Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರಂಜಾನ್ ಉಪವಾಸ ಯಾವಾಗ ಆರಂಭ!? ಇಲ್ಲಿದೆ ಪ್ರಮುಖ ನಗರದ ಸೆಹ್ರಿ-ಇಫ್ತಾರ್ ಸಮಯ..!
ಇಸ್ಲಾಂ ಧರ್ಮದ ಪ್ರಮುಖ ಹಾಗೂ ಪವಿತ್ರ ಹಬ್ಬ ರಂಜಾನ್ ಅನ್ನು ಇಡೀ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಮುಸ್ಲಿಂ ಸಮುದಾಯದವರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಹಾಗೆ ಅವರು ತಿಂಗಳ ಕಾಲ ಉಪವಾಸ ಆಚರಿಸುವ ಮೂಲಕ ತ್ಯಾಗ, ಬಲಿದಾನದ ಹಬ್ಬ ಎನಿಸಿಕೊಂಡಿದೆ. ಮುಸ್ಲಿಂ ಸಮುದಾಯದ ಮಂದಿ ಅತ್ಯಂತ ಕಠಿಣ ನಿಯಮಗಳ ಅನುಸಾರ ಈ ಹಬ್ಬ ಆಚರಿಸುತ್ತಾರೆ.
ಆದ್ರೆ ಈ ರಂಜಾನ್ ತಿಂಗಳ ಉಪವಾಸ ಯಾವಾಗಿಂದ ಆರಂಭವಾಗುತ್ತದೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ಯಾಕಂದ್ರೆ ಈ ರಂಜಾನ್ ಉಪವಾಸ ಆರಂಭವಾಗೋದು ಚಂದ್ರನ ದರ್ಶನದಿಂದಾಗಿ. ವಿಶ್ವದ ವಿವಿಧ ಕಡೆಗಳಲ್ಲಿ ಒಂದೊಂದು ದಿನದಂದು ಉಪವಾಸ ಆರಂಭವಾಗುತ್ತದೆ. ಹಾಗಾದ್ರೆ ಯಾವೆಲ್ಲಾ ದೇಶದಲ್ಲಿ ಯಾವಾಗ ಈ ಉಪವಾಸ ಆರಂಭವಾಗುತ್ತೆ ಅನ್ನೋದನ್ನು ತಿಳಿದುಕೊಳ್ಳೋಣ.

ಮಾರ್ಚ್ 1 ರಂದು ಅರ್ಧಚಂದ್ರನನ್ನು ನೋಡಿದ ನಂತರ ರಂಜಾನ್ ತಿಂಗಳು ಆರಂಭವಾಗಲಿದೆ. ಇದು ಸೌದಿ ಅರೇಬಿಯಾ, ಭಾರತ, ಪಾಕಿಸ್ತಾನ, ಯುಎಇ ಯಲ್ಲಿ ಒಂದೇ ದಿನ ಆರಂಭವಾಗಲಿದೆ. ರಂಜಾನ್ ಯಾವಾಗ ನಡೆಯುತ್ತದೆ ಎಂಬುದನ್ನು ನಿರ್ಧರಿಸುವ ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಚಕ್ರಗಳನ್ನು ಆಧರಿಸಿರುವುದರಿಂದ ಚಂದ್ರನ ವೀಕ್ಷಣೆ ಇದಕ್ಕೆ ನೇರವಾಗಿ ಸಂಬಂಧಿಸಿದೆ.
ಹಾಗೆ ರಂಜಾನ್ ಅಂತ್ಯವು ಆಗಸದಲ್ಲಿ ಚಂದ್ರ ದರ್ಶನದಿಂದ ಮುಕ್ತಾಯವಾಗಲಿದೆ. ಇದನ್ನು ಈದ್ ಉಲ್ ಫಿತರ್ ಎಂದು ಕರೆಯಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಫೆಬ್ರವರಿ 28, 2025 ರ ಶುಕ್ರವಾರದಂದು ಚಂದ್ರ ವೀಕ್ಷಣೆ ಆಚರಿಸಲು ಕರೆನೀಡಲಾಗಿದೆ. ಆದ್ರೆ ಈ ದಿನದಂದು ಚಂದ್ರ ದರ್ಶನ ಆಗದಿದ್ದರೆ ಮಾರ್ಚ್ 1 ಅಥವಾ 2ರಿಂದ ಉಪವಾಸ ಆರಂಭವಾಗುತ್ತದೆ.
ಭಾರತದಲ್ಲಿ ಮಾರ್ಚ್ 1 2025 ರ ಶನಿವಾರ ಸಂಜೆ ಚಂದ್ರನ ದರ್ಶನವನ್ನು ನಿರೀಕ್ಷಿಸಲಾಗಿದೆ. ಉಪವಾಸವು ಮಾರ್ಚ್ 2 ಭಾನುವಾರದಂದು ಪ್ರಾರಂಭವಾಗುತ್ತದೆ. ಅಂತಿಮ ನಿರ್ಧಾರ ಸ್ಥಳೀಯ ಚಂದ್ರ ದರ್ಶನ ಸಮಿತಿಗಳು ಮತ್ತು ಇಸ್ಲಾಮಿಕ್ ವಿದ್ವಾಂಸರು ಕೂಡ ಸಮಯ, ದಿನ ನಿಗಧಿ ಮಾಡುತ್ತಾರೆ. ಈ ತಿಂಗಳಲ್ಲಿ ಮುಸ್ಲಿಂ ಸಮುದಾಯ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಉಪವಾಸ ಇರುತ್ತಾರೆ.
ವಿಶ್ವದ ದಕ್ಷಿಣದ ರಾಷ್ಟ್ರಗಳಲ್ಲಿನ ಮುಸ್ಲಿಮರು 12 ಗಂಟೆಗಳ ಕಾಲ ಉಪವಾಸ ಇರುತ್ತಾರೆ, ಉತ್ತರ ರಾಷ್ಟ್ರಗಳಲ್ಲಿ 17 ಗಂಟೆ ಹಾಗೆ ಭಾರತದಲ್ಲಿ ಸುಮಾರು 13ರಿಂದ 14 ಗಂಟೆಗಳ ಕಾಲ ಅವರು ಉಪವಾಸ ಆಚರಿಸುತ್ತಾರೆ.
ರಂಜಾನ್ ಉಪವಾಸದ ತಿಂಗಳು ಅನುಸರಿಸುವವರು ಯಾವ ನಿಯಮ ಅನುಸರಿಬೇಕು
ಮನೆಯಲ್ಲಿರುವ ಚಿಕ್ಕ ಮಕ್ಕಳು ಉಪವಾಸ ಮಾಡುವ ನಿಯಮವಿಲ್ಲ. ಹಾಗೆ ಪ್ರಯಾಣದ ಸಮಯದಲ್ಲಿ, ಅನಾರೋಗ್ಯವಿದ್ದಲ್ಲಿ ಉಪವಾಸ ಮಾಡಬೇಕೆಂದಿಲ್ಲ. ಮುಟ್ಟಿನ ಸಮಯದಲ್ಲಿ ಅಥವಾ ಬಾಣಂತಿಯರು ಉಪವಾಸ ಮಾಡಬೇಕಾಗಿಲ್ಲ. ಎದೆ ಹಾಲು ನೀಡುವ ತಾಯಿ ಕೂಡ ಉಪವಾಸಕ್ಕೆ ಒಳಗಾಗಬೇಕು ಎಂಬ ನಿಯಮವಿಲ್ಲ. ಮನೆಯಲ್ಲಿ ವಯಸ್ಸಾದವರು ಇಚ್ಛೊಸಿದರೆ ಉಪವಾಸ ಮಾಡಬೇಕೆಂದಿಲ್ಲ.
ಭಾರತದ ಪ್ರಮುಖ ನಗರಗಳಲ್ಲಿನ ಸೆಹ್ರಿ-ಇಫ್ತಾರ್ ಸಮಯವು ಇಲ್ಲಿದೆ.
ಮುಂಬೈ ಬೆಳಿಗ್ಗೆ 5:45 ಸಂಜೆ 6:45
ದೆಹಲಿ ಬೆಳಿಗ್ಗೆ 5:28 ಸಂಜೆ 6:23
ಚೆನ್ನೈ ಬೆಳಿಗ್ಗೆ 5:19 ಸಂಜೆ 6:00
ಹೈದರಾಬಾದ್ ಬೆಳಿಗ್ಗೆ 5:32 ಸಂಜೆ 6:02
ಬೆಂಗಳೂರು ಬೆಳಿಗ್ಗೆ 5:30 ಸಂಜೆ 6:14
ಕೋಲ್ಕತ್ತಾ ಬೆಳಿಗ್ಗೆ 4:59 ಸಂಜೆ 5:11



Click it and Unblock the Notifications
