Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ದುರ್ಗಾ ಪೂಜೆಗೆ ಬೇಕೇ ಬೇಕು ಈ ಹಿಲ್ಸಾ ಮೀನು..? ಹಬ್ಬದಂದು ಮಾಂಸಹಾರ ಏಕೆ ಗೊತ್ತಾ?
ದುರ್ಗಾ ಪೂಜೆ ಪಶ್ಚಿಮ ಬಂಗಾಳದಲ್ಲಿ ಆಚರಿಸುವ ಅತ್ಯಂತ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ. ಹಾಗೆ ಬಾಂಗ್ಲಾದೇಶದಲ್ಲೂ ಕೂಡ ದುರ್ಗಾ ಪೂಜೆ ಅತ್ಯಂತ ಸಂಭ್ರಮದಿಂದಲೇ ಆಚರಿಸಲಾಗುತ್ತದೆ. ಈ ದುರ್ಗಾ ಪೂಜೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಉಳಿದಿದೆ.
ಆದ್ರೆ ದುರ್ಗಾ ಪೂಜೆಗೂ ಮುನ್ನ ಬಾಂಗ್ಲಾ ಸರ್ಕಾರ ಭಾರತಕ್ಕೆ ಹಿಲ್ಸಾ ಮೀನು ರಫ್ತು ನಿಷೇಧಿಸಿ ಆದೇಶಿಸಿದೆ. ಹಿಲ್ಸಾ ಮೀನುಗಳ ಬೇಡಿಕೆ ಹೆಚ್ಚಿರುವ ಕಾರಣ ದುರ್ಗಾ ಪೂಜೆಯ ಸಮಯದಲ್ಲಿ ಮೀನು ರಫ್ತು ನಿಷೇಧಿಸಿ ಬಾಂಗ್ಲಾ ಮೀನುಗಾರಿಕಾ ಸಚಿವೆ ಫರಿದಾ ಅಖ್ತರ್ ಹೇಳಿದ್ದಾರೆ.

ಆದರೆ ಹಬ್ಬದ ಸಮಯದಲ್ಲಿ ಮೀನು ರಫ್ತಿನ ಮೇಲೆ ನಿಷೇಧ ಹೇರಿರುವುದು ಪಶ್ಚಿಮ ಬಂಗಾಳದಲ್ಲಿ ಹಬ್ಬದ ಆಚರಣೆಗೆ ಭಾರೀ ಅಡ್ಡಿಯುಂಟಾಗಲಿದೆ ಎಂಬ ಆತಂಕ ಎದುರಾಗಿದೆ ಹಾಗೆ ಈ ಮೀನಿನ ದರ ದುಪ್ಪಟ್ಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಏನಿದು ಹಿಲ್ಸಾ ಮೀನು? ದುರ್ಗಾ ಪೂಜೆಗೂ ಈ ಮೀನಿಗು ಏನು ಸಂಬಂಧ?
ನಿಮಗೆ ಅಚ್ಚರಿ ಎನಿಸಬಹುದು. ದುರ್ಗಾ ಪೂಜೆಯಲ್ಲಿ ಮಾಂಸಹಾರಕ್ಕೆ ಏನು ಸಂಬಂಧ. ದುರ್ಗಾ ಪೂಜೆಯಲ್ಲಿ ಮೀನು ಏಕೆ ಬಳಸುತ್ತಾರೆ? ಅದರಲ್ಲೂ ಈ ಹಿಲ್ಸಾ ಮೀನು ಏಕೆ ಇಷ್ಟೊಂದು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದನ್ನು ನೋಡೋಣ.
ಹಿಲ್ಸಾ ಮೀನನ್ನು ಮೀನುಗಳ ರಾಜ ಎಂದು ಕರೆಯುತ್ತಾರೆ. ಬಾಂಗ್ಲಾದೇಶದ ರಾಷ್ಟ್ರೀಯ ಮೀನಾಗಿ ಇದನ್ನ ಸಾಕುತ್ತಾರೆ. ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಪ್ರತಿಯೊಂದು ಶುಭ ಕಾರ್ಯದಲ್ಲು ಹಿಲ್ಸಾ ಮೀನು ತನ್ನದೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಹಿಲ್ಸಾ ಮೀನು ಇಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ.
ಇಡೀ ವಿಶ್ವದಲ್ಲಿ ಶೇ.70ರಷ್ಟು ಹಿಲ್ಸಾ ಮೀನು ಬಾಂಗ್ಲಾದೇಶದಲ್ಲಿ ಸಿಗುತ್ತದೆ. ಇಲ್ಲಿ ಪದ್ಮಾ ನದಿಯ ಸಿಹಿ ನೀರಿನ ಮೀನಾಗಿರುವುದರಿಂದ ಅವುಗಳ ಸಂತತಿ ಬಹುಬೇಗ ಮುಗಿದು ಹೋಗುವ ಆತಂಕವೂ ಇದೆ. ಆದರೆ ಬಾಂಗ್ಲಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಮೀನುಗಳು ಸಾಂಸ್ಕೃತಿಕವಾಗಿ ಆಹಾರದ ಭಾಗವಾಗಿ ನಡೆದುಕೊಂಡು ಬಂದಿದೆ.
ಇಲಿಶ್ ಎಂದೂ ಕರೆಯಲ್ಪಡುವ ಹಿಲ್ಸಾ ಮೀನು, ಬಂಗಾಳದ ಪಾಕಶಾಲೆಯ ಪದ್ಧತಿಗಳು ಮತ್ತು ಸಾಮಾಜಿಕ ಆಚರಣೆಗಳಲ್ಲಿ ಅಸಾಧಾರಣ ಸ್ಥಾನವನ್ನು ಹೊಂದಿದೆ. ಇದು ಸೂಕ್ಷ್ಮವಾದ ಸುವಾಸನೆ, ವಿಶಿಷ್ಟ ರುಚಿ ಮತ್ತು ರೇಷ್ಮೆಯಂತಹ ವಿನ್ಯಾಸದಿಂದಾಗಿ ಹೆಚ್ಚು ಮೌಲ್ಯಯುತವಾದ ಮೀನು. ಶುಭ ದಿನಗಳಲ್ಲಿ ಮೀನುಗಳ ಮಾಡಿ ತಟ್ಟೆಯಲ್ಲಿ ಅಲಂಕರಿಸಿ ಇಡುವುದು ಗೌರವದ, ಅರ್ಪಣೆಯ ಸಂಕೇತ ಎಂದು ನಂಬಲಾಗಿದೆ. ಹೀಗಾಗಿ ದುರ್ಗಾ ಪೂಜೆಯಲ್ಲಿ ಈ ಹಿಲ್ಸಾ ಮೀನು ಬಹುಮುಖ್ಯ ಅಂಗವಾಗಿದೆ. ಆದ್ರೆ ಈಗ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ.
ದುರ್ಗಾ ಪೂಜೆಯ ಸಂದರ್ಭ ಭಾರತದಿಂದ ರಫ್ತಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದು ಬಾಂಗ್ಲಾದಲ್ಲಿ ಮೀನು ಕೊರತೆಯ ಜೊತೆಗೆ ಅದರ ದರವೂ ಹೆಚ್ಚಾಗುತ್ತದೆ. ಹೀಗಾಗಿ ರಫ್ತಿನ ಮೇಲೆ ನಿಷೇಧ ಹೇರಲಾಗಿದೆ. ಆದ್ರೆ ಭಾರತಕ್ಕೆ ಹಬ್ಬದ ಸಮಯದಲ್ಲಿ 4 ಸಾವಿರ ಟನ್ ಮೀನು ರಫ್ತಿನ ಭರವಸೆ ನೀಡಲಾಗಿದೆ.
ಹಿಲ್ಸಾ ಮೀನು ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲದೆ ದೆಹಲಿ, ಜಾರ್ಖಂಡ್, ಮುಂಬೈ, ಬೆಂಗಳೂರು ಮತ್ತು ಬಿಹಾರದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ, ಅವರು ಪೊಯಿಲಾ ಬೋಯಿಸಾಖ್ (ಬಂಗಾಳಿ ಹೊಸ ವರ್ಷ) ಮತ್ತು ಇತರ ಪ್ರಮುಖ ಆಚರಣೆಗಳು ಮತ್ತು ಹಬ್ಬಗಳನ್ನು ಆಚರಿಸುವಾಗ ಈ ಮೀನುಗಳನ್ನು ಹುಡುಕುತ್ತಾರೆ. ಅಲ್ಲದೆ ಬೇಡಿಕೆಯೂ ಅಧಿಕವಾಗುತ್ತದೆ. ಆದರೆ ಈ ಮೀನುಗಳು ಭಾರತಲ್ಲೂ ಮೀನುಗಾರಿಕೆ ಮಾಡಲಾಗುತ್ತದೆ. ಆದರೆ ಬಾಂಗ್ಲಾದಲ್ಲಿ ಸಿಗುವ ಮೀನಿಗೆ ಹೋಲಿಸಿದರೆ ಇವು ಗಾತ್ರದಲ್ಲಿ ಚಿಕ್ಕದಾಗಿ ರುಚಿಯಲ್ಲೂ ಉತ್ತಮ ಎನಿಸುವುದಿಲ್ಲ.



Click it and Unblock the Notifications
