Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹಾವು ಕಚ್ಚಿದಾಗ ದೇಹದಲ್ಲಿ ಏನಾಗುತ್ತದೆ? ಪರಿಣಾಮ ತೋರಿಸುತ್ತೆ ಈ ವಿಡಿಯೋ
ಭೂಮಿ ಮೇಲೆ ಇರುವ ಹಾವುಗಳಲ್ಲಿ ಎಷ್ಟು ವಿಷಕಾರಿ ಹಾವುಗಳಿವೆ ಅಂದ್ರೆ ಹಾವು ಕಚ್ಚಿದ ನಿಮಿಷದಲ್ಲಿ ಮನುಷ್ಯನಿಗೆ ಸಾವು ಸಂಭವಿಸುತ್ತೆ. ಇನ್ನೂ ಕೆಲ ಹಾವುಗಳು ಬರಿ ಮನುಷ್ಯ ಅಲ್ಲ ಪ್ರಾಣಿಗಳಿಗಳ್ನೂ ಕಚ್ಚಿ ಕೊಲ್ಲುತ್ತವೆ. ಆದ್ರೆ ಮನುಷ್ಯರಿಗೆ ಹಾವುಗಳಿಂದ ಇರುವ ಅಪಾಯದಂತೆ ಬೇರೆ ಯಾವ ಪ್ರಾಣಿಗಳಿಗೂ ಇದ್ದಂತೆ ಕಾಣುವುದಿಲ್ಲ.
ಹಾವುಗಳಿಂದ ಪ್ರತಿವರ್ಷ ಸಾವಿರಾರು ಮಂದಿ ಅಪಾಯಕ್ಕೆ ಸಿಲುಕಿದರೆ ಲಕ್ಷ ಲಕ್ಷ ಮಂದಿ ಉಸಿರು ನಿಲ್ಲಿಸುತ್ತಾರೆ. ಅಲ್ಲದೆ ಒಂದಿಷ್ಟು ಹಾವುಗಳು ಈಗ ಅಳಿವಿನಂಚಿಗೆ ಬಂದು ತಲುಪಿವೆ. ಕೆಲವು ಜಾತಿಯ ಹಾವುಗಳಂತೂ ಈಗ ಮರೆಯಾಗಿವೆ. ಆದರೆ ಇನ್ನೊಂದಿಷ್ಟು ಹಾವುಗಳು ಜನರ ಸಂಪರ್ಕವೇ ಇಲ್ಲದ ಸ್ಥಳದಲ್ಲಿ ವಾಸವಿದೆ.

ಆದ್ರೆ ನಿಮಗೆ ಗೊತ್ತಾ ಹಾವು ಕಡಿದ ತಕ್ಷಣ ನಿಮ್ಮ ದೇಹದಲ್ಲಿ ಏನಾಗುತ್ತದೆ. ಹಾವು ಕಚ್ಚಿದಾಗ ನಿಮ್ಮ ದೇಹಕ್ಕೆ ಏನಾಗುತ್ತದೆ. ಸಾವು ಏಕೆ ಸಂಭವಿಸುತ್ತದೆ ಎಂಬುದನ್ನು ವಿವರಿಸುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಹಾವು ಕಚ್ಚಿದ ತಕ್ಷಣ ಮನುಷ್ಯರ ದೇಹದಲ್ಲಿರುವ ರಕ್ತವು ಹೇಗೆ ವಿಷಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಈ ವಿಡಿಯೋ ಮೂಲಕ ನಾವು ತಿಳದುಕೊಳ್ಳಬಹುದಾಗಿದೆ.
ವಿಡಿಯೋದಲ್ಲಿ ಏನಿದೆ?
ಒಬ್ಬ ಉರಗ ತಜ್ಞ ಹಾವಿನ ವಿಷವನ್ನು ತೆಗೆದುಕೊಂಡು ಅದನ್ನು ಮುನುಷ್ಯರ ತಕ್ತದ ಜೊತೆಗೆ ಮಿಕ್ಸ್ ಮಾಡುತ್ತಾನೆ. ಆತ ಮಿಶ್ರಣ ಮಾಡಿದ ತಕ್ಷಣವೇ ರಕ್ತ ಹೆಪ್ಪುಗಟ್ಟಲು ಆರಂಭವಾಗುತ್ತದೆ. ರಕ್ತ ಕ್ಷಣದಲ್ಲಿ ಹೆಪ್ಪಾಗಿ ಬಿಸ್ಕೇಟ್ ಆಕೃತಿಯಂತೆ ಗಟ್ಟಿಯಾಗುತ್ತದೆ.
ಹೀಗಾಗಿ ಮನುಷ್ಯರು ಹಾವು ಕಚ್ಚಿದ ತಕ್ಷಣ ಸಾವಿಗೀಡಾಗುತ್ತಾನೆ. ಏಕೆಂದರೆ ಆತನ ದೇಹದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ರಕ್ತ ಸಂಚಾರ ಕಡಿತವಾಗಿ ಆತ ಮೃತಪಡುತ್ತಾನೆ. ಇದು ಮನುಷ್ಯರ ದೇಹದಲ್ಲಿ ಮಾತ್ರವಲ್ಲ ಪ್ರಾಣಿಗಳಿಗೆ ಹಾವು ಕಚ್ಚಿದಾಗಲು ಇದೇ ರೀತಿಯ ಪರಿಣಾಮ ಕಾಣಬಹುದು.
ಈ ವಿಡಿಯೋವನ್ನು gk_sikho ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ಮಂದಿ ಶಾಕ್ ಆಗಿದ್ದಾರೆ. 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಹಾಗಾದ್ರೆ ಹಾವು ಕಚ್ಚಿದರೆ ಔಷಧಿ ಇಲ್ಲವೆ?
ಇನ್ನು ಹಾವು ಕಚ್ಚಿದಾಗ ಎಲ್ಲರು ಸಾಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಹಾವುಗಳು ವಿಷಕಾರಿಯೂ ಅಲ್ಲ. ವಿಷಕಾರಿ ಹಾವು ಕಚ್ಚಿದಾಗಲು ಅದಕ್ಕೆ ಔಷಧಿ ಇದೆ. ಆಂಟಿ ವೆನಮ್‌ಗಳು ದುಬಾರಿ ಹಾಗೂ ಎಲ್ಲಾ ವಿಷಕಾರಿ ಹಾವು ಕಡಿದಾಗ ನೀಡುವ ಆಂಟಿ ವೆನಮ್ ಇನ್ನೂ ಕಂಡುಹಿಡಿದಿಲ್ಲ. ಆದರೆ ಕೆಲವೊಂದು ಹಾವು ಕಚ್ಚಿದಾಗ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ದರೆ ಆತನನ್ನು ಉಳಿಸಬಹುದು.
ಆದರೆ ಯಾವ ಹಾವು ಕಚ್ಚಿದೆ ಎಂಬುದನ್ನು ನೆನಪಿನಲ್ಲಿಟ್ಟರೆ ಅಥವಾ ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸೆ ಸುಲಭವಾಗುತ್ತದೆ. ಸದ್ಯ ಈಗ ಎಲ್ಲಾ ಹಾವು ಕಡಿತಗಳಿಗೆ ಚಿಕಿತ್ಸೆ ನೀಡಲು ಚುಚ್ಚು ಮದ್ದು ಕಂಡುಹಿಡಿಯಲಾಗುತ್ತಿದೆ ಆದರೂ ಅದಕ್ಕೆ ಬೇಕಾದ ಸಂಪನ್ಮೂಲ ಅಧ್ಯಯನ ಕೊರತೆ ಇದಕ್ಕೆ ಅಡ್ಡಿಯಾಗುತ್ತದೆ.
ಸದ್ಯ ಈ ವಿಡಿಯೋದಲ್ಲಿಯೂ ಸಹ ಹಾವು ಕಚ್ಚಿದಾಗ ಏನಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಜೊತೆಗೆ ಇದೇ ಕೇಂದ್ರದಲ್ಲಿ ಹಾವು ಕಚ್ಚಿದಾಗ ನೀಡಲಾಗುವ ಚುಚ್ಚುಮದ್ದಿನ ಕುರಿತಂತೆಯೂ ಅಧ್ಯಯನ ನಡೆಯುತ್ತಿದೆ. ಹೀಗಾಗಿ ಹಾವಿನಿಂದ ಕಚ್ಚಿಸಿಕೊಳ್ಳುವ ಬದಲು ಹಾವುಗಳಿಂದ ದೂರ ಇರುವುದೇ ಓಳಿತು. ಏಕೆಂದರೆ ಹಾವು ಕಚ್ಚಿದಾಗ ಬಹುಪಾಲು ಮಂದಿಗೆ ಗಾಬರಿಯಲ್ಲಿ ಭಯದಲ್ಲಿಯೇ ಜೀವ ಹೋಗಿರುತ್ತದೆ. ಅಲ್ಲದೆ ಹಾವು ಕಚ್ಚಿದಾಗ ಸೂಕ್ತ ಚಿಕಿತ್ಸೆ ಇಲ್ಲ ಎಂಬುದೇ ಹಾವು ಕಚ್ಚಿ ಮೃತಪಡುವವರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.



Click it and Unblock the Notifications

