Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೊದಲ ಬಾರಿಗೆ ವಾಟ್ಸಾಪ್‌ನಲ್ಲೂ ಜಾಹೀರಾತು..! ಚಾನಲ್‌ಗಳಿಗೆ ಶುಲ್ಕ ಪಾವತಿ
ಈಗ ಸ್ಮಾರ್ಟ್ ಫೋನ್ ಹೊಂದಿರುವ ಬಹುತೇಕ ಮಂದಿ ಇಂಟರ್‌ನೆಟ್ ಬಳಸುತ್ತಾರೆ. ಅದ್ರಲ್ಲೂ ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿದೆ. ಬಹುತೇಕರು ಇಂದು ವಾಟ್ಸಾಪ್, ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್ ಸೇರಿ ಹತ್ತು ಹಲವು ಸೋಶಿಯಲ್ ಮೀಡಿಯಾ ಸೈಟ್‌ಗಳ ಬಳಸುತ್ತಾರೆ. ಹಾಗೆ ಭಾರತ ಈಗ ಡಿಜಿಟಲ್ ಪಾವತಿಯಲ್ಲೂ ಮುಂದಿದೆ. ಇದಕ್ಕೆಲ್ಲ ಸ್ಮಾರ್ಟ್ ಫೋನ್ ಬಳಸುವುದು ಕಾಮನ್ ಆಗಿದೆ.
ಹಾಗೆ ಬಹುತೇಕರು ತನ್ನ ವೈಯಕ್ತಿಕ ವಿಚಾರಗಳು ಹಾಗೆ ಔದ್ಯೋಗಿಕ ವಿಚಾರವಾಗಿ ವಾಟ್ಸಾಪ್ ಬಳಸುವುದು ನೋಡಬಹುದು. ಭಾರತದಲ್ಲಿ ಕೋಟಿಗೂ ಅಧಿಕ ಮಂದಿ ವಾಟ್ಸಾಪ್ ಬಳಕೆದಾರರಿದ್ದಾರೆ. ಸದ್ಯ ನೀವು ಕೂಡ ವರ್ಷಗಳಿಂದಲೂ ವಾಟ್ಸಾಪ್ ಬಳಸುತ್ತಾ ಬಂದಿರಬಹುದು. ಹಾಗೆ ಅದು ಕಾಲ ಕಾಲಕ್ಕೆ ಅಪ್‌ಡೇಟ್ ಆಗಿ ಸಾಕಷ್ಟು ಬದಲಾವಣೆ ಆಗಿರುವುದು ಸಹ ನೋಡಿರಬಹುದು.

ಇನ್ನು ವಾಟ್ಸಾಪ್ ಅನ್ನು ಮೆಟಾ ಖರೀದಿಸಿ ತನ್ನ ಸಂಸ್ಥೆಯನ್ನಾಗಿ ಮಾಡಿಕೊಂಡ ಬಳಿಕ ಅದನ್ನು ಆದಾಯ ಗಳಿಕೆಯ ಕಂಪನಿಯನ್ನಾಗಿ ಮಾರ್ಪಡಿಸಲು ಮೆಟಾ ಮುಂದಾಗಿದೆ. ಹೀಗಾಗಿ ಇದೇ ಮೊದಲ ಬಾರಿಗೆ ವಾಟ್ಸಾಪ್‌ನಲ್ಲಿ ಜಾಹೀರಾತುಗಳ ನೀಡಲು ಮುಂದಾಗಲಾಗಿದೆ. ನೀವು ಇಷ್ಟು ಸಮಯ ಉಚಿತವಾಗಿ ಹಾಗೆ ಜಾಹೀರಾತು ರಹಿತ ವಾಟ್ಸಾಪ್ ಬಳಕೆ ಮಾಡಿದ್ದೀರಿ. ಆದ್ರೆ ಇನ್ನು ಮುಂದೆ ಇದು ಬದಲಾಗಲಿದೆ.
ಮುಂದಿನ ದಿನಗಳಲ್ಲಿ ಮೆಟಾ ತನ್ನ ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಜಾಹಿರಾತು ಹಾಗೂ ಚಂದಾದಾರಿಕೆ ವ್ಯವಸ್ಥೆ ಜಾರಿಗೆ ತರಲು ಮುಂದಾಗಲಿದೆ. ಸದ್ಯಕ್ಕೆ ವಾಟ್ಸಾಪ್‌ನಲ್ಲಿ ಕಂಪನಿಗಳು ಜಾಹೀರಾತುಗಳ ನೀಡುತ್ತಿವೆ. ನಿಮ್ಮ ನಂಬರ್‌ಗೆ ಹಲವು ಕಂಪನಿಗಳು ತಮ್ಮ ಉತ್ಪನ್ನಗಳ ಕುರಿತಾದ ಜಾಹೀರಾತನ್ನು ನೀಡುತ್ತಿವೆ.
ಆದ್ರೆ ಇನ್ಮುಂದೆ ಸ್ಟೇಟಸ್ ಹಾಗೂ ಚಾನಲ್ ಟ್ಯಾಬ್‌ನಲ್ಲೂ ಜಾಹೀರಾತುಗಳು ಕಾಣಿಸಿಕೊಳ್ಳಲಿದೆಯಂತೆ. ಸ್ಟೇಟಸ್ ಬಾರ್‌ನ ನಡುವೆ ಒಂದು ಜಾಹೀರಾತು ಪ್ರಸಾರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಈ ರೀತಿಯ ವ್ಯವಸ್ಥೆಯನ್ನು ನೀವು ಫೇಸ್‌ಬುಕ್‌ನಲ್ಲಿ ನೋಡಿರಬಹುದು, ಸ್ಟೋರಿ ಫೀಡ್‌ನಲ್ಲಿ ಒಂದು ಫೀಡ್ ಸಂಪೂರ್ಣ ಜಾಹೀರಾತುಗಳಿಂದ ತುಂಬಿರಲಿದೆ. ಇದೇ ರೀತಿಯಾಗಿ ವಾಟ್ಸಾಪ್‌ನಲ್ಲು ಜಾರಿ ಮಾಡಲು ಮೆಟಾ ನಿರ್ಧರಿಸಿದೆ.
ಹಾಗೆ ಚಂದಾದಾರಿಕೆ ವ್ಯವಸ್ಥೆ ಜಾರಿಗೆ ಮೆಟಾ ಮುಂದಾಗಿದ್ದು, ಶುಲ್ಕ ಭರಿಸುವ ಅವಕಾಶ ಕೂಡ ನೀಡಲಿದೆ. ಹೀಗೆ ಕ್ರಮೇಣ ಜಾಹೀರಾತು ಮೂಲಕ ಹಣ ಗಳಿಕೆ ಮಾಡುವ ವೇದಿಕೆಯಾಗಿ ಬದಲಾಗುವ ಸಾಧ್ಯತೆ ಇದೆ. ಸದ್ಯ ಈಗ 1.5 ಬಿಲಿಯನ್ ದೈನಂದಿನ ಬಳಕೆದಾರರನ್ನು ವಾಟ್ಸಾಪ್ ಹೊಂದಿದೆ.
ಬಳಕೆದಾರರು 24 ಗಂಟೆಯಲ್ಲಿ ನೋಡುವಂತಹ ಸ್ಟೋರಿಸ್ ಹಾಗೆ ಜಾಹೀರಾತು ಕೂಡ 24 ಗಂಟೆಗಳ ಕಾಲ ಕಾಣಿಸಿಕೊಳ್ಳುವ ಈ ಟ್ಯಾಬ್‌ನಲ್ಲಿ ಇರಲಿದೆ. ಹಾಗೆ ನಿಮ್ಮ ವೈಯಕ್ತಿಕ ಸಂದೇಶ ಹಾಗೂ ಗ್ರೂಪ್ ಟ್ಯಾಬ್‌ನಲ್ಲಿ ಯಾವುದೇ ಜಾಹೀರಾತು ಕಾಣಿಸಿಕೊಳ್ಳುವುದಿಲ್ಲ ಎಂದು ಮೆಟಾ ಸ್ಪಷ್ಟಪಡಿಸಿದೆ.
ಜಾಹೀರಾತುಗಳ ಹೊರತಾಗಿ ಚಾನಲ್‌ಗಳಿಗೆ ಚಂದಾದಾರಿಕೆ ಮಾದರಿಯನ್ನು ಸಹ ಪರಿಚಯಿಸುತ್ತಿದೆ. ಬಳಕೆದಾರರು ತಮ್ಮ ನೆಚ್ಚಿನ ಚಾನಲ್‌ಗಳಿಂದ ವಿಶೇಷ ಕಂಟೆಂಟ್ ಪಡೆದುಕೊಳ್ಳಲು ನೀವು ಶುಲ್ಕ ಪಾವತಿಸಬೇಕಾಗುತ್ತದೆ. ನಿಮ್ಮ ಭಾಷೆ, ವಾಸ ಸ್ಥಳ, ನಗರ ಹೀಗೆ ಕೆಲವು ವಿಚಾರ ಆಧಾರದ ಮೇಲೆ ನಿಮಗೆ ವೈಯಕ್ತೀಕರಿಸಿದ ಜಾಹೀರಾತು ನೀಡಲಿದೆ. ಒಂದು ವೇಳೆ ನೀವು ವಾಟ್ಸಾಪ್ ಅನ್ನು ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್ ಖಾತೆಗಳಿಗೆ ಲಿಂಕ್ ಮಾಡಿದ್ದರೆ ನೀವು ಅಲ್ಲಿ ನೋಡುವ ಜಾಹೀರಾತನ್ನೇ ಇಲ್ಲಿಯೂ ನೋಡಬಹುದು.
ಹಾಗೆ ಮೆಟಾ ನಿಮ್ಮ ಮೊಬೈಲ್ ಸಂಖ್ಯೆ ಆಧಾರವಾಗಿ ಜಾಹೀರಾತು ನೀಡುವುದಿಲ್ಲ ಎಂದು ಹೇಳಿದೆ. ಫೋನ್ ಸಂಖ್ಯೆಗಳನ್ನು ಹಂಚಿಕೊಳ್ಳುವುದಿಲ್ಲ ಅಥವಾ ಮಾರಾಟ ಮಾಡುವುದಿಲ್ಲ ಎಂದು ಒತ್ತಿ ಹೇಳಿದೆ. ಹಾಗೆ ಎಲ್ಲಾ ಸಂದೇಶಗಳು ಎನ್‌ಕ್ರಿಪ್ಟ್ ಆಗಿರಲಿದೆ ಎಂದು ತಿಳಿಸಿದೆ.



Click it and Unblock the Notifications
