Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನೀರಜ್ ಚೋಪ್ರಾ ಸ್ಪರ್ಧೆ ನಡೆಯೋದು ಯಾವಾಗ..? ಮತ್ತೆ ಚಿನ್ನ ತರ್ತಾರಾ ಹೀರೋ
ಪ್ಯಾರಿಸ್ ಒಲಿಂಪಿಕ್‌ನಲ್ಲಿ ಭಾರತಕ್ಕೆ ಒಂದು ಕಂಚು ಪದಕ ಬಂದಿದೆ. ಸದ್ಯ ಮಹಿಳೆಯರ ವಿಭಾಗದ ಶೂಟಿಂಗ್‌ನಲ್ಲಿ ಇದೇ ಮೊದಲ ಬಾರಿಗೆ ಕಂಚಿನ ಪದಕ ಗೆಲ್ಲಲಾಗಿದೆ. ಆದರೆ ಇಂದು (29) ಕೆಲವೇ ಅಂಕಗಳಲ್ಲಿ ಕಂಚಿನ ಪದಕವೂ ಕೃತಪ್ಪಿದೆ. ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಬಬುತಾ 4ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡರು. ಇತ್ತ 10 ಮೀಟರ್ ಮಹಿಳೆಯರ ಏರ್ ರೈಫಲ್ ಸ್ಪರ್ಧೆಯಲ್ಲಿ ಜಿಂದಲ್ 7ನೇ ಸ್ಥಾನಕ್ಕೆ ಕುಸಿದರು. ಹೀಗಾಗಿ ಇಂದು ಪದಕ ನಿರೀಕ್ಷಿಸಲಾಗಿದ್ದ ಈ ಎರಡು ಸ್ಪರ್ಧೆಗಳಲ್ಲಿ ಹಿನ್ನಡೆಯಾಗಿದೆ.
ಸದ್ಯ ಈಗ ಎಲ್ಲರ ಕಣ್ಣು ಆರ್ಚರಿ ಹಾಗೂ ಬ್ಯಾಡ್ಮಿಂಟನ್ ಕ್ರೀಡೆ ಮೇಲೆ ಬಿದ್ದಿದೆ. ಈ ನಡುವೆ ಈ ಬಾರಿ ಚಿನ್ನದ ಪದಕ ಬಂದೆ ಬರುತ್ತದೆ ಎಂದು ಕಾಯುತ್ತಿರುವುದು ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಜಾವಲಿನ್ ಥ್ರೋ ಗಾಗಿ. ಕಳೆದ ಬಾರಿ ಹೊಸ ಇತಿಹಾಸ ಬರೆದಿದ್ದ ನೀರಜ್ ಚೋಪ್ರಾ ಮೇಲೆ ಈ ಬಾರಿಯೂ ಸಹ ಹೆಚ್ಚು ನಿರೀಕ್ಷೆಗಳಿವೆ.

ಹಾಗಾದ್ರೆ ನೀರಜ್ ಚೋಪ್ರಾ ಅವರ ಸ್ಪರ್ಧೆ ಯಾವಾಗ? ನೀರಜ್ ತಮ್ಮ ಜಾವಲಿನ್ ಹಿಡಿದು ಕಣಕ್ಕಿಳಿಯುವುದು ಯಾವಾಗ ಎಂಬುದನ್ನು ಎಲ್ಲರು ಎದುರು ನೋಡುತ್ತಿದ್ದಾರೆ. ಭಾರತೀಯ ಪಡೆ ಜುಲೈ 25 ರಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. 117 ಕ್ರೀಡಾಪಟುಗಳು 16 ಕ್ರೀಡೆಗಳಲ್ಲಿ 69 ಪದಕ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ - ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಜೂಡೋ, ರೋಯಿಂಗ್,ಶೂಟಿಂಗ್, ಈಜು, ಟೇಬಲ್ ಟೆನ್ನಿಸ್ ಮತ್ತು ಟೆನ್ನಿಸ್.
ಆದ್ರೆ ಈಗ ಎಲ್ಲರ ಗಮನ ನೀರಜ್ ಚೋಪ್ರಾ ಅವರ ಮೇಲಿದೆ. ಸದ್ಯ ಅವರು ಆಗಸ್ಟ್ 6ರಂದು ಅರ್ಹತಾ ಸುತ್ತನ್ನು ಆಡಲಿದ್ದಾರೆ. ಬಳಿಕ ಎರಡು ದಿನಗಳ ನಂತರ ಫೈನಲ್ ಆಡಲಿದ್ದಾರೆ. ಹೀಗಾಗಿ ಆಗಸ್ಟ್ 8ರಂದು ಅವರ ಫೈನಲ್ ಥ್ರೋ ನಡೆಯಲಿದೆ, ಈ ಸ್ಪರ್ಧೆ ಮೇಲೆ ಇಡೀ ಭಾರತೀಯರು ಕಣ್ಣೀಟ್ಟಿದ್ದು, ಈ ಬಾರಿಯೂ ಚಿನ್ನ ಗೆಲ್ಲಲಿದ್ದಾರೆ ಎಂದು ಪ್ರತಿಯೊಬ್ಬ ಭಾರತೀಯನು ಕಾತರದಿಂದ ಕಾಯುತ್ತಿದ್ದಾನೆ.
ಇವರ ಜೊತೆ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ವಿಪಿ ಸಿಂಧು ಅವರ ಸ್ಪರ್ಧೆಗಾಗಿಯೂ ಕ್ರೀಡಾಭಿಮಾನಿಗಳು ಕಾಯುತ್ತಿದ್ದು, ಆಗಸ್ಟ್ 5ರ ಒಳಗೆ ಅವರೂ ಸಹ ತಮ್ಮ ಪದಕ ಬೇಟೆಗೆ ಇಳಿಯಲಿದ್ದಾರೆ. ಟೋಕಿಯೊ 2020 ರ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಅವರ ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯನ್ನು ಆಗಸ್ಟ್ 7 ರಂದು ನಿಗದಿಯಾಗಿದೆ.
ಪ್ಯಾರಿಸ್ 2024 ಒಲಿಂಪಿಕ್ಸ್ ಭಾರತದ ನಾಳೆಯ ವೇಳಾಪಟ್ಟಿ
ಜುಲೈ 30, ಮಂಗಳವಾರ
ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಈಜು ಫೈನಲ್ - 12:49 AM
ಮಹಿಳೆಯರ 200 ಮೀ ಫ್ರೀಸ್ಟೈಲ್ ಈಜು ಫೈನಲ್ - 1:11 AM ನಂತರ
ಬಿಲ್ಲುಗಾರಿಕೆ
ಪುರುಷರ ವೈಯಕ್ತಿಕ ಎಲಿಮಿನೇಷನ್ ಸುತ್ತುಗಳು - ಮಧ್ಯಾಹ್ನ 3:30 ರಿಂದ
ಮಹಿಳೆಯರ ವೈಯಕ್ತಿಕ ಎಲಿಮಿನೇಷನ್ ಸುತ್ತುಗಳು - ಮಧ್ಯಾಹ್ನ 3:30 ರಿಂದ
ಬ್ಯಾಡ್ಮಿಂಟನ್
ಪುರುಷರ ಸಿಂಗಲ್ಸ್ ಗುಂಪು ಹಂತ - ಮಧ್ಯಾಹ್ನ 2:30 ರಿಂದ
ಮಹಿಳೆಯರ ಸಿಂಗಲ್ಸ್ ಗುಂಪು ಹಂತ - ಮಧ್ಯಾಹ್ನ 12:00 ರಿಂದ
ಪುರುಷರ ಡಬಲ್ಸ್ ಗುಂಪು ಹಂತ - ಮಧ್ಯಾಹ್ನ 12:50 ರಿಂದ
ಮಹಿಳೆಯರ ಡಬಲ್ಸ್ ಗುಂಪು ಹಂತ - 1:40 PM ನಂತರ
ಶೂಟಿಂಗ್
ಪುರುಷರ ಟ್ರ್ಯಾಪ್ ಅರ್ಹತೆ - ಟಿಬಿಡಿ
ಮಹಿಳೆಯರ ಟ್ರ್ಯಾಪ್ ಅರ್ಹತೆ - ಟಿಬಿಡಿ
ಮಿಶ್ರ ತಂಡ 10m ಏರ್ ಪಿಸ್ತೂಲ್ ಕಂಚಿನ ಪದಕ ಪಂದ್ಯ - 1:00 PM ನಂತರ
ಮಿಶ್ರ ತಂಡ 10 ಮೀ ಏರ್ ಪಿಸ್ತೂಲ್ ಚಿನ್ನದ ಪದಕದ ಪಂದ್ಯ - ಮಧ್ಯಾಹ್ನ 1:30 ರಿಂದ
ಪುರುಷರ ಟ್ರ್ಯಾಪ್ ಫೈನಲ್ - 7:00 PM
ಟೇಬಲ್ ಟೆನ್ನಿಸ
ಮಹಿಳೆಯರ ಸಿಂಗಲ್ಸ್ ಸುತ್ತು 32 - 1:00 PM ನಂತರ
ರೋಯಿಂಗ್
ಪುರುಷರ ಸಿಂಗಲ್ ಸ್ಕಲ್ಸ್ ಕ್ವಾರ್ಟರ್-ಫೈನಲ್ - ಮಧ್ಯಾಹ್ನ 1:40 ರಿಂದ
ಬಾಕ್ಸಿಂಗ್
ಪುರುಷರ 51 ಕೆಜಿ ಸುತ್ತಿನ 16 ರಿಂದ 2:30 ಕ್ಕೆ
ಮಹಿಳೆಯರ 54 ಕೆಜಿ ಸುತ್ತಿನ 16 - 3:50 PM ನಂತರ
ಮಹಿಳೆಯರ 57 ಕೆಜಿ ಸುತ್ತಿನ 32 - 4:38 PM ನಂತರ
ಟೆನಿಸ್
ಪುರುಷರ ಸಿಂಗಲ್ಸ್ ಎರಡನೇ ಸುತ್ತು - ಮಧ್ಯಾಹ್ನ 3:30 ರಿಂದ
ಪುರುಷರ ಡಬಲ್ಸ್ ಕ್ವಾರ್ಟರ್-ಫೈನಲ್ - ಮಧ್ಯಾಹ್ನ 3:30 ರಿಂದ



Click it and Unblock the Notifications