Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಕಡಲೇಕಾಯಿ ಪರಿಷೆಗೂ ಬಂದಿದ್ದ ಡಾ. ಬ್ರೋ ಹೋಗಿದ್ದೆಲಿಗೆ..? ಈಗ ಎಲ್ಲಿದ್ದಾರೆ ಗೊತ್ತಾ?
ನಮಸ್ಕಾರ ದೇವ್ರು ಅಂತ ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ಗಗನ್ ಶ್ರೀನಿವಾಸ್ ಅಲಿಯಾಸ್ ಡಾ.ಬ್ರೋ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ. ಕಳೆದೊಂದು ತಿಂಗಳಿಂದ ಒಂದೇ ಒಂದು ವಿಡಿಯೋ ಸಹ ಹಾಕದೆ ಎಲ್ಲಿದ್ದಾರೆ ಎಂಬ ಮಾಹಿತಿಯೂ ಇಲ್ಲದೆ ಅವರ ಅಭಿಮಾನಿಗಳು, ನೆಟ್ಟಿಗರು ಆತಂಕಕ್ಕೂ ಒಳಗಾಗಿದ್ದಾರೆ. ಕಳೆದ ಚೀನಾ ಪ್ರವಾಸ ಕೈಗೊಂಡಿದ್ದ ಅವರು ಇದಾದ ಬಳಿಕ ಒಂದೂ ವಿಡಿಯೋ ಹಂಚಿಕೊಂಡಿಲ್ಲ. ಸಾಮಾನ್ಯವಾಗಿ ಅವರು ವಾರದಲ್ಲಿ ಎರಡು ಮೂರು ವಿಡಿಯೋ ಹಂಚಿಕೊಳ್ಳುತ್ತಿದ್ದರು. ಆದರೆ ಕಳೆದೊಂದು ತಿಂಗಳಿಂದ ಅವರ ವಿಡಿಯೋ ಕಾಣದಿರುವುದು ಎಲ್ಲರಲ್ಲೂ ಆತಂಕ ಹುಟ್ಟಿಸಿತ್ತು.
ಫೇಸ್‌ಬುಕ್, ಇನ್ಸ್‌ಸ್ಟಾದಿಂದಲೂ ನಾಪತ್ತೆ
ಯೂಟ್ಯೂಬ್‌ನಲ್ಲಿ ಅವರು ವಿಡಿಯೋ ಹಂಚಿಕೊಳ್ಳದಿದ್ದರೂ ಫೇಸ್‌ಬುಕ್, ಇನ್ಸ್‌ಸ್ಟಾದಲ್ಲಿ ಕಿರು ವಿಡಿಯೋಗಳ ಹಂಚಿಕೊಳ್ಳುತ್ತಿದ್ದರು. ಜೊತೆಗೆ ಮುಂದಿನ ವಿಡಿಯೋ ಬಗ್ಗೆ ಅಲ್ಲಿಯೇ ಮಾಹಿತಿ ನೀಡುತ್ತಿದ್ದರು. ಆದರೆ ತಿಂಗಳಿಂದ ಯಾವ ಸುದ್ದಿಯೂ ಇಲ್ಲ. ಹೀಗಾಗಿ ಅವರು ಎಲ್ಲಿದ್ದಾರೆ ಎಂಬ ಕುತೂಹಲ ಮೂಡಿತ್ತು.

ಕೊನೆಗೂ ಸಿಕ್ಕಿತು ಸುಳಿವು
ಚೀನಾ ದೇಶಕ್ಕೆ ಪ್ರವಾಸ ತೆರಳಿದ್ದ ಬಳಿಕ ಅವರು ಕಾಣೆಯಾಗಿದ್ದರು ಎನ್ನಲಾಗಿತ್ತು. ಅವರ ಕೊನೆಯ ವಿಡಿಯೋ ಸಹ ಭಾರೀ ವೈರಲ್ ಆಗಿತ್ತು. ಆದರೆ ಅವರೀಗ ಗ್ಲೋಬಲ್ ಕನ್ನಡಿಗ ಯೂಟ್ಯೂಬ್ ಚಾನಲ್‌ನಲ್ಲಿ ಜನರ ಎದುರು ಬಂದಿದ್ದಾರೆ. ವರ್ಷಕ್ಕೆ ಒಮ್ಮೆ ಯೂಟ್ಯೂಬ್ ಕ್ರಿಯೇಟರ್ಸ್ ಒಟ್ಟಾಗಿ ಸೇರುವ ಕಾರಣ ಡಾ.ಬ್ರೋ ಗ್ಲೋಬಲ್ ಕನ್ನಡಿಗ ಮಹಾಬಲ ರಾಮ್ ಹಾಗೂ ಫ್ಲೈಯಿಂಗ್ ಪಾಸ್‌ಪೋರ್ಟ್ ಖ್ಯಾತಿಯ ಯೂಟ್ಯೂಬರ್ಸ್ ಜೊತೆ ಕಾಣಿಸಿಕೊಂಡಿದ್ದಾರೆ.
ಮಲೆನಾಡು ಭಾಗದಲ್ಲಿ ಡಾ.ಬ್ರೋ ಪ್ರವಾಸ
ಚೀನಾದಿಂದ ಬಂದೊಡನೆ ಡಾ.ಬ್ರೋ ಹಾಗೂ ಇತರೆ ಯೂಟ್ಯೂಬರ್ಸ್ ಮಲೆನಾಡು ಭಾಗಕ್ಕೆ ಪ್ರವಾಸಕ್ಕೆಂದು ತೆರಳಿದ್ದಾರೆ. ಈ ಸುದ್ದಿಯನ್ನು ಖುದ್ದು ಗ್ಲೋಬಲ್ ಕನ್ನಡಿಗ ಹಂಚಿಕೊಂಡಿದ್ದಾರೆ. ಬೆಂಗಳುರಿನ ತಂಡವೊಂದರ ಜೊತೆ ಕೆಲ ದಿನಗಳಿಂದ ಕೆಲಸ ಮಾಡಿದ್ದ ಡಾ.ಬ್ರೋ ಸ್ವಲ್ಪ ಬಿಡುವು ತೆಗೆದುಕೊಂಡು ಕೆಲ ದಿನಗಳಲ್ಲೇ ಹೊಸ ವಿಡಿಯೋದೊಂದಿಗೆ ಬರುತ್ತಾರೆ ಎಂದು ಮಹಾಬಲ ರಾಮ್ ಹೇಳಿಕೊಂಡಿದ್ದಾರೆ.
ವಿಶ್ವಕಪ್‌ಗಾಗಿ ವಿನೂತನ ವಿಡಿಯೋ ಮಾಡಿದ್ದ ಬ್ರೋ
ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಂಗವಾಗಿ ಡಾ.ಬ್ರೋ ಸ್ಟಾರ್ ಸ್ಟೋರ್ಟ್ಸ್ ಕನ್ನಡ ಚಾನಲ್ ಜೊತೆ ಸೇರಿ ವಿನೂತನ ಕಾರ್ಯಕ್ಕೆ ಮುಂದಾಗಿದ್ದರು. ಪ್ರತಿ ಪಂದ್ಯ ನಡೆಯುವ ಊರಿಗೆ ತೆರಳಿ ವಿಡಿಯೋ ಹಂಚಿಕೊಳ್ಳಲು ಮುಂದಾಗಿದ್ದರು. ಇನ್ನು ಬೆಂಗಳೂರಿನಲ್ಲಿ ನಡೆದಿದ್ದ ಭಾರತದ ಪಂದ್ಯಗಳಿಗೂ ಅವರು ತೆರಳಿದ್ದರು. ಸುಮಾರು 1 ತಿಂಗಳಿಗೂ ಹೆಚ್ಚು ಕಾಲ ಸ್ಟಾರ್ ಸ್ಟೋರ್ಟ್ಸ್ ಕನ್ನಡ ತಂಡದ ಜೊತೆ ಸೇರಿ ವಿಶೇಷ ವಿಡಿಯೋಗಳ ಮೂಲಕ ಅಭಿಮಾನಿಗಳ ಮುಂದೆ ಹಾಜರಾಗಿದ್ದರು.
ಕಡಲೇಕಾಯಿ ಪರಿಷೆಗೂ ಬಂದಿದ್ರೂ ಡಾ.ಬ್ರೋ
ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಕಡಲೇಕಾಯಿ ಪರಿಷೆಗೂ ಡಾ.ಬ್ರೋ ಬಂದಿದ್ದರು. ಅವರೇ ಈ ಕುರಿತು ವಿಡಿಯೋ ಸಹ ಹಂಚಿಕೊಂಡಿದ್ದರು. ಆದರೆ ಆ ವಿಡಿಯೋ ಕೆಲವೇ ಗಂಟೆಯಲ್ಲಿ ಡಿಲೀಟ್ ಆಗಿತ್ತು. ಅವರನ್ನು ಕಡಲೇಕಾಯಿ ಪರಿಷೆಯಲ್ಲಿ ನೋಡಿದ್ದ ಹಲವರು ರೀಲ್ಸ್ ಸಹ ಹಂಚಿಕೊಂಡಿದ್ದರು. ಆದರೆ ಕೆಲ ಹೊತ್ತಿನಲ್ಲಿ ಆ ವಿಡಿಯೋಗಳು ಸಹ ನಾಪತ್ತೆಯಾಗಿದ್ದವು.
ಹೊಸ ವಿಡಿಯೋ ಬರೋದು ಯಾವಾಗ?
ಗ್ಲೋಬಲ್ ಕನ್ನಡಿಗ ಖ್ಯಾತಿಯ ಮಹಾಬಲ ರಾಮ್ ತಮ್ಮ ವಿಡಿಯೋದಲ್ಲಿ ಹಂಚಿಕೊಂಡಿರುವಂತೆ, ಯೂಟ್ಯೂಬ್‌ನಿಂದ ಸ್ವಲ್ಪ ಬಿಡುವು ಪಡೆದುಕೊಂಡಿರುವ ಡಾ.ಬ್ರೋ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದಾರಂತೆ. ಡಾ. ಬ್ರೋ ವಿಷಯಕ್ಕೆ ಎಲ್ಲೂ ಹೋಗಿಲ್ಲ. ಅವರಿಗೆ ಏನೂ ಆಗಿಲ್ಲ. ಅವರು ಹುಷಾರಾಗಿ, ಆರೋಗ್ಯವಾಗಿ, ಆರಾಮಾಗಿ ಇದ್ದಾರೆ. ಸದ್ಯ ಅವರೇ ಹೊಸ ವಿಡಿಯೋ ಹಂಚಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ಒರಿಜಿನಲ್ ಕಂಟೆಂಟ್ ಹೊತ್ತು ತರುವ ಜನಪ್ರಿಯ ಯೂಟ್ಯೂಬರ್ 'ಡಾ ಬ್ರೋ' ಈವರೆಗೆ 2.19ಮಿಲಿಯನ್ ಸಬ್ಸ್‌ಸ್ಕ್ರೈಬರ್ಸ್ ಹೊಂದಿದ್ದಾರೆ. ಇವರ ವಿಡಿಯೋ ಕಂಟೆಂಟ್‌ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಅಂಗೈಯಲ್ಲೇ ಎಲ್ಲಾ ದೇಶದ ಸೌಂದರ್ಯ ಕಟ್ಟಿಕೊಡುವ ಅವರು, ಅಪಾಯಕಾರಿ ದೇಶಗಳಿಗೂ ಪ್ರವಾಸ ಕೈಗೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.



Click it and Unblock the Notifications