Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಜನ್ಮ ತಿಂಗಳು ಯಾವುದು..? ನಿಮ್ಮ ಗುಣವೇನು ಗೊತ್ತಾ?
ನೀವು ಹುಟ್ಟಿದ ಗಳಿಗೆ, ದಿನಾಂಕ, ಸಮಯ, ನಕ್ಷತ್ರ ಎಲ್ಲವು ನಿಮ್ಮ ಭವಿಷ್ಯದಲ್ಲಿ ಹಲವು ಬಾರಿ ಮುನ್ನಲೆಗೆ ಬರುತ್ತೆ. ನಿಮ್ಮ ಜಾತಕವು ನಿಂತಿರುವುದು ಈ ಅಂಶಗಳ ಮೇಲೆಯೆ. ಹೀಗಾಗಿ ನಿಮ್ಮ ನಿತ್ಯದ ಆಗು ಹೋಗುಗಳು, ನಿಮ್ಮ ಗುಣಗಳ ನಿರ್ಧಾರಕ್ಕೂ ಕಾರಣವಾಗುತ್ತದೆ. ಹೀಗಾಗಿ ನಿಮ್ಮ ಜನ್ಮ ತಿಂಗಳು, ದಿನ ಬಹಳ ಮುಖ್ಯವಾಗಿರುತ್ತದೆ.
ನಿರ್ದಿಷ್ಟವಾಗಿ ಒಬ್ಬರ ಜನ್ಮ ತಿಂಗಳು ಆ ವ್ಯಕ್ತಿಯ ಭವಿಷ್ಯ ಮತ್ತು ಗುಣವನ್ನು ಬಹಿರಂಗಪಡಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಕೆಲವು ತಿಂಗಳಲ್ಲಿ ಜನಿಸಿದ ವ್ಯಕ್ತಿಗಳ ಗುಣಗಳು ಮತ್ತೊಂದು ತಿಂಗಳಲ್ಲಿ ಜನಿಸಿದ ವ್ಯಕ್ತಿಯ ಗುಣಗಳಿಗೆ ಹೋಲುವುದಿಲ್ಲ. ನಿಮ್ಮ ಗುಣಗಳಿಗೂ ಹುಟ್ಟಿದ ತಿಂಗಳಿಗು ಒಂದಕ್ಕೊಂದು ಸಂಬಂಧವಿದೆ. ಹೀಗಾಗಿ ನೀವು ಯಾವ ತಿಂಗಳಲ್ಲಿ ಜನಿಸಿದ್ದೀರಾ ಎಂಬುದನ್ನು ತಿಳಿಸಿದ್ರೆ ನಾವು ನಿಮ್ಮ ಗುಣಗಳು ಎಂತವು ಎಂಬುದನ್ನು ವಿವರಿಸಿಸುತ್ತೇವೆ.

ಜನವರಿ
ಜನವರಿಯಲ್ಲಿ ಜನಿಸಿದ ವ್ಯಕ್ತಿಯ ವ್ಯಕ್ತಿತ್ವವು ಯಶಸ್ಸಿನ ಕಡೆ ಹಚ್ಚು ಒಲವು ಹೊಂದಿರುವ ಮಂದಿ ಎಂದು ತೋರಿಸಲಿದೆ. ವೈಯಕ್ತಿಕ ಸಂಬಂಧಗಳು, ವೃತ್ತಿಯಲ್ಲಿ ಬೇರೆಯವರ ಮೇಲ ಹಕ್ಕು ಸಾಧಿಸಲು ಮುಂದಾಗುವವರು. ಹಾಗೆ ಹೆಚ್ಚು ಬಲಶಾಲಿಗಳು, ಎಲ್ಲಾ ವಿಷಯದಲ್ಲು ತಮ್ಮ ವಿಚಾರಧಾರೆ ಇರಬೇಕು ಎಂದು ಬಯಸುವವರು. ಯಾರಿಗಾದರು ಸಹಾಯದ ಅನಿವಾರ್ಯತೆ ಇದ್ದಾಗ ನೀವು ಅವರ ನೆರವಿಗೆ ಧಾವಿಸಲು ಮೊದಲಿಗರಾಗಿರುತ್ತೀರಿ. ಪ್ರಚಾರ ಪ್ರಿಯರಲ್ಲ, ಎಲ್ಲ ಸಂಬರ್ಭದಲ್ಲೂ ಶಾಂತವಾಗಿ ಯೋಚಿರುವವರು.
ಫೆಬ್ರವರಿ
ಫೆಬ್ರವರಿಯಲ್ಲಿ ಜನಿಸಿದ ವ್ಯಕ್ತಿಗಳು ಬಹಳ ಸ್ನೇಹಮಯ ಗುಣದವರು, ನೀವೊಮ್ಮೆ ಯಾರ ಸ್ನೇಹವನ್ನಾದರು ಮಾಡಿದ್ರೆ ಅವರನ್ನು ಯಾವಾಗಲು ನೆನಪಿನಲ್ಲಿಡುವವರು. ಕುಟುಂಬದ ಕಾಳಜಿ ವಹಿಸುವವರು. ಹಣ ಹೇಗೆ ಉಳಿಸಬೇಕು ಎಂಬುದನ್ನು ಅರಿತು ಕೆಲಸ ಮಾಡುವವರು. ಆದ್ರೆ ಯಾವುದೇ ವಿಚಾರ ಹೇಳಿಕೊಳ್ಳಲು ನೀವು ಹಿಂದೇಟು ಹಾಕುವವರು.
ಮಾರ್ಚ್
ಮಾರ್ಚ್ ತಿಂಗಳಲ್ಲಿ ಜನಿಸಿದವರು ಬಹಳ ಪ್ರವಾಸ ಪ್ರಿಯರು. ಯಾವಾಗಲು ಸುತ್ತಾಟ, ಹೊಸ ಸ್ಥಳಗಳಿಗೆ ಹೋಗಲು ಇಷ್ಟಪಡುವವರು. ಹಾಗೆ ತಾವಿರುವ ಕಡೆ ಸಂತೋಷ ಇರಬೇಕು ಎಂದು ಬಯಸುವವರು. ಸ್ನೇಹ ಮತ್ತು ವೈಯಕ್ತಿಕ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಎಂದಿಗೂ ಒಂದು ಹೆಜ್ಜೆ ಮುಂದಿಡುವವರು. ಉತ್ತಮ ಜ್ಞಾನಿಗಳು.
ಏಪ್ರಿಲ್
ಏಪ್ರಿಲ್‌ನಲ್ಲಿ ಜನಿಸಿದವರು ಹೆಚ್ಚು ಶ್ರಮ ಜೀವಿಗಳು, ತಾವು ಮಾಡುವ ಕೆಲಸ ಶ್ರದ್ಧೆಯಿಂದ ಮಾಡಲು ಇಚ್ಛಿಸುವವರು. ಸ್ನೇಹದ ವಿಚಾತದಲ್ಲಿ ಒಂದು ಹೆಜ್ಜೆ ಮುಂದೆ. ಸಂಗಾತಿ, ಪ್ರೀತಿ ಪಾತ್ರರಲ್ಲಿ ಅವರು ಪ್ರೀತಿ ಹಂಚುವವರು. ಬಹುತೇಕ ಅವರು ಅಂತರ್ಮುಖಿಗಳು. ಎಲ್ಲರ ಕಷ್ಟ ಕೇಳುವವರು. ಅವರ ಸಹಾಯಕ್ಕೂ ಧಾವಿಸುವವರು.
ಮೇ
ಮೇ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಬುದ್ಧಿವಂತರು. ಹಾಗೆ ತಮಗೆ ಅನಿಸಿದ ವಿಚಾರಗಳನ್ನು ಎಲ್ಲರ ಮುಂದೆ ಯಾವ ಹಿಂಜರಿಕೆ ಇಲ್ಲದಂತೆ ಹೇಳುವವರು, ಶ್ರಮ ಹಾಕಿ ಕೆಲಸ ಮಾಡುವ ಬದಲಾಗಿ ಬುದ್ದಿವಂತಿಕೆ ಉಪಯೋಗಿಸಿ ಕೆಲಸ ಮಾಡುವವರು. ತಮ್ಮ ಸಮಸ್ಯೆಗಳನ್ನು ಒಬ್ಬರೇ ಬಗೆಹರಿಸಲು ಮುಂದಾಗುವವರು.
ಜೂನ್
ಜೂನ್ ನಲ್ಲಿ ಜನಿಸಿದ ವ್ಯಕ್ತಿಗಳು ಹಠಮಾರಿ ಗುಣ ಹೊಂದಿರುವವರಂತೆ. ತಮ್ಮ ಸಾಮರ್ಥ್ಯದಿಂಧ ಉನ್ನತ ಸ್ಥಾನಕ್ಕೆ ಏರಲು ಯಾವಾಗಲು ಹವಣಿಸುವವರು. ಅವರು ಮುದ್ಘರಂತೆ ಕಂಡರು ಕೂಡ ಬಹಳ ಬುದ್ದಿವಂತಿಕೆಯಿಂದ ಕೆಲಸ ಮಾಡುವವರು.
ಜುಲೈ
ಜುಲೈನಲ್ಲಿ ಜನಿಸಿದ ಪುರುಷರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಅವರದು ದ್ವಂದ್ವ ವ್ಯಕ್ತಿತ್ವ. ಕೆಲವೊಮ್ಮೆ ಅವರು ಸುಲಭದ ಕೆಲಸವನ್ನು ಕಷ್ಟಕರವಾಗಿ ತೆಗೆದುಕೊಳ್ಳುವಂತವರು. ಕುಟುಂಬಸ್ಥರಿಗಾಗಿ ಯಾವ ಕಾರ್ಯವನ್ನಾದರು ಮಾಡಲು ಮುಂದಾಗುವವರು.
ಆಗಸ್ಟ್
ಆಗಸ್ಟ್ ಪುರುಷರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ. ಅವರು ತುಂಬಾ ಮಾತನಾಡುವ, ಕಠಿಣ ಪರಿಶ್ರಮ ಮತ್ತು ಧೈರ್ಯಶಾಲಿಗಳಾಗಿರುತ್ತಾರೆ. ದೇವರಲ್ಲಿ ನಂಬಿಕೆ ಇಟ್ಟವರು. ಹಲವು ಕೆಲಸಗಳನ್ನು ಒಬ್ಬರೆ ಮಾಡಿ ಮುಗಿಸಬೇಕು ಎಂಬ ಕನಸು ಕಾಣುವವರು. ಯಾವುದೇ ಕೆಲಸವನ್ನು ಇಲ್ಲ ಎನ್ನದೆ ಮಾಡುವವರು.
ಸೆಪ್ಟೆಂಬರ್
ಸೆಪ್ಟೆಂಬರ್‌ನಲ್ಲಿ ಜನಿಸಿದ ಪುರುಷರು ಭವಿಷ್ಯದ ಕುರಿತು ಬಹಳ ಚಿಂತೆ ಇಟ್ಟುಕೊಳ್ಳುವವರು. ಯಾವಾಗಲು ಕೆಲಸ ಹಾಗೂ ಮನೆಯ ಕಡೆಗೆ ಯೋಚಿಸುವವರು. ಎಲ್ಲಾ ಕಡೆಗಳಲ್ಲೂ ಉತ್ತಮ ಮಾತುಗಾರಿಕೆ ಮೂಲಕ ಗಮನ ಸೆಳೆಯುವವರು.
ಅಕ್ಟೋಬರ್
ಅಕ್ಟೋಬರ್‌ನಲ್ಲಿ ಜನಿಸಿದ ಪುರುಷರು ಬುದ್ಧಿವಂತರು. ಹಣ ಸಂಪಾದನೆ ಮುಖ್ಯ ಎಂದು ಭಾವಿಸುವವರು. ತಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಾಗಿ ಯಶಸ್ಸು ಗಳಿಸುವವರು. ಆದ್ರೆ ತಮ್ಮಿಷ್ಟದ ವಸ್ತುಗಳು ಅವರಿಗೆ ಬಹುಬೇಗ ಒಲಿದು ಬರುವುದಿಲ್ಲ.
ನವೆಂಬರ್
ನವೆಂಬರ್‌ನಲ್ಲಿ ಜನಿಸಿದ ಮಂದಿ ಎಲ್ಲರನ್ನೂ ಪ್ರೀತಿಯಿಂದ ನೋಡುವವರು. ಆರ್ಥಿಕವಾಗಿ ಎಲ್ಲರಿಂದ ಬೆಂಬಲ ಪಡೆಯುವವರು. ಯಾವಾಗಲು ದೊಡ್ಡ ವಿಚಾರಗಳ ಕುರಿತು ಆಲೋಚಿಸುವವರು. ಯಾರನ್ನು ಸುಲಭವಾಗಿ ನಂಬುವವರಲ್ಲ. ಹಣಕಾಸು ವಿಚಾರದಲ್ಲಿ ಬಹಳ ಆಲೋಚಿಸಿ ಹೆಜ್ಜೆ ಇಡುವವರು.
ಡಿಸೆಂಬರ್
ಡಿಸೆಂಬರ್‌ನಲ್ಲಿ ಜನಿಸಿದ ಪುರುಷರು ತುಂಬಾ ಸೂಕ್ಷ್ಮ ಸ್ವಭಾವದವರು. ಹೆಚ್ಚು ಮಾತನಾಡುವವರು. ಹಾಗೆ ಹೊಸ ವಿಚಾರಗಳನ್ನು ಹುಡುಕಲು ಮುಂದಾಗುವವರು. ಸುಲಭವಾಗಿ ನಿಮ್ಮನ್ನು ಯಾರು ಮೋಸ ಮಾಡಲು ಆಗುವುದಿಲ್ಲ. ಮನೆಯ ಎಲ್ಲಾ ಸದಸ್ಯರ ಕಾಳಜಿ ಇಡುವವರು. ಖಾದ್ಯ ಪ್ರಿಯರು, ಬಹುಬೇಗ ಸಿಟ್ಟು ಮಾಡಿಕೊಳ್ಳುವ ಗುಣದವರು
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲಾಗಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications