Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ವಿಶ್ವ ತಾಯಂದಿರ ದಿನ ಯಾವಾಗ? ಈ ದಿನದ ಮಹತ್ವವೇನು ಗೊತ್ತಾ?
ಅಮ್ಮ ಎಂದರೆ ಎಲ್ಲರ ಪಾಲಿಗೆ ತುಂಬಾನೇ ವಿಶೇಷವಾದ ವ್ಯಕ್ತಿ, ಆ ದೇವರಿಗೂ ಮಿಗಿಲಾದ ವ್ಯಕ್ತಿಯೆಂದರೆ ಅಮ್ಮ. ಆ ಅಮ್ಮನಿಗಾಗಿಯೇ ಒಂದು ವಿಶೇಷವಾದ ದಿನವಿದೆ. ಮೇ ತಿಂಗಳ ಎರಡನೇ ಭಾನುವಾರದಂದು ಅಮ್ಮಂದಿರ ದಿನ ಆಚರಿಸಲಾಗುವುದು. ಈ ದಿನ ನಮ್ಮೆಲ್ಲರ ಮುದ್ದು ಅಮ್ಮನ ದಿನ. ಅವಳಿಗೆ ಈ ದಿನ ತುಂಬಾ ಸ್ಪೆಷಲ್ ಆಗಿರಬೇಕೆಂದು ನೀವು ಬಯಸುತ್ತಿರಬಹುದು ಅಲ್ವಾ? ಹೆಣ್ಣು ಮಕ್ಕಳಿಗೆ ಅಪ್ಪ ಇಷ್ಟ, ಗಂಡು ಮಕ್ಕಳಿಗೆ ಅಮ್ಮ ಇಷ್ಟ ಎಂದು ಹೇಳುತ್ತಾರೆ ಅದು ಸರಿಯೇ ಆದರೂ ಹೆಣ್ಣು ಮಕ್ಕಳಿಗೆ ಅಮ್ಮನ ಮೇಲಿನ ಪ್ರೀತಿಗೆ ಏನೂ ಕಮ್ಮಿ ಇರಲ್ಲ.
ತಾಯಂದಿರ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ, ತಾಯಂದಿರ ಗೌರವಿಸಲು ಮತ್ತು ಅವರ ಕುಟುಂಬದ ಯಶಸ್ಸಿಗೆ ಅವರು ಮಾಡುವ ತ್ಯಾಗವನ್ನು ಪ್ರಶಂಸಿಸಲು ಈ ದಿನ ಅರ್ಪಿಸಲಾಗಿದೆ. ಅಮ್ಮ ರಂದ ಕೂಡಲೆ ನೆನಪಾಗೋದು ಅವರ ತ್ಯಾಗ. ಮನೆ, ಮಕ್ಕಳು, ಕುಟುಂಬ, ಜೀವನ ಅಂದರೆ ಅವರು ಏನನ್ನೂ ಬಯಸೋದಿಲ್ಲ. ಅವರು ಏನಿದ್ದರೂ ಬೇರೆಯವರಿಗೆ ಮೀಸಲು ಎನ್ನುವಂತಿರುತ್ತೆ.

ಹಾಗಾದರೆ ತಾಯಂದಿರ ದಿನ ವಿಶೇಷವೇನು? ಇದು ಆರಂಭವಾಗಿದ್ದು ಏಕೆ.? ಎಂಬ ಕುರಿತು ಮಾಹಿತಿ ಇಲ್ಲಿದೆ. ಅಮ್ಮ ಎಂಬ ಅಕ್ಷರದಲ್ಲಿರುವ ಆ ಶಕ್ತಿಗೆ ಒಂದು ದಿನ ಮೀಸಲಿಡಲು ಆರಂಭವಾಗಿದ್ದು 1908ರಲ್ಲಿ ಹೌದು ಅಮೆರಿಕದಲ್ಲಿ ಮೊಟ್ಟ ಮೊದಲ ಬಾರಿಗೆ ಈ ತಾಯಂದಿರ ದಿನ ಆರಂಭಗೊಂಡಿತ್ತು. 1914 ರಲ್ಲಿ, ಆಗಿನ ಅಧ್ಯಕ್ಷ ವುಡ್ರೋ ವಿಲ್ಸನ್ ಅಧಿಕೃತವಾಗಿ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಘೋಷಿಸಿದರು. ಅಂದಿನಿಂದ ಮೇ 12 ರಂದು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತಿದೆ.
ತಾಯಂದಿರ ದಿನದ ಮಹತ್ವ ಏನು?
ತಾಯಂದಿರ ದಿನವು ಸಮಾಜಕ್ಕೆ ತಾಯಂದಿರ ಅಮೂಲ್ಯ ಕೊಡುಗೆಗಳನ್ನು ಗುರುತಿಸಲು ಮತ್ತು ಆಚರಿಸಲು ಅವಕಾಶವನ್ನು ನೀಡುವುದರಿಂದ ವಿಶೇಷ ಮಹತ್ವ ಹೊಂದಿದೆ. ತಾಯಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ ಒಂದು ದಿನವನ್ನ ಆಕೆಗಾಗಿ ಮೀಸಲಿಡಬಹುದು. ಆಕೆಯ ಕೆಲಸವನ್ನು ನೆನೆಯಬಹುದು. ವಿಶ್ವದಾದ್ಯಂತ ಈ ದಿನವನ್ನ ತಾಯಂದಿರ ತ್ಯಾಗ ನೆನೆಯಲು ಅರ್ಪಿಸುವುದೇ ಒಂದು ದೊಡ್ಡ ಕೊಡುಗೆ ಎನ್ನಬಹುದು.
ತಾಯಂದಿರು ತಮ್ಮ ಮಕ್ಕಳ ಜೀವನವನ್ನು ರೂಪಿಸುವಲ್ಲಿ, ಮೌಲ್ಯಗಳನ್ನು ತುಂಬುವಲ್ಲಿ, ಬೆಂಬಲವನ್ನು ನೀಡುವಲ್ಲಿ ಮತ್ತು ಬೆಳವಣಿಗೆಯನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅವರ ನಿಸ್ವಾರ್ಥ ಪ್ರೀತಿ ಮತ್ತು ವಾತ್ಸಲ್ಯ ಜೀವನದ ಮೂಲಾಧಾರವಾಗಿದೆ, ಜೊತೆಗೆ ಒಂದು ವಂಶ ಬೆಳವಣಿಗೆಯಾಗಲು. ಒಂದು ಕುಟುಂಬ ಬೆಳೆಯಲು, ಒಬ್ಬ ವ್ಯಕ್ತಿ ಸಾಧನೆ ಮಾಡಬೇಕಾದರೆ ಅಲ್ಲಿ ಹೆಣ್ಣಿನ ರೂಪದಲ್ಲಿ ತಾಯಿ ಇರುತ್ತಾಳೆ.
ತಾಯಂದಿರ ದಿನವು ತಮ್ಮ ಕುಟುಂಬದ ಯೋಗಕ್ಷೇಮ ಮತ್ತು ಸಂತೋಷಕ್ಕಾಗಿ ತೆರೆಮರೆಯಲ್ಲಿ ಕಾಯುತ್ತಾಳೆ. ಅವಳು ಎಂದಿಗೂ ನಿಮ್ಮ ಮುಂದೆ ಆಕೆಯ ಆಸೆ ಆಕಾಂಕ್ಷೆ ವ್ಯಕ್ತಪಡಿಸುವುದಿಲ್ಲ. ತಾಯಂದಿರ ದಿನವು ಸಮಾಜದಲ್ಲಿ ತಾಯಿಯ ವ್ಯಕ್ತಿಗಳ ಪ್ರಾಮುಖ್ಯತೆಯ ವಿಶಾಲವಾದ ಸಾಂಸ್ಕೃತಿಕ ಆಚರಣೆಯಾಗಿ ಕಾರ್ಯನಿರ್ವಹಿಸುತ್ತದೆ.
ತಾಯಂದಿರ ದಿನದಂದು ತಾಯಿಗೆ ಪೂಜೆ ಮಾಡುತ್ತಾರೆ. ಆಕೆಯ ಕಾಲು ತೊಳೆದು ಪೂಜೆ ಮಾಡಬಹುದು. ಇದರ ಜೊತೆ ಆಕೆಗೆ ಒಳ್ಳೆಯ ಗಿಫ್ಟ್‌ಗಳ ನೀಡಬಹುದು. ಅಂದರೆ ಆಕೆಗೆ ಇಷ್ಟವಾಗುವಂತಹ ಹೂವು, ಚಪ್ಪಲಿಗಳು, ಸೀರೆ, ಬಟ್ಟೆ, ಚಿನ್ನದ ಉಂಗುರು, ಬಳೆ ಸೇರಿ ಇನ್ನು ಹಲವು ಉಡುಗೊರೆ ನೀಡಬುಹುದು. ಇದರಿಂದ ನಿಮ್ಮ ತಾಯಿಗೂ ಸಂತಸ ವಾಗಲಿದೆ. ಆದರೆ ತಾಯಿಯಾದವಳು ಯಾವ ಉಡುಗೊರೆಯನ್ನೂ ಬಯಸುವುದಿಲ್ಲ ಅನ್ನೋದನ್ನ ನೆನೆಪಿನಲ್ಲಿಡಿ. ಅಮ್ಮನಿಗೆ ಸಾಟಿ ಅಮ್ಮನೇ...



Click it and Unblock the Notifications