Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಾವಿರ ಕೋಟಿ ದೋಚಿದ ಕಲ್ಕಿ ಒಟಿಟಿಗೆ! ಯಾವಾಗ? ಎಲ್ಲಿ ನೋಡಬಹುದು..!?
ಡಾರ್ಲಿಂಗ್ ಪ್ರಭಾಸ್ ನಟನೆಯ ಕಲ್ಕಿ 2898 AD ಸಿನಿಮಾ ಈ ಬಾರಿಯ ಇಂಡಿಯನ್ ಬಾಕ್ಸ್ ಆಫಿಸ್‌ನಲ್ಲಿ ಕಮಾಲ್ ಮಾಡಿದೆ. ಸಾವಿರ ಕೋಟಿ ದಾಟಿ ದಾಖಲೆಗಳ ಬರೆದಿದೆ. ದೊಡ್ಡ ತಾರಾಗಣ, ಸೈ ಫೈ ಸಿನಿಮಾದಿಂದಾಗಿ ವಿಶ್ವದಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಪ್ರಭಾಸ್ ನಟನೆಯ ಮತ್ತೊಂದು ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿತ್ತು. ಜೊತೆಗೆ ಬಿಗ್ ಬಿ ಅಮಿತಾಬ್ ಬಚ್ಚನ್ ನಟನೆಗೆ ಸಿನಿ ಪ್ರಿಯರು ಫಿದಾ ಆಗಿದ್ದರು.
ಜೂನ್ 20ರಂದು ತೆರೆ ಕಂಡಿದ್ದ ಕಲ್ಕಿ ಸಿನಿಮಾ 2ವಾರಗಳ ಕಾಲ ಸರಾಸರಿ 50 ಕೋಟಿ ರೂಪಾಯಿ ಗಳಿಕೆ ಕಂಡಿತು. ವೇಗವಾಗಿ ಸಾವಿರ ಕೋಟಿ ಕ್ಲಬ್ ಸಹ ಸೇರಿತ್ತು. ಜಾಗತಿಕವಾಗಿ ಸಿನಿಮಾ 1100 ಕೋಟಿ ರೂಪಾಯಿ ಗಳಿಸಿದೆ ಎದು ಸಿನಿಮಾ ತಂಡ ತಿಳಿಸಿದೆ. ಈ ಸಂಖ್ಯೆ ಈಗ ಹೆಚ್ಚಾಗಿರಲೂ ಬಹುದು.

ಈಗ ಕಲ್ಕಿ ಸಿನಿಮಾ ಯಾವಾಗ ಒಟಿಟಿಗೆ ಬರಲಿದೆ ಎಂಬ ಕುತೂಹಲಕ್ಕೆ ಬಹುತೇಕ ತೆರೆಬಿದ್ದಿದೆ. ಈ ದೊಡ್ಡ ತಾರಾಗಣದ ಸಿನಿಮಾವನ್ನು ಅಮೇಜಾನ್ ಪ್ರೈಮ್ ದೊಡ್ಡ ಮೊತ್ತ ನೀಡಿ ಖರೀದಿಸಿತ್ತು. ಅಲ್ಲದೆ ಸಿನಿಮಾ ಬಿಡುಗಡೆಯಾಗಿ 10 ವಾರಗಳ ಬಳಿಕ ಒಟಿಟಿಗೆ ತರುವ ಆಲೋಚನೆಯೂ ಇತ್ತು. ಆದರೆ ಈಗ ಅಂದುಕೊಂಡಿದ್ದಕ್ಕಿಂತ ಬೇಗ ಒಟಿಟಿಯಲ್ಲಿ ಬರುತ್ತಿದೆ ಎಂದು ವರದಿಯಾಗುತ್ತಿದೆ.
ಬಹು ನಿರೀಕ್ಷಿತ ಸೈ ಫೈ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಗಳಿಸಿದೆ ಮತ್ತು ಇದು ಆಗಸ್ಟ್ 23, 2024 ರಂದು ಒಟಿಟಿಯಲ್ಲಿ ಪ್ರದರ್ಶನವಾಗುತ್ತಿದೆ ಎಂದು ವರದಿಯಾಗಿದೆ. ಅಮೇಜಾನ್ ಪ್ರೈಮ್ ಸುಮಾರು 18 ಮಿಲಿಯನ್ ಡಾಲರ್ ನೀಡಿ ಈ ಸಿನಿಮಾದ ಒಟಿಟಿ ಹಕ್ಕು ಖರೀದಿಸಿದೆ ಎಂದು ವರದಿಯಾಗಿದೆ. ಅಂದರೆ ಸುಮಾರು 100 ಕೋಟಿಗೂ ಅಧಿಕ ರೂಪಾಯಿ ನೀಡಿ ಅಮೇಜಾನ್ ಖರೀದಿಸಿದೆ.
ಸದ್ಯ ಇದೇ ಆಗಸ್ಟ್ 23ರಂದು ಅಮೇಜಾನ್‌ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದ್ದು, ಆದರೆ ಅಮೇಜಾನ್ ಪ್ರೈಮ್ ಆಗಲಿ ಅಥವಾ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಆದರೆ ಆಗಸ್ಟ್‌ನಲ್ಲಿ ಸ್ಟ್ರೀಮಿಂಗ್ ಆಗುವುದು ಖಚಿತ ಎನ್ನಲಾಗಿದೆ. ಸದ್ಯ ಕಲ್ಕಿ 2024ರಲ್ಲಿ ತೆರೆಕಂಡು ಅತೀ ಹೆಚ್ಚು ಗಳಿಕೆ ಕಂಡಿರುವ ಭಾರತೀಯ ಸಿನಿಮಾ ಆಗಿದೆ.
ಇತ್ತ ಕಮಲ್ ಹಾಸನ್ ನಟಿಸಿದ್ದ ಇಂಡಿಯನ್ 2 ಬಾಕ್ಸ್ ಆಫಿಸ್‌ನಲ್ಲಿ ಕಮಾಲ್ ಮಾಡುವಲ್ಲಿ ಯಡುವಿತ್ತು, ಇಂಡಿಯನ್ ಮೊದಲ ಭಾಗಕ್ಕಿಂತ ಈ ಸಿನಿಮಾ ಹೆಚ್ಚಿನ ಟೀಕೆಗೆ ಒಳಗಾದ ಸಿನಿಮಾ ಆಗಿದೆ, ಆದರೆ ಈ ಸಿನಿಮಾದ ಒಟಿಟಿ ದಿನಾಂಕ ಸಹ ಹರಿದಾಡುತ್ತಿದೆ. ಇಂಡಿಯನ್ 2 ಸಿನಿಮಾವನ್ನ ನೆಟ್ ಫ್ಲಿಕ್ಸ್ ಖರೀದಿಸಿದ್ದು, ಇದೇ ಆಗಸ್ಟ್ 9ರಂದು ಸ್ಟ್ರೀಮಿಂಗ್ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆ ಬಹುಬೇಗ ಒಟಿಟಿಯಲ್ಲಿ ಪ್ರದರ್ಶನವಾಗುತ್ತಿದೆ ಎಂದು ಹೇಳಲಾಗಿದೆ.
ಇದರ ಜೊತೆ ಬಾಲಿವುಡ್‌ನಲ್ಲಿ ಈ ಬಾರಿ ಸದ್ದು ಮಾಡಿದ್ದ ರಾಘವ್ ಜುಯಾಲ್ ನಟನೆಯ ಕಿಲ್ ಸಿನಿಮಾ ಸಹ ಒಟಿಟಿಗೆ ಬರಲು ಸಿದ್ದವಾಗಿದೆ. ಸ್ಟಾರ್‌ಗಳು ಇಲ್ಲದ ಸಾಮಾನ್ಯರ ಸಿನಿಮಾ ಹಿಂದಿ ಬಾಕ್ಸ್ ಆಫಿಸ್‌ನಲ್ಲಿ ಗೆಲುವು ಕಂಡಿದ್ದಲ್ಲದೆ, ನಟ ರಾಘವ್ ಜುಯಾಲ್ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದರು. ರಿಲೀಸ್ ಮುನ್ನ ಸಿನಿಮಾ ಹಲವು ಪ್ರಶಸ್ತಿಗಳ ಬಾಚಿಕೊಂಡಿತ್ತು. ಈ ಸಿನಿಮಾ ಸಹ ಸೆಪ್ಟೆಂಬರ್ ಮೊದಲ ವಾರದಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.



Click it and Unblock the Notifications


