Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ವಿಶ್ವದ ಅತಿ ಎತ್ತರ ಮಹಿಳೆ-ಅತಿ ಕುಳ್ಳ ಮಹಿಳೆ ಭೇಟಿಯಾದಾಗ: ಕ್ಯೂಟ್ ವೀಡಿಯೋ,ಫೋಟೋಗಳು
ವಿಶ್ವದ ಅತಿ ಎತ್ತರದ ಮಹಿಳೆ, ವಿಶ್ವದ ಅತಿ ಗಿಡ್ಡ ಮಹಿಳೆ ಇಬ್ಬರ ಭೇಟಿ ತುಂಬಾನೇ ಚೆನ್ನಾಗಿರುತ್ತದೆ ಅಲ್ವಾ, ಇವರಿಬ್ಬರು ಕಳೆದ ವರ್ಷ ನವೆಂಬರ್‌ನಲ್ಲಿ ಭೇಟಿಯಾಗಿದ್ದರು ಅವರಿಬ್ಬರ ವೀಡಿಯೋ ಕೂಡ ತುಂಬಾನೇ ಗಮನ ಸೆಳೆದಿತ್ತು, ಅಲ್ಲದೆ ಅಷ್ಟೇ ಕ್ಯೂಟ್ ಆಗಿ ಕೂಡ ಇದೆ.

ಇಬ್ಬರೂ ಗಿನ್ನಿಸ್ ರೆಕಾರ್ಡ್ ಮಾಡಿದವರು
ವಿಶ್ವದ ಅತ್ಯಂತ ಎತ್ತರದ ಮಹಿಳೆ ಎಂದು ರುಮೆಯೆಸ್ಸಾ ಗೆಲ್ಗಿ ಹೆಸರು ಮಾಡಿದರೆ ಅತ್ಯಂತ ಗಿಡ್ಡ ಮಹಿಳೆ ಎಂದು ಜ್ಯೋತಿ ಅಮ್ಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ರುಮೆಯೆಸ್ಸಾ ಟರ್ಕಿಯವರು, ಜ್ಯೋತಿ ಅಮ್ಗೆ ಭಾರತದವರು.
ಜ್ಯೋತಿ ಅಮ್ಗೆ, ಇವರು ಡಿಸೆಂಬರ್ 16 , 1993ರಲ್ಲಿ ಜನಿಸಿದರು. ಇವರು ಈ ಪ್ರಪಂಚದಲ್ಲಿರುವ ಅತ್ಯಂತ ಕುಳ್ಳ ಮಹಿಳೆಯಾಗಿದ್ದಾರೆ. ಇವರ ಎತ್ತರವೆಂದರೆ 62.8 cm, ಇವರು ವಂಶವಾಹಿ ಕಾಯಿಲೆ primordial dwarfism ಇದೆ, ಹೀಗಾಗಿ ಇವರು ಎತ್ತರ ಬೆಳೆಯಲೇ ಇಲ್ಲ.
ತನ್ನ ನ್ಯೂನ್ಯತೆಗಳನ್ನೇ ಸಾಧನೆಯಾಗಿ ಮಾಡಿಕೊಂಡ ಗಟ್ಟಿಗಿತ್ತಿ
ತುಂಬಾ ಕುಳ್ಳಿ ಇದ್ದೀನಿ ಎಂದು ಕುಗ್ಗಲಿಲ್ಲ ಬದಲಿಗೆ ಆತ್ಮವಿಶ್ವಾಸದಿಂದ ಈ ಜಗತ್ತನ್ನು ಎದುರಿಸಿದರು. ಈಗ ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ತಮ್ಮ ಬದುಕನ್ನು ತಾವು ರೂಪಿಸಿಕೊಂಡಿದ್ದಾರೆ.
ರುಮೆಯೆಸ್ಸಾ ಜನವರಿ1, 1997 ಟರ್ಕಿಯಲ್ಲಿ ಜನಿಸಿದರು, ಇವರು ಪ್ರಪಂಚದ ಅತಿ ಎತ್ತರದ ಮಹಿಳೆಯಾಗಿದ್ದಾರೆ, ಇವರ ಎತ್ತರ ಅಂದರೆ 215.16 cm (7 ಅಡಿ 0.71 ಇಂಚು), 90 ಕೆಜಿ ತೂಕ ಹೊಂದಿದ್ದಾರೆ. ಇವರ ಕಾಯಿಲೆಯನ್ನು ವೇವರ್ ಸಿಂಡ್ರೋಮ್ ಎಂದು ಕರೆಯಲಾಗುವುದು. ಸಾಮಾನ್ಯ ಮಹಿಳೆಯರಿಗಿಂತ ಇವರು ಮೂರು ಎತ್ತರದ ಮಹಿಳೆ. ಇವರು 2022ರಲ್ಲಿ ಮೊದಲ ಬಾರಿಗೆ ಏರೋಪ್ಲೇನ್‌ನಲ್ಲಿ ಪ್ರಯಾಣ ಮಾಡುತ್ತಾರೆ. ಏರೋಪ್ಲೇನ್‌ನಲ್ಲಿ ಇವರು ಕೂರುವುದಕ್ಕೆ 6 ಚೇರ್ ತೆಗೆದು ಸ್ಟ್ರೆಚರ್ ರೀತಿ ವ್ಯವಸ್ಥೆ ಮಾಡಿ ಕರೆದುಕೊಂಡು ಹೋಗಲಾಯ್ತು.
ಇವರ ಎತ್ತರದ ಕಾರಣ ನಡೆಯುವುದಕ್ಕೆ ಸಪೋರ್ಟ್ ಮಾಡಬೇಕು
ಇವರು ತುಂಬಾ ಎತ್ತರ ಇರುವುದರಿಂದ ಸ್ವತಂತ್ರವಾಗಿ ನಡೆದಾಡುವುದು ಕೂಡ ಕಷ್ಟ, ವಾಕಿಂಗ್ ಸಪೋರ್ಟ್ ತೆಗೆದುಕೊಂಡು ನಡೆಯುತ್ತಾರೆ.
ಅತಿ ಕುಳ್ಳಿ, ಅತಿ ಎತ್ತರ ಮಹಿಳೆ: ಇಬ್ಬರ ಜೋಡಿ ನೋಡಿ ಎಷ್ಟೊಂದು ಕ್ಯೂಟ್ ಆಗಿದೆ
ಇವರಿಬ್ಬರು ಗಿನ್ನಿಸ್ ವರ್ಲ್ ರೆಕಾರ್ಡ್‌ನಲ್ಲಿ 2024ರಲ್ಲಿ ಭೇಟಿಯಾದರು, ಆವಾಗ ತೆಗೆದ ವೀಡಿಯೋ ಈಗಲೂ ನಮ್ಮ ಮುಖದಲ್ಲಿ ನಗು ಮೂಡಿಸುತ್ತೆ. ಆ ಮಹಿಳೆಯ ಮುಖದಷ್ಟೆ ಎತ್ತರದಲ್ಲಿದ್ದಾರೆ ಜ್ಯೋತಿ, ರುಮಯೆಸ್ಸಾ ಜೋರಾಗಿ ಹಿಡಿದರೆ ಜ್ಯೋತಿ ಅಪ್ಪಚ್ಚಿಯಾಗಬಹುದು, ಹಾಗಿದೆ ಇವರಿಬ್ಬರ ಜೋಡಿ.
ಇಬ್ಬರು ಭೇಟಿಯಾದಾಗ ತೆಗೆದ ಸುಂದರ ವೀಡಿಯೋಗಳು ಹಾಗೂ ಫೋಟೋಗಳು ಅವರ ಇನ್‌ಸ್ಟಾ ಖಾತೆಯಲ್ಲಿದೆ, ನೀವು ಕೂಡ ನೋಡಿ ಆನಂದಿಸಿ, ನಮ್ಮ ಮೈನಸ್‌ಗಳನ್ನು ಪ್ಲಸ್ ಮಾಡಿಕೊಂಡವರು ಇವರಿಬ್ಬರು.



Click it and Unblock the Notifications











