Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಮಾನವ ನಿರ್ಮಿಸಿರುವ ಅತ್ಯಂತ ದುಬಾರಿ ವಸ್ತು ಯಾವುದು.? ಇಲ್ಲಿದೆ ಉತ್ತರ.!
ಮಾನವ ಭೂಮಿ ಮೇಲಿನ ಅತ್ಯಂತ ಬುದ್ದಿವಂತ ಜೀವಿ. ಆತ ಕಂಡು ಹಿಡಿಯದ ಯಂತ್ರವಿಲ್ಲ, ನೋಡದ ಜಗತ್ತಿಲ್ಲ. ಪ್ರಾಣಿಗಳು ಕೂಡ ವಾಸವಿಲ್ಲದೆ ಕಡೆ ಅಂದರೆ ಬೇರೆಯದ್ದೇ ಗ್ರಹಕ್ಕೂ ಕಾಲಿಟ್ಟಿದ್ದಾನೆ. ಚಂದ್ರನ ಮೇಲೂ ಕಾಲಿಟ್ಟು ಇತಿಹಾಸ ಬರೆದಿದ್ದಾನೆ. ಆತ ಕನಸಿನಲ್ಲಿ ಕಂಡಿದ್ದನ್ನು ನನಸು ಮಾಡಿಕೊಳ್ಳಲು ಹಾತೊರೆಯುವ ಏಕೈಕ ಜೀವಿ. ಆತನಿಗೆ ಅಸಾಧ್ಯ ಎನ್ನುವ ಮಾತು ದೂರ.
ಆದ್ರೆ ಮಾನವ ನಿರ್ಮಿಸಿರುವ ಅತ್ಯಂತ ದುಬಾರಿ ವಸ್ತು ಯಾವುದು? ಎಂಬ ಪ್ರಶ್ನೆ ಕೇಳಿದರೆ ಹಲವರು ದುಬೈನ ಬುರ್ಜ್ ಖಲೀಫಾ, ಚೀನಾದ ಮಹಾಗೋಡೆ, ತಾಜ್ ಮಹಲ್ ಇರಬಹುದು ಎಂದು ಉತ್ತರಿಸಬಹುದು. ಇಲ್ಲವೆ ವಿಶ್ವದ ದೊಡ್ಡ ಟೆಲಿಸ್ಕೋಪ್ ಇರಬಹುದು, ವೀಕ್ಷಣಾಲಯ ಇರಬಹುದು, ಚಂದ್ರನ ಮೇಲೆ ಹಾರಿದ ಯೋಜನೆ ಅತ್ಯಂತ ದುಬಾರಿ ಇರಬಹುದು ಎಂದು ಅಂದಾಜಿಸುತ್ತಾರೆ.

ಆದ್ರೆ ಇದ್ಯಾವುದು ಅಲ್ಲ, ಮಾನವ ನಿರ್ಮಿಸಿದ ಅತ್ಯಂತ ದುಬಾರಿ ವಸ್ತು ಇಂದು ಭೂಮಿ ಮೇಲೆಯೇ ಇಲ್ಲ. ಹೌದು ಅಚ್ಚರಿ ಆದರು ಇದು ಸತ್ಯ ಮಾನವ ನಿರ್ಮಿಸಿರುವ ಅತ್ಯಂತ ದುಬಾರಿ ವಸ್ತು ಅಂದರೆ ಅದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಹೌದು ಅಂತರಿಕ್ಷದಲ್ಲಿ ತೇಲುತ್ತಿರುವ ಈ ನಿಲ್ದಾಣವೇ ಮಾನವ ನಿರ್ಮಿಸಿರುವ ಅತ್ಯಂತ ದುಬಾರಿ ವಸ್ತು ಆಗಿದೆ.
ಐಎಸ್‌ಎಸ್ ನಿರ್ಮಾಣಕ್ಕೆ ಎಷ್ಟು ಹಣ ವ್ಯಯಿಸಲಾಗಿದೆ?
ಈ ನಿಲ್ದಾಣವನ್ನು ನಾಸಾ ನಿರ್ಮಿಸಿದೆ. ಇದನ್ನು ನಿರ್ಮಿಸಲು ಬರೋಬ್ಬರಿ 100 ಬಿಲಿಯನ್ ಡಾಲರ್ ಅಮೆರಿಕನ್ ಡಾಲರ್ ವೆಚ್ಚವಾಗಿದೆ. ಹೀಗಾಗಿ ಇದು ಗಿನ್ನಿಸ್ ವರ್ಡ್ ರೆಕಾರ್ಡ್‌ಗೂ ಸಾಕ್ಷಿಯಾಗಿದೆ. ಭೂಮಿಯಲ್ಲಿ ಇದಕ್ಕಿಂತ ದುಬಾರಿ ವಸ್ತು ಇಲ್ಲವೇ ಇಲ್ಲ. ಆದರೆ ಇದು ನಿರ್ಮಾಣಗೊಂಡ ಇಲ್ಲಿಯವರೆಗೆ 150 ಬಿಲಿಯನ್ ಡಾಲರ್‌ಗೂ ಅಧಿಕ ಹಣ ವೆಚ್ಚವಾಗಿಸಿದೆ.
1980 ರ ದಶಕದ ಆರಂಭದಲ್ಲಿ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ಮಾಡ್ಯುಲರ್ ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿತ್ತು. ಇತರ ಬಾಹ್ಯಾಕಾಶ ಸಂಸ್ಥೆಗಳಾದ ಕೆನಡಿಯನ್ ಸ್ಪೇಸ್ ಏಜೆನ್ಸಿ (CSA), ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (JAXA), ಮತ್ತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಸಹ ಈ ಯೋಜನೆಗೆ ಕೈ ಜೋಡಿಸಿದವು.
ಈ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ನವೆಂಬರ್ 20, 1998ರಂದು ಉಡಾವಣೆ ಮಾಡಲಾಗಿತ್ತು. ಈ ಬಾಹ್ಯಾಕಾಶ ನಿಲ್ದಾಣದಿಂದ ಹಲವು ರೀತಿಯ ವೈಜ್ಞಾನಿಕ ಅಧ್ಯಯನಗಳ ನಡೆಯಸಲು ಇಂದಿಗು ತಜ್ಞರ ತಂಡ ಅಲ್ಲಿ ನೆಲೆಸಿದೆ. ಈಗ ಭಾರತ ಮೂಲದ ಸುನಿತಾ ವಿಲಿಯಮ್ಸ್ ಸಹ ಈಗ ಸಿಲುಕಿರುವುದು ಇದೇ ಬಾಹ್ಯಾಕಾಶ ನಿಲ್ದಾಣದಲ್ಲಿ.
ಸುನಿತಾ ವಿಲಿಯಮ್ಸ್ ರಕ್ಷಣೆಗೆ ಹೊಸ ಯೋಜನೆ
ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕರೆತರಲು ಸಿದ್ದತೆಗಳು ನಡೆಯುತ್ತಿದ್ದು ಇಂದು ಹೊಸ ಯೋಜನೆ ರೂಪಿಸಲಾಗಿದೆ. ಬೋಯಿಂಗ್‌ನ ಸ್ಟಾರ್ ಲೈನ್ ವಾಹನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಈಗ ಹೊಸ ವಾಹನ ಕಳುಹಿಸಬೇಕಾಗಿದೆ.
ಸೆಪ್ಟೆಂಬರ್ 26 ಕ್ಕೆ ಈ ಉಡಾವಣೆ ನಿಗದಿಪಡಿಸಲಾಗಿತ್ತು, ಫ್ಲೋರಿಡಾದ ಗಲ್ಫ್ ಕರಾವಳಿಯ ಮೇಲೆ ಪರಿಣಾಮ ಬೀರುವ ಹೆಲೆನ್ ಚಂಡಮಾರುತದಿಂದ ಉಂಟಾದ ಪ್ರತಿಕೂಲ ಹವಾಮಾನದ ಕಾರಣ ಉಡಾವಣೆಯನ್ನು ಮುಂದೂಡಲಾಗಿತ್ತು. ನಾಸಾದ ಫ್ಲೈಟ್ ರೆಡಿನೆಸ್ ರಿವ್ಯೂ ಎಲ್ಲಾ ವ್ಯವಸ್ಥೆಗಳು ಉಡಾವಣೆಗೆ ಹೋಗುತ್ತಿವೆ ಎಂದು ದೃಢಪಡಿಸಿತು, ಫಾಲ್ಕನ್ 9 ರಾಕೆಟ್ ಮತ್ತು ಡ್ರ್ಯಾಗನ್ ಬಾಹ್ಯಾಕಾಶ ನೌಕೆಗಳು ಈ ನಿರ್ಣಾಯಕ ಕಾರ್ಯಾಚರಣೆಗೆ ಸಿದ್ಧವಾಗಿವೆ. ಸದ್ಯದಲ್ಲೇ ಈ ಇಬ್ಬರು ಗಗನಯಾತ್ರಿಗಳು ಭೂಮಿ ವಾಪಸಾಗಲಿದ್ದಾರೆ.



Click it and Unblock the Notifications