ.
ಯಾವ ದೇಶವು ಮೊದಲು ಹೊಸ ವರ್ಷವನ್ನು ಸ್ವಾಗತಿಸುತ್ತದೆ?
ಪೆಸಿಫಿಕ್ ದ್ವೀಪಗಳಾದ ಟೊಂಗಾ, ಸಮೋವಾ ಮತ್ತು ಕಿರಿಬಾಟಿ ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶಗಳಾಗಿವೆ. ಜನವರಿ 1 ಈ ದೇಶಗಳಲ್ಲಿ ಭಾರತೀಯ ಕಾಲಾಮಾನ ಸಮಯ 3:30ಕ್ಕೆ ಪ್ರಾರಂಭವಾಗುತ್ತದೆ. ಈ ವೇಳೆ ಈ ದ್ವೀಪ ರಾಷ್ಟ್ರಗಳು ಮೊದಲು ಹೊಸ ವರ್ಷಕ್ಕೆ ಕಾಲಿಡಲಿವೆ. ಆದರೆ ಭಾರತ ಇನ್ನೂ ಗಂಟೆಗಳ ಲೆಕ್ಕದಲ್ಲಿ ಹಿಂದಿರುತ್ತದೆ.
ಯಾವ ದೇಶವು ಕೊನೆಯದಾಗಿ ಹೊಸ ವರ್ಷವನ್ನು ಸ್ವಾಗತಿಸುತ್ತದೆ?
ಜನವಸತಿ ಇಲ್ಲದ ಹೌಲ್ಯಾಂಡ್ ಮತ್ತು ಬೇಕರ್ ದ್ವೀಪಗಳಲ್ಲಿ, ಜನವರಿ 1 ರಂದು ಸಂಜೆ 5:30 IST ಗೆ ಪ್ರಾರಂಭವಾಗುತ್ತದೆ. ಅವರು ಹೊಸ ವರ್ಷವನ್ನು ಸ್ವಾಗತಿಸುವ ವಿಶ್ವದ ಕೊನೆಯ ದೇಶಗಳು ಎಂದು ಗುರುತಿಸಲಾಗಿದೆ. ಈ ದೇಶಳು ಪ್ರತಿ ವರ್ಷ ಬದಲಾವಣೆಯಾಗುತ್ತದೆ. ಭೂಮಿಯ ಚಲನೆಯ ಪ್ರಕಾರವಾಗಿ ದಿನ, ಕಾಲಗಳು ಬದಲಾಗುವ ಹಿನ್ನೆಲೆ ಪ್ರತಿ ವರ್ಷವೂ ಹೊಸ ವರ್ಷ ಮೊದಲು ಆಚರಿಸುವ ದೇಶ ಹಾಗೂ ಕೊನೆಯಗಾಗಿ ಸ್ವಾಗತಿಸುವ ದೇಶಗಳು ಬದಲಾಗುತ್ತವೆ.
ಹೊಸ ವರ್ಷವನ್ನು ಸ್ವಾಗತಿಸುವ ದೇಶಗಳ ಪಟ್ಟಿಯಲ್ಲಿ ಭಾರತ ವಿಶ್ವದ 16ನೇ ದೇಶವಾಗಿದೆ. ಭಾರತದಲ್ಲೂ ಈ ಬಾರಿ ವಿಜೃಂಭಣೆಯಿಂದ ಹೊಸ ವರ್ಷ ಸ್ವಾಗತಕ್ಕೆ ತಯಾರಿ ನಡೆದಿದೆ. ಕಳೆದೆರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದಾಗಿ ಆಚರಣೆಗಳಿಗೆ ಬ್ರೇಕ್ ಬಿದ್ದಿತ್ತು. ಈ ಬಾರಿ ಹೊಸ ವರ್ಷ ಆಚರಣೆಗೆ ಮುಕ್ತವಾಗಿದ್ದು, ದೇಶದ ಹಲವು ನಗರಗಳು ಭರದ ಸಿದ್ಧತೆಯಲ್ಲಿವೆ.
2023ರ ವರ್ಷವನ್ನು ದ್ವೀಪರಾಷ್ಟ್ರ ನ್ಯೂಜಿಲೆಂಡ್ ಮೊದಲು ಸ್ವಾಗತಿಸಿತ್ತು. ಖ್ಯಾತ ಲೈಟ್ ಟವರ್‌ನ ಸಿಡಿಮದ್ದು ಪ್ರದರ್ಶನ ಗಮನ ಸೆಳೆದಿತ್ತು. ಈ ಕ್ಷಣಕ್ಕಾಗಿ ಇಡೀ ವಿಶ್ವ ಕಾದುಕುಳಿತಿತ್ತು. ಆದರೆ ಈ ಬಾರಿ ಟೊಂಗಾ, ಸಮೋವಾ ಮತ್ತು ಕಿರಿಬಾಟಿ ಸಣ್ಣ ರಾಷ್ಟ್ರಗಳು ಹೊಸ ವರ್ಷವನ್ನು ಮೊದಲು ಸ್ವಾಗತಿಸಲಿವೆ.



Click it and Unblock the Notifications