Latest Updates
-
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ಹಾವಿನ ಮರಿಗಳಿಗೆ ಜನ್ಮ ನೀಡಿದ್ದೇನೆಂದು ಆಸ್ಪತ್ರೆಗೆ ಓಡೋಡಿ ಬಂದ ಮಹಿಳೆ.! ಆದ್ರೆ ಸತ್ಯಾಂಶವೇ ಬೇರೆ
ತಾಯಿಯೊಬ್ಬರು ವಿಚಿತ್ರ ರೀತಿಯ ಮಕ್ಕಳಿಗೆ ಜನ್ಮ ನೀಡುವ ಕುರಿತು ನೀವೆಲ್ಲಾ ಕೇಳಿರುತ್ತೀರಿ, ನೋಡಿರುತ್ತೀರಿ. ಕೆಲವು ಘಟನೆಗಳು ವಿಜ್ಞಾನಕ್ಕೆ ಸವಾಲು ಎಸೆಯುವಂತಿರುತ್ತವೆ. ವಿಚಿತ್ರ ಮುಖ ಹೊಂದಿರುವು, ಬಾಲ ಇರುವ ಮಕ್ಕಳು, ಮೈ ತುಂಬ ಕೂದಲು ಇರುವ ಮಕ್ಕಳು, ಅಷ್ಟೇ ಏಕೆ ಅಂಗಾಂಗಳು ಅಂಟಿಕೊಂಡು ಜನಿಸುವ ಮಕ್ಕಳು ಹೀಗೆ ಹಲವು ರೀತಿ ವಿಚಿತ್ರ ವಿದ್ಯಮಾನಗಳು ನಡೆಯುವುದು ನೋಡಬಹುದು.
ಆದ್ರೆ ಇಲ್ಲೊಬ್ಬ ಮಹಿಳೆಗೆ ಹಾವುಗಳು ಜನಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೌದು ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಹಾವಿನ ಮರಿಗಳಿಗೆ ಜನ್ಮ ನೀಡಿದ್ದಾರೆ ಎಂಬ ವಿಡಿಯೋ ಹರಿದಾಡಿದೆ. ಹಾಗೆ ಆಸ್ಪತ್ರೆಯ ನೆಲದ ಮೇಲೆ ಹಾವಿನ ಮರಿಗಳಂತಹ ವಸ್ತುಗಳು ಕಂಡುಬಂದಿರುವುದು ಆಘಾತ ಉಂಟು ಮಾಡಿದೆ.

ಮಧ್ಯಪ್ರದೇಶದಲ್ಲಿ ಗುರುವಾರ ಮಹಿಳೆಯೊಬ್ಬರು ಏಳು ಹಾವಿನ ಮರಿಗಳಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಇಲ್ಲಿನ ಛತ್ತರ್‌ಪುರ್ ಜಿಲ್ಲಾ ಆಸ್ಪತ್ರೆಯ ವೈದ್ಯರು ಈ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಹಾವಿನ ಮರಿ ಜನಿಸಿರುವ ವರದಿಗಳನ್ನು ತಳ್ಳಿಹಾಕಿದ್ದಾರೆ. ಹಾಗಾದ್ರೆ ಅಲ್ಲಿ ನಡೆದಿದ್ದೇನು? ಹಾವಿನ ಮರಿಗಳಂತೆ ಮಹಿಳೆ ಜನ್ಮ ನೀಡಿದ್ದು ಯಾವ ವಸ್ತುಗಳಿಗೆ ಎಂಬುದನ್ನು ನಾವಿಲ್ಲಿ ಹೇಳುತ್ತೇವೆ ನೋಡಿ.
ಮಾಹಿತಿಯ ಪ್ರಕಾರ ರಿಂಕಿ ಅಹಿರ್ವಾರ್ ಎಂಬ ಮಹಿಳೆ ತಾನು ಮರಿ ಹಾವುಗಳಿಗೆ ಜನ್ಮ ನೀಡಿದ್ದೇನೆ ಎಂದು ಹೇಳಿಕೊಂಡಿದ್ದು, ಆ ಪ್ರದೇಶದ ಎಲ್ಲರಿಗೂ ಆಘಾತವನ್ನುಂಟು ಮಾಡಿತ್ತು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಇದರ ಸತ್ಯಾಸತ್ಯತೆ ಹೊರಬಿದ್ದಿದೆ. ಹಲ್ಕೆ ಅಹಿರ್ವಾರ್ ಅವರ ಪತ್ನಿ ರಿಂಕಿ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವು ಅನುಭವಿಸಿದ್ದರು. ಮನೆಯಲ್ಲಿ ಏಕಾಏಕಿ ಅವರು ಎರಡು ಹಾವಿನಂತ ವಸ್ತುಗಳಿಗೆ ಜನ್ಮ ನೀಡಿದ್ದಾಳೆ ಎಂದು ಹೇಳಲಾಗಿದೆ. ತಕ್ಷಣ ಆ ವಸ್ತುಗಳನ್ನು ಪ್ಲಾಸ್ಟಿಕ್ ತಟ್ಟೆಯಿಂದ ಮುಚ್ಚಲಾಗಿದೆ.
ಈ ವಿಚಾರ ತಿಳಿದು ನೆರೆ ಹೊರೆಯವರು ಆಕೆಯನ್ನು ನೋಡು ಆಗಮಿಸಿದ್ದಾರೆ. ನೆಲದ ಮೇಲೆ ಬಿದ್ದಿದ್ದ ಹಾವಿನಂತ ವಸ್ತುಗಳ ನೋಡಿ ಆಘಾತಕ್ಕೊಳಗಾಗಿದ್ಸಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅವರು ಆಸ್ಪತ್ರೆಗೆ ಬಂದವರೆ ಹಾವಿಗೆ ಈಕೆ ಜನ್ಮ ನೀಡಿದ್ದಾಳೆ ಎಂದು ಹೇಳಿದಾಗ ವೈದ್ಯರು ಕೂಡ ಶಾಕ್ ಆಗಿದ್ದಾರೆ. ಹಾಗೆ ಆಕೆಯ ವಿಡಿಯೋಗಳು ಹರಿದಾಡತೊಡಗಿವೆ.
ಆದರೆ ಪರೀಕ್ಷೆ ನಡೆಸಿದ ವೈದ್ಯರು ಆಕೆ ಗರ್ಭಿಣಿಯೇ ಆಗಿಲ್ಲ ಅದರಲ್ಲಿ ಹಾವಿನ ಮರಿಗಳಿಗೆ ಜನ್ಮ ನೀಡಲು ಹೇಗೆ ಸಾಧ್ಯ ಎಂದು ಅಚ್ಚರಿ ಪಟ್ಟಿದ್ದಾರೆ. ಆದರೆ ಮತ್ತಷ್ಟು ಪರೀಕ್ಷೆಗೆ ಒಳಪಡಿಸಿದಾಗ ಇದೊಂದು ವೈದ್ಯಕೀಯ ಸ್ಥಿತಿ ಆಗಿದ್ದು ಆಕೆ ಹಾವಿನ ಮರಿಗಳಿಗೆ ಜನ್ಮ ನೀಡಿಲ್ಲ ಬದಲಿಗೆ ರಕ್ತ ಹೆಪ್ಪುಗಟ್ಟಿ ಅದು ಹಾವಿನಂತಹ ಆಕಾರ ಪಡೆದಿವೆ ಎಂದು ತಿಳಿದುಬಂದಿತು. ಮನೆಯಲ್ಲಿ ತಟ್ಟೆಯ ಅಡಿ ಮುಚ್ಚಿಟ್ಟಿದ್ದ ಹಾವಿನಂತಹ ವಸ್ತುವನ್ನು ಸರಿಯಾಗಿ ಪರಿಶೀಲಿಸಿದಾಗ ಅದು ರಕ್ತವಾಗಿ ಕರಗಿತ್ತು.
ವೈದ್ಯರ ಪ್ರಕಾರ ಇದೊಂದು ವೈದ್ಯಕೀಯ ಸ್ಥಿತಿಯಾಗಿದೆ. ರಕ್ತ ಹೆಪ್ಪುಗಟ್ಟುವಿಕೆಯು ಆಕೆಯ ಋತುಸ್ರಾವದಲ್ಲಿನ ವ್ಯತ್ಯಾಸದ ಸಮಯದಲ್ಲಿ ಹೊರಬಂದವೆ. ಇದು ಹಾವಿನ ಮರಿಗಳಿಗೆ ಜನ್ಮ ನೀಡಿರುವ ಘಟನೆಯಲ್ಲ. ಇದರಿಂದ ಆಕೆಯ ಜೀವಕ್ಕೂ ಯಾವುದೇ ಹಾನಿ ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಆಕೆಯ ಮನೆಯವರು ಇದು ಹಾವಿನ ಮರಿಗಳೆಂದು ಗಾಬರಿಯಲ್ಲಿಯೇ ಆಸ್ಪತ್ರೆಗೆ ಕರೆತಂದಿದ್ದಾರೆ.
ವೈದ್ಯರ ಪ್ರಕಾರ ಈ ರೀತಿ ಮಾನವರು ಬೇರೊಂದು ಜೀವಿಗಳಿಗೆ ಜನ್ಮ ನೀಡುವುದು, ಜೈವಿಕವಾಗಿ ಅಸಾಧ್ಯದ ವಿಚಾರ ಇಂತಹ ಹೇಳಿಕೆಗಳು ಮೂಢನಂಬಿಕೆ, ಮಾನಸಿಕ ಸ್ಥಿತಿಗತಿಗಳಿಂದ ಬರಬಹುದೇ ಹೊರತು ವೈದ್ಯಕೀಯವಾಗಿ ಸಾಧ್ಯವಿಲ್ಲ ಎಂದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇಂತಹ ವಿಡಿಯೋಗಳು ಹರಿದಾಡುತ್ತಿದ್ದು, ವಿಡಿಯೋ ನೋಡಿದ ಮಂದಿ ಕೂಡ ಶಾಕ್‌ಗೆ ಒಳಗಾಗಿದ್ದಾರೆ.



Click it and Unblock the Notifications