Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ನಿಮ್ಮ ಆಧ್ಯಾತ್ಮಿಕ ವಯಸ್ಸು ಎಷ್ಟು.? ಲೆಕ್ಕ ಹಾಕುವುದು ಹೇಗೆ ಗೊತ್ತಾ?
ಯಾರಾದ್ರು ನಿಮ್ಮ ಬಳಿ ನಿಮಗೆ ಎಷ್ಟು ವಯಸ್ಸು ಎಂದರೆ ನಾವು ಥಟ್ ಅಂತ ಹೇಳುತ್ತೇವೆ. ಹೀಗೆ ನಮ್ಮ ವಯಸ್ಸು ಹೇಳಲು ಲೆಕ್ಕಾಚಾರ ಮಾಡುವಂತಹ ಅಗತ್ಯವಿಲ್ಲ. ಆದ್ರೆ ನಿಮ್ಮ ಆಧ್ಯಾತ್ಮಿಕ ವಯಸ್ಸು ಎಷ್ಟು ಎಂದು ಕೇಳಿದ್ರೆ ನಿಮಗೆ ಉತ್ತರ ಗೊತ್ತಾ? ಕೆಲವರಿಗೆ ಈ ಕುರಿತು ತಿಳಿದಿರಬಹುದು, ಆದ್ರೆ ಬಹುತೇಕರಿಗೆ ಇದು ಹೊಸ ವಿಚಾರ. ಆಧ್ಯಾತ್ಮಿಕ ವಯಸ್ಸು ಅಂದ್ರೆ ಎಷ್ಟು?
ನಿಮ್ಮ ದೇಹ ಹಾಗೂ ಮನಸ್ಸಿನ ವಯಸ್ಸು. ನಿಮ್ಮ ಮನಸ್ಸಿಗೂ ಒಂದು ವಯಸ್ಸು ಇದೆ. ಅದನ್ನೇ ಆಧ್ಯಾತ್ಮಿಕ ವಯಸ್ಸು ಎನ್ನಲಾಗುತ್ತದೆ. ಆಧ್ಯಾತ್ಮಿಕತೆಯಲ್ಲಿ ಸಂಪೂರ್ಣ ನಂಬಿಕೆ ಇಟ್ಟವರು, ಇಂತಹ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು ಸೇರಿ ಈ ಕಾರ್ಯಗಳಲ್ಲಿ ನಂಬಿಕೆ ಇಲ್ಲದವರಲ್ಲೂ ನಾವು ಈ ಆಧ್ಯಾತ್ಮಿಕ ವಯಸ್ಸು ಪತ್ತೆ ಮಾಡಬಹುದು.

ಈ ಆಧ್ಯಾತ್ಮಿಕ ವಯಸ್ಸಿನಲ್ಲಿ ಮೂರು ಹಂತಗಳನ್ನು ನಾವು ನೋಡಬಹುದು. ಅದರಲ್ಲಿ ಈ ಮೂರು ಹಂತಗಳಲ್ಲಿ ನಿಮ್ಮ ವಯಸ್ಸು ನಿರ್ಧರಿತವಾಗುತ್ತದೆ. ಹಾಗಾದ್ರೆ ನೀವು ಕೂಡ ನಿಮ್ಮ ಆಧ್ಯಾತ್ಮಿಕ ವಯಸ್ಸು ಎಷ್ಟು ಎಂಬುದನ್ನು ತಿಳಿದುಕೊಳ್ಳಿ.
ಆಧ್ಯಾತ್ಮಿಕ ಮಗು
ಈ ವಯಸ್ಸಿನಲ್ಲಿ ಯಾರು ಪಾಪ ಮತ್ತು ಪುಣ್ಯದ ನಡುವಿನ ವ್ಯತ್ಯಾಸ ಗುರುತಿಸುತ್ತಿರುತ್ತಾರೋ ಅವರ ವಯಸ್ಸಾಗಿದೆ. ಅಂದರೆ ಇದು ಆರಂಭಿಕ ಹಂತ. ಆಧ್ಯಾತ್ಮದಲ್ಲಿ ಅವರಿಗೆ ನಂಬಿಕೆ ಇದ್ದು ಇನ್ನು ಆಳಕ್ಕೆ ಇಳಿಯದೆ ಪೂಜೆ ಹಾಗೂ ಮಂತ್ರದಂತಹ ಕೆಲವೇ ಕೆಲವು ಅಂಶಗಳನ್ನು ಅವರು ರೂಢಿಸಿಕೊಂಡಿರುತ್ತಾರೆ. ದೇವರ ಬಗ್ಗೆ ಇವರಲ್ಲಿ ಒಂದು ಕಲ್ಪನೆ ಮೂಡಿರುತ್ತದೆ. ದೇವರೆಂದರೇ ಹೀಗೆ ಇರುತ್ತಾನೆ. ಹೀಗೆ ಪೂಜಿಸಬೇಕು, ದೇವರೀಗ ಅಸ್ಪಷ್ಟವಲ್ಲ. ಅದೊಂದು ಬಲವಾದ ಶಕ್ತಿ, ತನ್ನ ಏಳಿಕೆಯಲ್ಲಿ ದೇವರ ಪಾಲಿದೆ ಎಂದು ನಂಬಿರುವ ಸಾಮಾನ್ಯ ಆರಂಭಿಕ ಹಂತವಾಗಿದೆ. ಬಹುತೇಕ ಮಂದಿ ಇದೇ ವಯಸ್ಸಿನಲ್ಲಿರುತ್ತಾರೆ.
ಆಧ್ಯಾತ್ಮಿಕ ಯುವ ವಯಸ್ಕ
ಈ ಹಂತದಲ್ಲಿರುವ ಮಂದಿ ದೇವರನ್ನು ಕೇವಲ ಮೂರ್ತಿಯಾಗಿ ನಂಬದೆ ವಿಶೇಷ ಧ್ಯಾನರಾಗಿರುತ್ತಾರೆ. ದೇವರನ್ನು ಮನದೊಳಗೆ ಜಪಿಸುವ ಇವರಲ್ಲಿ ದೇವರ ಕುರಿತು ನಂಬಿಕೆ ಮತ್ತಷ್ಟು ಗಾಢವಾಗಿರುತ್ತೆ. ಪ್ರತಿಯೊಂದು ಕೆಲಸ ಮಾಡುವ ಮುನ್ನ ಅವರು ದೇವರ ಪ್ರಾರ್ಥಿಸಿ ಆತನಿಂದ ಮಾತ್ರ ಇದು ಯಶಸ್ವಿಯಾಗಲಿದೆ ಎಂದು ಭಾವಿಸುತ್ತಾರೆ. ಈ ವಯಸ್ಸಿನಲ್ಲಿ ಆತ ದೇವರನ್ನು ಹುಡುಕಲು ಆರಂಭಿಸುತ್ತಾನೆ. ಹೀಗಾಗಿ ಪುಸ್ತಕಗಳ ಓದಲು ಆರಂಭಿಸುತ್ತಾನೆ. ಧಾರ್ಮಿಕ ಗ್ರಂಥಗಳು, ಪುರಾತನ ಸ್ಥಳಗಳು, ಪವಿತ್ರ ಸ್ಥಳಗಳಲ್ಲಿ ದೇವರನ್ನು ನೋಡಲು ಆರಂಭಿಸುತ್ತಾನೆ. ಅಲ್ಲಿ ಭಕ್ತಿ ಮುಖ್ಯ ಎಂದು ಆತ ನಂಬಿರುತ್ತಾನೆ, ಆದ್ರೆ ಅದರ ಪ್ರತಿಫಲವನ್ನು ಮತ್ತೆ ಆತ ದೇವರ ಮೇಲೆ ಹಾಕುತ್ತಾನೆ.
ಇಲ್ಲಿ ಪಾಪ, ಕರ್ಮ, ಸ್ವರ್ಗ, ನರಕದ ಕುರಿತು ಆತನಿಗೆ ಬಲವಾದ ನಂಬಿಕೆ ಇರುತ್ತದೆ. ಹಾಗೆ ತನಗೆ ತಾನು ಒಂದಿಷ್ಟು ನಿಯಮಗಳ ಹಾಕಿಕೊಳ್ಳುತ್ತಾನೆ. ಬದ್ಧತೆಯಿಂದ ಎಲ್ಲವನ್ನು ಆತ ಪಾಲಿಸುತ್ತಾನೆ.
ಆಧ್ಯಾತ್ಮಿಕ ಪೋಷಕರು
ಈ ಹಂತದಲ್ಲಿರುವ ಮಂದಿ ದೇವರನ್ನು ತಮ್ಮಲ್ಲಿಯೇ ನೋಡುತ್ತಾರೆ. ಅಂದರೆ ದೇವರು ಒಂದು ಸ್ಥಳದಲ್ಲಿ ಇದ್ದಾನೆ ಎಂಬುದನ್ನು ಅವರು ನಂಬುವುದಿಲ್ಲ, ಹಾಗೆ ದೇವರನ್ನು ನಾವು ಸೇರಲು ಒಂದು ಮಾರ್ಗವಿದೆ ಎಂದು ನಂಬುವ ಹಂತ. ಇಲ್ಲಿ ದೇವರನ್ನು ಆತ ತನ್ನ ಒಂದು ಭಾಗ ಎಂದು ಭಾವಿಸುತ್ತಾನೆ. ದೆವರಲ್ಲಿ ಲೀನನಾಗುವ ಹಂತವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ. ಹಾಗೆ ದೇವರಿಂದ ಸೃಷ್ಟಿಯಾದ ಜಗತ್ತು ದೇವರಿಂದ ಅಂತ್ಯವಾಗುವಂತಹ ಸಿದ್ಧಾಂತದಲ್ಲಿ ಬಲವಾದ ನಂಬಿಕೆ ಇಟ್ಟಿರುತ್ತಾರೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
