Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಭೂಮಿ ತಿರುಗುವುದನ್ನು ನಿಲ್ಲಿಸಿದರೆ ಏನಾಗುತ್ತೆ? ಇಲ್ಲಿದೆ ಉತ್ತರ.!
ಕೆಲವೊಂದು ವಿಷಯಗಳು ಅನವಶ್ಯಕ ಎಂದೆನಿಸಿದರು ಸಹ ಅವುಗಳ ಬಗ್ಗೆ ತಿಳಿಯಲು ಎಲ್ಲರಿಗೂ ಕುತೋಹಲವಿರುತ್ತದೆ. ನೀವು ಸಹ ಕುಳಿತಲ್ಲೇ ಇಂತಹ ಪ್ರಶ್ನೆಯನ್ನು ಹಾಕಿಕೊಂಡಿರಬಹುದು. ಒಂದು ವೇಳೆ ಭೂಮಿ ತಿರುಗುವುದನ್ನೇ ನಿಲ್ಲಿಸಿದರೆ ಏನಾಗುತ್ತದೆ? ಇಂತಹ ಪ್ರಶ್ನೆ ಒಮ್ಮೆಯಾದರು ನಿಮ್ಮಲ್ಲಿ ಮೂಡಿರುತ್ತದೆ. ಈ ಪ್ರಶ್ನೆಗೆ ಉತ್ತರ ಹುಡುಕುವ ಯತ್ನವೇ ನಮ್ಮದು.
ಭೂಮಿ ಒಂದು ವೇಳೆ ಸುತ್ತುವುದನ್ನು ನಿಲ್ಲಿಸಿ ಬಿಟ್ಟರೆ ಏನಾಗಲಿದೆ ಎಂಬುದು ಎಲ್ಲರ ಕುತೂಹಲಕರ ಪ್ರಶ್ನೆ. ಇದನ್ನು ನಾವೂ ಸಹ ಊಹಿಸಬಹುದಷ್ಟೇ. ಭೂಮಿ ಸುತ್ತುವುದನ್ನು ನಿಲ್ಲಿಸಿದರೆ ಒಳ್ಳೆಯ ಬೆಳವಣಿಗೆಯಂತು ಸಂಭವಿಸುವುದಿಲ್ಲ ಎಂಬುದಂತು ನಮಗೆ ಗೊತ್ತಿದೆ. ಹಾಗಾದ್ರೆ ಭೂಮಿ ತಿರುಗುವುದನ್ನು ನಿಲ್ಲಿಸಿದರೆ ಏನಾಗುತ್ತದೆ ಎಂಬುದನ್ನು ಮುಂದೆ ಓದಿ.

ಸೂರ್ಯನ ಸುತ್ತಲೂ ಭೂಮಿ ತಿರುಗುತ್ತಿದೆ ಎಂಬುದನ್ನು ನಾವು ಓದಿಕೊಂಡು ಬಂದಿದ್ದೇವೆ. ಹಾಗೆ ಒಂದು ಸುತ್ತು ಬರಲು 24 ಗಂಟೆ ತೆಗದುಕೊಂಡರೆ ಸೂರ್ಯನ ಸುತ್ತ ಸುತ್ತಲು 365 ದಿನ ತೆಗೆದುಕೊಳ್ಳುತ್ತದೆ. ಇದೆಲ್ಲಾ ನಮಗೆ ತಿಳಿದಿದೆ. ಆದ್ರೆ ಒಮ್ಮೆ ನಮ್ಮ ಭೂಮಿ ತಿರುಗುವುದನ್ನು ನಿಲ್ಲಿಸಿದರೆ ಇದೆಲ್ಲಾ ಮೇಲೆ ಕೆಳಗಾಗುತ್ತದೆ.
ನೀವು ಬದುಕುವ ಸಂಭವವೇ ಕಡಿಮೆ
ಭೂಮಿ ತಿರುಗುವುದನ್ನು ನಿಲ್ಲಿಸಿದ ತಕ್ಷಣ ಗುರುತ್ವಾಕರ್ಷಣಾ ಬಲವು ಏರುಪೇರಾಗುವುದರಿಂದ ನೀವು ಗಂಟೆಗೆ 100 ಕಿ.ಮೀ ವೇಗದಲ್ಲಿ ಗಾಲಿಯಲ್ಲಿ ಎಸೆಯಲ್ಪೆಡುತ್ತೀರ. ಹೀಗಾದಾಗ ನಿಮ್ಮ ಪ್ರಾಣ ಹೋಗಬಹುದು. ಅಂಟಾರ್ಟಿಕದಲ್ಲಿ ಯಾರಾದರೂ ಇದ್ದರೆ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚು, ಏಕೆಂದರೆ ಭೂಮಿಯ ತಿರುಗುವ ಬಿಂದುವಿನಲ್ಲಿ ವೇಗದ ತೀವ್ರತೆ ಕಡಿಮೆ ಇರುವುದರಿಂದ ಬದುಕುಳಿಯಬಹುದು.
ಮರ, ಕಟ್ಟಡ ನೆಲಸಮ
ಭೂಮಿ ತಿರುಗುವುದನ್ನು ನಿಲ್ಲಿಸಿದಾಗ ವೇಗೋತ್ಕರ್ಷಕ್ಕೆ ಒಳಗಾಗುವ ಭೂಮಿ ಮೇಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗುತ್ತದೆ. ಅದರಲ್ಲೂ ಮರ, ಗಿಡಗಳು ಹಾಗೂ ಕಟ್ಟಡಗಳು ಪೂರ್ವ ದಿಕ್ಕಿನತ್ತ ಎಸೆಯಲ್ಪಡುತ್ತವೆ. ಇದರಿಂದ ಮರಗಳು ಧರೆಗುರುಳಿದರೆ ಕಟ್ಟಡಗಳು ಉರುಳಬಹುದು, ಇಲ್ಲದೆ ಬಿರುಕು ಬಿಡಬಹುದು.
ರಾತ್ರಿ ಹಗಲು ಎಂಬ ಕಲ್ಪನೆ ಇರುವುದಿಲ್ಲ
ಒಂದು ವೇಳೆ ಭೂಮಿ ತಿರುಗುವುದನ್ನು ನಿಲ್ಲಿಸಿದಾಗ ಹಗಲು ರಾತ್ರಿ ಎಂಬ ಕಲ್ಪನೆ ಮಾಯವಾಗಲಿದೆ. ಭೂಮಿಯ ಒಂದಿಷ್ಟು ಭಾಗದಲ್ಲಿ ಯಾವಾಗಲೂ ಹಗಲಿದ್ದರೆ ಇನ್ನುಳಿದ ಭಾಗ ಬೆಳಕಿನಿಂದ ಕೂಡಿರಲಿದೆ. ಬೆಳಕಿನಿಂದ ಕೂಡಿರುವ ಭಾಗ ಅತೀ ಹೆಚ್ಚು ತಾಪಮಾನಕ್ಕೆ ಒಳಗಾಗುತ್ತದೆ. ಇತ್ತ ಕತ್ತಲೆಯ ಭಾಗ ಸಂಪೂರ್ಣ ಹಿಮವಾಗಿ ಪರಿವರ್ತನೆಯಾಗಲಿದೆ.
ಮರಳುಗಾಡಾಗಿ ಪರಿವರ್ತನೆಯಾಗಲಿದೆ ಭೂಮಿ
ಭೂಮಿಯ ಒಂದು ಭಾಗ ಯಾವಾಗಲೂ ಸೂರ್ಯನ ಬೆಳಕಿನಿಂದ ಕುದಿಯುತ್ತದೆ. ಹೀಗಾಗಿ ಮರಗಿಡಗಳು ಸಾಯುತ್ತದೆ. ನೀರಿನ ಮೂಲಗಳು ಆದಷ್ಟು ಬೇಗ ಒಣಗುತ್ತದೆ. ಒಂದಿಷ್ಟು ಕಾಲ ಮಳೆ ಬಂದರೂ ನಿರಂತರ ಬಿಸಿಲಿನಿಂದ ಭೂಮಿ ನಿಧಾನವಾಗಿ ಮರುಭೂಮಿಯಾಗುತ್ತದೆ. ಇತ್ತ ತೀವ್ರ ಕತ್ತಲು ಕೂಡಿದ್ದ ಭಾಗ ಸೂರ್ಯನ ಬೆಳಕು ಕಾಣದೆ ಮರ ಗಿಡಗಳು ಸಾಯುತ್ತವೆ. ಕ್ರಮೇಣವಾಗಿ ಭೂಮಿ ಮೇಲಿನ ಎಲ್ಲ ಹಸಿರು ಮಾಯವಾಗಿ ಹಿಮ ಆವರಿಸುತ್ತದೆ.
ನಗರಗಳನ್ನೇ ನುಂಗುತ್ತವೆ ಸಮುದ್ರಗಳು
ಭೂಮಿ ತಿರುಗುವುದನ್ನು ನಿಲ್ಲಿಸಿದರೆ ಸಮುದ್ರಗಳು ಉಕ್ಕುತ್ತವೆ. ಹೀಗಾಗಿ ನಗರಗಳು ಮಾತ್ರವಲ್ಲ ಭೂ ಪ್ರದೇಶವೇ ನೀರನಿಂದ ಆವೃತವಾಗುತ್ತವೆ. ಭೂಮಿ ಮೇಲೆ ವಾಸಯೋಗ್ಯ ಸ್ಥಳವೇ ಇಲ್ಲದಾಗುತ್ತದೆ. ಸಮುದ್ರಗಳು ಮರುಭೂಮಿಯಾಗಿ ಮಾರ್ಪಟ್ಟರೆ, ಭೂ ಪ್ರದೇಶಗಳು ಹೊಸ ಸಮುದ್ರಗಳಾಗಿ ರೂಪುಗೊಳ್ಳುತ್ತವೆ. ಬೃಹತ್ ನಗರಗಳು ಸಮುದ್ರದಡಿಯಲ್ಲಿ ಮಾಯವಾಗುತ್ತವೆ.
ಭೂಮಿಯ ತಿರುಗುವಿಕೆ ನಿಧಾನವಾದರೆ ಏನಾಗುತ್ತದೆ?
ಇನ್ನು ಭೂಮಿ ಒಮ್ಮಿಂದೊಮ್ಮೆಲೆ ತಿರುಗುವುದನ್ನು ನಿಲ್ಲಿಸಿದರೆ ಇಡೀ ಭೂಮಿಯೇ ಕ್ಷಣದಲ್ಲಿ ನಾಶವಾಗಬಹುದು. ಆದರೆ ಭೂಮಿ ನಿಧಾನವಾಗಿ ತನ್ನ ತಿರುಗುವ ವೇಗ ಕಡಿಮೆ ಮಾಡಿದರೆ ಏನಾಗುತ್ತೆ ಗೊತ್ತಾ? ಭೂಮಿಯ ವೇಗದಲ್ಲಿ ಇಳಿಮುಖವಾಗುತ್ತಾ ಬಂದಂತೆ ಹಗಲು ರಾತ್ರಿಯಲ್ಲಿ ಬದಲಾವಣೆಯಾಗುತ್ತದೆ. ಗಂಟೆಗಳ ಲೆಕ್ಕೆ ಹೆಚ್ಚಾಗುತ್ತದೆ. ನಿಧಾನವಾಗಿ ವಾರಗಳಲ್ಲಿ 7 ದಿನದ ಬದಲಿಗೆ 8ನೇ ದಿನ ಸೇರಿಕೊಳ್ಳುತ್ತದೆ, ಇಲ್ಲದೆ ವರ್ಷದಲ್ಲಿ ದಿನಗಳ ಸಂಖ್ಯೆ ಹೆಚ್ಚಾಗುತ್ತದೆ.



Click it and Unblock the Notifications
