Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು
ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಗುಣ ನಾವು ಹೇಳುತ್ತೇವೆ!
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಹಲವು ಚಿತ್ರಗಳು ನಿಮ್ಮ ಮೆದುಳಿಗೆ ಕೆಲಸ ಕೊಡುತ್ತವೆ. ಅದ್ರಲ್ಲೂ ಕೆಲವೊಂದು ನಿಮಗೆ ಕಾಡುವಂತಹ ಚಿತ್ರಗಳಾಗಿರುತ್ತವೆ. ಅದ್ರಲ್ಲೂ ಒಂದಿಷ್ಟು ಚಿತ್ರಗಳು ನಿಮ್ಮ ಗುಣಗಳನ್ನು ಹೇಳುತ್ತವೆ. ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಕಾಣಿಸುತ್ತವೆ. ಇದರಿಂದ ನಿಮ್ಮ ಆಂತರಿಕೆ ಗುಣಗಳೇನು ಎಂಬುದನ್ನು ಕೂಡ ತಿಳಿಯಬಹುದು.
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಯಾವಾಗಲು ಕೂಡ ನಿಮ್ಮ ಬುದ್ದಿವಂತಿಕೆಯನ್ನು ಹಾಗೆ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸುವ ಕೆಲಸ ಮಾಡಲಿವೆ. ಹಾಗೆ ನೋಡಿದ್ರೆ ನಿಮ್ಮ ಮೆದುಳಿಗೆ ಇವು ವ್ಯಾಯಾಮ ನೀಡಲಿದೆ ಎಂದು ಹೇಳಬಹುದು. ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಪೈಕಿ ಇಲ್ಲೊಂದು ಚಿತ್ರ ಕೂಡ ಈದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಮೇಲಿನ ಚಿತ್ರದಲ್ಲಿ ನೀವು ಮೊದಲು ಏನನ್ನೂ ಗಮನಿಸಿದ್ದೀರಿ ಎಂದು ಹೇಳಿದರೆ ನಾವು ನಿಮ್ಮ ಗುಣ ಎಂತಹದ್ದು ಎಂಬುದನ್ನು ಹೇಳಲಿದ್ದೇವೆ. ಈ ಚಿತ್ರವನ್ನು ಮಿಯಾ ಎಯ್ಲಿನ್ (Mia Yilin) ತಮ್ಮ ಟಿಕ್ ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವನ್ನ ನೋಡಿದ ತಕ್ಷಣ ಅದರಲ್ಲಿ ಎರಡು ರೀತಿಯಲ್ಲಿ ಕಾಣಬಹುದು. ಅದು ಬೆಕ್ಕಿನ ರೀತಿ ಹಾಗೆ ಮತ್ತೊಂದು ಕಡೆ ದ್ವೀಪದಂತೆಯೂ ಕಾಣಿಸಲಿದೆ. ಆದ್ರೆ ಮೊದಲು ನಿಮ್ಮ ಅನುಭವಕ್ಕೆ ಬಂದಿರುವುದೇನು ಎಂಬುದು ನಿಮ್ಮ ಗುಣಗಳ ಹೇಳಲಿದೆ.
ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ನಿಮ್ಮ ವ್ಯಕ್ತಿತ್ವವನ್ನು ತೋರಿಸಲಿವೆ. ನೀವು ಯಾವ ರೀತಿಯಾಗಿ ಚಿತ್ರವನ್ನು ಗ್ರಹಿಸುತ್ತೀರಿ. ನಿಮ್ಮ ಅನುಭವಕ್ಕೆ ಆ ಚಿತ್ರ ಹೇಗೆ ಕಾಣಿಸುತ್ತಿದೆ ಎಂಬುದರ ಆಧಾರದ ಮೇಲೆ ನಿಮ್ಮ ಗುಣಗಳ ಹೇಳಬಹುದಂತೆ. ಈ ಚಿತ್ರದಲ್ಲಿ ನೀವು ಗಮನಿಸಿದಂತೆ ದೊಡ್ಡ ಬೆಕ್ಕಿನ ತಲೆಯಂತೆಯೋ ಅಥವಾ ದ್ವೀಪದಂತೆಯೋ ನಿಮಗೆ ಕಾಣಿಸಿರಬಹುದು. ಹಾಗಾದ್ರೆ ಅದರ ಅರ್ಥವೇನು?
ನೀವು ಮೊದಲು ಬೆಕ್ಕಿನ ಚಿತ್ರ ನೋಡಿದ್ದರೆ ಅದರ ಅರ್ಥವೇನು?
ಬೆಕ್ಕಿನ ತಲೆಯನ್ನು ನೀವು ಮೊದಲು ಗಮನಿಸಿದರೆ ನೀವು ಬಹುಶಃ ವಿರಳವಾಗಿ ಕೋಪಗೊಳ್ಳುವ ವ್ಯಕ್ತಿ. ಬಹಳ ತಾಳ್ಮೆ ಹೊಂದಿರುವವರು. ನಿಮ್ಮನ್ನು ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ. ನೀವು ಎಂತಹ ಸವಾಲುಗಳೇ ಎದುರಾದರು ನೀವು ಆ ಎಲ್ಲಾ ಸವಾಲುಗಳ ತಾಳ್ಮೆಯಿಂದ ಎದುರಿಸುವವರು. ಎಂದಿಗೂ ಎದೆಗುಂದದೆ ಮುನ್ನಡೆಯುವವರು. ಆತ್ಮವಿಶ್ವಾಸದಿಂದ ಕೆಲಸ ಮಾಡುವವರು. ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು, ಹಾಗೆ ನೀವು ಒಂದೇ ವಿಚಾರವನ್ನು ಹಲವು ದೃಷ್ಟಿಕೋನದಲ್ಲಿ ಆಲೋಚಿಸುವ ಬುದ್ದಿಶಕ್ತಿ ಹೊಂದಿರುವವರು ಎಂಬರ್ಥವಂತೆ. ನಿಮ್ಮನ್ನು ನೇರ ಮಾತುಗಳಿಂದ ಎದುರಿಸಲು ಸಾಧ್ಯವಿಲ್ಲವಂತೆ. ನಿಮ್ಮ ತಪ್ಪು ಇಲ್ಲದಿದ್ದರೆ ನೀವು ಯಾರ ಬಳಿಯಾದರು ವಾದಕ್ಕೆ ನಿಲ್ಲುವ ಮಂದಿ ಎಂಬುದು ಈ ಚಿತ್ರದ ವಿವರಣೆಯಾಗಿದೆ.
ನೀರಿನಿಂದ ಸುತ್ತುವರೆದ ದ್ವೀಪ ನಿಮಗೆ ಕಂಡರೆ ಏನರ್ಥ?
ಒಂದು ವೇಳೆ ನಿಮಗೆ ದ್ವೀಪ ಮೊದಲು ಕಾಣಿಸಿದರೆ ನೀವು ಬಹಳ ಏಕಾಂತ ಬಯಸುವ ಮಂದಿಯಂತೆ. ನೀವು ಬಹಳ ಬೇಗ ಯಾರನ್ನಾದರು ನಂಬುವ ವ್ಯಕ್ತಿಯಂತೆ. ಹಾಗೆ ನಿಮ್ಮಲ್ಲಿ ಬಹಳ ಸಮಯದ ಸ್ನೇಹಗಳು ಸಂಬಂಧಗಳು ಉಳಿದುಬಿಡುತ್ತವೆ. ಎಷ್ಟೇ ಕಷ್ಟದ ಸಂದರ್ಭದಲ್ಲೂ ಸತ್ಯವನ್ನೇ ನುಡಿಯುವವರು, ಒಂದು ವೇಳೆ ಸುಳ್ಳು ಹೇಳಿದರೂ ತಕ್ಷಣ ಅದನ್ನು ಒಪ್ಪಿಕೊಳ್ಳುವ ಮನೋಭಾವದವರು. ತಾವಾಗಿಯೇ ಯಾವುದೇ ವಿಚಾರದಲ್ಲಿ ಕಲಹ, ಜಗಳ ಉಂಟು ಮಾಡಲು ಇಷ್ಟಪಡದ ವ್ಯಕ್ತಿತ್ವವಂತೆ. ಆದ್ರೆ ಹಠ ಸಾಧನೆಯಲ್ಲೂ ನಿಮ್ಮ ಮೇಲುಗೈ ಇರಲಿದೆ. ಯಾವುದೇ ಜವಾಬ್ದಾರಿ ಹೊತ್ತುಕೊಳ್ಳಲು ಹಿಂಜರಿಯುವವರು, ಆದ್ರೆ ನೀಡಿದ ಜವಾಬ್ದಾರಿಯನ್ನು ಬೇರೆ ಎಲ್ಲರಿಗಿಂತಲೂ ಸರಿಯಾದ ರೀತಿ ನಿಭಾಹಿಸುವವರು. ಯಶಸ್ಸು ಸಿಕ್ಕಾಗ ಖುಷಿಪಡದೆ ಸೋತಾಗ ನಿರಾಸೆಗೆ ಒಳಗಾಗದೆ ಇರುವಂತಹ ವ್ಯಕ್ತಿತ್ವವಂತೆ.



Click it and Unblock the Notifications











