Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
'ಮ' ಅಕ್ಷರದಿಂದ ಹೆಸರು ಆರಂಭವಾಗುವವರ ವ್ಯಕ್ತಿತ್ವವೇನು? ವಿವಾಹ ಜೀವನ ಏನು ಹೇಳುತ್ತೆ ನೋಡಿ
ನಮ್ಮ ಹೆಸರು ನಾವು ಹುಟ್ಟಿದ ದಿನ, ಗಳಿಗೆ ಎಲ್ಲವೂ ನಮ್ಮ ನಡತೆ, ಭಾವನೆ, ಗುಣವನ್ನ ನಿರ್ಧರಿಸುತ್ತವೆ. ನಮ್ಮ ಹೆಸರು ಆರಂಭವಾಗುವ ಪದಗಳು ಸಹ ನಮ್ಮ ಗುಣಗಳನ್ನು ಹೇಳುತ್ತವೆ. ನಾವು ಯಾವ ರೀತಿಯ ಗುಣ ಹೊಂದಿದ್ದೇವೆ, ನಮ್ಮ ಹೆಸರಿಗೆ ಸೂಕ್ತವಾಗುವ ಕೆಲಸ ಯಾವುದು? ನಮ್ಮ ಹೆಸರಿಗೂ ನಮ್ಮ ಗುಣಕ್ಕೆ ಇರುವ ಸಂಬಂಧವೇನು ಎಂಬುದನ್ನು ಸೂಚಿಸುತ್ತವೆ.
ಹಾಗಾದರೆ ನಾವಿಂದು ಮ ಅಥವಾ M ಅಕ್ಷರದಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳ ಗುಣಗಳೇನು? ಅವರಿಗೆ ಸರಿಹೊಂದುವ ಕೆಲಸ ಯಾವುದು? ಅವರು ಯಾವ ಕೆಲಸ ಮಾಡಬಾರದು ಎಂಬ ಕುರಿತು ತಿಳಿದುಕೊಳ್ಳೋಣ.

ಒಬ್ಬ ವ್ಯಕ್ತಿಯು ಜನಿಸಿದಾಗಲೇ, ವ್ಯಕ್ತಿಯ ಗುಣಲಕ್ಷಣಗಳನ್ನು ವ್ಯಾಖ್ಯಾನಿಸುವ ಅನೇಕ ವಿಷಯಗಳಿವೆ. ಹುಟ್ಟಿದ ಸಮಯದಿಂದ ಹೆಸರಿನವರೆಗೆ, ಈ ಎಲ್ಲಾ ವಿಷಯಗಳು ವ್ಯಕ್ತಿಯ ಗುಣಲಕ್ಷಣಗಳನ್ನು ವ್ಯಾಖ್ಯಾನಿಸಲು ಸಹಾಯ ಮಾಡುತ್ತದೆ.
M ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಅತ್ಯಂತ ನಿಷ್ಠಾವಂತರು, ಕಠಿಣ ಪರಿಶ್ರಮಿಗಳು ಮತ್ತು ಸುರಕ್ಷತೆಯನ್ನು ಯಾವಾಗಲು ಕಾಪಾಡಿಕೊಳ್ಳುವ ಜನರು ಎಂದು ಹೇಳಲಾಗುತ್ತದೆ. ಅವರು ಜೀವನದಲ್ಲಿ ವಿಶ್ವಾಸಾರ್ಹರು ಮತ್ತು ಸಾಕಷ್ಟು ಪ್ರಾಯೋಗಿಕವಾಗಿ ಯೋಚಿಸುವ ಜನರಾಗಿರುತ್ತಾರೆ. ಅಂದರೆ ಅವರ ಬಳಿ ಯಾರಾದರು ಏನಾದರು ಹೇಳಿದರೆ ಅದು ಸತ್ಯವೇ, ಇಲ್ಲವೆ ಎಂಬುದನ್ನು ಖುದ್ದು ಪರಿಶೀಲಿಸಬೇಕು ಎಂಬ ಮನೋಭಾವ ಹೊಂದಿರುತ್ತಾರೆ .
ಅವರು ಯಾವಾಗಲೂ ಭವಿಷ್ಯದ ಕುರಿತು ಚಿಂತಿಸುತ್ತಾರೆ. ಅಂದರೆ ನಾಳೆ ಏನು ಮಾಡಬೇಕು. ನಾಳೆಯ ಕೆಲಸವನ್ನು ಮಾಡಲು ಇಂದು ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಚೆನ್ನಾಗಿ ಅರಿತಿರುತ್ತಾರೆ. ಜೊತೆಗೆ ಎಂತಹ ಕೆಲಸಕ್ಕಾದರೂ ಹಿಂಜರಿಯದೆ ಪ್ರಯತ್ನ ಮಾಡುವವರಾಗಿದ್ದಾರೆ, ಹೊಸ ಪ್ರಯೋಗ ಮಾಡಲು ಯಾವಾಗಲು ಉತ್ಸುಕರಾಗಿರುತ್ತಾರೆ.
ದೇವರ ಬಗ್ಗೆ ಅವರ ನಂಬಿಕೆ ಏನು?
ಮ ಅಕ್ಷರದಿಂದ ಹೆಸರು ಆರಂಭವಾಗುವ ಜನರು ದೇವರನ್ನು ನಂಬುವವರಾಗಿರುತ್ತಾರೆ. ಆದರೆ ಮೂಢ ನಂಬಿಕೆಗಳ ಪ್ರಶ್ನಿಸುವಷ್ಟು ಧೈರ್ಯ ಅವರಲ್ಲಿರುತ್ತದೆ. ಹೀಗಾಗಿ ದೇವರ ಮೂಲಕ ಅವರು ಮಾಡುವ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ. ನಂಬಿಕೆಯಲ್ಲಿ ದೃಢವಾಗಿ ಇಚ್ಛೆ ಹೊಂದುತ್ತಾರೆ. ದೇವರಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಾರೆ. ಅವರು ಮಾಡುವ ಕೆಲಸವೇ ದೇವರಿಗೆ ಸಮ ಎಂದು ನಂಬುತ್ತಾರೆ.
ವೃತ್ತಿಯಲ್ಲಿ ಅವರ ಗುಣವೇನು?
ಮ ಅಕ್ಷರದಿಂದ ಹೆಸರು ಆರಂಭವಾಗುವ ಜನರು ವೃತ್ತಿಯಲ್ಲಿ ಯಾವಾಗಲೂ ಯಶಸ್ಸು ಪಡೆಯುತ್ತಾರೆ. ಆದರೆ ಕೆಲವು ಬಾರಿ ಏರಿಳಿತ ನೋಡಿ ಅದರಿಂದ ಪಾಠ ಕಲಿತಿರುತ್ತಾರೆ. ಇನ್ನು ಇವರು ರಾಜಕೀಯದ ಕಡೆ ಹೆಚ್ಚು ಒಲವು ಹೊಂದಿರುತ್ತಾರೆ. ರಾಜಕೀಯ ವ್ಯಕ್ತಿಗಳ ಅನುಸರಿಸುವುದು, ಅವರ ಜೊತೆ ಸಮಾಜಮುಖಿ ಕಾರ್ಯ ಮಾಡಲು ಇಷ್ಟ ಪಡುತ್ತಾರೆ. ಇನ್ನು ವೃತ್ತಿಯಲ್ಲಿ ಅವರು ಎಲ್ಲಾ ವರ್ಗದ ವಿಧದ ಕೆಲಸ ಮಾಡಲು ಮುಂದಾಗುತ್ತಾರೆ. ಬಹುಪಾಲು ಕೆಲಸಗಳಲ್ಲಿ ಯಶಸ್ಸನ್ನೂ ಸಾಧಿಸುತ್ತಾರೆ.
ಪ್ರೀತಿ ಮತ್ತು ವಿವಾಹ ಜೀವನ
ಪ್ರೀತಿಯ ವಿಷಯದಲ್ಲಿ, ಮ ಅಕ್ಷರದ ಮಂದಿ ಸ್ವಲ್ಪ ಭಾವನಾತ್ಮಕವಾಗಿರುತ್ತಾರೆ, ಅದಕ್ಕಾಗಿಯೇ ಅವರು ಬೇಗನೆ ಪ್ರೀತಿಯಲ್ಲಿ ಬೀಳುತ್ತಾರೆ ಆದರೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ತುಂಬಾ ಹಿಂಜರಿಯುತ್ತಾರೆ. ಆದಾಗ್ಯೂ, ಈ ಜನರು ಸಂಬಂಧಗಳನ್ನು ನಿರ್ಮಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಬಹಳ ಮುಂದಿದ್ದಾರೆ.
ಈಗಾಗಲೇ ಹೇಳಿದಂತೆ, ಎಂ ಎಂಬ ವ್ಯಕ್ತಿಯು ಭಾವೋದ್ರಿಕ್ತನಾಗಿರುತ್ತಾನೆ, ಆದ್ದರಿಂದ ಅವನು ಬೇಗನೆ ಯಾರನ್ನಾದರೂ ಪ್ರೀತಿಸುತ್ತಾನೆ. ಒಮ್ಮೆ ಅವರು ಯಾರನ್ನಾದರು ಇಷ್ಟಪಟ್ಟರೆ ಹೃದಯದಿಂದ ಪ್ರೀತಿಸುತ್ತಾರೆ. ಇನ್ನು ದಾಂಪತ್ಯದಲ್ಲಿ ಅವರು ಯಾವಾಗಲೂ ಪ್ರೀತಿಯನ್ನಷ್ಟೇ ಹುಡುಕುತ್ತಾರೆ. ಗಲಾಟೆ, ಹೊಡೆದಾಟದಿಂದ ಯಾವಾಗಲೂ ದೂರ ಉಳಿಯಲು ಬಯಸುತ್ತಾರೆ. ತಮ್ಮನ್ನು ನಂಬಿರುವ ಕುಟುಂಬ, ಜನರನ್ನು ಯಾವಾಗಲೂ ಸಂತೋಷದಿಂದ ನೋಡುವುದು ಅವರ ಗುರಿಯಾಗಿರುತ್ತದೆ.



Click it and Unblock the Notifications
