Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಆ್ಯಪಲ್‌ನ ಈ ವರ್ಶನ್ ಸೇರಿ ಸುಮಾರು 35 ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಲಿದೆ
ವ್ಯಾಟ್ಸಾಪ್ ಇಲ್ಲದೆ ಜೀವನ ಮುಂದೆ ಸಾಗದಷ್ಟು ಅವಲಂಬಿತರಾಗಿದ್ದೇವೆ. ಆದರೆ ಶೀಘ್ರದಲ್ಲೇ 35 ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ. ಈ 35 ಫೋನ್ ಯಾವುದು? ನಿಮ್ಮ ಫೋನ್ ಈ ಲಿಸ್ಟ್‌ನಲ್ಲಿದೆಯಾ ಚೆಕ್ ಮಾಡಿ.
ವಾಟ್ಸಾಪ್ ನೋಡದೆ ಒಂದು ದಿನ ಕಳೆದಿದ್ದೇವೆ ಎಂದರೆ ಅದುವೇ ದೊಡ್ಡ ಸಾಧನೆ, ಹಾಗಾಗಿದೆ ನಮ್ಮ ಬದುಕು. ವಾಟ್ಸಾಪ್ ಮೂಲಕವೇ ನಾವು ಮಾತನಾಡುತ್ತೇವೆ, ವೀಡಿಯೋ ಕಾಲ್ ಮಾಡುತ್ತೇವೆ, ಆಫೀಸ್ ಕೆಲಸಕ್ಕೆ ಅಂತ ವಾಟ್ಸಾಪ್ ಗ್ರೂಪ್ ಇರುತ್ತದೆ, ಎಷ್ಟೋ ಜನ ತಮ್ಮ ಬ್ಯುಸ್‌ನೆಸ್ ವ್ಯವಹಾರವನ್ನು ಕೂಡ ವಾಟ್ಸಾಪ್ ಮೂಲಕ ಕಳುಹಿಸುತ್ತಾರೆ.

ನ್ಯೂಸ್‌ಗಳು ವಾಟ್ಸಾಪ್ ಮೂಲಕ ಬರುತ್ತದೆ, ಹೀಗೆ ವಾಟ್ಸಾಪ್ ಅನ್ನು ನಾವು ಅನೇಕ ರೀತಿಯಲ್ಲಿ ಬಳಸುತ್ತಿರುತ್ತೇವೆ. ಹೀಗಾಗಿ ಫೋನ್ ಇರದೆ ಇರಲಿಕ್ಕೆ ಆಗುತ್ತಿಲ್ಲ, ಫೋನ್ ಇದ್ದರೆ ಅದರಲ್ಲಿ ನೆಟ್ ಇರಬೇಕು, ವಾಟ್ಸಾಪ್ ಇರಲೇಬೇಕು ಎಂಬಂತಾಗಿದೆ. ಹೀಗಿರುವಾಗ ಕೆಲವು ಮೊಬೈಲ್‌ಗಳಲ್ಲಿ ವಾಟ್ಸಾಪ್ ಸ್ಥಗಿತವಾಗುತ್ತಿದೆ.
ಹಲವು ಫೋನ್‌ಗಳಲ್ಲಿ ವಾಟ್ಸಾಪ್ ಬಂದ್ ಆಗುತ್ತಿದೆ
ಅತಿ ಶೀಘ್ರದಲ್ಲೇ 35 ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಣೆ ಪೂರ್ಣಗೊಳ್ಳಲಿದೆ. ಸ್ಯಾಮ್‌ಸಂಗ್, ಮೊಟೊರೊಲಾ, ಆ್ಯಪಲ್,ಸೋನಿ, ಎಲ್‌ಜಿ ಸೇರಿದಂತೆ ಹಲವು ಮೊಬೈಲ್‌ಗಳಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಲಿದೆ. ವ್ಯಾಟ್ಸಾಪ್ ಹೊಸ ಸುರಕ್ಷತಾ ಫೀಚರ್ಸ್ ಪರಿಚಯ ಮಾಡಿದೆ, ಹೀಗಾಗಿ ಈ ಕಂಪನಿಯ ಹಳೆಯ ಫೋನ್‌ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ.
ವಾಟ್ಸಾಪ್ ತನ್ನ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಹೀಗಾಗಿ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಆ್ಯಪ್ ವರ್ಕ್ ಆಗಲ್ಲ, ಆ್ಯಂಡ್ರಾಯ್ಡ್ 5.0 ವರ್ಶನ್, ಆ್ಯಪಲ್ ಐಫೋನ್ iOS 12 ಈ ವರ್ಶನ್ ಫೋನ್‌ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ.
ಯಾವೆಲ್ಲಾ ಫೋನ್‌ಗಳಲ್ಲಿ ವರ್ಕ್ ಆಗಲ್ಲ?
ಗ್ಯಾಲಸ್ಕಿ ಎಸ್3 ಮಿನಿ, ಗ್ಯಾಲಕ್ಸಿ ಎಸ್4 ಮಿನಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3, ಮೋಟೋ ಎಕ್ಸ್, ಆ್ಯಪಲ್ ಬ್ರ್ಯಾಂಡ್‌ನ ಐಫೋನ್ 6, ಮೋಟೊರೋಲಾ ಮೋಟೋ ಜಿ, ಐಫೋನ್ ಎಸ್‌ಇ ಹೀಗೆ ಹಳೆಯ ವರ್ಶನ್‌ನ ಹಲವು ಮೊಬೈಲ್‌ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ. ಹೀಗಾಗಿ ಈ ವರ್ಶನ್ ಫೋನ್ ಇರುವವರು ಹೊಸ ವರ್ಶನ್ ಮೊಬೈಲ್ ತೆಗೆದುಕೊಳ್ಳಬೇಕು.
ಯಾವೆಲ್ಲಾ ಮೊಬೈಲ್‌ಗಳಲ್ಲಿ ವಾಟ್ಸಾಪ್ ಇರಲ್ಲ?
ಸ್ಯಾಮ್‌ಸಂಗ್‌ನ ಈ ಮೊಬೈಲ್‌ಗಳಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳಲಿದೆ
ಗ್ಯಾಲಕ್ಸಿ ನೋಟ್ 3, ಗ್ಯಾಲಕ್ಸಿ ಎಸ್3 ಮಿನಿ, ಗ್ಯಾಲಕ್ಸಿ ಎಸ್4 ಆ್ಯಕ್ಟೀವ್, ಗ್ಯಾಲಕ್ಸಿ ಎಸ್4 ಮಿನಿ, ಗ್ಯಾಲಕ್ಸಿ ಎಸ್4 ಝೂಮ್ , ಗ್ಯಾಲಸ್ಕಿ ಏಸ್ ಪ್ಲಸ್,ಗ್ಯಾಲಕ್ಸಿ ಕೋರ್, ಗ್ಯಾಲಕ್ಸಿ ಎಕ್ಸ್‌ಪ್ರೆಸ್ 2, ಗ್ಯಾಲಕ್ಸಿ ಗ್ರ್ಯಾಂಡ್ .
ಆ್ಯಪಲ್
ಐಫೋನ್5, ಐಫೋನ್ 6, ಐಫೋನ್ 6ಎಸ್, ಐಫೋನ್ 6ಎಸ್ ಪ್ಲಸ್, ಐಫೋನ್ ಎಸ್‌ಇ.
ಹುವೈ
ಆ್ಯಸೆಂಡ್ ಪಿ6 ಎಸ್, ಆ್ಯಸೆಂಡ್ ಜಿ525, ಹುವೈ ಸಿ199, ಹುವೈ ಜಿಎಕ್ಸ್1ಎಸ್, ಹುವೈ ವೈ625
ಲೆನೊವೊ
ಲೆನೊವೊ 46600, ಲೆನೊವೊ ಎ858ಟಿ, ಲೆನೊವೊ ಪಿ70, ಲೆನೊವೊ ಎಸ್890
ಸೋನಿ
Xಪೆರಿಯಾ Z1, Xಪೆರಿಯಾ ಇ3
ಎಲ್‌ಜಿ: ಆಪ್ಟಿಮಸ್ 4X HD, ಆಪ್ಟಿಮಸ್ ಜಿ, ಆಪ್ಟಿಮಸ್ ಜಿ ಪ್ರೊ, ಆಪ್ಟಿಮಸ್ ಎಲ್7



Click it and Unblock the Notifications
