Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಸುನಿತಾ ವಿಲಿಯಮ್ಸ್‌ಗೆ ಏನಾಗಿದೆ? ಸುನಿತಾ ವಿಲಿಯಮ್ಸ್ ಈ ಬಾರಿ ಬಾಹ್ಯಾಕಾಶಕ್ಕೆ ಹೋಗಿದ್ದೇಕೆ?
ಸುನಿತಾ ವಿಲಿಯಮ್ಸ್ ಭಾರತೀಯ ಮೂಲದ ಅಮೆರಿಕಾ ಬಾಹ್ಯಾಕಾಶ ವಿಜ್ಞಾನಿ, ಪ್ರಸಿದ್ಧ ಬಾಹ್ಯಾಕಾಶ ಗಗನಯಾತ್ರಿಗಳಲ್ಲಿ ಕಲ್ಪನಾ ಚಾವ್ಲಾ ಬಳಿಕ ನಮಗೆ ತಕ್ಷಣ ಹೊಳೆಯುವ ಹೆಸರು ಎಂದು ಸುನಿತಾ ವಿಲಿಯಮ್ಸ್.
ಆದರೆ ಈ ಹೆಮ್ಮೆಯ ಗಗನಯಾತ್ರಿಗೆ ಏನು ಆಗುತ್ತದೋ ಎಂಬ ಭಯ ಉಂಟಾಗಿದೆ, ಏಕೆಂದರೆ ಇವರು ಭೂಮಿಗೆ ಮರಳುವುದು ಕಷ್ಟ ಎಂದು ಹೇಳಲಾಗುತ್ತದೆ. ಗಗನಯಾತ್ರಿಗಳು ಐಎಸ್‌ಎಸ್‌ನಿಂದ ಮರಳಿ ಬರುವ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದರಿಂದ ಅವರು ಮರಳಿ ಬರುತ್ತಾರಾ? ಎಂಬ ಪ್ರಶ್ನೆ ಮೂಡಿದೆ.

ಇಷ್ಟೊತ್ತಿಗೆ ಅವರು ಭೂಮಿಗೆ ಮರಳಬೇಕಾಗಿತ್ತು?
ಗಗನ ಯಾತ್ರಿಗಳನ್ನು ಹೊತ್ತು ಹೊರಟಿದ್ದ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಕಾರಣ ಸುನಿತಾ ವಿಲಿಯಮ್ಸ್ ಒಳಗೊಂಡ ತಂಡ ಇಷ್ಟೊತ್ತಿಗೆ ಭೂಮಿಗೆ ತಲುಪಬೇಕಾಗಿತ್ತು, ಆದರೆ ತಾಂತ್ರಿಕ ದೋಷದ ಕಾರಣದಿಂದ ಮರಳಿ ಬರಲು ಸಾಧ್ಯವಾಗುತ್ತಿದಿಲ್ಲ, ಈ ತಂಡ ಬಾಹ್ಯಾಕಾಶದಲ್ಲಿಯೇ ಕಳೆದು ಹೋಗುತ್ತಾರೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಸರಿಯಾಗಿದ್ದರೆ ಜೂನ್ 14ಕ್ಕೆ ಹಿಂತಿರುಗಬೇಕಾಗಿತ್ತು. ನಾಸಾ ಹಾಗೂ ಮತ್ತು ದೈತ್ಯ ವಿಮಾನ ತಯಾರಿಕ ಸಂಸ್ಥೆಯಾದ ಬೋಯಿಂಗ್ ಜಂಟಿ ಸಹಯೋಗದೊಂದಿಗೆ ಈ ಬಾಹ್ಯಾಕಾಶ ಯೋಜನೆ ಮಾಡಲಾಯ್ತು, ಸುನಿತಾ ವಿಲಿಯಮ್ಸ್ ಮತ್ತೊಬ್ಬ ಖಗೋಳ ವಿಜ್ಞಾನಿ ಬುಚ್ ವಿಲ್ಮೋರ್ ಜೊತೆಗೆ ಜೂನ್ 5ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದರು. ಅವರು ಸ್ವಲ್ಪ ಇದ್ದು ಈ ಭೂಮಿಗೆ ಮರಳಬೇಕಾಗಿತ್ತು, ಆದರೆ ದುರಾದೃಷ್ಟವಶಾತ್ ಇದೀಗ ಬಾಹ್ಯಾಕಾಶದಲ್ಲಿಯೇ ಕಳೆದು ಹೋಗ್ತಾರಾ ಎಂಬ ಆತಂಕ ಕಾಡುವಂತಾಗಿದೆ, ಸುರಕ್ಷಿತವಾಗಿ ಮರಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಗಗನ ಯಾತ್ರಿಗಳ ಪ್ರಾಣಕ್ಕೆ ಅಪಾಯ ಎದುರಾಗಿದೆ
ಇವರನ್ನು ಹೊತ್ತೊಯ್ದ ಯಂತ್ರದ ಇಂಧನ 45 ದಿನಗಳವರೆಗೆ ಮಾತ್ರ ಬರುತ್ತದೆ, ಆದರೆ ತಾಂತ್ರಿಕ ದೋಷ ಸರಿಪಡಿಸದೆ ಹೋದರೆ ಇಂಧನ ಖಾಲಿಯಾಗುವುದು. ಇಂಧನ ಖಾಲಿಯಾದರೆ ಮತ್ತೆ ಭೂಮಿಗೆ ಬರಲು ಸಾಧ್ಯವಾಗುವುದಿಲ್ಲ.
ಜನರನ್ನು ಭೂಮಿಯಿಂದ ಬಾಹ್ಯಕಾಶ್ಯಕ್ಕೆ ಕೊಂಡೊಯ್ಯುವ ಟ್ರಿಪ್‌ಗೆ ಮಾಡಿದ ಟ್ರಯಲ್ ಇದು
ಹೌದು ತುಂಬಾ ಜನರಿಗೆ ಬಾಹ್ಯಾಕಾಶಕ್ಕೆ ಹೋಗಬೇಕೆಂಬ ಆಸೆ ಇರುತ್ತದೆ. ಒಂದು ಟ್ರಿಪ್ ಹೋಗಿ ಬರುವಂತಿದ್ದರೆ ಚೆನ್ನಾಗಿತ್ತು ಅನಿಸಿರುತ್ತದೆ, ಆದರೆ ಅದು ಇದುವರೆಗೆ ಸಾಧ್ಯವಾಗಿರಲಿಲ್ಲ, ಆದರೆ ನಾಸಾ ಹಾಗೂ ಬೋಯಿಂಗ್ ಸಂಸ್ಥೆ ಮೊದಲಿಗೆ ಗಗನ ಯಾತ್ರಿಗಳನ್ನು ಕಳುಹಿಸಿದೆ, ಅವರು ಈ ರೀತಿ ಹೋಗಿ ಬಂದು ಅವರ ಅನುಭವ ಹೇಳಿದ ಮೇಲೆ ಜನರನ್ನು ಕರೆದುಕೊಂಡು ಹೋಗುವ ಉದ್ದೇಶ ಇತ್ತು, ಆದರೆ ಈಗ ಹೋದ ಗಗನ ಯಾತ್ರಿಗಳೇ ಹಿಂತಿರುಗುವುದು ಕಷ್ಟ ಎಂದ ಮೇಲೆ ಮಹತ್ವಾಕಾಂಕ್ಷೆಯ ಯೋಜನೆಗೆ ಬ್ರೇಕ್ ಬಿದ್ದಿದೆ.
ಸುನೀತಾ ವಿಲಿಯಮ್ಸ್ ಕುರಿತ ಹೆಚ್ಚಿನ ಮಾಹಿತಿ
ಇವರು 1965 ಸೆಪ್ಟೆಂಬರ್ 19ರಲ್ಲಿ ಜನಿಸಿದರು. ಇವರ ತಂದೆ ಗುಜರಾತಿನವರು. 1989ರಲ್ಲಿ ಹೆಲಿಕಾಪ್ಟರ್ ಟ್ರೈನಿಂಗ್ ಮಾಡುತ್ತಾರೆ. 1993 ನಾವಲ್ ಟೆಸ್ಟ್ ಪೈಲೆಟ್ ಆಗುತ್ತಾರೆ, ಅದಾದ ಬಳಿಕ ಪೈಲೆಟ್ ಇನ್‌ಸ್ಟ್ರಕ್ಟರ್ ಆಗಿ 30ಕ್ಕೂ ಅಧಿಕ ಏರ್‌ಕ್ರಾಫ್ಟ್‌ನಲ್ಲಿ ಕೆಲಸ ಮಾಡುತ್ತಾರೆ, ಇವರು 2,770 ಫ್ಲೈಟ್ ಹವರ್ ಮಾಡಿದ್ದರು, ನಂತರ ಬಾಹ್ಯಾಕಾಶ ಗಗನಯಾತ್ರಿಯಾಗಿ ಆಯ್ಕೆ ಆಗುತ್ತಾರೆ.
ಡಿಸೆಂಬರ್ 9, 2006ಕ್ಕೆ ಬಾಹ್ಯಾಕಾಶಯಾನ ಮಾಡುತ್ತಾರೆ, ಆವಾಗ 29 ಗಂಟೆ ಬಾಹ್ಯಾಕಾಶದಲ್ಲಿದ್ದು ಬಂದಿದ್ದರು, ಅದಾದ ಬಳಿಕ 195 ಸುದೀರ್ಘ ದಿನಗಳು ಬಾಹ್ಯಾಕಾಶದಲ್ಲಿದ್ದು ಬರುವ ಮೂಲಕ ರೆಕಾರ್ಡ್ ಮಾಡಿದ್ದಾರೆ. ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶ ಗಗನ ಯಾತ್ರಿಗಳಲ್ಲಿ ಹೆಸರು ಮಾಡಿದ ಮತ್ತೊಬ್ಬ ಮಹಿಳೆಯೆಂದರೆ ಸುನೀತಾ ವಿಲಿಯಮ್ಸ್. ಅವರು ಸುರಕ್ಷಿತವಾಗಿ ಬರುವಂತಾಗಲಿ.



Click it and Unblock the Notifications











