Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆಬ್ರವರಿಯಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರಲಿದೆ? ಅವರ ಗುಣಗಳೇನು ಗೊತ್ತಾ?
ನೀವು ಜನಿಸಿದ ಸಮಯ ನಿಮ್ಮ ಭವಿಷ್ಯ ರೂಪಿಸುವಲ್ಲಿ ಹಾಗೆ ನಿಮ್ಮ ಜೀವನದ ಪ್ರತಿಯೊಂದು ಆಗು ಹೋಗುಗಳ ಹಿಂದೆ ಪ್ರಮುಖ ಕಾರಣವಾಗಿರಲಿದೆ. ಜನಿಸಿದ ಸಮಯ, ದಿನಾಂಕ, ವಾರ, ತಿಥಿ, ರಾಶಿ ಹೀಗೆ ಹಲವು ವಿಚಾರಗಳು ನಿಮ್ಮ ಜೀವನ ರೂಪಿಸುವ ಅಂಶಗಳಲ್ಲಿ ಒಂದಾಗಿರಲಿದೆ. ಹಾಗೆ ನಿಮ್ಮ ಗುಣ ಲಕ್ಷಣಗಳು ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ನಿರ್ಧರಿಸುವ ಅಂಶಗಳು ಕೂಡ ಇವೇ ಆಗಿರಲಿದೆ.
ಇನ್ನು ಫೆಬ್ರವರಿಯಲ್ಲಿ ಜನಿಸಿದವರು ಯಾವ ರೀತಿಯ ಗುಣ ಲಕ್ಷಣಗಳ ಹೊಂದಿರುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ನಿಮ್ಮಲ್ಲಿದ್ದರೆ ನಾವಿಂದು ಈ ಕುರಿತಾಗಿ ಹೇಳಲಿದ್ದೇವೆ. ಪ್ರತಿಯೊಬ್ಬರ ವ್ಯಕ್ತಿತ್ವ ನಿರ್ಧರಿಸುವ ಹಲವು ಅಂಶಗಳಲ್ಲಿ ಅವರ ಜಾತಕ ಫಲ ಸಹ ಒಂದಾಗಿರಲಿದೆ. ಹೀಗೆ ಫೆಬ್ರವರಿಯ ತಿಂಗಳಿನಲ್ಲಿ ಜನಿಸಿದವರು ಯಾವ ರೀತಿ ವ್ಯಕ್ತಿತ್ವ ಹೊಂದಿರಲಿದ್ದಾರೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಫೆಬ್ರವರಿಯಲ್ಲಿ ಜನಿಸಿದವರು ವಿಶಿಷ್ಟ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಾಗಿದೆ. ಅವರ ವೃತ್ತಿ ಬದುಕು ಅತ್ಯಂತ ನೆಮ್ಮದಿಯಿಂದ ಕೂಡಿರುತ್ತದೆ. ಇವರು ಬಹಳ ತೀಕ್ಷ್ಣವಾದ ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ಅಂದರೆ ಅವರು ಮನಸ್ಸಿನ ಮಾತು ಹೆಚ್ಚಾಗಿ ಕೇಳುವ ಮಂದಿ. ಅವರ ಮನಸ್ಸಿಗೆ ಇಷ್ಟವಿಲ್ಲದ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಹಾಗೆ ಬದುಕನ್ನು ಹೆಚ್ಚು ಪ್ರೀತಿಸುವವರು, ಆನಂದಿಸುವವರು, ಮನೆ, ಕುಟುಂಬದಲ್ಲಿ ಸಂತೋಷ ಬಯಸುವವರು.
ಫೆಬ್ರವರಿಯಲ್ಲಿ ಜನಿಸಿದ ವ್ಯಕ್ತಿಯ ನಡೆತೆ ಹೇಗಿರಲಿದೆ?
ಅವರು ಬಹಳ ಸ್ಥಿತಪ್ರಜ್ಞರು. ಅವರ ಸಾಮರ್ಥ್ಯಗಳು ಮತ್ತು ಪ್ರತಿಭೆಗೆ ಹೋಲಿಸಿದರೆ, ಸ್ಥಾನ ಮತ್ತು ಸಂಪತ್ತು ಎರಡೂ ಹೆಚ್ಚಾಗಿ ಒಲಿಯಲಿದೆ. ಅವರು ಸ್ವಲ್ಪ ಕಡಿಮೆ ಅದೃಷ್ಟವಂತರು, ಅಥವಾ ಅದೃಷ್ಟವು ಅವರಿಗೆ ತುಂಬಾ ಕಡಿಮೆ ಅಥವಾ ತುಂಬಾ ತಡವಾಗಿ ಮಾತ್ರ ಅನುಕೂಲಕರವಾಗಿರುತ್ತದೆ. ಹಾಗೆ ಅವರ ಕುಟುಂಬ ಜೀವನದಲ್ಲಿ ಏರಿಳಿತವಿದ್ದರೂ ಎಲ್ಲವನ್ನು ಏಕಾಂಗಿಯಾಗಿ ನಿಭಾಯಿಸುವ ಬಲ ಹೊಂದಿರುವ ವ್ಯಕ್ತಿತ್ವ ಹೊಂದಿರುತ್ತಾರೆ. ಎಲ್ಲರನ್ನು ಸುಲಭವಾಗಿ ನಂಬದವರು ಹಾಗೆ ಬಾಹ್ಯ ಸೌಂದರ್ಯಕ್ಕಿಂತಲೂ ಮನಸ್ಸಿನ ಮಾತುಗಳಿಗೆ ಹೆಚ್ಚು ಒತ್ತು ನೀಡುವವರು. ಭಾವನೆಗಳ ಬಹುಬೇಗ ತೋರಿಸುವಿಕೆಯೇ ಅವರ ವೀಕ್‌ನೆಸ್ ಸಹ ಆಗಿರಬಹುದು. ಮೌನವಾಗಿರಲು ಬಯಸುವ ಅವರು ನೊವಿಗೆ ಸ್ಪಂಧಿಸುವ ಗುಣ ಹೊಂದಿರುತ್ತಾರೆ.
ಅವರು ಬಹಳ ಭಾವನಾತ್ಮಕವಾಗಿರುವವರು. ಇದರಿಂದ ವೃತ್ತಿಜೀವನದಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅವರು ಇವುಗಳನ್ನು ಬೇಗನೆ ಜಯಿಸುತ್ತಾರೆ. ಅವರು ತಮ್ಮ ಕೆಲಸದಲ್ಲಿ ಬಹಳ ಪ್ರಾಮಾಣಿಕ ಮತ್ತು ನೇರ ಸ್ವಭಾವವನ್ನು ಹೊಂದಿರುತ್ತಾರೆ, ಇದು ಅವರ ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಗಳಿಸುತ್ತದೆ. ಅನೇಕ ನಿರ್ಧಾರಗಳು ಅವರ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಲು ಕಾರಣವಾಗುತ್ತವೆ.
ಹಾಗೆ ಶಿಕ್ಷಣ ವಿಚಾರದಲ್ಲಿ ನೀವು ಬಹಳ ಅದೃಷ್ಟವಂತರು. ವಾಹನ ವಿಚರಗಳಲ್ಲಿಯೂ ನೀವು ಬಯಸಿದಂತಹ ಜೀವನ ನಿಮ್ಮದಾಗುತ್ತದೆ. ನೀವು ಇತರರೊಂದಿಗೆ ಹಲವು ವಿಚಾರಗಳನ್ನು ಮುಕ್ತವಾಗಿ ಹೇಳಿಕೊಳ್ಳುವವರು. ಆದ್ರೆ ಸಂಬಂಧಗಳ ವಿಚಾರದಲ್ಲಿ ನಿಮಗೆ ನೋವುಗಳು ಹೆಚ್ಚು. ತುಂಬಾ ಬಲವಾದ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಸುಲಭವಾಗಿ ಮನನೊಂದಿರುತ್ತಾರೆ ಮತ್ತು ಮೃದು ಹೃದಯಿಗಳು ಮತ್ತು ಸ್ವಭಾವತಃ ನಿಗೂಢರು. ಜನರನ್ನು ಬೇಗನೆ ನಂಬುವ ಅವರ ಪ್ರವೃತ್ತಿಯು ಅವರನ್ನು ತೊಂದರೆಗೆ ಸಿಲುಕಿಸುತ್ತದೆ. ನಿಮ್ಮ ವೈಯಕ್ತಿಕ ಜೀವನಕ್ಕಿಂತಲೂ ನಿಮ್ಮನ್ನು ನಂಬಿರುವ ಜನರನ್ನು ಸಂತೋಷದಿಂದ ನೋಡಲು ನೀವು ಇಷ್ಟಪಡುವವರು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications