Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
Dustbin As Per Vastu: ಕಸದ ಬುಟ್ಟಿ ಈ ದಿಕ್ಕಿನಲ್ಲಿದ್ದರೆ ಲಕ್ಷ್ಮೀ ಖಂಡಿತ ಮನೆ ತೊರೆಯುತ್ತಾಳೆ!
ಕೆಲವೊಂದು ಸಾರಿ ಮನೆಯಲ್ಲಿ ನಮಗೆ ನಾನಾ ರೀತಿಯ ಕಷ್ಟಗಳು ಎದುರಾಗುತ್ತೆ. ಅದು ಆರ್ಥಿಕ ಸಮಸ್ಯೆ ಇರಬಹುದು, ಆರೋಗ್ಯ ಸಮಸ್ಯೆ ಇರಬಹುದು ಇತ್ಯಾದಿ. ಈ ರೀತಿ ಸಮಸ್ಯೆಗಳು ಉಂಟಾಗೋದಕ್ಕೆ ವಾಸ್ತು ದೋಷ ಕೂಡ ಒಂದು ರೀತಿಯಲ್ಲಿ ಕಾರಣವಾಗುತ್ತೆ ಅಂದ್ರೆ ತಪ್ಪಾಗೋದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳು ಇದೇ ದಿಕ್ಕಿನಲ್ಲಿ ಇರಬೇಕು ಅಂತಿರುತ್ತೆ. ಒಂದು ವೇಳೆ ಆ ವಸ್ತುಗಳನ್ನು ತಪ್ಪಾದ ದಿಕ್ಕಿನಲ್ಲಿಟ್ಟರೆ ಅದು ನೇರವಾಗಿ ನಮ್ಮ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತೆ.
ಮುಖ್ಯವಾಗಿ ಮನೆಯಲ್ಲಿ ಕಸದ ಡಬ್ಬಿಯನ್ನು ನಾವು ಎಲ್ಲಂದರಲ್ಲಿ ಎಸೆಯುತ್ತೇವೆ. ಖಂಡಿತ ಈ ತಪ್ಪನ್ನು ಮಾಡೋದಕ್ಕೆ ಹೋಗಬೇಡಿ. ಇದರಿಂದ ನಾವು ಜೀವನದಲ್ಲಿ ಅನೇಕ ರೀತಿ ಸಮಸ್ಯೆ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಮಾತೆ ಲಕ್ಷ್ಮೀಯು ಕೂಡ ನಿಮ್ಮ ಮೇಲೆ ಮುನಿಸಿಕೊಳ್ಳುತ್ತಾಳಂತೆ. ಅಷ್ಟಕ್ಕು ನಿಮ್ಮ ಮನೆಯಲ್ಲಿ ಕಸದ ಡಬ್ಬಿ ಯಾವ ದಿಕ್ಕಿನಲ್ಲಿ ಇರಬೇಕು ಅನ್ನೋದನ್ನು ತಿಳಿಯೋಣ.

ಈಶಾನ್ಯ ದಿಕ್ಕು
ಮನೆಯಲ್ಲಿ ಕಸದ ಬುಟ್ಟಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ರೀತಿ ಮಾಡುವುದರಿಂದ ಮನೆಯ ಸದಸ್ಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೇ, ಮನೆಯ ಮುಖ್ಯಸ್ಥರು ಅಥವಾ ಮನೆಯ ಯಜಮಾನ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯಿದೆ.
ಆಗ್ನೇಯ ದಿಕ್ಕು
ಅಪ್ಪಿ-ತಪ್ಪಿಯೂ ಮನೆಯ ಆಗ್ನೇಯ ದಿಕ್ಕಿಗೆ ಕಸದ ಬುಟ್ಟಿಯನ್ನು ಇಡೋದಕ್ಕೆ ಹೋಗಬೇಡಿ. ಒಂದು ವೇಳೆ ಆಗ್ನೇಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಟ್ಟರೆ ನಿಮ್ಮ ಸಂಪತ್ತು ಶೇಖರಣೆಗೆ ತೊಂದರೆಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ, ಮನೆಯಲ್ಲಿ ಇಟ್ಟಿರುವ ಹಣವೂ ಕ್ರಮೇಣ ಮುಗಿದು ಹೋಗಿ ನಿಮ್ಮ ಮನೆಯ ಸದಸ್ಯರ ಮೇಲಿನ ಸಾಲದ ಹೊರೆ ಕೂಡ ಹೆಚ್ಚುತ್ತಂತೆ.
ಪೂರ್ವ ಮತ್ತು ಉತ್ತರ ದಿಕ್ಕು
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪೂರ್ವ ದಿಕ್ಕಿನಲ್ಲಿ ಅಥವಾ ಉತ್ತರ ದಿಕ್ಕಿನಲ್ಲಿ ಕಸದ ಬುಟ್ಟಿಗಳನ್ನು ಇಡಬಾರದು. ಇದರಿಂದ ಮನೆಯವರಿಗೆ ಯಶಸ್ಸು ಅನ್ನೋದೇ ಸಿಗೋದಿಲ್ಲ. ಪ್ರತಿಯೊಂದು ವಿಚಾರದಲ್ಲೂ ಅವರು ಸೋಲನ್ನು ಕಾಣಬೇಕಾಗುತ್ತಂತೆ. ಅಷ್ಟೇ ಅಲ್ಲದೇ, ಇದು ಮನೆಯ ಸದಸ್ಯರ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಅಷ್ಟೇ ಅಲ್ಲದೇ, ಇದು ಉದ್ಯೋಗಿಗಳು ಮತ್ತು ವೃತ್ತಿಜೀವನದ ಉತ್ತಮ ಅವಕಾಶಗಳನ್ನು ಕಡಿಮೆ ಮಾಡುತ್ತಂತೆ.
ಮನೆಯ ಯಾವ ದಿಕ್ಕಿನಲ್ಲಿ ಕಸದ ಬುಟ್ಟಿ ಇಡಬೇಕು?
ವಾಸ್ತು ಶಾಸ್ತ್ರದಲ್ಲಿ ಮನೆಯೊಳಗೆ ಕಸದ ಬುಟ್ಟಿ ಇಡಲು ಸರಿಯಾದ ದಿಕ್ಕು ಯಾವುದೆಂದರೆ ಮನೆಯ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ನೈಋತ್ಯ ದಿಕ್ಕು ಮುಳುಗಡೆಯನ್ನು ಸೂಚಿಸುತ್ತದೆ. ಹೀಗಾಗಿ ಈ ದಿಕ್ಕಿಗೆ ಡಸ್ಟ್ ಬಿನ್ ಇಡುವುದು ಒಳ್ಳೆಯದು. ಇನ್ನೂ ಕಸದ ಬುಟ್ಟಿಯನ್ನು ವಾಯುವ್ಯ ದಿಕ್ಕಿನಲ್ಲಿಯೂ ಕೂಡ ಇಡಬಹುದು.
ಈಶಾನ್ಯ ದಿಕ್ಕಿನಲ್ಲಿದ್ದರೆ ಬಡತನ ಹೆಚ್ಚಾಗುತ್ತೆ!
ವಾಸ್ತು ಶಾಸ್ತ್ರದ ಪ್ರಕಾರ ಕಸದ ಬುಟ್ಟಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಆ ಮನೆಯಲ್ಲಿ ಬಡತನ ಹೆಚ್ಚಾಗುತ್ತೆ ಎಂದು ವಾಸ್ತುದಲ್ಲಿ ಉಲ್ಲೇಖಿಸಲಾಗಿದೆ. ಧರ್ಮಗ್ರಂಥಗಳಲ್ಲಿ ಈಶಾನ್ಯವನ್ನು ದೇವರುಗಳ ದಿಕ್ಕು ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡುವುದು ಅಶುಭ ಎಂದು ಪರಿಗಣಿಸಲಾಗಿದೆ.
ವಾಸ್ತು ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡುವ ಮನೆಯಲ್ಲಿ ಯಾವಾಗಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತಂತೆ. ಸದಸ್ಯರು ಯಾವಾಗಲೂ ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ. ಪೂರ್ವ, ಆಗ್ನೇಯ ಮತ್ತು ಉತ್ತರ ದಿಕ್ಕುಗಳಲ್ಲಿ ಕಸದ ಬುಟ್ಟಿಗಳನ್ನು ಇಡುವುದು ಅಶುಭ. ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಡುವುದರಿಂದ ಕುಟುಂಬದ ಸದಸ್ಯರ ಆರ್ಥಿಕ ಸ್ಥಿತಿ ಹದಗೆಡುತ್ತೆ ಎಂಬ ನಂಬಿಕೆಯಿದೆ.
ಹೆಚ್ಚಿನ ಮನೆಗಳಲ್ಲಿ ಕಸದ ಬುಟ್ಟಿಯನ್ನು ಮನೆಯ ಹೊರಗಡೆ ಇಡುವ ಪದ್ಧತಿಯಿದೆ. ಈ ರೀತಿ ಮಾಡುವುದು ತಪ್ಪು. ವಾಸ್ತು ಶಾಸ್ತ್ರದ ಪ್ರಕಾರ ಕಸದ ಬುಟ್ಟಿ ಮನೆಯ ಹೊರಗೆ ಇರಲೇಬಾರದು. ಬದಲಿಗೆ ಅದು ಯಾವಾಗಲೂ ಒಳಾಂಗಣದಲ್ಲಿರಬೇಕು.
ವಾಸ್ತು ಶಾಸ್ತ್ರದಲ್ಲಿ ನೈಋತ್ಯ ಅಥವಾ ವಾಯುವ್ಯ ದಿಕ್ಕನ್ನು ಕಸದ ಬುಟ್ಟಿ ಇಡಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತ್ಯಾಜ್ಯ ವಿಲೇವಾರಿಗೆ ಈ ನಿರ್ದೇಶನಗಳು ಸೂಕ್ತವೆಂದು ಪರಿಗಣಿಸಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಕಸದ ಬುಟ್ಟಿಯನ್ನು ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಇಷ್ಟೇ ಅಲ್ಲದೇ, ಕಸದ ಬುಟ್ಟಿಯನ್ನು ವಾಯುವ್ಯ ದಿಕ್ಕಿನಲ್ಲಿಯೂ ಇಡಬಹುದು.
ಮನೆಯಲ್ಲಿ ಕಸದ ಬುಟ್ಟಿಯನ್ನು ಇಡೋವಾಗ ಈ ಎಲ್ಲಾ ವಿಚಾರದ ಬಗ್ಗೆ ಗಮನ ಹರಿಸುವುದು ತುಂಬಾನೇ ಮುಖ್ಯವಾಗುತ್ತದೆ. ಕೊಂಚ ತಪ್ಪಾದರೂ ಇದು ನಿಮ್ಮ ವೈಯಕ್ತಿಕ ಜೀವನದ ಮೇಲೆ ನೇರ ಪರಿಣಾಮ ಬೀರಬಹುದು.



Click it and Unblock the Notifications

