Latest Updates
-
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ!
ನಿಮ್ಮ ಜನ್ಮ ಕುಂಡಲಿಯಲ್ಲಿ ಗಜಕೇಸರಿ ಯೋಗವಿದ್ದರೆ ಮುಟ್ಟಿದೆಲ್ಲಾ ಚಿನ್ನವಾಗಲಿದೆ!
ಪ್ರತಿಯೊಬ್ಬ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಒಂದೊಂದು ಯೋಗ ರೂಪುಗೊಂಡಿರುತ್ತದೆ. ಇದರ ಆಧಾರದ ಮೇಲೆ ಆತನ ಅದೃಷ್ಟವನ್ನು ನಿರ್ಧಾರ ಮಾಡಲಾಗುತ್ತದೆ. ಅದೇ ರೀತಿ ನಿಮಗೆಲ್ಲಾ ಗಜಕೇಸರಿ ಯೋಗದ ಬಗ್ಗೆ ಗೊತ್ತಿರಬಹುದು. ಗಜಕೇಸರಿ ಯೋಗ ಅಂತಿಂತಾ ಯೋಗವಲ್ಲ. ಇದು ಒರ್ವ ವ್ಯಕ್ತಿಯ ಬಾಳಿನಲ್ಲಿ ಮಹಾ ಅದೃಷ್ಟವನ್ನು ತಂದುಕೊಡಬಲ್ಲ ಯೋಗವಾಗಿದೆ.
ಗಜಕೇಸರಿ ಯೋಗವನ್ನು ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. ಇದು ಗುರು ಮತ್ತು ಚಂದ್ರನ ಸಂಯೋಗದಿಂದ ರೂಪುಗೊಂಡ ಪ್ರಮುಖ ಧನ ಯೋಗಗಳಲ್ಲಿ ಒಂದಾಗಿದೆ. ನಿಮ್ಮ ಕುಂಡಲಿಯ ಯಾವುದೇ ಮನೆಯಲ್ಲಿ ಗುರು ಮತ್ತು ಚಂದ್ರರ ಸಂಯೋಗವಿದ್ದರೆ ಮತ್ತು ಯಾವುದೇ ಪಾಪಗ್ರಹದ ದೃಷ್ಟಿ ನಿಮ್ಮ ಮೇಲೆ ಬೀಳದಿದ್ದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಹನ್ನೆರಡು ಮನೆಗಳ ಮೇಲೆ ಗಜ ಕೇಸರಿ ಯೋಗ ಯಾವ ರೀತಿ ಪರಿಣಾಮ ಬೀಳಲಿದೆ. ಇದರಿಂದ ನಿಮ್ಮ ಅದೃಷ್ಟ ಯಾವ ರೀತಿ ಬದಲಾಗಲಿದೆ ಅನ್ನೋದನ್ನು ತಿಳಿಯೋಣ.

ಒಂದನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಒಂದನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಆ ವ್ಯಕ್ತಿ ನಟ ಅಥವಾ ಒರ್ವ ಪ್ರಖ್ಯಾತ ನಾಯಕನಾಗುತ್ತಾನೆ. ಆತ ಯಾವಾಗಲೂ ರಾಜನಂತೆ ಬದುಕುತ್ತಾನೆ. ಈ ಯೋಗ ಆತನನ್ನು ತಪ್ಪು ದಾರಿ ತುಳಿಯೋದಕ್ಕೆ ಖಂಡಿತ ಬಿಡೋದಿಲ್ಲ.
ಎರಡನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಎರಡನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಆ ವ್ಯಕ್ತಿ ಶ್ರೀಮಂತರ ಮನೆಯಲ್ಲಿ ಹುಟ್ಟುತ್ತಾನೆ. ಹಾಗೂ ಕೂತು ತಿಂದರೂ ಕರಗದಷ್ಟು ಸಂಪತ್ತನ್ನು ಹೊಂದಿರುತ್ತಾನೆ. ಇತ ಕೂಡ ಒರ್ವ ಪ್ರಖ್ಯಾತ ನಾಯಕನಾಗಿ ಬೆಳೆಯುತ್ತಾರೆ.
ಮೂರನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಮೂರನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಆತ ಸಮಾಜದಲ್ಲಿ ಒರ್ವ ಪ್ರತಿಷ್ಠಿತ ವ್ಯಕ್ತಿಯಾಗಿ ಬೆಳೆಯುತ್ತಾನೆ. ಅಷ್ಟೇ ಅಲ್ಲ, ಈತನಿಂದಾಗಿ ಅವನ ಒಡಹುಟ್ಟಿದವರಿಗೂ ಕೂಡ ರಾಜ ಯೋಗ ಬರುತ್ತದೆ. ಅವರು ಕೂಡ ಸಾಧನೆ ಮಾಡೋದಕ್ಕೆ ಸಾಧ್ಯವಾಗುತ್ತದೆ.
ನಾಲ್ಕನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ನಾಲ್ಕನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ನಿಮ್ಮ ಅಮ್ಮ ನಿಮ್ಮನ್ನು ತುಂಬಾನೇ ಪ್ರೀತಿ ಮಾಡುತ್ತಾರೆ. ಹಾಗೂ ನೀವು ಕೇಳಿದ್ದೆಲ್ಲಾ ನಿಮಗೆ ಸುಲಭವಾಗಿ ಸಿಗುತ್ತದೆ. ನೀವು ಕೇಳಿದ ವಾಹನ ನಿಮ್ಮ ಕೈ ಸೇರುತ್ತದೆ. ಜೊತೆಗೆ ಸಾಕಷ್ಟು ಭೂಮಿಯೂ ನಿಮ್ಮ ಪಾಲಾಗುತ್ತದೆ.
ಐದನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಐದನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ನೀವು ಬುದ್ಧಿವಂತರಾಗಿರುತ್ತೀರಿ ಜೊತೆಗೆ ಸಾಕಷ್ಟು ದುಡ್ಡು ಗಳಿಸುತ್ತೀರಿ. ಬುದ್ಧಿವಂತ ವ್ಯಕ್ತಿಯು ಒರ್ವ ಉತ್ತಮ ಶಿಕ್ಷಕ, ವಿಜ್ಞಾನಿ ಅಥವಾ ಒರ್ವ ಸಂಶೋಧಕ ಆಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಆತ ಒರ್ವ ಉತ್ತಮ ಮತ್ತು ಪ್ರಖ್ಯಾತ ಬರಹಗಾರನಾಗುತ್ತಾನೆ.
ಇನ್ನೂ ಇಂತಹ ವ್ಯಕ್ತಿಗಳು ತಮ್ಮ ಮಕ್ಕಳ ಸೌಭಾಗ್ಯದಿಂದ ಸಂತೋಷವನ್ನು ಪಡೆಯುತ್ತಾರೆ. ನಿಮ್ಮ ಮಗು ಸಮಾಜದ ಒರ್ವ ಪ್ರತಿಷ್ಠಿತ ಹಾಗೂ ಗೌರವಾನ್ವಿತ ವ್ಯಕ್ತಿಯಾಗಿ ಬೆಳೆಯುವ ಸಾಧ್ಯತೆ ಕೂಡ ಹೆಚ್ಚಿದೆ.
ಆರನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಆರನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಆ ಯೋಗ ಕೊಂಚ ದುರ್ಬಲವಾಗಿರುತ್ತದೆ. ಆರನೇ ಮನೆಯಲ್ಲಿ ಗುರುವಿದ್ದಾಗ ಆತ ಶತ್ರುವಾಗಿರುತ್ತಾನೆ. ಇಂತಹ ಸಂದರ್ಭದಲ್ಲಿ ನೀವು ಶತ್ರುಗಳನ್ನು ಮಟ್ಟ ಹಾಕೋದು ಕಷ್ಟ ಆಗುತ್ತದೆ. ಇನ್ನೂ ನಿಮ್ಮ ಜನ್ಮ ಕುಂಡಲಿಯಲ್ಲಿ ಚಂದ್ರನಿರುವುದು ನಿಮಗೆ ಒಳ್ಳೆಯದು. ಇನ್ನೂ ನೀವು ಕೊಂಚ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
ಏಳನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಏಳನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಇದು ನಿಮ್ಮ ಸಂಗಾತಿಗೆ ಸಂಬಂಧ ಪಟ್ಟಿದ್ದಾಗಿರುತ್ತದೆ. ನೀವು ಒಂದು ಒಳ್ಳೆಯ ಕುಟುಂಬದ ಜೊತೆಗೆ ಮದುವೆ ಸಂಬಂಧವನ್ನು ಬೆಳೆಸಿಕೊಳ್ಳುತ್ತೀರಿ. ನಿಮ್ಮ ಸಂಗಾತಿ ತುಂಬಾನೇ ಪ್ರಖ್ಯಾತ ವ್ಯಕ್ತಿ ಆಗಿರುತ್ತಾರೆ.
ಎಂಟನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಎಂಟನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಆ ಯೋಗವು ಕೊಂಚ ದುರ್ಬಲವಾಗಿರುತ್ತದೆ. ಈ ಯೋಗವು ನಿಮಗೆ ರಹಸ್ಯ ಕಲಿಕೆಗೆ ಅನುವು ಮಾಡಿಕೊಡುತ್ತದೆ. ಕೆಲವೊಮ್ಮೆ ಈ ಯೋಗದಿಂದ ನಿಮಗೆ ಹಠಾತ್ ಸಂಪತ್ತು ಗಳಿಸೋದಕ್ಕೆ ಸಾಧ್ಯವಾಗುತ್ತದೆ. ಎಲ್ಲಿಂದ ಹಣ, ಸಂಪತ್ತು ಬಂದಿದೆ ಎಂದು ನಿಮಗೆ ಊಹಿಸೋದಕ್ಕೂ ಸಾಧ್ಯವಿಲ್ಲ.
ಒಂಬತ್ತನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಒಂಬತ್ತನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಆತ ತಾನು ಮಾಡಿದ ಕರ್ಮಫಲದಿಂದಲೇ ಅದೃಷ್ಟ ಪಡೆದಿರುತ್ತಾನೆ. ಒಂಬತ್ತನೇ ಮನೆಯು ಧರ್ಮ ಹಾಗೂ ಅದೃಷ್ಟಕ್ಕೆ ಸಂಬಂಧಿಸಿದ್ದಾಗಿದೆ. ಇಂತಹ ವ್ಯಕ್ತಿಗಳು ತುಂಬಾನೇ ಅದೃಷ್ಟವಂತರು ಹಾಗೂ ಇವರಿಗೆ ದೇವರ ಮೇಲೆ ಹೆಚ್ಚು ನಂಬಿಕೆ ಇರುತ್ತದೆ.
ಹತ್ತನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಹತ್ತನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಆತ ಹುಟ್ಟಿದ ನಂತರ ತಂದೆಯ ಅದೃಷ್ಟ ಖುಲಾಯಿಸುತ್ತದೆ. ಹಾಗೂ ಆ ವ್ಯಕ್ತಿ ಕೂಡ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುತ್ತಾನೆ. ಇಂತಹ ವ್ಯಕ್ತಿಗಳು ಅದೃಷ್ಟಕ್ಕಿಂತ ಹೆಚ್ಚಾಗಿ ಕರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇವರು ಸಮಾಜದಲ್ಲಿ ಗೌರವವನ್ನೂ ಪಡೆದುಕೊಳ್ಳುತ್ತಾರೆ.
ಹನ್ನೊಂದನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಹನ್ನೊಂದನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಆ ವ್ಯಕ್ತಿಗೆ ಹಣದ ಮೂಲಗಳು ಒಂದಕ್ಕಿಂತ ಹೆಚ್ಚಿರುತ್ತಂತೆ. ಕಡಿಮೆ ಪರಿಶ್ರಮ ಪಟ್ಟರೂ ಕೂಡ ಆ ವ್ಯಕ್ತಿ ಹೆಚ್ಚು ಸಂಪತ್ತು ಗಳಿಸೋದಕ್ಕೆ ಶಕ್ತನಾಗಿರುತ್ತಾನಂತೆ. ಈ ವ್ಯಕ್ತಿಗೆ ಮನೆಯಲ್ಲೇ ಕೂತು ದುಡ್ಡು ಮಾಡುವ ಯೋಗ ಇರುತ್ತಂತೆ.
ಹನ್ನೆರಡನೇ ಮನೆಯಲ್ಲಿ ಗಜಕೇಸರಿ ಯೋಗ
ವ್ಯಕ್ತಿಯ ಜನ್ಮ ಕುಂಡಲಿಯ ಹನ್ನೆರಡನೇ ಮನೆಯಲ್ಲಿ ಗಜಕೇಸರಿ ಯೋಗ ರೂಪುಗೊಂಡಿದ್ದರೆ ಆ ಯೋಗ ದುರ್ಬಲವಾಗಿರುತ್ತಂತೆ. ಆತ ಧಾರ್ಮಿಕ ಕಾರ್ಯಗಳಿಗೆ ಅತಿ ಹೆಚ್ಚು ದುಡ್ಡನ್ನು ವೆಚ್ಚ ಮಾಡುತ್ತಾನೆ. ಯಶಸ್ಸು ಆತನಿಂದ ಕೊಂಚ ದೂರದಲ್ಲಿ ಇರುತ್ತದೆ.
ಗಜಕೇಸರಿ ಯೋಗ ಯಾವ ಮನೆಯಲ್ಲಿ ರೂಪುಗೊಂಡಿದೆ ಎಂಬುವುದರ ಮೇಲೆ ಆ ವ್ಯಕ್ತಿ ಎಂತಹ ಅದೃಷ್ಟವನ್ನು ಪಡೆಯುತ್ತಾನೆ ಎಂದು ಹೇಳಬಹುದು.



Click it and Unblock the Notifications