Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿ ರಂಜಾನ್ ಉಪವಾಸ ಯಾವಾಗ ಆರಂಭ.? ಇಲ್ಲಿದೆ ಸೆಹ್ರಿ-ಇಫ್ತಾರ್ ಮಾಹಿತಿ..!
ಇಸ್ಲಾಂನ ಪವಿತ್ರ ಹಬ್ಬ ರಂಜಾನ್ ಆರಂಭಗೊಂಡಿದೆ. ಈ ತಿಂಗಳಿನಿಂದ ಉಪವಾಸ ಆರಂಭವಾಗುತ್ತಿದೆ. ವಿಶ್ವದಾದ್ಯಂತ ಲಕ್ಷ ಲಕ್ಷ ಮುಸ್ಲಿಮರು ಉಪವಾಸ ಆಚರಿಸುತ್ತಾರೆ. 29 ರಿಂದ 30 ದಿನಗಳವರೆಗೆ ರಂಜಾನ್ ಉಪವಾಸ, ಪ್ರಾರ್ಥನೆ, ಆತ್ಮಾವಲೋಕನ ಮತ್ತು ಸಾಮುದಾಯಿಕ ಬಾಂಧವ್ಯದಿಂದ ಗುರುತಿಸಲ್ಪಟ್ಟ ಸಮಯವಾಗಿದೆ.
ಇನ್ನು ಭಾರತ ಸೇರಿ ವಿಶ್ವದ ಪ್ರಮುಖ ದೇಶಗಳಲ್ಲಿ ಮುಸ್ಲಿ ಸಮುದಾಯ ರಂಜಾನ್ ಅನ್ನು ಅತ್ಯಂತ ಪವಿತ್ರ ಹಬ್ಬವಾಗಿ ಆಚರಿಸುತ್ತದೆ. ಭಾರತದಲ್ಲಿ ರಂಜಾನ್ ಉಪವಾಸ ಯಾವಾಗಿಂದ ಆರಂಭ? ಇಫ್ತಾರ್ ಕೂಟ ಸಮಯವೇನು ಎಂಬುದನ್ನು ನಾವಿಂದು ತಿಳಿಯೋಣ. ಈ ತಿಂಗಳಲ್ಲಿ ಮುಸ್ಲಿಂ ಸಮುದಾಯ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಉಪವಾಸ ಇರುತ್ತಾರೆ.

ವಿಶ್ವದ ದಕ್ಷಿಣದ ರಾಷ್ಟ್ರಗಳಲ್ಲಿನ ಮುಸ್ಲಿಮರು 12 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ, ವಿಶ್ವದ ಉತ್ತರದ ರಾಷ್ಟ್ರಗಳಲ್ಲಿರುವವರು 17 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಇನ್ನು ಭಾರತದಲ್ಲೂ ಈ ಉಪವಾಸದ ಸಮಯ ಸುಮಾರು 13 ರಿಂದ 14 ಗಂಟೆ ಎಂದು ಅಂದಾಜಿಸಲಾಗಿದೆ. ಈ ಹಬ್ಬದಂದು ಉಪವಾಸವು ಚಂದ್ರದರ್ಶನದಿಂದ ಆರಂಭವಾಗುತ್ತದೆ.
ಸೌಧಿ ಅರೇಬಿಯಾದಲ್ಲಿ ಚಂದ್ರದರ್ಶನ
ಸೌಧಿ ಅರೇಬಿಯಾದಲ್ಲಿ ನಿನ್ನೆ ಚಂದ್ರದರ್ಶನವಾಗಿದೆ. ಅಂದರೆ ಅಲ್ಲಿ ಇಂದಿನಿಂದಲೇ ಉಪವಾಸ ಆರಂಭಗೊಂಡಿದೆ. ಇದೇ ಸಮಯವನ್ನು ಭಾರತದಲ್ಲಿಯೂ ಆಚರಿಸಲಾಗುತ್ತದೆ. ಹೀಗಾಗಿ 30 ದಿನಗಳ ಬಳಿಕ ಅಂದರೆ ಈದ್ ಅಲ್-ಫಿತರ್ ಆಚರಣೆಯು ಏಪ್ರಿಲ್ 10 ರಂದು ಪ್ರಾರಂಭವಾಗುವ ಸಂಭವವಿದೆ. ಇದೂ ಸಹ ಚಂದ್ರದರ್ಶನದಿಂದಲೇ ಕೊನೆಯಾಗುತ್ತದೆ.
ರಂಜಾನ್ ಉಪವಾಸ ನಿಯಮಗಳು
- ನೀವು ಆರೋಗ್ಯವಂತರಾಗಿದ್ದು ಹದಿ ಹರೆಯದ ಪ್ರಾಯಕ್ಕೆ ಬಂದಿದ್ದರೆ ಉಪವಾಸ ಮಾಡಬೇಕು. ಚಿಕ್ಕ ಮಕ್ಕಳಿಗೆ ಉಪವಾಸವಿಲ್ಲ.
- ನೀವು ಪ್ರಯಾಣ ಮಾಡುವುದಾದರೆ ಅಥವಾ ಆರೋಗ್ಯ ಸರಿಯಿಲ್ಲದಿದ್ದರೆ ಉಪವಾಸ ಮಾಡಬೇಕಾಗಿಲ್ಲ, ಆದರೆ ನಂತರದ ದಿನಗಳಲ್ಲಿ ಮಾಡಬೇಕಾಗುತ್ತದೆ.
- ಮುಟ್ಟಿನ ಸಮಯದಲ್ಲಿ ಅಥವಾ ಬಾಣಂತಿಯರು ಉಪವಾಸ ಮಾಡಬೇಕಾಗಿಲ್ಲ.
- ಎದೆ ಹಾಲುಣಿಸುವ ತಾಯಿ ಬೇಕಾದರೆ ಉಪವಾಸ ಮಾಡದಿರಬಹುದು. ನಂತರ ಬೇಕಾದರೆ ಉಪವಾಸ ಮಾಡಬಹುದು ಅಥವಾ ಫಿದಿಯಾ ಅಂದರೆ ಮಿಸ್ಸಾದ ದಿನಗಳ ಉಪವಾಸ ಮಾಡಬಹುದು.
ಉಪವಾಸದ ಮಹತ್ವ:
ರಂಜಾನ್ ದಿನಾಂಕಗಳು ಪ್ರತಿವರ್ಷ ಬದಲಾಗುತ್ತವೆ ಏಕೆಂದರೆ ಅವು ಚಂದ್ರನ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ. ರಂಜಾನ್ ಅರೇಬಿಕ್ ಪದವಾದ 'ಅರ್-ರಾಮದ್' ನಿಂದ ಹುಟ್ಟಿಕೊಂಡಿದೆ , ಇದರರ್ಥ ಶಾಖವನ್ನು ಸುಡುವುದು. ಈ ಅವಧಿಯಲ್ಲಿಯೇ ಗೇಬ್ರಿಯಲ್ ದೇವತೆ ಕುರಾನ್‌ನ ಮಾತುಗಳನ್ನು ಮುಹಮ್ಮದ್‌ಗೆ ಬಹಿರಂಗಪಡಿಸಿದನೆಂದು ನಂಬಲಾಗಿದೆ. ಇದನ್ನು ನಂಬುವವರು ಉಪವಾಸ ಮಾಡುತ್ತಾರೆ. ಉಪವಾಸವನ್ನು ಮಾಡುವಾಗ ಮುಸ್ಲಿಂರು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ಸಮಯದಲ್ಲಿ ಬಡವರಿಗೆ ದಾನವನ್ನು ಹೆಚ್ಚಾಗಿ ಮಾಡುತ್ತಾರೆ.
ಚಂದ್ರನಿಂದ ರಂಜಾನ್ ಮಾಸದ ಉಪವಾಸದ ಆಚರಣೆಗೆ ಒಂದು ನಿರ್ದಿಷ್ಟ ಪಾತ್ರವಿದೆ. ಮನುಷ್ಯನು ಪ್ರಾಪಂಚಿಕ ವಿನೋದಗಳಿಂದ ದೂರವಿದ್ದು, ತನ್ನನ್ನು ತಾನೇ ಅರಿತುಕೊಳ್ಳುವುದಕ್ಕೆ ರಂಜಾನ್ ಒಂದು ಸಮಯವಾಗಿದೆ. ರಂಜಾನ್ ಉಪವಾಸ ಮಾಡುವುದು ದೇವರಿಗೋಸ್ಕರ ಮಾತ್ರವೇ ಅಲ್ಲ, ಅದು ನಮಗಾಗಿ ಸುಧಾರಿಸಲೂ ಹೌದು. ಇದು ವಾಸ್ತವವಾಗಿ ಪ್ರತಿ ಮನುಷ್ಯನೂ ಅಜ್ಞಾನದ ಅಂಧಕಾರದಿಂದ ನಿಜವಾದ ಜ್ಞಾನದ ಬೆಳಕಿನೆಡೆಗೆ ತೆರಳಲು ಅನುಸರಿಸುವ ಒಂದು ರೀತಿಯ ಜೀವನದ ದಾರಿಯಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿನ ಸೆಹ್ರಿ-ಇಫ್ತಾರ್ ಸಮಯವು ಇಲ್ಲಿದೆ.
- ಬೆಂಗಳೂರು: ಸೆಹ್ರಿ- ಬೆಳಗ್ಗೆ 05:19-ಇಫ್ತಾರ್- ಸಂಜೆ 06:31
- ಅಹಮದಾಬಾದ್: ಸೆಹ್ರಿ-ಬೆಳಗ್ಗೆ 05:38- ಇಫ್ತಾರ್- ಸಂಜೆ 06:47
- ಚೆನ್ನೈ: ಸೆಹ್ರಿ-ಬೆಳಗ್ಗೆ 05:08-ಇಫ್ತಾರ್- ಸಂಜೆ 06:20
- ದೆಹಲಿ: ಸೆಹ್ರಿ- ಬೆಳಗ್ಗೆ 05:18- ಇಫ್ತಾರ್- ಸಂಜೆ-06-27
- ಹೈದರಾಬಾದ್: ಸೆಹ್ರಿ-ಬೆಳಗ್ಗೆ 05:16- ಇಫ್ತಾರ್-ಸಂಜೆ 06:26
- ಕೋಲ್ಕತ್ತಾ: ಸೆಹ್ರಿ-ಬೆಳಗ್ಗೆ- 04:35, ಇಫ್ತಾರ್- ಸಂಜೆ 05:45
- ಮುಂಬೈ: ಸೆಹ್ರಿ-ಬೆಳಗ್ಗೆ 05:38, ಇಫ್ತಾರ್- ಸಂಜೆ- 06:48



Click it and Unblock the Notifications