Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮೊದಲು ನಿಮ್ಮ ಕಣ್ಣಿಗೆ ಕಂಡಿದ್ದೇನು? ನಿಮ್ಮ ಗುಣ ಹೇಳುತ್ತೆ ಈ ಚಿತ್ರ
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಿಮ್ಮ ಮೆದುಳಿಗೆ ಕೆಲಸ ಕೊಡಲಿವೆ. ಹಾಗೆ ಹಲವು ಚಿತ್ರಗಳು ನಿಮ್ಮ ಅಡಗಿರುವ ಒಂದಿಷ್ಟು ಗುಣಗಳನ್ನು ಕೂಡ ಹೊರಹಾಕುತ್ತವೆ. ಆಪ್ಟಿಕಪ್ ಇಲ್ಯೂಷನ್ ಪರ್ಸೊನಾಲಿಟಿ ಟೆಸ್ಟ್ ಇತ್ತೀಚಿಗೆ ಬಹಳ ಫೇಮಸ್ ಆಗುತ್ತಿರುವ ಒಂದು ವರ್ತನೆ ಹಾಗೂ ಗುಣವನ್ನು ಅರಿತುಕೊಳ್ಳುವ ವಿಧಾನಗಳಲ್ಲಿ ಒಂದಾಗಿದೆ.
ಕೆಲವು ಚಿತ್ರಗಳಿಂದ ನೀವು ಎಂತಹ ಗುಣಗಳನ್ನು ಹೊಂದಿದ್ದೀರಿ, ನೀವು ಯಾವ ರೀತಿಯ ಮಾನಸಿಕ ಸಾಮರ್ಥ್ಯ ಹೊಂದಿದ್ದೀರಿ ಎಂಬುದನ್ನು ವಿವರಿಸುತ್ತವೆ. ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲಾ ಒಂದು ಚಿತ್ರಗಳು ಹರಿದಾಡುತ್ತಲೇ ಇರುವುದು ನೋಡಬಹುದು. ಮೊದಲು ನೀವು ಚಿತ್ರವನ್ನು ನೋಡಿದ ತಕ್ಷಣ ನಿಮ್ಮ ಅನುಭವಕ್ಕೆ ಬಂದ ವಿಚಾರದ ಆಧಾರದಲ್ಲಿ ನಿಮ್ಮ ಗುಣವನ್ನು ಅಳೆಯಬಹುದು.

ಹಾಗೆ ನಾವಿಂದು ಈ ಮೇಲಿನ ಚಿತ್ರದಲ್ಲಿ ಮೊದಲು ನಿಮಗೆ ಏನು ಕಾಣುತ್ತಿದೆ ಎಂಬುದನ್ನು ತಿಳಿಸಿದರೆ ನಾವು ನಿಮ್ಮ ಗುಣ ಎಂತದ್ದು ಎಂಬುದನ್ನು ಹೇಳಲಿದ್ದೇವೆ. ಈ ನಿರ್ದಿಷ್ಟ ಚಿತ್ರವನ್ನು ಮಿಯಾ ಯಿಲಿನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರವನ್ನು ನೋಡಿದ ತಕ್ಷಣ ನೀವು ಏನು ಗುರುತಿಸಿದ್ದೀರಿ ಎಂಬುದನ್ನು ಸೂಚಿಸಿದರೆ ನಿಮ್ಮ ಗುಣಗಳೇನು ಎಂಬುದನ್ನು ವಿವರಿಸಬಹುದಂತೆ.
ಈ ಫೋಟೋ ನೋಡಿದರೆ ಹಾರುತ್ತಿರುವ ಹದ್ದು ಹಾಗೂ ಹಿಮದಿಂದ ಆವೃತವಾಗಿರುವ ಪರ್ವತ ಕಾಣಿಸಬಹುದು, ಆದ್ರೆ ನಿಮ್ಮ ಕಲ್ಪನೆಗೆ ಮೊದಲು ಯಾವ ಚಿತ್ರಣ ಬಂದಿದೆ ಎಂಬುದರ ಆಧಾರದ ಮೇಲೆ ನಿಮ್ಮ ಗುಣಗಳನ್ನು ಪಟ್ಟಿ ಮಾಡಬಹುದಂತೆ. ಹಾಗಾದ್ರೆ ನಿಮಗೆ ಈ ಚಿತ್ರದಲ್ಲಿ ಮೊದಲು ಏನು ಕಾಣಿಸಿತು ಎಂಬುದರ ಆಧಾರದ ಮೇಲೆ ನಿಮ್ಮ ಗುಣಗಳೇನು ಎಂಬುದನ್ನು ನಾವಿಲ್ಲಿ ಪಟ್ಟಿ ಮಾಡೋಣ.
ನೀವು ಮೊದಲು ಹದ್ದನ್ನು ನೋಡಿದ್ದೀರಾ? ಅದರ ಅರ್ಥವೇನು ಗೊತ್ತಾ?
ಈ ಚಿತ್ರದಲ್ಲಿ ನೀವು ಹಾರಾಡುತ್ತಿರುವ ಬಿಳಿ ಬಣ್ಣದ ಹದ್ದನ್ನು ನೋಡಿದ್ದರೆ ನೀವು ಸಮಾಜದ ಗಮನ ತಮ್ಮತ್ತ ಸೆಳೆಯುವಂತಹ ಗುಣ ಹೊಂದಿರುವವರಂತೆ. ನೀವು ನೈಸರ್ಗಿಕವಾಗಿ ಎಲ್ಲರನ್ನು ತಮ್ಮತ್ತ ಸೆಳೆಯುವ ಸಾಮರ್ಥ್ಯ ಹೊಂದಿದ್ದೀರಂತೆ. ನಿಮ್ಮ ಸಂತೋಷಕ್ಕಿಂತಲೂ ಬೇರೆಯವರ ಸಂತೋಷ ಮುಖ್ಯವಾಗುವ ಹಲವು ಘಟನೆಗಳಿಗೆ ನೀವು ಸಾಕ್ಷಿಯಾಗುವವರು. ನೀವು ಸಂಬಂಧಗಳ ಕಾಪಾಡಲು ಯಾವಾಗಲು ಚೈತನ್ಯ ಭರಿತ ಕೆಲಸಗಳ ಮಾಡುವಿರಿ. ಎಲ್ಲರೊಂದಿಗೂ ನೀವು ಸಂತೋಷದಿಂದ ಇರಲು ಬಯಸುವಿರಿ. ನಿಮ್ಮ ಕನಸುಗಳು ದೊಡ್ಡದಾಗಿರಲಿದೆ. ನಿಮ್ಮ ಯಶಸ್ಸುಗಳ ಕುರಿತು ಆಲೋಚಿಸುತ್ತೀರಿ.
ಹಿಮ ಪರ್ವತ ನೋಡಿದ್ದರಾ? ಅದರ ಅರ್ಥವೇನು ಗೊತ್ತಾ?
ನೀವು ಮೊದಲು ಹಿಮ ಹೊದಿಕೆಯ ಪರ್ವತವನ್ನು ನೋಡಿದರೆ, ನೀವು ಉತ್ಪಾದಕತೆಯ ಮೇಲೆ ಅಭಿವೃದ್ಧಿ ಹೊಂದುವ ನೈಸರ್ಗಿಕ ಗುರಿಕಾರರು. ಸಣ್ಣ ಪುಟ್ಟ ವಿಚಾರದಲ್ಲು ಅದ್ಭುತವನ್ನು ಹುಡುಕುವ ಮನಸ್ಥಿತಿಯವರು, ಸಣ್ಣ ವಿಚಾರಗಳೇ ನಿಮಗೆ ಹೆಚ್ಚು ಖುಚಿ ನೀಡುವ ಸಂಗತಿಗಳು. ನಿಮ್ಮ ಬಯಕೆ ದೊಡ್ಡೆದಾಗಿದ್ದರು ಅದನ್ನು ಈಡೇರಿಸಿಕೊಳ್ಳಲೇ ಬೇಕು ಎಂಬ ಮನೋಭಾವದವರಲ್ಲ. ನೀವು ಕಲಾತ್ಮಕ ಜೀವನ ಇಷ್ಟಪಡುವವರು. ಯಾವಾಗಲು ಹೊರಗೆ, ಪರಿಸರ, ಪ್ರಾಣಿ ಪಕ್ಷಿಗಳ ಕುರಿತು ಧಯೆ ಇರುವವರು. ಕಠಿಣ ಪರಿಸ್ಥಿತಿಗಳನ್ನು ಹಾಗೆ ಸವಾಲುಗಳನ್ನು ಧೈರ್ಯವಾಗಿ ಎದುರಿಸುವವರು. ನಿಮ್ಮ ನೇರ ಮಾತುಗಳು ಬೇರೆಯವರಿಗೆ ಸಹಿಸಲಾಗದೆ ನಿಮ್ಮಿಂದ ಸಂಬಂಧಗಳು ದೂರಾಗುವ ಘಟನೆಗಳು ಹೆಚ್ಚಾಗಿ ನಡೆಯುವುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
