Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭೂಮಿ ಮೇಲೆ ಮಾನವ ಮೊದಲು ಕಾಲಿಟ್ಟಿದ್ದು ಎಲ್ಲಿ..? ಆತ ನೆಲೆಸಿದ್ದು ಎಲ್ಲಿ ಗೊತ್ತಾ?
ಭೂಮಿ ಮೇಲೆ ಮನುಷ್ಯ ಜನಿಸಿ ಶತಮಾನಗಳು ಕಳೆದಿವೆ. ವಿಕಸನ ಸಿದ್ದಾಂತದ ಮೂಲಕ ಮಾನವನ ಹುಟ್ಟು ಹೇಗಾಯಿತು ಎಂಬುದನ್ನು ನಾವೆಲ್ಲಾ ಓದಿದ್ದೇವೆ. ಮಂಗನಿಂದ ಮಾನವನಾದ ಎಂಬ ಸಿದ್ದಾಂತವು ಬಹಳ ಪ್ರಸ್ತುತವಾಗಿದೆ. ಶತಮಾನಗಳಿಂದ ಮಾನವರ ವಿಕಸನವು ಹಲವು ಬಗೆಯ ಬದಲಾವಣೆಗೆ ಒಳಗಾಗಿದೆ. ಮಾನವನ ಮೆದುಳಿನಿಂದ ಹಿಡಿದು ಪ್ರತಿಯೊಂದು ಅಂಗದಲ್ಲು ಕಾಲೋಚಿತ ಬದಲಾವಣೆಯಾಗಿದೆ.
ಮಾನವ ವಿಕಸನ ಸಿದ್ಧಾಂತದಲ್ಲಿ ಮಾನವ ನಿಧಾನವಾಗಿ ರೂಪಾಂತರಗೊಂಡು ಬಂದಿರುವುದು ನೋಡಬಹುದು. ಹಾಗೆ ಭೂಮಿ ಮೇಲೆ ಮಾನವ ಕಾಲಿಟ್ಟು ಶತಮಾನ ಕಳೆದಿದೆ ಎಂಬುದು ನಿಮಗೂ ತಿಳಿದಿದೆ. ಆದ್ರೆ ಮಾನವ ಮೊದಲ ಬಾರಿಗೆ ಭೂಮಿಯ ಯಾವ ಭಾಗದ ಮೇಲೆ ಕಾಲಿಟ್ಟ. ಆತನ ಇರುವಿಕೆ ಮೊದಲು ಯಾವ ಭಾಗದಲ್ಲಿ ಮೊದಲು ಕಾಣಿಸಿಕೊಂಡ ಎಂಬುದು ನಿಮಗೆ ಗೊತ್ತಾ?

ವಿಶ್ವದಲ್ಲಿನ 195 ದೇಶಗಳ ಪೈಕಿ ಮಾನವ ಮೊದಲು ಯಾವ ಪ್ರದೇಶದಲ್ಲಿ ಜನಿಸಿದ? ಆತ ಎಲ್ಲಿ ಕಾಲಿರಿಸಿದ ಎಂಬುದನ್ನು ನಾವು ತಿಳಿದುಕೊಳ್ಳೋಣ. ಅದರಲ್ಲೂ ಇತಿಹಾಸಕಾರರ ಉಲ್ಲೇಖದಂತೆ ಮೊದಲ ಮಾನವ ಆಫ್ರಿಕಾ ಖಂಡದಲ್ಲಿ ನೆಲೆಸಿದ್ದ ಎನ್ನುವುದನ್ನು ವಿವರಿಸುತ್ತವೆ. ಆಫ್ರಿಕ್ ಅತ್ಯಂತ ದೊಡ್ಡ ಖಂಡವಾಗಿದೆ. ಈ ಖಂಡದ ಯಾವುದೋ ಒಂದು ಭಾಗದಲ್ಲಿ ಮಾನವ ಮೊದಲು ಕಾಲಿರಿಸಿದ ಎಂದು ಹೇಳಲಾಗಿದೆ.
ಆದ್ರೆ ಹಲವು ಧರ್ಮಗಳ ಅನುಸಾರವಾಗಿ ಒಂದೊಂದು ರೀತಿಯ ಸಿದ್ದಾಂತ ನೋಡಬಹುದು. ಬೈಬಲ್ ಪ್ರಕಾರ ಆಡಮ್ ಮತ್ತು ಈವ್ ಮೊದಲ ಮಾನವರು ಎಂದು ಹೇಳಲಾಗಿದೆ. ಈ ಇಬ್ಬರು ಮೊದಲ ಬಾರಿಗೆ ಭೂಮಿ ಮೇಲೆ ಜನಿಸಿದರು ಎಂದು ಬೈಬಲ್ ಹೇಳುತ್ತದೆ. ಆದ್ರೆ ಈ ಕಥೆಯನ್ನು ಕಾಲ್ಪನಿಕ ಎಂಬ ಭಾವಿಸಲಾಗಿದ್ದರೂ ಹಲವರು ಈ ಕಥೆಯನ್ನು ನಿಜವೆಂದು ನಂಬುತ್ತಾರೆ.
ಬೈಬಲ್‌ನಲ್ಲಿ ಒಂದು ಐತಿಹಾಸಿಕ ನದಿಯು ಏದೆನ್‌ನಿಂದ ಹರಿದು ನಾಲ್ಕು ಭಾಗಗಳಾಗಿ ವಿಭಜನೆಯಾಯಿತು ಎಂದು ಉಲ್ಲೇಖಿಸಲಾಗಿದೆ. ಪಿಶೋನ್, ಗಿಹೋನ್, ಟೈಗ್ರಿಸ್ ಮತ್ತು ಯೂಫ್ರಟಿಸ್ ಎಂಬ ವಿಭಾಗವನ್ನು ಹೆಸರಿಸಲಾಗಿದೆ. ಈ ಎರಡು ನದಿಗಳಾದ ಟೈಗ್ರಿಸ್ ಮತ್ತು ಯೂಫ್ರಟಿಸ್ ಆಧುನಿಕ ಕಾಲದಲ್ಲಿಯೂ ಅಸ್ತಿತ್ವದಲ್ಲಿವೆ ಮತ್ತು ಈಗಿನ ಇರಾಕ್ ದೇಶದಲ್ಲಿ ಇದು ಹರಿದು ಹೋಗುತ್ತದೆ. ಆದ್ದರಿಂದ ಈ ಎಲ್ಲಾ ಅಂಶಗಳು ಈಡನ್ ಇರಾಕ್ ಮತ್ತು ಇರಾನ್ ಬಳಿಯ ಪ್ರದೇಶದಲ್ಲಿ ನೆಲೆಗೊಂಡಿರಬಹುದು ಎಂದು ಸೂಚಿಸುತ್ತವೆ.
ಹೀಗೆ ಆಫ್ರಿಕನ್ ಖಂಡವು ಮೊದಲ ಮಾನವನ ಆವಾಸ ಸ್ಥಾನ ಹಾಗೂ ಅಲ್ಲಿಯೇ ಆತ ನೆಲೆಸಿದ್ದ ಎಂಬುದನ್ನು ಹಲವರು ನಂಬಿದ್ದಾರೆ. ಆಫ್ರಿಕಾದ
ಇದು ಜನಪ್ರಿಯ ಸಿದ್ಧಾಂತವಾಗಿದ್ದರೂ ಹಲವರು ಈ ಸಿದ್ದಾಂತವನ್ನು ಮತ್ತಷ್ಟು ಮುಂದೆ ಕೊಂಡೊಯ್ಯುವುದು ನೋಡಬಹುದು. ಕೆಲವು ವಿದ್ವಾಂಸರು ಪಿಶೋನ್ ಮತ್ತು ಗಿಹೋನ್ ಈಜಿಪ್ಟ್‌ನ ನೈಲ್ ನದಿ ಮತ್ತು ಭಾರತದಲ್ಲಿ ಹರಿಯುವ ಗಂಗಾ ನದಿಯನ್ನು ಕೂಡ ಉಲ್ಲೇಖಿಸಬಹುದು ಎಂದು ಸೂಚಿಸುತ್ತಾರೆ.
ಇಥಿಯೋಪಿಯಾದ ಓಮೋ ಕಣಿವೆಯಲ್ಲಿ ಮಾನವರ ಅತ್ಯಂತ ಹಳೆಯ ಪಳೆಯುಳಿಕೆಗಳು ಕಂಡುಬಂದಿರುವುದು ಇತಿಹಾಸದಲ್ಲಿ ಉಲ್ಲೇಖವಿದೆ. ಹೀಗಾಗಿ ಆಫ್ರಿಕಾ ಮಾನವರ ಮೊದಲ ಆವಾಸ ಸ್ಥಾನ ಎಂಬ ನಿರ್ಧಾರಕ್ಕೆ ಬರಲಾಗಿದೆ. ಆದ್ರೆ ಇದನ್ನು ವೈಜ್ಞಾನಿಕವಾಗಿ ನಿರೂಪಿಸಲು ಮಾತ್ರ ಸಾಧ್ಯವಾಗಿಲ್ಲ. ಹೀಗಾಗಿ ನಾವು ಕೂಡ ಆಫ್ರಿಕಾವನ್ನೇ ಮಾನವರ ಮೊದಲ ಆವಾಸ ಸ್ಥಾನ ಎಂಬುದನ್ನು ನಂಬಬೇಕಿದೆ.
ಅದಕ್ಕೂ ಅಚ್ಚರಿ ಎಂದರೆ ಆಫ್ರಿಕಾ ಖಂಡದಲ್ಲಿ ಇಂದಿಗೂ ಬುಡಕಟ್ಟು ಜನಾಂಗ ನೆಲೆಸಿವೆ. ಕೆಲವೊಂದು ಜನಾಂಗ ಇಂದಿಗೂ ಮುಖ್ಯ ಸಮಾಜದಲ್ಲಿ ಗುರುತಿಸಿಕೊಂಡಿಲ್ಲ. ಅವರಲ್ಲಿ ಇತ್ತೀಚಿಗೆ ಬೆಂಕಿಯ ಬಳಕೆ ಇರುವುದು ನೋಡಬಹುದು. ಹೀಗಾಗಿ ಆಫ್ರಿಕಾ ಆದಿ ಮಾನವರ ತೊಟ್ಟಿಲು ಎನ್ನಬಹುದು.



Click it and Unblock the Notifications