Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದ ರಾಷ್ಟ್ರಪತಿ-ಪ್ರಧಾನಿಗೆ ತಿಂಗಳ ವೇತನ ಎಷ್ಟು.? ಇಲ್ಲಿದೆ ಮಾಹಿತಿ..!
ಭಾರತದಲ್ಲಿ ಅತೀ ಹೆಚ್ಚು ವೇತನ ಬರುವ ಸರ್ಕಾರಿ ಹುದ್ದೇ ಯಾವುದು ಅಂದ್ರೆ ಕೆಲವರು ಐಎಎಸ್, ಐಪಿಎಸ್ ಅಂದು ಬಿಡುತ್ತಾರೆ. ಆದ್ರೆ ಅವರಿಗಿಂತಲೂ ಹೆಚ್ಚು ವೇತನ ಪಡೆಯುವವರು ನಮ್ಮ ಪ್ರಧಾನಿ ಹಾಗೂ ರಾಷ್ಟ್ರಪತಿಗಳು ಎಂದು ನಿಮಗೆ ತಳಿದಿದ್ಯಾ? ಹೌದು ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿ ವೇತನ ಎಷ್ಟಿರುತ್ತದೆ ಎಂಬುದು ನಿಮಗೆ ಗೊತ್ತಾ?
ಈಗಷ್ಟೇ ಲೋಕಸಭೆ ಚುನಾವಣೆ ನಡೆದು ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜೊತೆಗೆ ಹೊಸ ಸಂಪುಟ ರಚನೆಗೆ ಮುಂದಾಗಿದ್ದಾರೆ. ಹಾಗಾದ್ರೆ ನಮ್ಮ ದೇಶದ ಪ್ರಧಾನಿ ಹಾಗೂ ರಾಷ್ಟ್ರ ಪತಿ ಎಷ್ಟು ವೇತನ ಪಡೆಯುತ್ತಾರೆ, ಅವರಿಗಿಂತಲೂ ಹೆಚ್ಚು ಹಣ ಯಾರು ಪಡೆದುಕೊಳ್ಳುತ್ತಾರೆ ಎಂಬ ಕುರಿತ ಮಾಹಿತಿ ಇಲ್ಲಿದೆ.

2018 ರಲ್ಲಿ, ಎಲ್ಲಾ ಮೂರು ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್, ಭಾರತದ ರಾಷ್ಟ್ರಪತಿಗಳ ವೇತನವನ್ನು ತಿಂಗಳಿಗೆ ₹ 1.50 ಲಕ್ಷದಿಂದ ತಿಂಗಳಿಗೆ ₹ 5 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ಈ ವೇತನ ಏರಿಕೆಯನ್ನು ಘೋಷಿಸಿದ್ದರು. ರಾಷ್ಟ್ರಪತಿಗಳ ಗೌರವಧನವನ್ನು ಜನವರಿ 2006 ರಿಂದ ಜಾರಿಗೆ ಬರುವಂತೆ ಕೊನೆಯ ಬಾರಿಗೆ ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದ್ದರು.
ಗೃಹ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ರಾಷ್ಟ್ರಪತಿಗಳು ವಿಮಾನ, ರೈಲು ಅಥವಾ ಸ್ಟೀಮರ್ ಮೂಲಕ ದೇಶದ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು. ಅವನು/ಅವಳು ಒಬ್ಬ ವ್ಯಕ್ತಿಯನ್ನು ಕರೆತರಬಹುದು ಮತ್ತು ಅವರ ಖರ್ಚುಗಳನ್ನು ಸಹ ಸರ್ಕಾರವೇ ಭರಿಸುತ್ತದೆ.
ರಾಷ್ಟ್ರಪತಿಗಳು ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಪಡೆಯುತ್ತಾರೆ. ಸುಸಜ್ಜಿತ ಬಾಡಿಗೆ-ಮುಕ್ತ ಮನೆ, ಎರಡು ಉಚಿತ ಲ್ಯಾಂಡ್‌ಲೈನ್‌ಗಳು (ಒಂದು ಇಂಟರ್ನೆಟ್ ಸಂಪರ್ಕಕ್ಕಾಗಿ), ಮೊಬೈಲ್ ಫೋನ್, ಐದು ವೈಯಕ್ತಿಕ ಸಿಬ್ಬಂದಿ, ಮನೆಯ ನಿರ್ವಹಣೆಯೂ ಸಹ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ.
ಇತ್ತ ರಾಷ್ಟ್ರಪತಿಯ ಕುಟುಂಬಸ್ಥರಿಗೂ ಸರ್ಕಾರದ ಕೆಲವು ಸೌಲಭ್ಯ ಸಿಗಲಿದೆ. ಅಧಿಕಾರದಲ್ಲಿದ್ದಾಗಲೇ ಅವರು ಮರಣ ಹೊಂದಿದ್ದರೆ. ಅವರ ಕುಟುಂಬ ಸದಸ್ಯರ ಪೈಕಿ ಒಬ್ಬರಿಗೆ ಪಿಂಚಣಿಯ ಐವತ್ತು ಪ್ರತಿಶತದ ದರದಲ್ಲಿ ಕುಟುಂಬ ಪಿಂಚಣಿ ನೀಡಲಾಗುತ್ತದೆ. ದಂಪತಿಯ ಜೀವನಕ್ಕಾಗಿ ಉಚಿತ ವೈದ್ಯಕೀಯ ಸೇವೆಗಳನ್ನು ಸಹ ಪಡೆಯುತ್ತಾರೆ.
ಅದೇ ಉಪರಾಷ್ಟ್ರಪತಿಗಳಿಗೆ ಗೌರವಧನವಾಗಿ ತಿಂಗಳಿಗೆ ₹ 1.25 ಲಕ್ಷದಿಂದ ₹ 4 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಇಲ್ಲಿಯೂ ಸಹ ಉಚಿತ ವಸತಿ, ವೈಯಕ್ತಿಕ ಭದ್ರತೆ, ವೈದ್ಯಕೀಯ ಆರೈಕೆ, ರೈಲು ಮತ್ತು ವಿಮಾನ ಪ್ರಯಾಣ, ದೂರವಾಣಿ ಸಂಪರ್ಕ, ಮೊಬೈಲ್ ಫೋನ್ ಸೇವೆ ಮತ್ತು ಸಿಬ್ಬಂದಿಯನ್ನು ಪಡೆಯುತ್ತಾರೆ.
ಪ್ರಧಾನ ಮಂತ್ರಿ
ಭಾರತದ ಪ್ರಧಾನಿ ತಿಂಗಳಿಗೆ ₹1.66 ಲಕ್ಷ ವೇತನ ಪಡೆಯುತ್ತಾರೆ ಎಂದು ವರದಿಯಾಗಿದೆ. ಪ್ರಧಾನ ಮಂತ್ರಿಗೆ ನೀಡಲಾಗುವ ಸವಲತ್ತುಗಳು ಬೇರೆ ಯಾವ ಅಧಿಕಾರಿ ವರ್ಗಕ್ಕೂ ಇರುವುದಿಲ್ಲ. ಅವರ ಭದ್ರತೆಗೆ ಜವಾಬ್ದಾರರಾಗಿರುವ ವೈಯಕ್ತಿಕ ಸಿಬ್ಬಂದಿ ವಿಶೇಷ ರಕ್ಷಣಾ ಗುಂಪು (SPG). ಸದಾಕಾಲ ಅವರ ಬೆನ್ನ ಹಿಂದೆ ಇರಲಿದೆ. ಪ್ರಧಾನಮಂತ್ರಿಯವರ ಅಧಿಕೃತ ಭೇಟಿಗಳಿಗಾಗಿ ವಿಶೇಷ ವಿಮಾನ ಸಹ ಇರಲಿದೆ. ಅವರಿಗಾಗಿ ಅಧಿಕೃತ ನಿವಾಸ, ಕಚೇರಿ ವ್ಯವಸ್ಥೆ ಇರಲಿದೆ. ದೆಹಲಿಯಲ್ಲಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭವ್ಯ ನಿವಾಸ ಪ್ರಧಾನಿ ಆದವರು ಮಾತ್ರ ಬಳಸುವ ಮನೆಯಾಗಿರುತ್ತದೆ. ಇನ್ನು ರಾಷ್ಟ್ರಪತಿಗಿಂತಲೂ ಹೆಚ್ಚಿನ ವೇತನ ಯಾರು ಸಹ ಪಡೆಯುವುದಿಲ್ಲ. ನೀಡಬಾರದು ಎಂಬ ನಿಯಮವೂ ಇದೆ.



Click it and Unblock the Notifications