Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಇದೇನು ಹಸು ರೀತಿ ಇದೆ ಆದರೆ ಹಸುವಲ್ಲ, ಕೈ ಕಾಲುಗಳ ಬದಲಿಗೆ ಮೀನಿನಂತೆ ರೆಕ್ಕೆ, ನೀರಿನಲ್ಲಿ ವಾಸಿಸುವ ಜಲಚರವಿದು!
ಅರೇ ಇದೇನು ಹಸುನಾ ಅಲ್ಲಲ್ಲ, ಹಸು ರೀತಿ ಇರುವ ಜಲಚರ ಜೀವಿ.. ಇಂಥದ್ದೊಂದು ವಿಚಿತ್ರ ವೀಡಿಯೋ ಕೆಲವು ದಿನಗಳಿಂದ ವೈರಲ್ ಆಗುತ್ತಿದೆ. ಇಡೀ ಶರೀರ , ಮುಖವೆಲ್ಲಾ ಥೇಟ್ ಹಸು , ಆದರೆ ಕಾಲುಗಳಿಲ್ಲ ಅದರ ಬದಲಿಗೆ ಮೀನುಗಳಿಗೆ ಇರುವಂತೆ ರೆಕ್ಕೆ ಇದೆ.
ನೀರಿನಲ್ಲಿ ಮತ್ಸ್ಯ ಮಾತ್ರವಲ್ಲ ಹಲವು ಬಗೆಯ ಜೀವಿಗಳಿವೆ, ನೀರು ಕುದುರೆ, ಮೊಸಳೆ ಮತ್ಸ್ಯ ಜೀವಿಗಳಲ್ಲದೆ ಅನೇಕ ಜೀವಿಗಳು ನೀರಿನಲ್ಲಿವೆ, ಅದರಲ್ಲೊಂದು ಜೀವಿ ಇದು ಇರಬಹುದೇ ಅಥವಾ AI ಕ್ರಿಯೇಟ್ ಮಾಡಿರುವ ವೀಡಿಯೋ ಆಗಿರಬಹುದೇ ಎಂಬ ಸಂಶಯ ಕೂಡ ಇದೆ.

ಏಕೆಂದರೆ ಇದುವರೆಗೆ ಇಂಥದ್ದೊಂದು ಜೀವಿಯನ್ನು ಯಾರೂ ನೋಡಿರಲಿಲ್ಲ, ಅಲ್ಲದೆ ಈ ಡಿಜಿಟಲ್ ಯುಗದಲ್ಲಿ ಇಲ್ಲದಿರುವುದನ್ನು ಇರುವಂತೆ ಸೃಷ್ಟಿಸಬಹುದು ಹಾಗಾಗಿ ಇದು ನಿಜವಾಗಿ ಕಂಡು ಬಂದ ಪ್ರಾಣಿಯೇ ಎಂಬುವುದರ ಬಗ್ಗೆ ನಿಖರ ಮಾಹಿತಿ ದೊರಕಿಲ್ಲ.
ನೋಡಲು ಥೇಟ್ ಹಸು ಆದರೆ ಅದರ ಮೈ ಮೀನಿನ ಮೈಯಂತೆ ನುಣಪಾಗಿದೆ, ಜೊತೆಗೆ ಹಸುವಿಗೆ ಇರುವಂತೆ ಕೊಂಬಿದೆ, ಅದರ ಜೊತೆಗೆ ಅದರ ಮರಿ ಕೂಡ ಇದೆ, ಅದರ ಸುತ್ತ ಮುತ್ತ ಜನರು ನಿಂತು ನೋಡುತ್ತಿರುವ ದೃಶ್ಯವಿದೆ, ಅಲ್ಲಿ ಮರಳಿನಲ್ಲಿ ಗುಂಡಿ ಗುಂಡಿಯಾಗಿ ಜನ ಓಡಾಡಿದಂತೆ ಕಾಣುತ್ತದೆ. AI ನಿರ್ಮಿತ ಚಿತ್ರವಾಗಿದ್ದರೆ ಇಂಥ ಚಿಕ್ಕ -ಚಿಕ್ಕ ವಿಷಯವನ್ನು ನಿರ್ಮಿಸಿರಲು ಸಾಧ್ಯವಿಲ್ಲ, ಹಾಗಾಗಿ ಇದು ನಿಜವಿರಬಹುದೇ ಎಂದು ಕೂಡ ಅನಿಸುವುದು.
ಏನೇ ಆಗಲಿ ಆ ವೀಡಿಯೋ ಮಾತ್ರ ತುಂಬಾನೇ ವೈರಲ್ ಆಗಿದೆ. ಅದರಲ್ಲಿ ಹಸು ತಲೆ ಎತ್ತಿ ನೋಡುತ್ತಿರುವ ದೃಶ್ಯ ಎಲ್ಲವೂ ತುಂಬಾನೇ ನೈಜವಾಗಿದೆ, ಎಂಥ ಗ್ರಾಫಿಕ್ ಆದ್ರೂ ಅಷ್ಟೊಂದು ನೈಜತೆ ಮೂಡಲು ಸಾಧ್ಯವಿಲ್ಲ, ಆ ಗ್ರಾಫಿಕ್ಸ್ , ಎಫೆಕ್ಟ್ಸ್ ಎಲ್ಲವೂ ಗಮನ ಸೆಳೆಯುತ್ತದೆ. ಅದಲ್ಲದೆ ಇನ್ನು ಪ್ರಮುಖ ಅಂಶವೆಂದರೆ ಆ ವೀಡಿಯೋ ಕೂಡ HD ಗುಣಮಟ್ಟದಲ್ಲಿಯೂ ಇಲ್ಲ, ಗ್ರಾಫಿಕ್ಸ್ ಅಥವಾ AI ಮೂಲಕ ಮಾಡಿದ್ದರೆ ಸ್ವಲ್ಪವಾದರೂ ಗೊತ್ತಾಗುತ್ತಿತ್ತು, ಆದರೆ ಇದು ಶೇ. 100ರಷ್ಟು ನೈಜತೆಯಿಂದ ಕಾಣುತ್ತಿದೆ.
ಈ ಪ್ರಾಣಿ ನಿಜವೇ ಆಗಿದ್ದರೆ ಈ ಪ್ರಪಂಚದಲ್ಲಿ ನಮಗೆ ತಿಳಿಯದಿರುವ ಏನೆಲ್ಲಾ ಚಿತ್ರ-ವಿಚಿತ್ರಗಳಿವೆ ಅಲ್ವಾ?
ಪ್ರಕೃತಿ ಎಂಬುವುದೇ ಕೌತುಕದ ಬೀಡು, ಅವಳು ತನ್ನ ಒಡಲಿನಲ್ಲಿ ಹಲವು ರಹಸ್ಯಗಳನ್ನು ಬಚ್ಚಿಟ್ಟಿದ್ದಾಳೆ, ಎಲ್ಲವೂ ಇನ್ನೂ ಮಾನವನಿಗೆ ತಿಳಿದಿಲ್ಲ, ಎಷ್ಟೋ ಪ್ರಾಣಿ, ಪಕ್ಷಿ, ಜಲಚರಗಳು ಮನುಷ್ಯನ ಕಣ್ಣಿಗೆ ಬೀಳದೆ ಇವೆ. ಕೆಲವೊಮ್ಮೆ ಈ ರೀತಿ ವಿಚಿತ್ರ ಪ್ರಾಣಿಗಳು ಕಂಡು ಬಂದಾಗ ತುಂಬಾನೇ ಗಮನ ಸೆಳೆಯುತ್ತದೆ.
ಅಂತರ್ಜಾಲದಲ್ಲಿ ಇದರ ಬಗ್ಗೆ ಮಾಹಿತಿ ಹುಡುಕಿದಾಗ ನಿಮಗೆ Sea Cows ಬಗ್ಗೆ ಮಾಹಿತಿ ಸಿಗುತ್ತದೆ. ಅದು ಹಸುವಿನ ರೀತಿ ಕಾಣುವ ನೀರಿನಲ್ಲಿ ವಾಸಿಸುವ ಪ್ರಾಣಿ, ಗಾತ್ರದಲ್ಲಿ ನಮ್ಮ ಹಸುಗಳಿರುತ್ತದೆ ಅಲ್ವಾ ಅದೇ ರೀತಿ ದೊಡ್ಡ ಗಾತ್ರದಲ್ಲಿ ಇರುತ್ತದೆ, ಇದರಲ್ಲಿಯೂ ನಾಲ್ಕು ಜಾತಿಗಳಿವೆಯಂತೆ. ಈ ಬಗೆಯ ಪ್ರಾಣಿಗಳು ಯುಎಸ್, ಫ್ಲೋರಿಡಾ ಇಲ್ಲಿನ ನದಿಗಳಲ್ಲಿ ಕಂಡು ಬರುವುದಂತೆ, ಇವುಗಳು ತಿಳಿ ನೀರಿನ ನದಿಯಲ್ಲಿ ಇರುವುದಂತೆ, ಬೇಸಿಗೆಯಲ್ಲಿ ನೀರಿನೊಳಗಡೆ ಇದ್ದರೆ ಚಳಿಗಾಲದಲ್ಲಿ ಹೊರಗಡೆ ಬರುತ್ತದೆ, ಆವಾಗ ಮನುಷ್ಯರಿಗೆ ಕಾಣ ಸಿಗುತ್ತದೆ ಎಂದು ಹೇಳಲಾಗುವುದು. ಆಸ್ಟ್ರೇಲಿಯಾದ ನಿವಾಸಿಗಳು ಇದರ ಮಾಂಸ ಆಹಾರವಾಗಿ ಸೇವಿಸುತ್ತಾರೆ ಎಂದು ಹೇಳಲಾಗುವುದು,
ಇದು ಹುಲ್ಲು, ನದಿಯೊಳಗಡೆ, ಕಲ್ಲಿನ ಮೇಲೆ ಬೆಳೆದಿರುವ ಗಿಡಗಳು, ಪಾಚಿ ತಿಂದು ಬದುಕುತ್ತದೆ ಎಂದು ಹೇಳಲಾಗುವುದು.
ಅವುಗಳು ನೀರಿನಿಂದ ಹೊರಬಂದು 3-5 ನಿಮಿಷ ಉಸಿರಾಡಿ ನಂತರ ನೀರಿನೊಳಗಡೆ ಹೋಗುತ್ತದೆ, ಅಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳುತ್ತದೆ, ಬಹುಶಃ ಈ ಪ್ರಾಣಿ ಕೂಡ ಅದೇ ವರ್ಗಕ್ಕೆ ಸೇರಿರಬಹುದು ಅಲ್ವಾ?



Click it and Unblock the Notifications