Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಎಆರ್ ರೆಹಮಾನ್ ಆಸ್ತಿ ಎಷ್ಟಿದೆ ಗೊತ್ತಾ? ಅವರ ಮೊದಲ ಹೆಸರು ಏನಾಗಿತ್ತು..?
ಸಂಗೀತ ಮಾಂತ್ರಿಕ ಎ ಆರ್ ರಹಮಾನ್ ಯಾರಿಗೆ ಗೊತ್ತಿಲ್ಲಾ ಹೇಳಿ. ಅವರ ಸಂಗೀತ ಇಂದಿಗೂ ಸಖತ್ ಫೇಮಸ್, ಹಾಗೆ ಇತ್ತೀಚಿಗೆ ಅವರು ಪತ್ನಿಗೆ ವಿಚ್ಛೇದನ ನೀಡಿ ಸುದ್ದಿಯಾಗಿದ್ದು, ತಮ್ಮ 30 ವರ್ಷಗಳ ಸುದೀರ್ಘ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರಹಮಾನ್ ವೈವಾಹಿಕ ಬದುಕು ಎಲ್ಲರು ಅಂದುಕೊಂಡಂತೆ ಸುಂದರ ಸಂಸಾರವಾಗಿರಲಿಲ್ಲ .
ಪತ್ನಿ ಸೈರಾ ಜೊತೆಗಿನ ಮನಸ್ಥಾಪದಿಂದಾಗಿ ಅವರಿಂದ ದೂರ ಬಂದಿರುವುದಾಗಿ ಅವರು ಹೇಳಿದ್ದಾರೆ. ಇಬ್ಬರು ಸಹಮತದಿಂದಾಗಿಯೇ ವಿಚ್ಛೇದನ ಘೋಷಿಸಿರುವುದಾಗಿ ಹೇಳಿಕೊಂಡಿದ್ದಾರೆ. ನಮ್ಮಿಬ್ಬರ ಸಂಬಂಧ ಚೆನ್ನಾಗಿರಲಿಲ್ಲ. ಪ್ರೀತಿ ಇತ್ತು ಆದರೆ ನೆಮ್ಮದಿ ಇರಲಿಲ್ಲ. ತುಂಬಾ ನೋವಿನಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದರು.

ಇನ್ನು ಎ ಆರ್ ರೆಹಮಾನ್ ಒಂದು ಕಾಲದಲ್ಲಿ ಅತ್ಯಂತ ಯಶಸ್ವಿ ಸಂಗೀತ ನಿರ್ದೇಶಕರಾಗಿದ್ದರು. ಈಗಲೂ ಕೂಡ ಬೇಡಿಕೆ ಏನು ಕಡಿಮೆಯಾಗಿಲ್ಲ. ಬಹುತೇಕ ಸೂಪರ್ ಸ್ಟಾರ್ ನಟರು ಹಾಗೂ ನಿರ್ದೇಶಕರ ಜೊತೆಗೆ ಅವರು ಕೆಲಸ ಮಾಡಿದ್ದಾರೆ. ಹಾಗೆ ಹಲವು ಆಲ್ಬಂಗಳು, ವಿಡಿಯೋ ಸಾಂಗ್‌ಗಳ ರಚಿಸಿರುವುದು, ಲೈವ್ ಕಾರ್ಯಕ್ರಮಗಳ ನಡಸಿಕೊಟ್ಟಿದ್ದಾರೆ.
ಇನ್ನು ಎ ಆರ್ ರೆಹಮಾನ್ ಆಸ್ತಿ ಎಷ್ಟಿದೆ? ಅವರ ಬಳಿ ಇರುವ ಐಷಾರಾಮಿ ವಸ್ತು ಯಾವುದು? ಹೌದು ಅವರ ಸುದೀರ್ಘ ಸಂಗೀತ ಜರ್ನಿಯಲ್ಲಿ ಐಷಾರಾಮಿ ಜೀವನಕ್ಕೆ ಬೇಕಾದಷ್ಟು ಆಸ್ತಿಯನ್ನ ಮಾಡಿದ್ದಾರೆ. ರೆಹಮಾನ್ ಅತ್ಯಂತ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರಲ್ಲದೆ ಶ್ರೀಮಂತರಲ್ಲಿ ಒಬ್ಬರು. ಮೂಲಗಳ ಪ್ರಕಾರ ಅವರ ನಿವ್ವಳ ಮೌಲ್ಯವು 1,728 ಕೋಟಿಯಿಂದ 2 ಸಾವಿರ ಕೋಟಿ ಒಳಗೆ ಇದೆ ಎಂದು ಅಂದಾಜಿಸಲಾಗಿದೆ.
ರೆಹಮಾನ್ ಪ್ರತಿ ಹಾಡಿಗೆ 3 ಕೋಟಿ ರೂಪಾಯಿ, ಪ್ರತಿ ಸಿನಿಮಾಗೆ ಬರೋಬ್ಬರಿ 10 ಕೋಟಿ ರೂಪಾಯಿ ವರೆಗೂ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಅವರು ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಎನಿಸಿದ್ದಾರೆ. ಚೆನ್ನೈನಲ್ಲಿರುವ ರೆಹಮಾನ್ ಅವರ ಬಂಗಲೆ ಭವ್ಯವಾಗಿ ನಿರ್ಮಿಸಲಾಗಿದೆ. ಇದು ಅವರ ಆಸ್ತಿಯಲ್ಲೇ ಅತ್ಯಂತ ದುಬಾರಿ ಮೌಲ್ಯ ಹೊಂದಿದೆ.
ಹಾಗೆ ಲಾಸ್ ಎಂಜಲಿಸ್‌ನಲ್ಲಿ ದೊಡ್ಡ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಅಮೆರಿಕ ಭೇಟಿ ನೀಡಿದಾಗ ಅವರು ಅಲ್ಲಿಯೇ ಉಳಿಯುತ್ತಾರೆ. ಹಾಗೆ ಇದೊಂದು ಮ್ಯೂಸಿಕ್ ಸ್ಟುಡಿಯೋ ಕೂಡ ಹೌದು. ಮುಂಬೈ, ಲಂಡನ್ ಮತ್ತು ಲಾಸ್ ಏಂಜಲೀಸ್‌ನಲ್ಲಿರುವ ಕೆಎಂ ಮ್ಯೂಸಿಕ್ ಸ್ಟುಡಿಯೋಸ್ ಎಂಬ ಹೆಸರಿನ ಅವರ ಅತ್ಯಾಧುನಿಕ ಸ್ಟುಡಿಯೋಗಳು ಕೂಡ ಇವೆ.
ಇದಷ್ಟೇ ಅಲ್ಲ ಎ ಆರ್ ರೆಹಮಾನ್ ಬಳಿ ಐಷಾರಾಮಿ ಕಾರುಗಳಿವೆ. 93.87 ಲಕ್ಷ ಮೌಲ್ಯದ ವೋಲ್ವೋ ಎಸ್‌ಯುವಿ, 1.08 ಕೋಟಿ ರೂಪಾಯಿ ಜಾಗ್ವಾರ್, 2.86 ಕೋಟಿ ರೂಪಾಯಿಯ ಮರ್ಸಿಡಿಸ್ ಕಾರು ಹಾಗೆ ಹಲವು ದೇಶಿಯ ಕಾರುಗಳು ಕೂಡ ಅವರ ಬಳಿ ಇದೆ.
ಎ ಆರ್ ರೆಹಮಾನ್ ಮೊದಲ ಹೆಸರೇನು?
ರೆಹಮಾನ್ ಅವರ ಮೊದಲ ಹೆಸರು ದಿಲಿಪ್ ಕುಮಾರ್. 1989ರಲ್ಲೊ ರೆಹಮಾನ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಬಳಿಕ ಅಲ್ಲಾ ರಖಾ ರೆಹಮಾನ್ ಎಂದು ಹೆಸರು ಬದಲಾಯಿಸಿಕೊಂಡರು. ಎ ಆರ್ ರೆಹಮಾನ್ ಜನವರಿ 6, 1967 ರಂದು ಚೆನ್ನೈನಲ್ಲಿ ಜನಿಸಿದರು. ಅವರ ತಂದೆಯ ಮರಣದ ನಂತರ ಅವರ ಕುಟುಂಬವು ಆರ್ಥಿಕವಾಗಿ ಕಷ್ಟಪಡುತ್ತಿತ್ತು. ಆದರೂ ಅವರು ಸಂಗೀತ ಕಲಿಯುವುದನ್ನು ನಿಲ್ಲಿಸಿರಲಿಲ್ಲ. ಬಳಿಕ ಇಡೀ ವಿಶ್ವವೇ ಗುರುತಿಸುವಂತಹ ಸಂಗೀತ ಮಾಂತ್ರಿಕ ಆದರು.



Click it and Unblock the Notifications