Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸಂಖ್ಯಾ ಶಾಸ್ತ್ರದ ಪ್ರಕಾರ ನಿಮಗೆ ಸರಿಹೊಂದುವ ವೃತ್ತಿ ಯಾವುದು?
ಜೀವನ ಅಂದ್ರೇನೆ ಹಾಗೆ ಅಲ್ವಾ? ನಾವು ಯಾವುದೋ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕೆಂದು ಬಯಸುತ್ತೇವೆ. ಆದರೆ ಅಲ್ಲಿ ನಮಗೆ ಯಶಸ್ಸು ಸಿಗೋದಿಲ್ಲ. ಸಂಖ್ಯಾಶಾಸ್ತ್ರದ ಲೆಕ್ಕಾಚಾರದ ಪ್ರಕಾರ ನಮ್ಮ ಜನ್ಮದಿನಾಂಕಕ್ಕೆ ಅನುಗುಣವಾಗಿ ನಾವು ವೃತ್ತಿಗಳನ್ನು ಆಯ್ದುಕೊಂಡರೆ ಒಳ್ಳೆಯದು. ಖಂಡಿತ ನಾವು ಆ ಕ್ಷೇತ್ರದಲ್ಲಿ ಯಶಸ್ಸು ಕಾಣೋದಕ್ಕೆ ಸಾಧ್ಯವಾಗುತ್ತಂತೆ. ಅಷ್ಟಕ್ಕು ಸಂಖ್ಯಾಶಾಸ್ತ್ರದ ಪ್ರಕಾರ ನಮಗೆ ಸರಿಹೊಂದುವ ವೃತ್ತಿ ಯಾವುದು ಅನ್ನೋದನ್ನು ತಿಳಿಯೋಣ.
ಜನ್ಮ ದಿನಾಂಕ : 1, 10, 19, 28
ಈ ದಿನಗಳಲ್ಲಿ ಜನಿಸಿದವರು ಸೂರ್ಯನಂತೆ. ಇವರು ಏಕಾಂಗಿಯಾಗಿ ಬೆಳಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರು ಹುಟ್ಟಿನಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ. ಇವರು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಮುಂದಾಗುವಂತಹ ಗುಣ ಹೊಂದಿದ್ದಾರೆ. ಒಂದು ಸಾರಿ ಮುಂದಿಟ್ಟ ಹೆಜ್ಜೆಯನ್ನು ಇವರು ಹಿಂದಿಡೋ ಮಾತೇ ಇಲ್ಲ. ಈ ನಾಲ್ಕು ದಿನಗಳಲ್ಲಿ ಜನಿಸಿದವರಿಗೆ ವ್ಯಾಪಾರದಲ್ಲಿ ಉತ್ತಮ ಭವಿಷ್ಯವಿದೆ. ದೀರೂಬಾಯ್ ಅಂಬಾನಿ, ಮುಖೇಶ್ ಅಂಬಾನಿ, ಬಿಲ್ ಗೇಟ್ಸ್ ಎಲ್ಲಾ ಇದೇ ದಿನ ಹುಟ್ಟಿದ್ದಾರೆ.

ಜನ್ಮ ದಿನಾಂಕ : 2, 11, 20, 29
ಈ ನಾಲ್ಕು ದಿನಗಳಲ್ಲಿ ಜನಿಸಿದವರು ಚಂದ್ರನಂತೆ. ಇವರು ಉತ್ತಮ ಕೌಶಲ್ಯಗಳನ್ನು ಹೊಂದಿರುತ್ತಾರೆ. ತಮ್ಮ ಕ್ಷೇತ್ರದಲ್ಲಿ ಇವರು ಉತ್ತಮ ಸಾಧನೆ ಮಾಡುತ್ತಾರೆ. ಇವರು ರಾಜತಾಂತ್ರಿಕ ಗುಣಗಳನ್ನು ಹೊಂದಿದ್ದಾರೆ. ಈ ನಾಲ್ಕು ದಿನಗಳಲ್ಲಿ ಜನಿಸಿದವರು ಕಲೆ, ನಟನೆ, ಮತ್ತು ಫ್ಯಾಷನ್ ಡಿಸೈನಿಂಗ್ ಆಯ್ದುಕೊಂಡರೆ ಏಳಿಗೆ ಗಳಿಸುತ್ತಾರೆ. ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಈ ದಿನಗಳಲ್ಲಿ ಹುಟ್ಟಿದ್ದಾರೆ.
ಜನ್ಮ ದಿನಾಂಕ : 3, 12, 21, 30
ಈ ದಿನಗಳಲ್ಲಿ ಜನಿಸಿದವರು ಗುರುಗ್ರಹದಂತೆ. ಇವರು ಸ್ವಭಾವ ಹೇಗೆಂದರೆ ಇವರು ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಜಗ್ಗೋದಿಲ್ಲ. ಈ ದಿನಗಳಲ್ಲಿ ಜನಿಸಿದವರು ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿಯಾಗುತ್ತಾರೆ. ಚಿಲ್ಲರೆ ವ್ಯಾಪಾರವು ಈ ದಿನಾಂಕಗಳಲ್ಲಿ ಜನಿಸಿದವರಿಗೆ ಯಶಸ್ಸು ತಂದು ಕೊಡುತ್ತದೆ. ಇನ್ನೂ ಇವರಿಗೆ ಬ್ಯಾಂಕಿಂಗ್, ಹಣಕಾಸು ಸಂಬಂಧಿತ ಕ್ಷೇತ್ರಗಳು ಮತ್ತು ಚಿಲ್ಲರೆ ವ್ಯಾಪಾರ ವೃತ್ತಿಗಾಗಿ ಉತ್ತಮ ಆಯ್ಕೆಯಾಗಿದೆ.
ಜನ್ಮ ದಿನಾಂಕ : 4, 13, 22, 31
ಈ ನಾಲ್ಕು ದಿನಗಳಲ್ಲಿ ಜನಿಸಿದವರು ತುಬಾನೇ ವಿಭಿನ್ನ ಹಾಗೂ ಯಾವುದೇ ವಿಚಾರವನ್ನು ಇವರು ತಮ್ಮದೇ ಆದ ದೃಷ್ಟಿಕೋನದಿಂದ ನೋಡುತ್ತಾರೆ. ಇವರು ರಿಸ್ಕ್ ತೆಗೆದುಕೊಳ್ಳೋದಕ್ಕೆ ಯಾವಾಗಲೂ ಮುಂದಿರುತ್ತಾರೆ. ಆದರೆ ಇವರು ತೆಗೆದುಕೊಳ್ಳೋ ಕೆಲವೊಂದು ನಿರ್ಧಾರಗಳಿಂದ ಆಪತ್ತು ತಂದುಕೊಳ್ಳುತ್ತಾರೆ. ಈ ದಿನಾಂಕಳಲ್ಲಿ ಹುಟ್ಟಿದವರು ಜೂಜಾಟಕ್ಕೆ ಹೆಚ್ಚಿನ ಆಸಕ್ತಿ ತೋರಬಾರದು. ಕಲೆ ಮತ್ತು ನಟನೆ ಇವರಿಗೆ ಯಶಸ್ಸನ್ನು ತಂದುಕೊಡುತ್ತದೆ.
ಜನ್ಮ ದಿನಾಂಕ : 5, 14, 23
ಈ ಮೂರು ದಿನಾಂಕಗಳಲ್ಲಿ ಜನಿಸಿದವರಿಗೆ ಉತ್ತಮ ಸಂವಹನ ಕೌಶಲ್ಯವಿದೆ. ಇವರು ಜನರನ್ನು ಸುಲಭವಾಗಿ ಮನವೊಲಿಸುತ್ತಾರೆ. ಹೀಗಾಗಿ ಇವರಿಗೆ ತಂತ್ರಜ್ಞಾನ, ಕ್ರೀಡೆ, ಮಾರ್ಕೆಟಿಂಗ್ ಕೆಲಸಗಳು ಉತ್ತಮವಾಗಿದೆ. ಇವರು ಸುರಕ್ಷಿತ ಉದ್ಯೋಗದಲ್ಲಿ ಇರೋದಕ್ಕೆ ಇಷ್ಟ ಪಡೋದಿಲ್ಲ. ಇವರಿಗೆ ಕೆಲಸದಲ್ಲಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಇಷ್ಟ. ಯಾವುದೇ ಕೆಲಸವನ್ನಾದರೂ ಚಾಲೆಂಜ್ ಆಗಿ ತೆಗೆದುಕೊಳ್ಳುತ್ತಾರೆ.
ಜನ್ಮ ದಿನಾಂಕ : 6, 15, 24
ಈ ದಿನಾಂಕಗಳಲ್ಲಿ ಜನಿಸಿದವರಿಗೆ ಶುಕ್ರನ ಆಶೀರ್ವಾದ ಇರುತ್ತದೆ. ಇವರಿಗೆ ಹೋಟೆಲ್, ರೆಸ್ಟೋರೆಂಟ್ ಬ್ಯುಸಿನೆಸ್, ಮನೋರಂಜನಾ ಕ್ಷೇತ್ರ ಸರಿ ಹೊಂದುತ್ತದೆ. ಈ ಕ್ಷೇತ್ರಗಳು ಹೆಸರನ್ನೂ ತಂದುಕೊಡುತ್ತದೆ. ಹೀಗಾಗಿ ಇಂತಹ ಕೆಲಸಗಳ ಕಡೆಗೆ ನೀವು ಗಮನಕೊಟ್ಟರೆ ಎಲ್ಲಾ ಒಳ್ಳೆಯದಾಗುತ್ತದೆ.
ಜನ್ಮ ದಿನಾಂಕ : 7, 16, 25
ಈ ದಿನಾಂಕಗಳಲ್ಲಿ ಜನಿಸಿದವರು ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸುತ್ತಾರೆ. ಇವರು ವಿಶಿಷ್ಟವಾದ ನವೀನ ಮತ್ತು ಸೃಜನಶೀಲ ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಇವರು ಬೇರೆಯವರಿಗಿಂತ ವಿಭಿನ್ನವಾಗಿ ಯೋಚಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಈ ದಿನಾಂಕಗಳಲ್ಲಿ ಜನಿಸಿದವರಿಗೆ ಸಂಶೋಧನಾ ಕ್ಷೇತ್ರ ಉತ್ತಮ ಆಯ್ಕೆ.
ಜನ್ಮ ದಿನಾಂಕ : 8, 17, 26
ಈ ದಿನಾಂಕಗಳಲ್ಲಿ ಜನಿಸಿದವರು ತುಂಬಾ ಸರಳ ಸ್ವಭಾವದವರು. ಹಾಗೂ ತಮಗೆ ಏನು ಅನ್ನಿಸುತ್ತೆ ಅದನ್ನು ನೇರವಾಗಿ ಹೇಳುತ್ತಾರೆ. ಇವರು ತುಂಬಾನೇ ಶ್ರಮ ಜೀವಿಗಳು. ಕೊಂಚ ತಡವಾಗಿಯಾದರೂ ಇವರು ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗುತ್ತದೆ. ರಾಜಕೀಯ, ಉಕ್ಕು ಮತ್ತು ಲೋಹದ ಉದ್ಯಮ, ರಿಯಲ್ ಎಸ್ಟೇಟ್, ಮತ್ತು ಹಣಕಾಸು ಕ್ಷೇತ್ರ ಇವರಿಗೆ ಒಪ್ಪುತ್ತದೆ.
ಜನ್ಮ ದಿನಾಂಕ : 9, 18, 27
ಈ ದಿನಾಂಕದಲ್ಲಿ ಜನಿಸಿದವರು ಮಂಗಳನಿಂದ ಆಳಲ್ಪಡುತ್ತಾರೆ. ಹೀಗಾಗಿ ಇವರು ದೈರ್ಯ ಹೆಚ್ಚಾಗಿರುತ್ತದೆ. ಇವರಿಗೆ ರಕ್ಷಣಾ ಕ್ಷೇತ್ರ, ರಸಾಯನಿಕ ಹಾಗೂ ರಿಯಲ್ ಎಸ್ಟೇಟ್ ನಲ್ಲಿ ಉತ್ತಮ ಭವಿಷ್ಯವಿದೆ. ಇನ್ನೂ ಈ ದಿನಗಳಲ್ಲಿ ವಿಶ್ವಾತ ಖ್ಯಾತ ಕ್ರೀಡಾ ಪಟುಗಳು ಜನಿಸಿದ್ದಾರೆ.



Click it and Unblock the Notifications












