Latest Updates
-
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ! -
ನವರಾತ್ರಿ ಗರ್ಬಾ ಸಂಭ್ರಮ: ಬೆಂಗಳೂರಿನ ಕಪಲ್ಸ್ ಎಂಜಾಯ್ ಮಾಡಲು ಇಲ್ಲಿದೆ ಬೆಸ್ಟ್ ಸೇಫ್ಟಿ ಟಿಪ್ಸ್ -
ದೆಹಲಿ ವಾಯು ಮಾಲಿನ್ಯ: ಮನೆಯೊಳಗೆ ಶುದ್ಧ ಗಾಳಿ ಪಡೆಯಲು 20 ನಿಮಿಷದ ಈ ಸರಳ ಟ್ರಿಕ್ಸ್ ಫಾಲೋ ಮಾಡಿ -
ಹಣದುಬ್ಬರದ ಬಿಸಿ: ₹120ರ ಬಜೆಟ್ನಲ್ಲಿ ಪೌಷ್ಟಿಕ ಹೈ-ಪ್ರೋಟೀನ್ ಊಟ ತಯಾರಿಸುವುದು ಹೇಗೆ? -
ನವರಾತ್ರಿ 3ನೇ ದಿನ: ಕೆಂಪು ಬಣ್ಣದ ಲುಕ್ನಲ್ಲಿ ಆಫೀಸ್ನಿಂದ ನೇರ ಗರ್ಬಾಗೆ ಮಿಂಚುವ ಸ್ಮಾರ್ಟ್ ಟಿಪ್ಸ್! -
ಮುಂಬೈನಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ, ಇಲ್ಲದಿದ್ದರೆ ಅಪಾಯ!
ಭಾದ್ರಪದ ಮಾಸದಲ್ಲಿ ಶುಭಕಾರ್ಯ ಮಾಡಬಾರದು ಏಕೆ?
ಹಿಂದೂ ಮಾಸದ 6ನೇ ತಿಂಗಳು ಭಾದ್ರಪದ ಮಾಸ. ಭಾದ್ರಪದ ಮಾಸವೆಂದರೆ ಪಟ್ ಅಂತ ನೆನೆಪಿಗೆ ಬರುವುದು ಗಣೇಶ ಚತುರ್ಥಿ. ಗಣೇಶ ಚತುರ್ಥಿಯನ್ನು ದೇಶದಾದ್ಯಂತ ಸಡಗರ-ಸಂಭ್ರಮದಿಂದ ತುಂಬಾನೇ ಅದ್ಧೂರಿಯಾಗಿ ಆಚರಿಸಲಾಗುವುದು. ಧಾರ್ಮಿಕ ನಂಬಿಕೆ ಪ್ರಕಾರ ಈ ತಿಂಗಳಿನಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು. ಈ ತಿಂಗಳು ಉಪವಾಸ ಹಾಗೂ ಪೂಜೆಗೆ ತುಂಬಾನೇ ಶುಭ ತಿಂಗಳಲಾಗಿದೆ. ಕರ್ನಾಟಕದಲ್ಲಿ ಭಾದ್ರಪದ ಮಾಸ ಸೆಪ್ಟೆಂಬರ್ 16ರಿಂದ ಶುರುವಾಗುವುದು, ಅಕ್ಟೋಬರ್ 14ಕ್ಕೆ ಮುಕ್ತಾಯವಾಗಲಿದೆ.

ಭಾದ್ರಪದ ಮಾಸದಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು. ಈ ತಿಂಗಳಿನಲ್ಲಿ ಯಾವ ಕಾರ್ಯವನ್ನು ಮಾಡಬಾರದು, ಯಾವ ಕಾರ್ಯವನ್ನು ಮಾಡಬೇಕು ಎಂದು ನೋಡೋಣ ಬನ್ನಿ:
* ಯಾವುದೇ ಶುಭ ಕಾರ್ಯ ಮಾಡಬಾರದು: ಭಾದ್ರಪದ ಮಾಸ ಪೂಜಾ ಕಾರ್ಯಗಳಿಗೆ ಒಳ್ಳೆಯದು, ಆದರೆ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಏಕೆಂದರೆ ಭಾದ್ರಪದ ಮಾಸವನ್ನು ಶೂನ್ಯ ಮಾಸವೆಂದು ಕರೆಯಲಾಗುವುದು. ಈ ತಿಂಗಳಿನಲ್ಲಿ ಮದುವೆ, ನಿಶ್ಚಿತಾರ್ಥ, ಮಗುವಿನ ನಾಮಕರಣ, ಮಕ್ಕಳ ತಲೆ ಕೂದಲು ತೆಗೆಯುವುದು, ಗೃಹ ಪ್ರವೇಶ, ಹೊಸದಾಗಿ ಉದ್ಯಮ ಪ್ರಾರಂಭಿಸುವುದು ಈ ರೀತಿ ಯಾವುದೇ ಶುಭ ಕಾರ್ಯ ಮಾಡಬಾರದು.
* ಈ ಬಗೆಯ ಆಹಾರಗಳನ್ನು ಸೇವಿಸಬಾರದು
ಭಾದ್ರಪದ ಮಾಸದಲ್ಲಿ ಬೆಲ್ಲ, ಎಳ್ಳು, ಮೊಸರು, ತೆಂಗಿನೆಣ್ಣೆ, ಎಳ್ಳೆಣ್ಣೆ ಇವುಗಳನ್ನು ಬಳಸಬಾರದು. ಈ ಆಹಾರವನ್ನು ಭಾದ್ರಪದ ಮಾಸದಲ್ಲಿ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು ಎಂದು ಹೇಳಲಾಗುವುದು.
* ಧಾನ್ಯ ಪಡೆದ ಆಹಾರ ಸೇವಿಸಬೇಡಿ
ಈ ತಿಂಗಳಿನಲ್ಲಿ ಧಾನ್ಯ ಪಡೆದ ಆಹಾರ ಸೇವಿಸಬಾರದು ಎಂದು ಹೇಳಲಾಗುವುದು. ಏಕೆಂದರೆ ಈ ಸಮಯದಲ್ಲಿ ಧಾನ ಪಡೆದ ಅಕ್ಕಿಯಿಂದ ಆಹಾರ ಮಾಡಿ ಬಳಸಿದರೆ ಲಕ್ಷ್ಮಿ ಕೃಪೆ ಕಡಿಮೆಯಾಗುವುದು ಎಂದು ಹೇಳಲಾಗುವುದು. ಆದ್ದರಿಂದ ಈ ತಿಂಗಳಿನಲ್ಲಿ ದಾನ ಪಡೆದ ಆಹಾರ ವಸ್ತುಗಳನ್ನು ಬಳಸಬೇಡಿ.
ಭಾದ್ರಪದ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಲು ತುಂಬಾನೇ ಶುಭವಾಗಿದೆ
* ಸೇವಾ ಕಾರ್ಯಗಳಿಗೆ ಈ ತಿಂಗಳು ತುಂಬಾನೇ ಒಳ್ಳೆಯದು: ಈ ತಿಂಗಳು ಬಡವರಿಗೆ ದಾನ ಮಾಡಿ, ಸಮಾಜ ಸೇವಾ ಕಾರ್ಯಗಳಿಗೆ ಈ ತಿಂಗಳು ಶುಭವಾಗಿದೆ. ಸೇವಾ ಕಾರ್ಯ ಮಾಡುವುದರಿಂದ ಗಣೇಶನ ಆಶೀರ್ವಾದ ಸಿಗಲಿದೆ.
* ಈ ಅವಧಿಯಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿ: ಧಾರ್ಮಿಕ ಕಾರ್ಯಗಳಿಗೆ ಈ ಅವಧಿ ತುಂಬಾನೇ ಶುಭವಾಗಿದೆ,
* ಶ್ರೀ ಗಣೇಶನಿಗೆ ಲಡ್ಡು, ಮೋದಕಗಳನ್ನು ಅರ್ಪಿಸಿ ಆರಾಧಿಸಿ.
* ದನಗಳಿಗೆ ಹಸಿರು ಮೇವು ದಾನ ಮಾಡಿ
* ಭಾದ್ರಪದ ತಿಂಗಳಿನಲ್ಲಿ ಮೊಸರು ತಿನ್ನಬಾರದು ಆದರೆ ಹಾಲು ಹಾಗೂ ತುಪ್ಪವನ್ನು ಸೇವಿಸಬಹುದು.
* ನೈಸರ್ಗಿಕಕ್ಕೆ ಹತ್ತಿರವಾಗಿ. ನೀವು ಆಹಾರವನ್ನು ಕುರ್ಚಿ, ಟೇಬಲ್‌ನಲ್ಲಿ ತಿನ್ನುವ ಬದಲಿಗೆ ನೆಲದ ಮೇಲೆ ಕೂತು ತಿನ್ನಿ.



Click it and Unblock the Notifications
