Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಘಿಬ್ಲಿ ಆರ್ಟ್ ಅಂದರೇನು? ಆರಂಭಿಸಿದ್ದು ಯಾರು? ಈ ಕುರಿತು ನಿಮಗೆ ತಿಳಿದಿರೋದಿಲ್ಲ.!
ದಿನಕ್ಕೊಂದು ಆನ್‌ಲೈನ್ ಟ್ರೆಂಟ್ ಸೃಷ್ಟಿಯಾಗುವಂತೆ ಈಗ ಹೊಸದಾಗಿ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೀತಿಯ ಫೋಟೋ ಟ್ರೆಂಡ್ ಒಂದು ಸಂಚಲನ ಮೂಡಿಸಿದೆ. ಅದೇ ಘಿಬ್ಲಿ ಸ್ಟುಡಿಯೋ ಫೋಟೋ ಟ್ರೆಂಡ್. ಓಪನ್ ಎಐ, ಚಾಟ್ ಜಿಪಿಟಿ ತನ್ನ ಎಐ ಮೊಡೆಲ್‌ನಲ್ಲಿ ಈ ಘಿಬ್ಲಿ ಸ್ಟುಡಿಯೋ ಫೋಟೋ ಎಫೆಕ್ಟ್ ನೀಡಿದೆ. ಜನರು ತಮ್ಮ ಫೋಟೋ ಅಪ್‌ಲೋಡ್ ಮಾಡಿ ಅದನ್ನು ಕಾರ್ಟೂನ್ ರೀತಿ ಬದಲಾಯಿಸಿ ನೀಡುವ ಹೊಸ ಟ್ರೆಂಡ್ ಇದಾಗಿದೆ.
ಈ ಟ್ರೆಂಡ್ ಹಿಂದೆ ಬಿದ್ದ ಕೋಟ್ಯಂತರ ಮಂದಿ ಫೋಟೋ ಹಂಚಿಕೊಂಡು ತಮ್ಮ ಸುಂದರ ಕಾರ್ಟೂನ್ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುವುದು ನೋಡಬಹುದು. ಅದರಲ್ಲೂ ಇಡೀ ಫ್ಯಾಮಿಲಿಯ ಫೋಟೋಗಳನ್ನು ಕೂಡ ಅವರು ಹಂಚಿಕೊಳ್ಳುತ್ತಿರುವುದು ನೋಡಬಹುದು. ಅದರಲ್ಲೂ ಬಹಳ ಸುಲಭವಾಗಿ ಈ ಆರ್ಟ್ ಮಾಡಿಕೊಳ್ಳಬಹುದಾಗಿರೋದ್ರಿಂದ ಎಲ್ಲು ನಾ ಮುಂದು ತಾ ಮುಂದು ಎಂದು ಹಂಚಿಕೊಳ್ಳುತ್ತಿರುವುದು ನೋಡಬಹುದು.

ಆದ್ರೆ ಇದಿಷ್ಟೇ ಆಗಿದ್ರೆ ಎಲ್ಲರಿಗೂ ಈ ಘಿಬ್ಲಿ ಆರ್ಟ್ ಖುಷಿ ನೀಡಬಹುದಿತ್ತು. ಆದ್ರೆ ಒಂದಿಷ್ಟು ಸಮುದಾಯ ಈ ಘಿಬ್ಲಿ ಆರ್ಟ್ ಡಿಜಿಟಲ್ ಆಗಿರೋದಕ್ಕೆ ಅಸಮಾಧಾನ ಹೊರಹಾಕುತ್ತಿದ್ದಾರೆ. ನಿಮಗೆ ಈ ರೀತಿ ಕೇಳಲು ಅಚ್ಚರಿ ಆಗಬಹುದು. ಇದರ ಹಿಂದೆ ಎಂತಹ ಇತಿಹಾಸವಿದೆ. ಈ ಘಿಬ್ಲಿ ಆರ್ಟ್ ಎಂದರೆ ಏನು? ಇದರ ಹಿಂದೆ ದುಡಿದ ಕೈಗಳೆಷ್ಟು? ಈಗ ಚಾಟ್ ಜಿಪಿಟಿ ಈ ರೀತಿ ಆರ್ಟ್ ಬಳಸಿರೋ ಹಿಂದೆ ಇರುವ ತಂತ್ರವೇನು? ಈ ಎಲ್ಲಾ ವಿಚಾರ ನೀವು ತಿಳಿದರೆ ಒಮ್ಮೆ ಅಚ್ಚರಿ ಪಡುದುವು ಗ್ಯಾರಂಟಿ.
ಮೊದಲು ಈ ಘಿಬ್ಲಿ ಎಂಬ ಪದದ ಅರ್ಥ ತಿಳಿದುಕೊಳ್ಳಿ ಜಪಾನಿನ ಅನಿಮೇಷನ್ ಸ್ಟುಡಿಯೋಗೆ ಬಳಸಲಾದ "ಘಿಬ್ಲಿ" ಎಂಬ ಹೆಸರು ಇಟಾಲಿಯನ್ ಪದ "ಬಿಸಿ ಮರುಭೂಮಿ ಗಾಳಿ" ಯಿಂದ ಹುಟ್ಟಿಕೊಂಡಿದೆ, ಇದು ಲಿಬಿಯಾದ ಅರೇಬಿಕ್ ಪದ "ಗಿಬ್ಲಿ" ಯಿಂದ ಬಂದಿದೆ. ಆದ್ರೆ ಈ ಆರ್ಟ್ ಹುಟ್ಟಿದ್ದು ಚಾಟ್ ಜಿಪಿಟಿಯಿಂದಲ್ಲ ದಶಕಗಳ ಹಿಂದೆಯೇ ಓರ್ವ ವ್ಯಕ್ತಿ ಘಬ್ಲಿ ಕಾರ್ಟೂನ್ ಸೃಷ್ಟಿಸಿದೆ.
ಘಿಬ್ಲಿ ಆರ್ಟ್ ಆರಂಭಿಸಿದ್ದು ಜಪಾನ್‌ನ ಮಿಯಾಝಾಕಿ ಹಯಾವೊ ಎಂಬಾತ ಸೃಷ್ಟಿಸಿದ್ದ. ಆತ ಎನಿಮೇಷನ್ ಮೂವಿಯ ನಿರ್ದೇಶಕ 1963ರಲ್ಲಿ ಆನಿಮೇಟರ್ ಆಗಿ ಮೊದಲ ಕೆಲಸ ಆರಂಭಿಸಿದ್ದರು. ಆದರೆ ಅವರು ಹಲವು ಸಿನಿಮಾಗಳ ನಿರ್ದೇಶನ ಮಾಡಿದ ಬಳಿಕ 1985ರಲ್ಲಿ ಘಿಬ್ಲಿ ಸ್ಟುಡಿಯೋ ಆರಂಭಿಸಿದರು. ಈ ಸ್ಟುಡಿಯೋ ಮೂಲಕವೇ ಅವರು ಹಲವು ಕಾರ್ಟೂನ್ ಸಿನಿಮಾಗಳ ಹೊರತಂದರು. ಹಾಗೆ ಹತ್ತಾರು ಪ್ರಶಸ್ತಿ ಪಡೆದರು.
ಅದರಲ್ಲೂ ಸ್ಟುಡಿಯೋ ಘಿಬ್ಲಿಯ ಎರಡು ಚಲನಚಿತ್ರಗಳು ಅತ್ಯುತ್ತಮ ಅನಿಮೇಟೆಡ್ ವೈಶಿಷ್ಟ್ಯಕ್ಕಾಗಿ ಆಸ್ಕರ್ ಗೆದ್ದಿವೆ. 2003 ರಲ್ಲಿ "ಸ್ಪಿರಿಟೆಡ್ ಅವೇ" (2001) ಮತ್ತು 2024 ರಲ್ಲಿ "ದಿ ಬಾಯ್ ಅಂಡ್ ದಿ ಹೆರಾನ್" ಆಸ್ಕರ್ ಪಡೆದ ಸಿನಿಮಾಗಳಾಗಿವೆ. ಆದ್ರೆ ಆ ಕಾಲದಲ್ಲಿ ಈ ಕಾರ್ಟೂನ್‌ಗಳನ್ನು ಕೈಯಿಂದ ಬರೆಯಬೇಕಿತ್ತು. ಯಾವುದಾದರು ದೃಶ್ಯ ಚಿತ್ರೀಕರಿಸಬೇಕಾದರೆ ಅದನ್ನು ಮೊದಲು ಕೈಯಿಂದಲೇ ರಚಿಸಬೇಕಿತ್ತು.
ನೈಬರ್ ಟೊಟೊರೊ, ಸ್ಪಿರಿಟೆಡ್ ಅವೇ, ಹೌಲ್ಸ್ ಮೂವಿಂಗ್ ಕ್ಯಾಸಲ್, ಕಿಕಿಸ್ ಡೆಲಿವರಿ ಸರ್ವಿಸ್ ಮತ್ತು ಪ್ರಿನ್ಸೆಸ್ ಮೊನೊನೊಕೆ ಸಿನಿಮಾಗಳು ಬಹಳ ಫೇಮಸ್ ಆಗಿವೆ. ಆದ್ರೆ ಈಗ ಈ ಕಾರ್ಟೂನ್ ಸೃಷ್ಟಿಕರ್ತರಿಗೆ ಚಾಟ್ ಜಿಪಿಟಿ ಶಾಕ್ ನೀಡಿದೆ. ಒಂದು ಚಿತ್ರ ರಚಿಸಲು ದಿನವಿಡಿ ಶ್ರಮ ಹಾಕುತ್ತಿದ್ದ ಕಲಾವಿದರ ಬದಲಾಗಿ ಕ್ಷಣದಲ್ಲಿ ಈ ಎಐ ಕಾರ್ಟೂನ್ ರಚಿಸುತ್ತಿದೆ. ಹೀಗಾಗಿ ಘಿಬ್ಲಿ ಸ್ಟುಡಿಯೋ ನಿರ್ಮಾತೃ ಮಿಯಾಝಾಕಿ ಹಯಾವೊ ಅಸಮಾಧಾನ ಹೊರಹಾಕಿದ್ದಾರೆ.
ಹಾಗೆ ಚಾಟ್ ಜಿಪಿಟಿ ತನ್ನ ಎಐ ಮಾಡೆಲ್‌ಗಾಗಿ ಲಕ್ಷಾಂತರ ಜನರ ಫೋಟೋವನ್ನು ಸಂಗ್ರಹಿಸಿದೆ ಎಂಬ ಆತಂಕ ಹಾಗೂ ಚರ್ಚೆಯು ನಡೆಯುತ್ತಿದೆ. ಈ ವಿಚಾರಗಳ ಅರಿವಿಲ್ಲದೆ ಜನರು ತಮ್ಮ ಫೋಟೋಗಳ ಹಂಚಿಕೊಂಡಿದ್ದಾರೆ.



Click it and Unblock the Notifications
