Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಧನ ತ್ರಯೋದಶಿಗೆ ಚಿನ್ನ ಖರೀದಿ ಮಾಡುವುದಾದರೆ ಈ ಅಂಶಗಳನ್ನು ಮರೆಯದಿರಿ
ದೀಪಾವಳಿ ಹಬ್ಬದಲ್ಲಿ ಚಿನ್ನ ಖರೀದಿ ಜೋರಾಗಿಯೇ ಇರುತ್ತದೆ, ಏಕೆಂದರೆ ಧನ್ತೇರಸ್ ಅಥವಾ ಧನ ತ್ರಯೋದಶಿಯಂದು ಚಿನ್ನ ಖರೀದಿ ತುಂಬಾ ಶುಭವೆಂದು ಈ ದಿನ ಚಿನ್ನ ಬೆಳ್ಳಿ ಖರೀದಿ ಮಾಡಲು ಜನ ಮುಗು ಬೀಳುತ್ತಾರೆ. ಧನ್ತೇರಸ್‌ಗೆ ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡುವುದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗಲಿದೆ.
ಆದರೆ ಚಿನ್ನ ಖರೀದಿ ಮಾಡುವಾಗ ಕೂಡ ಜಾಗ್ರತೆ ಮಾಡಬೇಕು, ಇಲ್ಲದಿದ್ದರೆ ನಷ್ಟ ಉಂಟಾಗುವುದು. ಚಿನ್ನ ಖರೀದಿ ಮಾಡುವಾಗ ಮೋಸ ಹೋಗದಿರಲು ಈ ಅಂಶಗಳ ಕಡೆಗೆ ಗಮನಹರಿಸುವುದು ಒಳ್ಳೆಯದು:

ಚಿನ್ನದ ಹಾಲ್‌ಮಾರ್ಕ್ ಚೆಕ್ ಮಾಡಿ
ದಿ ಬ್ಯೂರೋ ಆರ್ಫ್ ಇಂಡಿಯನ್ ಸ್ಟ್ಯಾಂಡರ್ಡ್ ಪ್ರಕಾರ BIS ಹಾಲ್‌ಮಾರ್ಕ್ ಇಲ್ಲದ ಚಿನ್ನ ಖರೀದಿಸಬಾರದು. ಇದು ಚಿನ್ನದ ಗುಣಮಟ್ಟ ಹೇಳುತ್ತದೆ. ಇಂಥ ಚಿನ್ನ ಖರೀದಿ ಮಾಡಿದರೆ ಅದನ್ನು ಮಾರಾಟ ಮಾಡುವಾಗ ಆ ದಿನ ಚಿನ್ನದ ಬೆಲೆ ಎಷ್ಟಿರುತ್ತದೋ ಅಷ್ಟು ಸಿಗುತ್ತದೆ, ಇಲ್ಲದಿದ್ದರೆ ಖರೀದಿಸುವಾಗ ಹೆಚ್ಚು ಬೆಲೆ ಕೊಟ್ಟು ಖರೀದಿ ಮಾಡುತ್ತೇವೆ, ಆದರೆ ಅದನ್ನು ಮರಳಿಸುವಾಗ ಸಿಗುವುದಿಲ್ಲ. ಚಿನ್ನದ ಕ್ಯಾರೆಟ್ 22K916 ಇದ್ದರೆ ಅದು 91.6% ಶುದ್ಧ ಚಿನ್ನವಾಗಿದೆ
HUID ನಂಬರ್ ಕೂಡ ಪರಿಶೀಲಿಸಬೇಕು: ನೀವು ಚಿನ್ನ ಖರೀದಿ ಮಾಡುವಾಗ BIS ಹಾಲ್‌ಮಾರ್ಕ್ ಜೊತೆಗೆ HUID ಇರುತ್ತದೆ, ಇದು ಆ ಚಿನ್ನದ ಗುಣಮಟ್ಟ ತಿಳಿಯಲು ಸಹಾಯ ಮಾಡುತ್ತದೆ, ಹಾಗಾಗಿ ಚಿನ್ನ ಖರೀದಿ ಮಾಡುವಗ ಈ ಬಗೆಯ ವಸ್ತುಗಳ ಕಡೆಗೆ ಕೂಡ ಗಮನಹರಿಸಬೇಕು.
ಚಿನ್ನದ ಗುಣಮಟ್ಟ ಹೇಗೆ ಹೇಳಲಾಗುವುದು?
ನೀವು ಚಿನ್ನದ ಅಂಗಡಿಗೆ ನಿಮಗೆ ಯಾವ ರೀತಿಯ ಗುಣಮಟ್ಟದ ಚಿನ್ನ ಬೇಕು ಎಂದು ನಿರ್ಧರಿಸಬೇಕು. ಚಿನ್ನದಲ್ಲಿ 14K, 18K, 22K, ಮತ್ತು 24K ಗ್ರೇಡ್‌ಗಳಿರುತ್ತದೆ.
ಚಿನ್ನ ಖರೀದಿ ಮಾಡುವಾಗ ಯಾವ ಗ್ರೇಡ್ ಖರೀದಿ ಮಾಡುವುದು ಒಳ್ಳೆಯದು?
ಚಿನ್ನ ಯಾವ ದ್ದೇಶಕ್ಕೆ ಖರೀದಿ ಮಾಡುತ್ತಿದ್ದಾರೆ ಎಂಬುವುದು ಕೂಡ ಮುಖ್ಯವಾಗುತ್ತದೆ
ಹೂಡಿಕೆ ಉದ್ದೇಶದಿಂದ ಖರೀದಿ ಮಾಡುತ್ತಿದ್ದರೆ: ಚಿನ್ನದ ಮೇಲಿನ ಹೂಡಿಕೆಯ ಉದ್ದೇಶದಿಂದ ಚಿನ್ನದ ನಾಣ್ಯ ಖರೀದಿಸಲು ಬಯಸುವುದಾದರೆ ನೀವು 24 ಕ್ಯಾರೆಟ್ ಖರೀದಿ ಮಾಡುವುದು ಒಳ್ಳೆಯದು.
ಹೂಡಿಕೆ ದೃಷ್ಟಿಯಿಂದ ಆಭರಣಕ್ಕಿಂತ ನಾಣ್ಯ ಒಳ್ಳೆಯದು ಏಕೆ?
ನಾಣ್ಯ ಖರೀದಿ ಮಾಡಿದಾಗ ಮೇಕಿಂಗ್ ಚಾರ್ಜ್ಮ, ವೇಸ್ಟೇಜ್ ಅಂತ ಇರಲ್ಲ, ನೀವು ನಾಣ್ಯವನ್ನು ಮರಳಿ ಮಾರಾಟ ಮಾಡುವಾಗ ಅಂದಿನ ಚಿನ್ನದ ಬೆಲೆಗೆ ಹಣವನ್ನು ಪಡೆಯಬಹುದು, ಅಲ್ಲದೆ ಇದು ನಮಗೆ ಲಾಭವನ್ನು ತಂದು ಕೊಡುತ್ತದೆ. ಹಾಗಾಗಿ ಹೂಡಿಕೆಯ ದೃಷ್ಟಿಯಿಂದ ನಾಣ್ಯ ಖರೀದಿ ಮಾಡಿದರೆ ಒಳ್ಳೆಯದು.
ಆಭರಣ ಖರೀದಿ ಮಾಡುವುದಾದರೆ
ನೀವು ಆಭರಣ ಖರೀದಿ ಮಾಡುವಾಗ 22 ಕ್ಯಾರೆಟ್ ಅಥವಾ 18 ಕ್ಯಾರೆಟ್ ಖರೀದಿಸಬಹುದು. ಯಾವ ಗ್ರೇಡ್‌ನ ಆಭರಣ ಖರೀದಿಸಬೇಕೆಂಬುವುದು ನಿಮ್ಮ ಆಯ್ಕೆಗೆ ಬಿಟ್ಟದ್ದು. ನಿಮಗೆ ಧರಿಸಲು ಆಭರಣ ನೋಡುತ್ತಿದ್ದೀರಿ, ಗಟ್ಟಿಯಾಗಿರಬೇಕು, ಆಭರಣದ ಗಾತ್ರದ ಕಡೆಗೆ ಕೂಡ ಗಮನಹರಿಸುತ್ತೀರಿ ಎಂದಾದರೆ ನೀವು 18 ಕ್ಯಾರೆಟ್ ಖರೀದಿಸಬಹುದು, ಹಣ ಹೆಚ್ಚು ಕೊಡಲು ಸಿದ್ಧರಿದ್ದೇವೆ ಎಂದರೆ ಅಷ್ಟೇ ಗ್ರಾಂನ ಆಭರಕ್ಕೆ ಬೆಲೆ ಹೆಚ್ಚಾಗುವುದು, ಆಭರಣವನ್ನು ಮಾರಾಟ ಮಾಡುವುದಾಗ 18 ಕ್ಯಾರೆಟ್ ಖರೀದಿಸಿದ್ದರೆ ಆ ಚಿನ್ನ ಆ ಮಾರ್ಕೆಟ್‌ನಲ್ಲಿ ಎಷ್ಟು ಬೆಲೆ ಇದೆಯೋ ಅಷ್ಟು ದೊರೆಯುವುದು. ಆದ್ದರಿಂದ ಬರಿಆಭರಣ ದೃಷ್ಟಿಯಿಂದ ಚಿನ್ನ ಖರೀದಿ ಮಾಡುವುದಾದರೆ ನೀವು ಇದರಲ್ಲಿ 18ಕ್ಯಾರೆಟ್ ಅಥವಾ 22 ಕ್ಯಾರೆಟ್ ಯಾವುದಾದರೂ ಬಳಸಬಹುದು.
ಮನೆಯಲ್ಲಿ ಚಿನ್ನದ ಶುದ್ಧತೆ ಪರಿಶೀಲನೆ ಮಾಡಬಹುದೇ?
ಹೌದು ನೀವು ಚಿನ್ನದ ಶುದ್ಧತೆಯನ್ನು ಅಯಸ್ಕಾಂತ ಪರೀಕ್ಷೆ ಮೂಲಕ ಕೂಡ ಪರಿಶೀಲಿಸಬಹುದು, ನೀವು ಚಿನ್ನವನ್ನು ಅಯಸ್ಕಾಂತ ಬಳಿ ಹಿಡಿದರೆ ಅದು ಅಯಸ್ಕಾಂತಕ್ಕೆ ಅಂಟಿಕೊಂಡಿದ್ದರೆ ಅದು ಶುದ್ಧ ಚಿನ್ನವಲ್ಲ ಎಂದರ್ಥ.



Click it and Unblock the Notifications
