Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅಮೆರಿಕ ತಲುಪೋ ಡಂಕಿ ಮಾರ್ಗ ಅಂದ್ರೇನು? ಅಡ್ಡದಾರಿಗೂ ಹತ್ತಾರು ಸವಾಲು..!
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ನಿಯಮಗಳ ಬದಲಾವಣೆಯಲ್ಲಿ ತೊಡಗಿದ್ದಾರೆ. ಇದರ ಭಾಗವಾಗಿ ಅಮೆರಿಕದಲ್ಲಿ ನೆಲೆಸಿರುವ ಎಲ್ಲಾ ಅಕ್ರಮ ವಲಸಿಗರನ್ನು ಹೊರಹಾಕುವ ಯೋಜನೆಗೆ ಚಾಲನೆ ನೀಡಿದ್ದು, ನೂರಾರು ಸಂಖ್ಯೆಯ ಭಾರತೀಯರನ್ನು ಕೂಡ ಅಮೆರಿಕನ್ ಆರ್ಮಿ ಭಾರತಕ್ಕೆ ತಂದು ಬಿಟ್ಟಿದೆ.
ಕೈ ಕಾಲಿಗೆ ಖೋಳ ತೊಡಿಸಿ ಸೇನಾ ವಿಮಾನದಲ್ಲಿ ಅಮೃತಸರದ ವಿಮಾನ ನಿಲ್ದಾಣಕ್ಕೆ ತಂದು ಬಿಡಲಾಗಿದೆ. ಈ ಕುರಿತು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅಕ್ರಮವಾಗಿ ನೆಲೆಸಿರುವ ಪ್ರತಿಯೊಬ್ಬರನ್ನು ಗುರುತಿಸಿ ಅವರ ದೇಶಕ್ಕೆ ಕಳುಹಿಸುವುದಾಗಿ ಅಮೆರಿಕ ಹೇಳಿಕೊಂಡಿದೆ. ಈ ಭಾಗವಾಗಿಯೇ ಭಾರತೀಯರು ಕೂಡ ತಮ್ಮ ದೇಶಕ್ಕೆ ವಾಪಾಸಾಗುತ್ತಿದ್ದಾರೆ.

ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ದೇಶದ ಕಾನೂನು ಜಾರಿ ಸಂಸ್ಥೆಗಳು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿವೆ. ವಾಮಮಾರ್ಗ ಮೂಲಕ ಅಮೆರಿಕ ಸೇರಿದ್ದವರಿಗೆ ಈಗ ಸಂಕಷ್ಟ ಎದುರಾಗಿದೆ. ಹಾಗಾದ್ರೆ ವಾಮಮಾರ್ಗ ಮೂಲಕ ಜನರು ಅಮೆರಿಕ ಸೇರುವುದು ಹೇಗೆ? ಡಂಕಿ ಮಾರ್ಗ ಎಂದ್ರೇನು ಗೊತ್ತಾ?
ಬಾಲಿವುಡ್‌ನಲ್ಲಿ ಶಾರುಖ್ ಖಾನ್ ನಟನೆಯ ಡಂಕಿ ಎನ್ನುವ ಸಿನಿಮಾ ಬಂದಿತ್ತು. ಈ ಸಿನಿಮಾ ನೋಡಿದರೆ ಜನರು ಅಮೆರಿಕ ಹಾಗೂ ಕೆನಡಾದಂತಹ ದೇಶಗಳಿಗೆ ಹೇಗೆ ವೀಸಾ ಪಡೆಯದೆ, ಪಾಸ್‌ಪೋರ್ಟ್ ಇಲ್ಲದೆಯೂ ವಲಸೆ ಹೋಗುತ್ತಾರೆ ಎಂಬುದನ್ನು ತಿಳಿಯಬಹುದು. ನಾವು ಯಾವ ದೇಶಕ್ಕೆ ಹೋಗುತ್ತೇವೆಯೋ ಆ ದೇಶದ ವೀಸಾ ಪಡೆಯಬೇಕು. ಅದು ಕೂಡ ಪ್ರವಾಸಿ ವೀಸಾದಲ್ಲಿ ಹೋಗಬಹುದು, ಆದ್ರೆ ಅಮೆರಿಕದಲ್ಲಿ ನೆಲೆಸಬೇಕು ಎಂಬ ಕನಸು ಕಂಡವರಿಗೆ ಇದು ಸಾಧ್ಯವಾಗೋದು ಬಹಳ ಕಷ್ಟ. ಹೀಗಾಗಿಯೇ ವಾಮಮಾರ್ಗದ ಮೂಲಕ ಅಂತಹ ದೇಶಕ್ಕೆ ತೆರಳಲು ಮುಂದಾಗುತ್ತಾರೆ.
ಅನಧಿಕೃತವಾಗಿ ಬೇರೊಂದು ದೇಶದ ಗಡಿ ನುಸುಳುವ ಈ ಮಾರ್ಗವನ್ನು ಡಂಕಿ ರೂಟ್ ಅಥವಾ ಡಂಕಿ ಫ್ಲೈಟ್ ಎಂದು ಕರೆಯಲಾಗಿದೆ. ತಾವು ತೆರಳಲು ಉದ್ದೇಶಿಸಿರುವ ದೇಶಕ್ಕೆ ಯಾವುದೇ ಅನುಮತಿ ಇಲ್ಲದೆ ಅನಧಿಕೃತ ಮಾರ್ಗ ಬಳಸಿ ತೆರಳುವ ಒಂದು ಪ್ರಕ್ರಿಯೆ ಇದಾಗಿದೆ. ಅದರಲ್ಲೂ ಭಾರತೀಯರು ಹೆಚ್ಚಾಗಿ ಅಮೆರಿಕ, ಕೆನಡಾ, ಇಂಗ್ಲೆಂಡ್‌ಗೆ ವಲಸೆ ಹೋಗುತ್ತಾರೆ.
ಅಮೆರಿಕ ಮೆಕ್ಸಿಕೋ ಹಾಗೂ ಕೆನಡಾ ದೇಶಗಳ ಜೊತೆಗೆ ತನ್ನ ಗಡಿ ಹಂಚಿಕೊಂಡಿದೆ. ಈ ಗಡಿರೇಖೆ ವಿಸ್ತೀರ್ಣದಲ್ಲಿ ಬಹಳ ದೊಡ್ಡದಾಗಿದೆ. ಗಡಿಯ ಉದ್ದಕ್ಕೂ ಅಲ್ಲಲ್ಲಿ ದಾರಿಗಳಿವೆ. ಕೆನಡಾದಿಂದ ಅಮೆರಿಕಕ್ಕೆ ನುಸುಳುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆ ಮೆಕ್ಸಿಕೋ ಗಡಿಯಲ್ಲಿ ಯಾವಾಗಲು ಉದ್ವಿಘ್ನತೆ ನೋಡಬಹುದು.
ಡಂಕಿ ಮಾರ್ಗಕ್ಕೂ ಇದ್ದಾರೆ ಏಜೆಂಟರು
ವಿದೇಶಿ ಪ್ರವಾಸ, ವೀಸಾ, ಪಾಸ್‌ಪೋರ್ಟ್‌ಗೆಲ್ಲಾ ಏಜೆಂಟರು ಇರುವಂತೆ ಡಂಕಿ ಮಾರ್ಗಕ್ಕೂ ಕೂಡ ಏಜೆಂಟರು ಇದ್ದಾರೆ. ಪ್ರತಿ ಸದಸ್ಯರಿಗೆ ಇಂತಿಷ್ಟು ಎಂದು ಹಣ ಪಾವತಿ ಮಾಡಿದರೆ ಅವರೇ ಗಡಿ ದಾಟಿಸುತ್ತಾರೆ. ಇದಕ್ಕಾಗಿ ಲಕ್ಷ ಲಕ್ಷ ರೂಪಾಯಿ ಹಣ ಪಾವತಿಸಬೇಕಾಗುತ್ತದೆ. ಈ ಮಾರ್ಗದ ಮೂಲಕವೇ ಬಹುತೇಕರು ಅಮೆರಿಕ ತಲುಪುತ್ತಾರೆ. ಹಾಗೆ ಅಲ್ಲಿಯೇ ನೆಲೆಸಲು ಮುಂದಾಗುತ್ತಾರೆ.
ಭಾರತದಿಂದ ಹೆಚ್ಚಾಗಿ ಪಂಜಾಬ್‌ನಿಂದಲೇ ಈ ರೀತಿಯ ವಲಸೆ ಹೆಚ್ಚಾಗುತ್ತಿದೆ. ಅಲ್ಲಿನ ಯುವ ಸಮುದಾಯ ಕೆನಡಾ, ಅಮೆರಿಕಾದಲ್ಲಿ ಹೋಗಿ ನೆಲೆಸಲು ಇಚ್ಛಿಸುತ್ತಾರೆ. ಆದರೆ ಅವರಿಗೆ ಅಲ್ಲಿನ ವೀಸಾ ಸಿಗದ ಕಾರಣ ಈ ರೀತಿ ಅಕ್ರಮವಾಗಿ ಅನ್ಯ ಮಾರ್ಗದ ಮೂಲಕ ತೆರಳಿ ನೆಲೆಸಲು ಬಯಸುತ್ತಾರೆ.
ಅಮೆರಿಕ ತಲುಪಬೇಕಾದರೆ ಕಾಡು, ಮೇಡು ಹತ್ತಿಳಿಯಬೇಕಿದೆ. ಪನಾಮಾದ ದಟ್ಟ ಕಾಡಿನಲ್ಲಿ ನಡೆದು ಸಾಗಬೇಕಿದೆ. ರಾತ್ರಿಯಾದರೆ ಅಲ್ಲೇ ಟೆಂಟ್‌ಗಳ ಹಾಕಿ ನೆಲೆಸುತ್ತಾರೆ. ಮತ್ತೆ ಮಾರನೆ ದಿನ ಬೆಳಗ್ಗೆ ಕಾಡಿನಲ್ಲಿ ನಡೆಯುತ್ತಾರೆ. ನದಿ, ಹಳ್ಳಗಳ ದಾಟಬೇಕಿದೆ, ಕಿರಿದಾದ ರಸ್ತೆಯಲ್ಲಿ ಕೆಸರು, ಮುಳ್ಳು, ಕಲ್ಲು ಬಂಡೆಗಳ ನಡುವೆ ಸಾಗಬೇಕಿದೆ. ನಂತರ ಅವರನ್ನು ಟ್ರಕ್‌ಗಳು, ಬೋಟ್‌ಗಳು, ಟ್ಯಾಕ್ಸಿ, ಕಂಟೇನರ್‌ಗಳ ಮೂಲಕ ಅಮೆರಿಕದೊಳಗೆ ಸಾಗಿಸಲಾಗುತ್ತದೆ.



Click it and Unblock the Notifications
