ನೀವು ಯಾವ ರೀತಿಯ ಮುಖ ಲಕ್ಷಣ ಹೊಂದಿದ್ದೀರಿ? ನಿಮ್ಮ ರಹಸ್ಯಗಳ ನಾವು ನಿಮಗೆ ಹೇಳುತ್ತೇವೆ.!!

ಭೂಮಿ ಮೇಲಿನ ಪ್ರತಿಯೊಬ್ಬ ವ್ಯಕ್ತಿ ಕೂಡ ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ. ಒಬ್ಬರ ವ್ಯಕ್ತಿತ್ವವು ಅವರ ಗುಣಗಳು, ಜೀವನ ನಿರ್ಧರಿಸುತ್ತವೆ. ಹಾಗೆ ನಾವು ಒಬ್ಬರ ಗುಣಗಳನ್ನು ಅವರ ನಡತೆಯ ಆಧಾರದ ಮೇಲೆ ಗುರುತಿಸಬಹುದು. ಹಾಗೆ ನಿಮ್ಮ ದೇಹದ ಹಲವು ಆಕಾರಗಳು ನಿಮ್ಮ ಗುಣಗಳ ಹೇಳುತ್ತವೆ ಎಂಬುದು ನಿಮಗೆ ಗೊತ್ತಾ?

ನಿಮ್ಮ ಬೆರಳುಗ ಗಾತ್ರ, ಹಸ್ತ ರೇಖೆ, ಪಾದ, ಹೀಗೆ ಹಲವು ಅಂಶಗಳಿಂದ ನಿಮ್ಮ ಗುಣಗಳನ್ನು ಹೇಳಬಹುದು. ಹಾಗೆ ನಿಮ್ಮ ಮುಖದ ರಚನೆಯು ಕೂಡ ನಿಮ್ಮ ಗುಣವನ್ನು ಹೇಳಲಿದೆ. ನೀವು ಯಾವ ರೀತಿಯ ಮುಖ ಲಕ್ಷಣ ಹೊಂದಿದ್ದೀರಿ ಎಂಬುದರ ಮೇಲೆ ನಿಮ್ಮ ಗುಣಗಳ್ನು ಪಟ್ಟಿ ಮಾಡಬಹುದು. ಮುಖ ನೋಡಿ ಭವಿಷ್ಯ ಹೇಳುವುದು ಹೇಗೋ ಅದೇ ರೀತಿ ಒಬ್ಬರ ಮುಖ ಲಕ್ಷಣವು ಅವರ ಗುಣಗಳಿಗೆ ಹಿಡಿದ ಕನ್ನಡಿಯಾಗಿರಲಿದೆ.

What s Your Face Shape tells About Your Personality

ಒಬ್ಬರ ದೇಹದ ಭಾಗಗಳ ಆಕಾರ ಮತ್ತು ಗಾತ್ರವು ಒಬ್ಬರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಬಹಿರಂಗಪಡಿಸುತ್ತದೆ. ಅದರಲ್ಲಿ ಮುಖದ ಲಕ್ಷಣ ಕೂಡ ಒಂದಾಗಿದೆ. ಹಾಗಾದ್ರೆ ಈ ಮೇಲಿನ ಚಿತ್ರದಲ್ಲಿರುವಂತೆ ಮುಖಭಾವ ಇದ್ದರೆ ಅವರ ವ್ಯಕ್ತಿತ್ವ ಎಂತಹದ್ದಾಗಿದೆ. ಮುಖದ ಹಿಂದೆ ಅಡಗಿರುವ ಗುಣ ಎಂಹದ್ದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ವೃತ್ತಾಕಾರದ ಮುಖ

ನಿಮ್ಮ ಮುಖವು ದುಂಡಾಕಾರವಾಗಿದ್ದರೆ ನಿಮ್ಮ ಗುರಿ ಸಾಧಿಸುವಲ್ಲಿ ನೀವು ಕಠಿಣ ಪರಿಶ್ರಮ ಮತ್ತು ಮಹತ್ವಾಕಾಂಕ್ಷೆ ಹೊಂದಿರುತ್ತೀರಿ ಎಂದರ್ಥವಂತೆ. ಎಂತಹ ಸವಾಲಿನ ಸಂದರ್ಭದಲ್ಲಿಯೂ ನೀವು ದೃತಿಗೆಡದೆ ಅಂತಹ ಕಠಿಣ ಸವಾಲುಗಳನ್ನು ಎದುರಿಸುವಂತಹ ಮನೋಭಾವದವರು. ನಿಮ್ಮಲ್ಲಿ ನಾಯಕತ್ಬದ ಗುಣ ಇರುವುದರಿಂದ ದೊಡ್ಡ ಹುದ್ದೆಗಳು, ಹೆಚ್ಚು ಜವಾಬ್ದಾರಿಗಳು, ಮೇಲ್ವಿಚಾರಣೆಯಂತಹ ಕೆಲಸಗಳು ನಿಮಗೆ ಸುಲಭವಾಗಿರುತ್ತದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಏರುಪೇರು ಇದ್ದರೂ ಕೂಡ ನಿಮ್ಮ ನಿಲುವುಗಳಿಂದ ಅಧ್ಬುತ ಜೀವನಕ್ಕೆ ಕಾರಣರಾಗುತ್ತೀರಿ. ನಿಮ್ಮ ಕೆಲಸ ಕಾರ್ಯಗಳನ್ನು ನೀವು ಸರಿಯಾದ ಸಮಯಕ್ಕೆ ಮುಗಿಸುವುದು, ನಿಮಗೆ ನೀವೇ ಕೆಲವು ನಿಯಮಗಳ ಹಾಕಿಕೊಳ್ಳುವುದು ನೋಡಬಹುದು.

ಅಗಲವಾದ ಮುಖ

ನಿಮ್ಮ ಮುಖದ ಚಿತ್ರಣವು ಮೇಲಿನ ಚಿತ್ರದಲ್ಲಿ ಇರುವಂತೆ ಅಗಲವಾಗಿದ್ದರೆ ನೀವು ಅಚಲ ಮನೋಭಾವದವರು, ನೀವು ಹಿಡಿದ ಕೆಲಸ ಪಟ್ಟು ಬಿಡದೆ ಮಾಡುವಂತಹ ಧೈರ್ಯ ಹೊಂದಿರುವವರು. ಕೆಲಸವನ್ನಷ್ಟೇ ನೋಡುವವರು ಅದರಿಂದ ಬರುವ ಫಲಿತಾಂಶದ ಕಡೆಗೆ ಹೆಚ್ಚು ಗಮನನೀಡುವುದಿಲ್ಲ. ನಿಮ್ಮಲ್ಲಿ ಹೆಚ್ಚು ಕ್ರಿಯಾಶೀಲತೆ, ಬುದ್ದಿವಂತಿಕೆ ಇರಲಿದೆ. ಕೆಲಸವಿಲ್ಲದೆ ಸುಮ್ಮನೆ ಕೂರಲು ಇಷ್ಟಪಡುವುದಿಲ್ಲ.ನೀವು ಸಮಸ್ಯೆಯ ಬಗ್ಗೆ ತ್ವರಿತ ಮತ್ತು ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಕಷ್ಟಕರ ಸಂದರ್ಭಗಳಲ್ಲಿ ಶಾಂತವಾಗಿ ಪರಿಹರಿಸಲು ನೀವು ಇಷ್ಟಪಡುತ್ತೀರಿ.

ಕೋಲು ಮುಖ ಹೊಂದಿರುವವರು

ನೀವು ಕೋಲು ಮುಖ ಭಾವ ಹೊಂದಿದ್ದರೆ ನಿಮಗೆ ಧೈರ್ಯ ಹೆಚ್ಚು. ಹಾಗೆ ಪ್ರತ್ಯಕ್ಷವಾಗಿ ನೋಡಿದರೂ ಪ್ರಾಮಾಣಿಸಿ ನೋಡು ಎಂಬ ವರ್ಗಕ್ಕೆ ಸೇರಿದವರು. ಬಹಳ ಸುಲಭವಾಗಿ ಯಾರನ್ನೂ ನೀವು ನಂಬುವುದಿಲ್ಲ. ಯಾವುದೇ ಕೆಲಸಕ್ಕೆ ಕೈಹಾಕಿದರು ಹತ್ತು ಬಾರಿ ಆಲೋಚಿಸಿ ಅದನ್ನು ಮುನ್ನಡೆಸುವವರು. ಎಲ್ಲಾ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳಲು ನೀವು ಬಯಸುತ್ತೀರಿ. ಯಾರೊಂದಿಗೂ ಹೆಚ್ಚು ಬೆರೆಯಲು ಇಷ್ಟಪಡದೆ ನಿಮ್ಮ ನಿಯಮಗಳ ಒಳಗೆ ಬದುಕಲು ಇಷ್ಟಪಡುತ್ತೀರಿ. ಬೇರೆಯವರಿಗಿಂತ ಸ್ವಲ್ಪ ಭಿನ್ನವಾಗಿ ಪ್ರಪಂಚವನ್ನು ನೀವು ನೋಡುತ್ತೀರಿ, ಎಲ್ಲದಕ್ಕೂ ಪ್ರಶ್ನೆ ಮಾಡುವ ಮನಸ್ಥಿತಿ ಇರುವವರು. ನೀವು ಒಮ್ಮೆ ನಂಬಿದವರನ್ನು ಎಂದಿಗೂ ಮರೆಯದೆ ಅವರ ಪರವಾಗಿ ನಿಲ್ಲುವವರು, ಪ್ರೀತಿ ಪಾತ್ರರನ್ನು ನೀವು ಎಂದಿಗೂ ತಮ್ಮೊಂದಿಗೆ ಇರಬೇಕು ಎಂದು ಬಯಸುವವರು.


(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)

English summary

What's Your Face Shape tells About Your Personality

Facial features are also one. So, if a person has a facial expression like the one in the picture above, what kind of personality is that person? Let's find out what the hidden qualities are behind the face.
Story first published: Saturday, December 21, 2024, 12:15 [IST]
X
Desktop Bottom Promotion